Harshal Patel: RCB ತಂಡಕ್ಕೆ ಆಘಾತ, ಹರ್ಷಲ್ ಪಟೇಲ್ ಸಹೋದರಿ ನಿಧನ

ಇಂಡಿಯನ್ ಪ್ರೀಮಿಯರ್ ಲೀಗ್ (IPL) 2022ರ ಸೀಸನ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುವ ಹರ್ಷಲ್ ಪಟೇಲ್ ಅವರ ಮನೆಯಲ್ಲಿ ದುರಂತ ಸಂಭವಿಸಿದೆ. ಹರ್ಷಲ್ ಪಟೇಲ್ ಅವರ ಸಹೋದರಿ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಹರ್ಷಲ್ ಪಟೇಲ್

ಹರ್ಷಲ್ ಪಟೇಲ್

  • Share this:
ಇಂಡಿಯನ್ ಪ್ರೀಮಿಯರ್ ಲೀಗ್ (IPL) 2022ರ ಸೀಸನ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಪ್ರತಿನಿಧಿಸುವ ಹರ್ಷಲ್ ಪಟೇಲ್ (Harshal Patel) ಅವರ ಮನೆಯಲ್ಲಿ ದುರಂತ ಸಂಭವಿಸಿದೆ. ಹರ್ಷಲ್ ಪಟೇಲ್ ಅವರ ಸಹೋದರಿ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯವು ಶನಿವಾರ ಪುಣೆಯ ಕ್ರೀಡಾಂಗಣದಲ್ಲಿ ನಡೆದಿತ್ತು. ಪಂದ್ಯದ ಬಳಿಕ ಹರ್ಷಲ್ ಪಟೇಲ್ ಗೆ ಪಂದ್ಯದ ನಂತರ ಈ ಮಾಹಿತಿ ಲಭ್ಯವಾಗಿದ್ದು, ತಂಡದಿಂದ ಹೊರನಡೆದಿದ್ದಾರೆ ಎಂದು ತಿಳಿದುಬಂದಿದೆ. ಇನ್ನು, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರ್ ಸಿಬಿ (CSK vs RCB) ಪಂದ್ಯ ಏ.12ರಂದು ನಡೆಯಲಿದೆ. ಈ ಪಂದ್ಯದಿಂದ ಹರ್ಷಲ್ ಪಟೇಲ್ ಹೊರಗುಳಿಯುವ ಸಾಧ್ಯತೆ ಇದೆ.

ಪಿಟಿಐ ಪ್ರಕಾರ, ಹರ್ಷಲ್ ಪಟೇಲ್ ಶನಿವಾರ ರಾತ್ರಿ ಮನೆಗೆ ಮರಳಲಿದ್ದಾರೆ. ಅಲ್ಲದೇ ಅಲ್ಲಿನ ಕಾರ್ಯಕ್ರಮಗಳನ್ನು ಮುಗಿಸಿ ಮತ್ತೆ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂ ಮಾಹಿತಿ ಲಭ್ಯವಾಗಿದೆ. ಹರ್ಷಲ್ ಪಟೇಲ್ ಸಹೋದರಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆರ್‌ಸಿಬಿ ಅಭಿಮಾನಿಗಳು ಮತ್ತು ಐಪಿಎಲ್ ಅಭಿಮಾನಿಗಳು ಹರ್ಷಲ್ ಪಟೇಲ್ ಗೆ ಸಾಂತ್ವಾನದ ಮಾತುಗಳನ್ನು ಆಡುತ್ತಿದ್ದಾರೆ.

ಹರ್ಷಲ್ ಪಟೇಲ್ ಕುಟುಂಬ:

ಹರ್ಷಲ್ ಪಟೇಲ್ ಕುಟುಂಬ 2005ರಲ್ಲಿ ಅಮೆರಿಕಾಗೆ ಸ್ಥಳಾಂತರವಾಗಿತ್ತು. ಇನ್ನು, ವಿಕ್ರಮ್ ಪಟೇಲ್ ಹರ್ಷಲ್ ಪಟೇಲ್ ಅವರ ತಂದೆಯಾಗಿದ್ದು ದರ್ಶನಾ ಪಟೇಲ್ ತಾಯಿ. ಈ ದಂಪತಿಯ ಹಿರಿಯ ಮಗ ಹರ್ಷಲ್ ಪಟೇಲ್ ಆಗಿದ್ದಾರೆ. ಉಳಿದಂತೆ ತಪನ್ ಪಟೇಲ್ ಸೋದರ ಮತ್ತು ಅರ್ಚಿತಾ ಪಟೇಲ್ ಕೊನೆಯವರಾಗಿದ್ದಾರೆ. ಇದರಲ್ಲಿ ಕೊನೆಯವಳಾದ ಅರ್ಚಿತಾ ಪಟೇಲ್ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳದಿಬಂದಿದೆ. ಆದರೆ ಇದೀಗ ಅರ್ಚಿತಾ ಪಟೇಲ್ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: IPL 2022- Harshal Patel: ಐಪಿಎಲ್ ಇತಿಹಾಸದಲ್ಲಿ ವಿನೂತನ ದಾಖಲೆ ಮಾಡಿದ ಹರ್ಷಲ್ ಪಟೇಲ್, ಈ ದಾಖಲೆ ಮಾಡಿದ 2ನೇ ಭಾರತೀಯ

ಮುಂಬೈ ವಿರುದ್ಧದ ಪಂದ್ಯ:

ನಿನ್ನೆ ( ಮಾರ್ಚ್ 9) ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಹರ್ಷಲ್ ಪಟೇಲ್ 4 ಓವರ್‌ಗಳಲ್ಲಿ ಕೇವಲ 23 ರನ್‌ ನೀಡಿ 2 ವಿಕೆಟ್ ಪಡೆದರು. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಬರೋಬ್ಬರಿ 7 ವಿಕೆಟ್‌ಗಳ ಗೆಲುವು ದಾಖಲಿಸಿತು. ಈ ಮೂಲಕ ಆರ್​ಸಿಬಿ ತಂಡ ಐಪಿಎಲ್ ಅಂಕ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ. ಇತ್ತ ಮುಂಬೈ ಇಂಡಿಯನ್ಸ್ ಸತತ ಸೋಲುಗಳೊಂದಿಗೆ ಒಂಬತ್ತನೇ ಸ್ಥಾನಕ್ಕೆ ಕುಸಿದಿದೆ.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂದಿನ ಪಂದ್ಯ:

ಹ್ಯಾಟ್ರಿಕ್ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಆರ್​ಸಿಬಿ ತಂಡ ಮುಂದಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣಸಾಡಲಿದೆ. ಏ. 12ರಂದು ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂ ನಲ್ಲಿ ಪಂದ್ಯ ನಡೆಯಲಿದ್ದು, ಈಗಾಗಲೇ ಸತತ ಸೋಲಿನಿಂದ ಚೆನ್ನೈ ಅಂಕಪಟ್ಟಿಯಲ್ಲಿ ಕೊನೇಯ ಸ್ಥಾನದಲ್ಲಿದ್ದರೆ, ಹ್ಯಾಟ್ರಿಕ್ ಗೆಲುವಿನ ಝೋಶ್​ ನಲ್ಲಿರುವ ಬೆಂಗಳೂರು ತಂಡ ಚೆನ್ನೈ ವಿರುದ್ಧ ಗೆಲ್ಲುವ ಫೆವರೇಟ್ ಟೀಂ ಆಗಿದೆ.

ಇದನ್ನೂ ಓದಿ: Harshal Patel: ಹರಾಜಿನ ಬೆಲೆಯು ನನ್ನ ಆಟವನ್ನು ವಿಚಲಿತಗೊಳಿಸುವುದಿಲ್ಲ, RCB ಬೌಲರ್

ಯಾವಾಗ ಮರಳಲಿದ್ದಾರೆ ಹರ್ಷಲ್ ಪಟೇಲ್:

ಮೂಲಗಳ ಪ್ರಕಾರ ಅಂತಿಮ ವಿಧಿವಿಧಾನಗಳನ್ನು ಪೂರೈಸಿದ ಬಳಿಕ ಹರ್ಷಲ್ ಪಟೇಲ್ ಮತ್ತೆ ಬೆಂಗಳೂರು ತಂಡವನ್ನು ಸೇರಿಕೊಳ್ಳಲಿದ್ದಾರೆ. ಜೊತೆಗೆ ಬಿಸಿಸಿಐ ನಿಯಮಗಳ ಪ್ರಕಾರ ಕೋರೋನಾ ಕ್ವಾರಂಟೈನ್ ಪ್ರಕ್ರಿಯೆ ಮುಗಿಸಿದ ಬಳಿಕ ಹರ್ಷಲ್ ಮತ್ತೆ ತಂಡವನ್ನು ಶೀಘ್ರವಾಗಿ ಕೂಡಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಮುಂದಿನ ಚೆನ್ನೈ ವಿರುದ್ಧದ ಪಂದ್ಯಕ್ಕೆ ಹರ್ಷಲ್ ಲಭ್ಯವಾಗುವುದು ಸಂದೇಹವಾಗಿದೆ.
Published by:shrikrishna bhat
First published: