IPL 2022- Virat Kohli: ಅದ್ಭುತ ಕ್ಯಾಚ್ ಹಿಡಿದ ಕೊಹ್ಲಿ, ವಿರಾಟ್ ಫೀಲ್ಡಿಂಗ್​ಗೆ ಅಭಿಮಾನಿಗಳು ಫಿದಾ

RCB ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಹಿಡಿದ ಅದ್ಭುತ ಕ್ಯಾಚ್​ ಇದೀಗ ಎಲ್ಲಡೆ ವೈರಲ್ ಆಗುತ್ತಿದ್ದು, ವಿರಾಟ್ ಕ್ಯಾಚ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

  • Share this:
ಈ ಬಾರಿ ಐಪಿಎಲ್ 2022ರಲ್ಲಿ ಆರ್​ಸಿಬಿ ತಂಡವು ತನ್ನ ಗೆಲುವಿನ ಅಭಿಯಾನವನ್ನು ಮುಂದುವರೆಸಿದೆ. ಕಳೆದ ರಾತ್ರಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್(Indian Premier League) 15ನೇ ಸೀಸನ್‌ 13ನೇ ಪಂದ್ಯದಲ್ಲಿ ಆರ್​ಆರ್​(RR) ಹಾಗೂ ಆರ್​ಸಿಬಿ (RCB) ಮುಖಾಮುಖಿಯಾಗಿದ್ದವು. ಈ ಪಂದ್ಯಕ್ಕೆ ಮುಂಬೈ(Mumbai)ನ ವಾಂಖೆಡೆ ಸ್ಟೇಡಿಯಂ ಸಾಕ್ಷಿಯಾಗಿತ್ತು. ಈ ರೋಚಕ ಪಂದ್ಯದಲ್ಲಿ RCB ತಂಡ ಗೆದ್ದು ಬೀಗಿದೆ. ದಿಕ್ಕು ತೋಚದೇ ಸೋಲಿನ ಹಾದಿಯಲ್ಲಿದ್ದ ಆರ್​ಸಿಬಿ ತಂಡಕ್ಕೆ ದಿನೇಶ್​ ಕಾರ್ತಿಕ್ (Dinesh Karhik)​ ಹಾಗೂ ಶಹಬ್ಬಾಸ್ ಅಹಮದ್ ಅದ್ಭುತ ಆಟ ಪ್ರದರ್ಶಿಸಿ RCB ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಲ್ಲದೇ ಈ ಪಂದ್ಯದಲ್ಲಿ RCB ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಹಿಡಿದ ಅದ್ಭುತ ಕ್ಯಾಚ್​ ಇದೀಗ ಎಲ್ಲಡೆ ವೈರಲ್ ಆಗುತ್ತಿದ್ದು, ವಿರಾಟ್ ಕ್ಯಾಚ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಅದ್ಭುತ ಕ್ಯಾಚ್ ಹಿಡಿದ ಕೊಹ್ಲಿ:

ರಾಯಲ್ ಚಾಲೆಂಜರ್ಸ್ ಬೆಂಗಳೂರುತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಕಳೆದ ಪಂದ್ಯದಲ್ಲಿ ಹಿಡಿದ ಅದ್ಭುತ ಕ್ಯಾಚ್‌ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಐಪಿಎಲ್ 13ನೇ ಪಂದ್ಯದಲ್ಲಿ ಬೆಂಗಳೂರು ತಂಡವು ರಾಜಸ್ತಾನ್ ರಾಯಲ್ಸ್ ತಂಡವನ್ನು ಎದುರಿಸಿತ್ತು. ಈ ಪಂದ್ಯದಲ್ಲಿ ಕೊಹ್ಲಿ ಅದ್ಭುತ ಫೀಲ್ಡಿಂಗ್ ಪ್ರದರ್ಶನದ ಮೂಲಕeಲ್ಲರ ಗಮನ ಸೆಳೆದರು. ಆರ್​ಆರ್​ ನ ದೇವದತ್ ಪಡಿಕ್ಕಲ್ ಅವರ ಕ್ಯಾಚ್​ ನ್ನು ವಿರಾಟ್ ಸೂಪರ್ ಆಗಿ ಹಿಡಿದ್ದಿದ್ದು, ಇದೀಗ ಎಲ್ಲಡೇ ಸಖತ್ ವೈರಲ್ ಆಗಿದೆ. ಆದರೆ ಈ ಕ್ಯಾಚ್​ ನಲ್ಲಿ ಬಾಲ್ ನೆಲಕ್ಕೆ ತಟ್ಟಿದೆದ ಎಂದು ಅಪೈರ್ ಅನುಮಾನಿಸದರೂ ಅಂತಿಮವಾಗಿ ಔಟ್ ಎಂದು ಹೇಳಲಾಯಿತು.

10ನೇ ಓವರ್​ನಲ್ಲಿ ಮ್ಯಾಜಿಕಲ್​ ಕ್ಯಾಚ್ ಹಿಡಿದ ವಿರಾಟ್:

ಪಂದ್ಯದ 10ನೇ ಓವರ್ ನಲ್ಲಿ ಬೌಲಿಂಗ್ ಮಾಡಿದ ಹರ್ಷಲ್ ಪಟೇಲ್ ಬೌಲಿಂಗ್​ಗೆ ಸ್ಟ್ರೈಕ್​ ನಲ್ಲಿ ಬಟ್ಲರ್ ಮತ್ತು ಪಡಿಕ್ಕಲ್ ಇದ್ದರು. ಈ ವೇಳೆ ಪಡಿಕ್ಕಲ್ ಓವರ್​ನ ಕೊನೆಯ ಎಸೆತವನ್ನು ದೊಡ್ಡ ಹೊಡೆತ ಹೊಡೆಯಲು ಯತ್ನಿಸಿದರು. ಆದರೆ ಹರ್ಷಲ್ ಎಸೆದ ನಿಧಾನಗತಿಯ ಚೆಂಡನ್ನು ಊಹಿಸಲು ಸಾಧ್ಯವಾಗದ ಪಡಿಕ್ಕಲ್ ಪೆವಿಲಿಯನ್ ಸೇರಿದರು. ಪ್ಯಾಡಲ್ ಬ್ಯಾಟ್ ಅಂಚಿಗೆ ತಾಗಿ ಚಿಮ್ಮಿದ ಚೆಂಡನ್ನು ಮಿಡ್ ಫೀಲ್ಡ್ ನಲ್ಲಿದ್ದ ಕೊಹ್ಲಿ ಅದ್ಭುತವಾಗಿ ಸ್ವೀಕರಿಸಿದರು.

ಇದನ್ನೂ ಓದಿ: Virushka Net Worth: ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಜೋಡಿ ಎಷ್ಟು ಶ್ರೀಮಂತರು ಗೊತ್ತೇ?

ಬ್ಯಾಟಿಂಗ್​ನಲ್ಲಿ ನಿರಾಸೆ ಮೂಡಿಸಿದ ಕೊಹ್ಲಿ:

ಮಾಜಿ ನಾಯಕ ವಿರಾಟ್ ಕೊಹ್ಲಿ  ಮತ್ತೊಮ್ಮೆ ಬ್ಯಾಟಿಂಗ್​ ನಲ್ಲಿ ವೈಫಲ್ಯ ಎದುರಿಸಿದರು. 6 ಎಸೆತ ಎದುರಿಸಿದ ವಿರಾಟ್ ಕೊಹ್ಲಿ, ಯಜುವೇಂದ್ರ ಚಾಹಲ್ ಮಾಡಿದ ಆಕರ್ಷಕ ರನೌಟ್​ಗೆ ಬಲಿಯಾದರು. ಈ ಮೂಲಕ ಮತ್ತೊಮ್ಮೆ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಕೊಹ್ಲಿಯ ಆಕರ್ಷಕ ಬ್ಯಾಟಿಂಗ್ ನೋಡಲು ಅಭಿಮಾನಿಗಳು ಪ್ರತಿ ಪಂದ್ಯದಲ್ಲಿಯೂ ಕಾಯುತ್ತಿದ್ದಾರೆ ಎಂದರೂ ತಪ್ಪಾಗಲಾರದು.

ಇದನ್ನೂ ಓದಿ: RCB vs RR: ಶಹಬಾಜ್​​ ಸೂಪರ್​​.. ಡಿಕೆ​ ದರ್ಬಾರ್​​! ರೋಚಕ ಸಮರದಲ್ಲಿ ಗೆದ್ದ ಆರ್​​ಸಿಬಿ ಬಾಯ್ಸ್​

ಅದ್ಭುತ ಆಟವಾಡಿದ ಕಾರ್ತಿಕ್, ಶಾಬಾಜ್:

87 ರನ್ ಗೆ 5 ವಿಕೆಟ್ ಕಳೆದುಕೊಂಡು ಸೋಲಿನ ಭೀತಿಯಲ್ಲಿದ್ದ ವೇಳೆ, ದಿನೇಶ್ ಕಾರ್ತಿಕ್ ಹಾಗೂ ಶಾಬಾಜ್ ಅಹ್ಮದ್ ಕೇವಲ 33 ಎಸೆತಗಳಲ್ಲಿ 67 ರನ್ ಸಿಡಿಸುವ ಮೂಲಕ ಆರ್​ಸಿಬಿ ತಂಡ 4 ವಿಕೆಟ್ ಗಳಿಂದ ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಲಿಸಲು ನೆರವಾದರು. ಶಹಬಾಜ್​ ಅಹಮದ್​ 26 ಬಾಲ್​ಗಳಲ್ಲಿ 46 ರನ್​ ಮತ್ತು ದಿನೇಶ್​ ಕಾರ್ತಿಕ್​ 23 ಬಾಲ್​ಗಳಲ್ಲಿ 44 ರನ್​​ಗಳಿಸಿ ಆರ್​ಸಿಬಿಗೆ ಗೆಲುವಿನಲ್ಲಿ ಪ್ರಮುಖಪಾತ್ರವಹಿಸಿದರು. ಒಟ್ಟಾರೆ 4 ವಿಕೆಟ್​ಗಳ ರೋಚಕ ಜಯ ಕಂಡಿದೆ ರಾಯಲ್​ ಚಾಲೆಂಜರ್ಸ್  ಬೆಂಗಳೂರು.
Published by:shrikrishna bhat
First published: