IPL 2022: RCB ಬೇಡ ಎಂದು ರಿಜೆಕ್ಟ್ ಮಾಡಿದ ಆಟಗಾರರು ಇದೀಗ ಮತ್ತೊಂದು ತಂಡದ ಸೂಪರ್ ಪ್ಲೇಯರ್ಸ್..!

ಆರ್​ಸಿಬಿ (RCB) ತಂಡದಿಂದಲೂ ಅನೇಕ ಆಟಗಾರರು ಬೇರೆ ತಂಡಗಳಿಗೆ ಹರಾಜಾಗಿದ್ದಾರೆ. ಅದರಲ್ಲಿಯೂ ಪ್ರಮುಖವಾಗಿ ಯುಜ್ವೇಂದ್ರ ಚಹಾಲ್ (Yuzvendra Chahal), ದೇವದತ್ ಪಡಿಕ್ಕಲ್ (Devdutt Padikkal), ನವದೀಪ್ ಸೈನಿ ಅಂತಹ ಪ್ರಮುಖ ಆಟಗಾರರನ್ನು ಆರ್​ಸಿಬಿ ಕೈಬಿಟ್ಟಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಐಪಿಎಲ್ 2022ರ (IPL 20220) 15ನೇ ಆವೃತ್ತಿ ಈಗಾಗಲೇ ಆರಂಭವಾಗಿದ್ದು, ದಿನ ಕಳೆದಂತೆ ಪ್ರತಿಯೊಂದು ಪಂದ್ಯವೂ ರಂಗೇರುತ್ತಿದೆ. ಇದರ ನಡುವೆ ಈ ಬಾರಿ ಹೊಸ ನಾಯಕತ್ವದಲ್ಲಿ ಕಣಕ್ಕಿಳಿದಿರುವ ಬೆಂಗಳೂರು ರಾಯಲ್ ಚಾಲೆಂಜರ್ಸ್ (Royal Challengers Bangalore) ತಂಡವು ಈಗಾಗಲೇ ನಡೆದಿರುವ 3 ಪಮದ್ಯಗಳಲ್ಲಿ 2 ಪಂದ್ಯವನ್ನು ಗೆಲ್ಲುವ ಮೂಲಕ ಐಪಿಎಲ್ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಇನ್ನು, ಈ ಸಲದ ಐಪಿಎಲ್​ ನ ಮೇಗಾ ಹರಾಜಿನಲ್ಲಿ ಅನೇಕ ಆಟಗಾರರು ಬೇರೆ ಬೇರೆ ತಂಡಗಳಿಗೆ ಹರಾಜಾಗಿರುವುದನ್ನು ನಾವು ನೋಡಿದ್ದೇವೆ. ಅಂತೆಯೇ ಆರ್​ಸಿಬಿ (RCB) ತಂಡದಿಂದಲೂ ಅನೇಕ ಆಟಗಾರರು ಬೇರೆ ತಂಡಗಳಿಗೆ ಹರಾಜಾಗಿದ್ದಾರೆ. ಅದರಲ್ಲಿಯೂ ಪ್ರಮುಖವಾಗಿ ಯುಜ್ವೇಂದ್ರ ಚಹಾಲ್ (Yuzvendra Chahal), ದೇವದತ್ ಪಡಿಕ್ಕಲ್ (Devdutt Padikkal), ನವದೀಪ್ ಸೈನಿ ಅಂತಹ ಪ್ರಮುಖ ಆಟಗಾರರನ್ನು ಆರ್​ಸಿಬಿ ಕೈಬಿಟ್ಟಿದ್ದು, ಬೆಂಗಳೂರು ತಂಡದ ಅಭಿಮಾನಿಗಳಿಗೆ ಬೇಸರತರಿಸಿತ್ತು ಎಂದರೂ ತಪ್ಪಾಗಲಾರದು. ಆದರೆ ಈ ಪ್ರಮುಖ ಅಟಗಾರರು ಈ ಬಾರಿಯ ಐಪಿಎಲ್​ನಲ್ಲಿ ಬೇರೊಂದು ತಂಡದ ಪರ ಸಖತ್ ಮಿಂಚುತ್ತಿದ್ದಾರೆ. ಹಾಗಿದ್ರೆ ಆ ಪ್ಲೇಯರ್ಸ್​ಗಳ ಆಟ ಈ ಬಾರಿ ಹೇಗಿದೆ ಎಂದಸು ನೊಡೋಣ ಬನ್ನಿ.

ಆರ್​ಸಿಬಿ ಕೈ ಬಿಟ್ಟ ಆಟಗಾರರು:

ಬೆಂಗಳೂರು ತಂಡದಿಂದ ಕೈ ಬಿಟ್ಟತಂಹ ಪ್ರಮುಖ ಮೂರು ಆಟಗಾರರು ಎಂದರೆ, ಯುಜ್ವೇಂದ್ರ ಚಹಾಲ್, ದೇವದತ್ ಪಡಿಕ್ಕಲ್, ನವದೀಪ್ ಸೈನಿ ಇವರುಗಳು ಹಿಂದಿನ ಸೀಸನ್​ ನಲ್ಲಿ ಆರ್​ಸಿಬಿ ಪರ ಕಣಕ್ಕಿಳಿದಿದ್ದರು. ಆದರೆ ಈ ಬಾರಿ ಅವರುಗಳು ಬೇರೊಂದು ತಂಡದ ಪರ ಕಣಕ್ಕಿಳಿದ್ದಾರೆ. ಆದರೆ ವಿಶೇಷ ಎಂಬಂತೆ ಈ ಮೂರು ಪ್ಲೇಯರ್​ಗಳು ಈ ಬಾರಿ ರಾಜಸ್ತಾನ್ ರಾಯಲ್ಸ್ ಪರ ಈ ಬಾರಿ ಆಟವಾಡುತ್ತಿದ್ದಾರೆ.

ಯುಜ್ವೇಂದ್ರ ಚಹಾಲ್:

ಆರ್​ಸಿಬಿ ಪಾಳಯದಲ್ಲಿ ಅನೇಕ ವರ್ಷಗಳಿಂದ ಕಣಕ್ಕಳಿಯುತ್ತಿದ್ದ ಚಹಾಲ್ ಅವರನ್ನು ಈ ಬಾರಿ ಕೈಬಿಟ್ಟಿದೆ. ಇದು ಬೆಂಗಳೂರು ಅಭಿಮಾನಿಗಳಲ್ಲಿ ಕೊಂಚ ಬೇಸರ ತರಿಸಿತ್ತು ಎಂದರೆ ಸುಳ್ಳಾಗಲಾರದು. ಈ ಬಾರಿ ರಾಜಸ್ತಾನ್ ರಾಯಲ್ಸ್ ಪರ ಕಣಕ್ಕಿಳಿದಿರುವ ಚಹಾಲ್, 3 ಪಂದ್ಯಗಳಿಂದ 7 ವಿಕೆಟ್ ತೆಗೆದು ಮಿಂಚಿದ್ದಾರೆ. ಜೊತೆಗೆ ಪರ್ಫಲ್ ಕ್ಯಾಪ್ ರೇಸ್​ ನಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಅಲ್ಲದೇ 22 ರನ್​ಗೆ 3 ವಿಕೆಟ್ ಸಹ ತೆಗೆದಿದ್ದಾರೆ. ಉಳಿಂದತೆ ಈವರೆಗೆ ಅವರು, 117 ಪಂದ್ಯಗಳಿಂದ ಬರೋಬ್ಬರಿ 146 ವಿಕೆಟ್ ಕಬಳಿಸಿದ್ದಾರೆ. 25 ರನ್​ ಗಳಿಗೆ 4 ವಿಕೆಟ್ ಉರಿಳಿಸಿರುವುದು ಅವರ ಶ್ರೇಷ್ಠ ಸಾಧನೆಯಾಗಿದೆ.

ಇದನ್ನೂ ಓದಿ: IPL 2022 - Dinesh Karthik: ಈತ RCB ಸ್ಟಾರ್ ಆಟಗಾರ, ಆದ್ರೆ ಇವರ ಜೀವನದ ಕಥೆ ಗೊತ್ತಾ?

ದೇವದತ್ ಪಡಿಕ್ಕಲ್:

ದೇವದತ್ ಪಡಿಕ್ಕಲ್ ಹಿಂದಿನ ಸೀಸನ್​ ನಲ್ಲಿ ಆರ್​ಸಿಬಿ ಪರ ಕಣಕ್ಕಿಳಿದಿದ್ದರು. ತಮ್ಮ ಭರ್ಜರಿ ಬ್ಯಾಟಿಂಗ್​ನಿಂದ ಹೆಸರುವಾಸಿಯಾಗಿದ್ದ ಅವರನ್ನು ಬೆಂಗಳೂರು ತಂಡ ಈ ಬಾರಿ ಸೀಸನ್​ನಲ್ಲಿ ಅವರನ್ನು ತಂಡದಿಂದ ಕೈಬಿಟ್ಟಿದ್ದು ಅವರು ರಾಜಸ್ತಾನ್ ರಾಯಲ್ಸ್ ಪರ ಬ್ಯಾಟ್ ಬೀಸುತ್ತಿದ್ದಾರೆ. ಅವರು ಇ ಬಾರಿ 3 ಪಂದ್ಯಗಳಿಂದ 85 ರನ್ ಕಲೆಹಾಕಿದ್ದಾರೆ. ಇದರಲ್ಲಿ 41 ರನ್ ಈವರೆಗಿನ ಬೆಸ್ಟ್ ಸ್ಕೋರ್ ಆಗಿದೆ. ಐಪಿಎಲ್​ನಲ್ಲಿ ಈವರೆಗೆ ದೇವದತ್ ಪಡಿಕ್ಕಲ್ 32 ಪಂದ್ಯಗಳನ್ನಾಡಿದ್ದು, 125.52ರ ಸರಾಸರಿಯಲ್ಲಿ 969 ರನ್ ಗಳಿಸಿದ್ದಾರೆ. ಇದರಲ್ಲಿ 6 ಅರ್ಧಶತಕ ಮತ್ತು 1 ಶತಕ ಸಹ ಕೂಡಿದೆ.

ನವದೀಪ್ ಸೈನಿ:

ಸೈನಿ ಯಂಗ್ ಆಲ್​ರಂಡರ್ ಆಟಗಾರನಾಗಿದ್ದು, ಅವರನ್ನು ಈ ಬಾರಿ ಆರ್​ಸಿಬಿ ತಂಡದಿಂದ ಕೈಬಿಟ್ಟಿದೆ. ಅವರು ರಾಜಸ್ತಾನ್ ಪರ ಆಟವಾಡುತ್ತಿದ್ದು, ಈ ಬಾರಿ 2 ಪಂದ್ಯಗಳಿಂದ ಕೇವಲ 2 ರನ್​ ಗಳಸಿದರೆ, 3 ವಿಕೆಟ್ ಪಡೆದು ಮಿಂಚಿದ್ದಾರೆ. ಅಲ್ಲದೇ 36 ರ್ನನಗೆ 2 ವಿಕೆಟ್ ಪಡೆದಿದ್ದಾರೆ.

ಇದನ್ನೂ ಓದಿ: RCB vs PBKS: ಪಂಜಾಬ್ ಎದುರು ಅಬ್ಬರಿಸಿದ RCB, ಮೊದಲ ಪಂದ್ಯದಲ್ಲೇ ನಾಯಕನ ಆರ್ಭಟ

ಇವರುಗಳನ್ನು ಈ ಬಾರಿ ಆರ್​ಸಿಬಿ ತಂಡದಿಂದ ಕೈಬಿಟ್ಟರೂ ಬೇರೊಂದು ತಂಡದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಬೆಂಗಳೂರು ತಂಡದಲ್ಲಿಯೇ ಉಳಿಸಿಕೊಂಡಿದ್ದರೆ ತಂಡಕ್ಕೆ ಇನ್ನಷ್ಟು ಸಹಾಯವಾಗುತ್ತಿತ್ತು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಅಲ್ಲದೇ ಚಹಾಲ್ ಮತ್ತು ಪಡ್ಡಿಕಲ್ ಅವರನ್ನು ಆರ್​ಸಿಬಿ ಅಭಿಮಾನಿಗಳು ಈಗಲೂ ಸಖತ್ ಮಿಸ್ ಮಾಡುತ್ತಿರುವುದಾಗಿ ಆಗ್ಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುತ್ತಿರುತ್ತಾರೆ.

ಆರ್​ಸಿಬಿ ಸಂಪೂರ್ಣ ತಂಡ:

ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಫಾಫ್ ಡು ಪ್ಲೆಸಿಸ್ (ನಾಯಕ), ಹರ್ಷಲ್ ಪಟೇಲ್, ವನಿಂದು ಹಸರಂಗಾ, ದಿನೇಶ್ ಕಾರ್ತಿಕ್, ಜೋಶ್ ಹೇಜಲ್‌ವುಡ್, ಶಹಬಾಜ್ ಅಹ್ಮದ್, ಅನುಜ್ ರಾವತ್, ಆಕಾಶ್ ದೀಪ್, ಮಹಿಪಾಲ್ ಲೊಮ್ರೋರ್, ಫಿನ್ ಅಲೆನ್, ಶೆರ್ಫಾನ್ ರುದರ್‌ಫೋರ್ಡ್, ಜೇಸನ್ ಬೆಹ್ರಾಯ್, ಜೇಸನ್ ಬೆಹ್ರಾಯ್ ಮಿಲಿಂದ್, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಡೇವಿಡ್ ವಿಲ್ಲಿ, ಲುವ್ನಿತ್ ಸಿಸೋಡಿಯಾ, ಸಿದ್ಧಾರ್ಥ್ ಕೌಲ್.
Published by:shrikrishna bhat
First published: