IPL 2022 Rohit Sharma: ರೋಹಿತ್ ಶರ್ಮಾ ಹೇಳಿಕೆಗೆ RCB ಅಭಿಮಾನಿಗಳ ಬೇಸರ, ಅಂತದೇನಂದ್ರು ಗೊತ್ತಾ ಹಿಟ್​ಮ್ಯಾನ್?

ಪ್ಲೇ-ಆಫ್ ರೇಸ್‌ನಿಂದ ಹೊರಬಿದ್ದ ಮೊದಲ ತಂಡ ಮುಂಬೈ ಇಂಡಿಯನ್ಸ್, ಆದರೆ ಈಗ ಅವರ ಕೈಯಲ್ಲಿ RCB ಭವಿಷ್ಯವಿದೆ.

ರೋಹಿತ್ ಶರ್ಮಾ

ರೋಹಿತ್ ಶರ್ಮಾ

  • Share this:
ಐಪಿಎಲ್ 2022ರ (IPL 2022) 15ನೇ ಆವೃತ್ತಿಯ 67ನೇ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟನ್ಸ್ ತಂಡಗಳು (RCB vs GT) ಸೆಣಸಾಡಲಿವೆ. ಈ ಪಂದ್ಯವು ಮುಂಬೈನ ವಾಂಖೆಡೆ ಸ್ಟೇಡಿಯಂ ನಲ್ಲಿ ನಡೆಯಲಿದೆ. ಈಗಾಗಲೇ ಪ್ಲೇ ಆಫ್ ಹಂತಕ್ಕೆ ತಲುಪಿರುವ ಹಾರ್ದಿಕ್ ಪಾಂಡ್ಯ (Hardik Pandya) ನೇತೃತ್ವದ ಗುಜರಾತ್ ಟೈಟನ್ಸ್ ತಂಡಕ್ಕೆ ಈ ಪಂದ್ಯ ಔಪಚಾರಿಕವಾದರೆ ಫಾಪ್ ಡುಪ್ಲೇಸಿಸ್ (Faf du Plessis) ನಾಯಕತ್ವದ RCB ತಂಡಕ್ಕೆ ಇಂದಿನ ಪಂದ್ಯ ಮಹತ್ವದ್ದಾಗಿದೆ. ಪ್ಲೇ ಆಫ್ ಹಂತಕ್ಕೆ ತಲುಪಬೇಕಿದ್ದರೆ ಆರ್​ಸಿಬಿ ಈ ಪಂದ್ಯವನ್ನು ಗೆಲ್ಲಲೇಬೇಕಿದೆ.

ಆದರೆ ಪ್ಲೇ-ಆಫ್ ರೇಸ್‌ನಿಂದ ಹೊರಬಿದ್ದ ಮೊದಲ ತಂಡ ಮುಂಬೈ ಇಂಡಿಯನ್ಸ್, ಆದರೆ ಈಗ ಅವರ ಕೈಯಲ್ಲಿ RCB ಭವಿಷ್ಯವಿದೆ. ಹೌದು, ಬೆಂಗಳೂರು ತಂಡ ಇಂದಿನ ಪಂದ್ಯ ಗೆದ್ದರೂ ಮುಂದಿನ ಮುಂಬೈ ಮತ್ತು ಡೆಲ್ಲಿ ನಡುವಿನ ಪಂದ್ಯದಲ್ಲಿ ಡೆಲ್ಲಿ ಸೋಲಬೇಕಿದೆ.

ಮುಂಬೈ - ಡೆಲ್ಲಿ ಪಂದ್ಯದ ಮೇಲೆ ಆರ್​ಸಿಬಿ ಭವಿಷ್ಯ:

ಮುಂಬೈ ಇಂಡಿಯನ್ಸ್‌ನ ಐಪಿಎಲ್ ಸೀಸನ್‌ನ ಕೊನೆಯ ಪಂದ್ಯ ಶನಿವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯಲಿದೆ. ಈ ಪಂದ್ಯದಲ್ಲಿ ಡೆಲ್ಲಿ ಗೆದ್ದರೆ ಆರ್‌ಸಿಬಿಗೆ ಪ್ಲೇ ಆಫ್‌ ಹಂತಕ್ಕೇರುವುದು ಕಷ್ಟವಾಗಲಿದೆ. ಆದರೆ ಡೆಲ್ಲಿ ವಿರುದ್ಧದ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾ ನೀಡಿದ ಹೇಳಿಕೆ RCB ಅಭಿಮಾನಿಗಳಿಗೆ ಬೇಸರ ಉಂಟುಮಾಡಿದೆ. ಈ ಸಂಬಂಧ ಆರ್​ಸಿಬಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: IPL 2022 RCB vs GT: ಗುಜರಾತ್ -RCB ಮುಖಾಮುಖಿ, ಬೆಂಗಳೂರು ಗೆದ್ದರಷ್ಟೆ ಫ್ಲೇ ಆಫ್ ಕನಸು ಜೀವಂತ

ರೋಹಿತ್ ಹೇಳಿಕೆಗೆ ಆರ್​ಸಿಬಿ ಅಭಿಮಾನಿಗಳ ಬೇಸರ:

ಇನ್ನು, ಕಳೆದ ಕೊನೆ ಪಂದ್ಯದ ಬಳಿಕ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ನೀಡಿರುವ ಹೇಳಿಕೆ ಇದೀಗ ಆರ್​ಸಿಬಿ ಅಭಿಮಾನಿಗಳಿಗೆ ಬೇಸರ ತರಿಸಿದೆ. ಹೌದು, ಪಂದ್ಯದ ನಂತರ ಮಾತನಾಡಿದ ರೋಹಿತ್, ‘ಮುಂದಿನ ಪಂದ್ಯದಲ್ಲಿ ನಾವು ಕೆಲವು ಹೊಸ ಆಟಗಾರರಿಗೆ ಅವಕಾಶ ನೀಡುತ್ತೇವೆ ಇದರಿಂದ ಮುಂದಿನ ಋತುವಿನ ತಯಾರಿಯನ್ನು ಪ್ರಾರಂಭಿಸಬಹುದು" ಎಂದು ರೋಹಿತ್ ಹೈದರಾಬಾದ್ ವಿರುದ್ಧದ ಪಂದ್ಯದ ವೇಳೆ ಹೇಳಿದ್ದರು.

ರೋಹಿತ್ ಶರ್ಮಾ ಅವರ ಈ ಹೇಳಿಕೆಯನ್ನು RCB ಅಭಿಮಾನಿಗಳಿಗೆ ಬೇಸರ ತರಿಸಿದೆ. ಮುಂಬೈ ಇಂಡಿಯನ್ಸ್ ತನ್ನ ಕೊನೆಯ ಪಂದ್ಯವನ್ನು ಕಳೆದುಕೊಳ್ಳಲು ಮತ್ತು RCB ಗೆ ಪ್ಲೇ-ಆಫ್ ತಲುಪಲು ಸಾಧ್ಯವಾಗದಂತೆ ಮಾಡಲು ಉದ್ದೇಶಪೂರ್ವಕವಾಗಿ ಈ ರೀತಿ ಮಾಡುತ್ತಿದೆ ಎಂದು RCB ಅಭಿಮಾನಿಗಳು ಆರೋಪಿಸಿದ್ದಾರೆ.

ಇದನ್ನೂ ಓದಿ: IPL 2022: ಐಪಿಎಲ್​ನಲ್ಲಿ ಕನ್ನಡಿಗನ ವಿಶೇಷ ದಾಖಲೆ, ಸತತ 5 ಸೀಸನ್​ಗಳಲ್ಲಿ 500ರ ಗಡಿ ದಾಟಿದ ರಾಹುಲ್

ಪ್ಲೇ ಆಫ್ ​ನಿಂದ ಹೊರಬಿದ್ದಿರುವ ಮುಂಬೈ:

ಮುಂಬೈ ಇಂಡಿಯನ್ಸ್ ಈ ಋತುವಿನಲ್ಲಿ 13 ಪಂದ್ಯಗಳಲ್ಲಿ 10 ರಲ್ಲಿ ಸೋತಿದೆ, ಕೇವಲ ಮೂರರಲ್ಲಿ ಗೆದ್ದಿದೆ. ಇದು ಐಪಿಎಲ್ ಇತಿಹಾಸದಲ್ಲಿ ಮುಂಬೈ ತಂಡದ ಅತ್ಯಂತ ಕಳಪೆ ಪ್ರದರ್ಶನವಾಗಿದೆ. ಈ ಮೂಲಕ ಐಪಿಎಲ್ 2022ರಲ್ಲಿ ಲೀಗ್​ ಹಂತದಿಂದ ಹೊರನಡೆದ ಮೊದಲ ತಂಡವಾಗಿದೆ. ಮತ್ತೊಂದೆಡೆ ಆರ್‌ಸಿಬಿ 13 ಪಂದ್ಯಗಳಲ್ಲಿ 7ರಲ್ಲಿ ಗೆಲುವು ಸಾಧಿಸಿದೆ. ಒಂದು ವೇಳೆ ಆರ್‌ಸಿಬಿ ಗುಜರಾತ್‌ ವಿರುದ್ಧ ಗೆದ್ದು, ಮುಂಬೈ ತಂಡ ಡೆಲ್ಲಿ ತಂಡವನ್ನು ಸೋಲಿಸಿದರೆ, ಬೆಂಗಳೂರು ತಂಡಕ್ಕೆ ಪ್ಲೇ ಆಫ್‌ ಪ್ರವೇಶಿಸುವ ಅವಕಾಶವಿದೆ.





ಗೆಲ್ಲಲೇ ಬೇಕಾದ ಅನಿವಾರ್ಯ ಸ್ಥಿತಿಯಲ್ಲಿ RCB:

ಇನ್ನು, ಬೆಂಗಳೂರು ತಂಡವು ಫ್ಲೇ ಆಫ್ ಗೆ ತಲುಪಬೇಕಾದ್ದಲ್ಲಿ ಇಂದಿನ ಪಂದ್ಯವನ್ನು ಗೆಲ್ಲಲೇ ಬೇಕಾದ ಅನಿವಾರ್ತ ಸ್ಥಿತಿಯಲ್ಲಿದೆ. ಈಗಾಗಲೇ ಪಾಯಿಂಟ್ ಟೇಬಲ್​ ನಲ್ಲಿ 5ನೇ ಸ್ಥಾನದಲ್ಲಿರುವ ಆರ್​ಸಿಬಿ ಇಂದಿನ ಪಂದ್ಯ ಗೆದ್ದಲ್ಲಿ 4ನೇ ರ್ಸಥಾನಕ್ಕೇರುವ ಮೂಲಕ ಫ್ಲೇ ಆಫ್ ಗೆ ತಲುಪಲಿದೆ. ಆದರೆ ಇಂದಿನ ಪಂದ್ಯವನ್ನೂ ಸಹ ಹೆಚ್ಚಿನ ರನ್ ರೇಟ್ ಮೂಲಕ ಗೆಲ್ಲಬೇಕಿದೆ. ಅದಲ್ಲದೇ ಮುಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸೋಲಬೇಕಿದೆ. ಹಾಗಿದ್ದಲ್ಲಿ ಮಾತ್ರ ಎಂಗಳೂರು ತಂಡ ಫ್ಲೇ ಆಫ್ ಹಂತಕ್ಕೇರಲಿದೆ.
Published by:shrikrishna bhat
First published: