IPL 2022 RCB vs GT: ಗೆಲುವಿನ ಲಯಕ್ಕೆ ಮರಳಲಿದೆಯಾ RCB? ಹೇಗಿರಲಿದೆ ಉಭಯ ತಂಡಗಳ ಪ್ಲೇಯಿಂಗ್ 11

ಐಪಿಎಲ್ 2022ರ (IPL 2022) 42ನೇ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟನ್ಸ್ (RCB vs GT) ತಂಡಗಳು ಸೆಣಸಾಡಲಿವೆ. ಪಂದ್ಯವು ಮುಂಬೈನ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ಮದ್ಯಾಹ್ನ 3:30ಕ್ಕೆ ನಡೆಯಲಿದೆ.

RCB vs GT

RCB vs GT

  • Share this:
ಐಪಿಎಲ್ 2022ರ (IPL 2022) 42ನೇ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟನ್ಸ್ (RCB vs GT) ತಂಡಗಳು ಸೆಣಸಾಡಲಿವೆ. ಪಂದ್ಯವು ಮುಂಬೈನ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ಮದ್ಯಾಹ್ನ 3:30ಕ್ಕೆ ನಡೆಯಲಿದೆ. ಈಗಾಗಲೇ ಉತ್ತಮ ಫಾರ್ಮ್​ ನಲ್ಲಿರುವ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ತಂಡವು (GT) ಇಂದಿನ ಪಂದ್ಯವನ್ನು ಗೆದ್ದು ಪ್ಲೇ ಆಫ್ ಹಂತವನ್ನು ಮತ್ತಷ್ಟು ಖಚಿತ ಪಡಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದರೆ, ಇತ್ತ ಪಾಫ್ ಡುಪ್ಲೇಸಿಸ್ ನಾಯಕತ್ವದ ಬೆಂಗಳೂರು (RCB) ತಂಡವು ಪ್ಲೇ ಆಫ್ ಹಂತಕ್ಕೇರಲು ಇಂದಿನ ಪಂದ್ಯವನ್ನು ಗೆಲ್ಲಲೇ ಬೇಕಾದ ಅನಿಒವಾರ್ಯತೆಯಲ್ಲಿದೆ. ಕಳೆದ 2 ಪಂದ್ಯಗಳನ್ನೂ ಸೋತಿರು ಆರ್​ಸಿಬಿ ಇಂದಿನ ಪಂದ್ಯವನ್ನು ಗೆಲ್ಲುವ ಮೂಲಕ ಮತ್ತೆ ಗೆಲುವಿನ ಲಯಕ್ಕೆ ಮರಳುವ ವಿಶ್ವಾಸದಲ್ಲಿದೆ. ಹಾಗಿದ್ದರೆ ಉಭಯ ತಂಡಗಳ ಹೆಡ್​ ಟು ಹೆಡ್​ ಹೇಗಿದೆ ನೋಡೋಣ.

ಪಂದ್ಯದ ವಿವರ:

ಐಪಿಎಲ್ 2022ರ 42ನೇ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟನ್ಸ್ ತಂಡಗಳು ಸೆಣಸಾಡಲಿವೆ. ಪಂದ್ಯವು ಮುಂಬೈನ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ಮದ್ಯಾಹ್ನ 3 ಗಂಟೆಗೆ ಟಾಸ್ ಮತ್ತು 3:30ಕ್ಕೆ ಪಂದ್ಯ ಆರಂಭವಾಗಲಿದೆ.

ಪಿಚ್ ವರದಿ:

ಇಂದಿನ ಬ್ರೆಬೋರ್ನ್ ಸ್ಟೇಡಿಯಂ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಕ್ಕೂ ಸಹಾಯವಾಗುವಂತಹ ಮೈದಾನವಾಗಿದೆ. ಮದ್ಯಾಹ್ನದ ಪಂದ್ಯವಾದ್ದರಿಂದ ಯಾವುದೇ ತೇವಾಂಶದ ಸಮಸ್ಯೆ ಕಾಡುವುದಿಲ್ಲ. ಟಾಸ್ ಗೆದ್ದ ನಾಯಕ ಮೊದಲು ಬೌಲಿಂಗ್ ಮಾಡುವ ಸಾಧ್ಯತೆಯಿದೆ.

ಇದನ್ನೂ ಓದಿ: IPL 2022: ಪ್ಲೇ ಆಫ್ ಪ್ರವೇಶಿಸಲಿದ್ಯಾ RCB? ಏನು ಹೇಳುತ್ತಿದೆ ಐಪಿಎಲ್ ಅಂಕಪಟ್ಟಿ

ಒಟ್ಟು ಪಂದ್ಯಗಳು- 8
ಮೊದಲು ಬ್ಯಾಟಿಂಗ್ ಗೆದ್ದ ಪಂದ್ಯಗಳು- 2
ಮೊದಲು ಬೌಲಿಂಗ್ ಗೆದ್ದ ಪಂದ್ಯಗಳು- 6
ಸರಾಸರಿ 1ನೇ ಇನ್ಸ್ ಸ್ಕೋರ್‌ಗಳು- 157
ಸರಾಸರಿ 2ನೇ ಇನ್ಸ್ ಸ್ಕೋರ್‌ಗಳು- 147

ಉಭಯ ತಂಡಗಳ ಐಪಿಎಲ್ 2022 ಪ್ರದರ್ಶನ:

ಉಭಯ ತಂಡಗಳು ಇದೇ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿರುವುದರಿಮದ ಹಿಂದಿನ ಯಾವುದೇ ಅಂಕಿಅಂಶಗಳು ಇಲ್ಲ. ಹೀಗಾಗಿ 2 ತಂಡಗಳ ಈ ಬಾರಿಯ ಪ್ರದರ್ಶನಿಲ್ಲಿ ಬಹಳ ಮುಖ್ಯವಾಗುತ್ತದೆ. ಈಗಾಗಲೇ ಗುಜರಾಥ್ ಟೈಟನ್ಸ್ ತಂಡವು 8 ಪಂದ್ಯಗಳನ್ನಾಡಿದ್ದು 7ರಲ್ಲಿ ಗೆದ್ದು ಕೇವಲ 1ರಲ್ಲಿ ಸೋತು 14 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಅದರಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 9ರಲ್ಲಿ 5 ಪಂದ್ಯ ಗೆದ್ದು 4ರಲ್ಲಿ ಸೋತು 10 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ. ಹೀಗಾಗಿ ಇಂದಿನ ಪಂದ್ಯ ಆರ್​ಸಿಬಿ ತಂಡಕ್ಕೆ ಬಹಳ ಮುಖ್ಯವಾಗಿದ್ದು, ಗೆಲ್ಲಲೇ ಬೇಕಾದ ಅನಿವಾರ್ಯತೆ ಇದೆ. ಪ್ಲೇ ಆಫ್ ಸುತ್ತಿಗೆ ಪ್ರವೇಶಿಸಬೇಕಾದರೆ ಆರ್​ಸಿಬಿ ತಂಢವು ತನ್ನ ಮುಂದಿನ ಎಲ್ಲಾ ಪಂದ್ಯಗಳನ್ನು ಗೆಲ್ಲಲೇ ಬೇಕಾಗಿದೆ.

ಇದನ್ನೂ ಓದಿ: IPL 2022, RCB vs RR: ವಿರಾಟ್ ಕೊಹ್ಲಿ ಸೆನ್ಸೇಷನಲ್ ಕ್ಯಾಚ್; ಆರ್​ಸಿಬಿ ಬೌಲಿಂಗ್​ಗೆ ರಾಜಸ್ಥಾನ ತತ್ತರ

GT v RCB ತಂಡಗಳ ಸಂಭಾವ್ಯ ತಂಡ:

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್ (c), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ರಜತ್ ಪಾಟಿದಾರ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (WK), ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್‌ವುಡ್, ಮೊಹಮ್ಮದ್ ಸಿರಾಜ್

ಗುಜರಾತ್ ಟೈಟಾನ್ಸ್: ವೃದ್ಧಿಮಾನ್ ಸಹಾ (WK), ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ (c), ಅಭಿನವ್ ಮನೋಹರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಅಲ್ಜಾರಿ ಜೋಸೆಫ್, ಲಾಕಿ ಫರ್ಗುಸನ್, ಯಶ್ ದಯಾಲ್, ಮೊಹಮ್ಮದ್ ಶಮಿ
Published by:shrikrishna bhat
First published: