ಐಪಿಎಲ್ 15ನೇ (IPL) ಆವೃತ್ತಿಗೆ ಎಲ್ಲಾ ತಂಡಗಳು ಸಿದ್ಧತೆಯಲ್ಲಿ ತೊಡಗಿಕೊಂಡಿವೆ. ಅದರಲ್ಲಿಯೂ ಮೊದಲ ಪ್ರಶಸ್ತಿಗಾಗಿ ಎದುರು ನೋಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಈ ಋತುವಿನಲ್ಲಿ ಹೊಸ ನಾಯಕನ (Captain) ನಾಯಕತ್ವದಲ್ಲಿ ಕಣಕ್ಕಿಳಿಯಲಿದೆ. ಈ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಂದಿನ ನಾಯಕ ಯಾರು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಾಗಿದೆ. ಹೌದು, ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ಮೇಲೆ ಆರ್ ಸಿಬಿ ಅನ್ನು ಯಾರು ಮುನ್ನಡೆಸಲಿದ್ದಾರೆ ಎಂಬ ಪ್ರಶ್ನೆಗೆ ಇಂದು ಬೆಂಗಳೂರು ತಂಡದ ಪ್ರಾಂಚೈಸಿ ಉತ್ತರ ನೀಡಿದೆ. ನಾಯಕನ ಸ್ಥಾನಕ್ಕಾಗಿ ಫಾಫ್ ಡುಪ್ಲೆಸಿಸ್, ಗ್ಲೆನ್ ಮ್ಯಾಕ್ಸ್ವೆಲ್, ದಿನೇಶ್ ಕಾರ್ತಿಕ್ ಹೆಸರು ಹೆಚ್ಚು ಕೇಳಿಬರುತ್ತಲಿತ್ತು. ಆದರೆ ಅಂತಿಮವಾಗಿ ಆರ್ ಸಿಬಿ ತಂಡವು ಫಾಫ್ ಡುಪ್ಲೆಸಿಸ್ ಅವರನ್ನು ತಂಡದ ಮುಂದಿನ ನಾಯಕನನ್ನಾಗಿ ಘೋಷಿಸಿದೆ.
RCB ತಂಡಕ್ಕೆ ಹೊಸ ನಾಯಕ:
ಐಪಿಎಲ್ ಸೀಸನ್ 15 ನಲ್ಲಿ ಆರ್ಸಿಬಿ ತಂಡವನ್ನು ದಕ್ಷಿಣ ಆಫ್ರಿಕಾದ ಆಟಗಾರ ಫಾಫ್ ಡುಪ್ಲೆಸಿಸ್ ಮುನ್ನಡೆಸಲಿದ್ದಾರೆ. ಇಂದು ತಂಡದ ನಾಯಕ ಯಾರಾಗುತ್ತಾರೆ ಎನ್ನುವುದನ್ನು ಘೋಷಿಸುವುದಾಗಿ ಕೆಲ ದಿನಗಳ ಹಿಂದೆ ಆರ್ಸಿಬಿ ಪ್ರಾಂಚೈಸಿ ತಿಳಸಿತ್ತು. ಅದರಂತೆ ಇಂದು ನಡೆದ ಆರ್ಸಿಬಿ ಅನ್ಬಾಕ್ಸಿಂಗ್ ಕಾರ್ಯಕ್ರಮದಲ್ಲಿ ಫಾಫ್ ಡುಪ್ಲೆಸಿಸ್ ಅವರನ್ನು ತಂಡದ ಕ್ಯಾಪ್ಟನ್ ಆಗಿ ಅಧಿಕೃತವಾಗಿ ಘೋಷಿಸಿದೆ.
ನಾಯಕತ್ವದಲ್ಲಿ ಅನುಭವವಿರುವ ಆಟಗಾರ ಡುಪ್ಲೆಸಿಸ್:
ಫಾಫ್ ಡುಪ್ಲೆಸಿಸ್ ಈಗಾಗಲೇ ದಕ್ಷಿಣ ಆಫ್ರಿಕಾ ತಂಡದಲ್ಲಿ ನಾಯಕನಾಗಿರುವುದರಿಂದ ಸುಲಭವಾಗಿ ನಾಯಕತ್ವದ ಅನುಭವವಿದೆ. ಹೀಗಾಗಿಯೇ ಅವರನ್ನು ಆರ್ಸಿಬಿ ಈ ಬಾರಿ ಮೆಗಾ ಹರಾಜಿನಲ್ಲಿ 7 ಕೋಟಿ ರೂ ನೀಡಿ ಖರೀದಿಸಿತ್ತು. ಜೊತೆಗೆ ಎಲ್ಲರ ಊಹೆಯಂತೆಯೇ ಆರ್ಸಿಬಿ ನಾಯಕನಾಗಿ ಫಾಫ್ ಡುಪ್ಲೆಸಿಸ್ ಅವರನ್ನು ನೇಮಿಸಲಾಗಿದೆ.
ಇದನ್ನೂ ಓದಿ: IPL 2022: RCB ತಂಡದ ಸಂಪೂರ್ಣ ವೇಳಾಪಟ್ಟಿ, ಮಾರ್ಚ್ 27ರಂದು ಮೊದಲ ಪಂದ್ಯ
ಫಾಫ್ ಡುಪ್ಲೆಸಿಸ್ ಗೆ ವಿಶ್ ಮಾಡಿದ ಕೊಹ್ಲಿ:
ಶ್ರೀಲಂಕಾ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ಆಡುತ್ತಿರುವ ವಿರಾಟ್ ಕೊಹ್ಲಿ ವಿಡಿಯೋ ಮೂಲಕ ಫಾಫ್ ಡುಪ್ಲೆಸಿಸ್ ಗೆ ಶುಭ ಕೋರಿದ್ದಾರೆ. ಜೊತೆಗೆ ಐಪಿಎಲ್ 15ನೇ ಆವೃತ್ತಿಗಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಆದಷ್ಟು ಬೇಗ ಆರ್ಸಿಬಿ ಜರ್ಸಿಯಲ್ಲಿ ಅಭಿಮಾನಿಗಳ ಮುಂದೆ ಕಾಣಿಸಿಕೊಳ್ಳುದಾಗಿ ವಿರಾಟ್ ತಿಳಿಸಿದ್ದಾರೆ.
14 ವರ್ಷಗಳ ನೆನಪನ್ನು ಮೆಲುಕು ಹಾಕಿದ ಆರ್ಸಿಬಿ:
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಾಂಚೈಸಿ ಇಂದು ಮದ್ಯಾಹ್ನ 12 ಗಂಟೆಯಿಂದ ರಾತ್ರಿ 8 ಗಂಟೆಯ ವರೆಗೆ ಬೆಂಗಳೂರಿನಲ್ಲಿ ಆರ್ಸಿಬಿ ಅನ್ಬಾಕ್ಸ್ ಕಾರ್ಕ್ರಮವನ್ನು ಆಯೋಜಿಸಿದೆ. ಈ ಕಾರ್ಕ್ರಮದಲ್ಲಿಯೇ ಫಾಫ್ ಅವರನ್ನು ಮುಂದಿನ ನಾಯಕನನ್ನಾಗಿ ಘೋಷಿಸಿದೆ. ಇದರ ಜೊತೆಗೆ ಆರ್ಸಿಬಿ 14 ವರ್ಷಗಳ ಕಾಲ ಐಪಿಎಲ್ನಲ್ಲಿ ನಡೆದು ಬಂದ ಹಾದಿಯನ್ನು ನೆನಪಿಸಿಕೊಳ್ಳುವ ವಿಡಿಯೋವನ್ನು ಪ್ರಸಾರ ಮಾಡಿದೆ.
ಇನ್ನು, ಇದೇ ಕಾರ್ಯಕ್ರಮದಲ್ಲಿ ಸಂಜೆ 7 ಗಂಟೆಗೆ ಆರ್ಸಿಬಿ ನೂತನ ಜರ್ಸಿಯನ್ನು ಅನಾವರಣ ಮಾಡಲಿದೆ. ಅಲ್ಲದೇ ಎಬಿ ಡಿವಿಲಿಯರ್ಸ್ಗೆ ಆರ್ಸಿಬಿ ಅಲ್ಲಿ ಹೊಸ ಜವಬ್ದಾರಿಯನ್ನು ನೀಡುವ ಸಾಧ್ಯತೆಗಳಿವೆ.
ಪಂಜಾಬ್ ಕಿಂಗ್ಸ್ ಜೊತೆ ಮೊದಲ ಪಂದ್ಯ:
ಐಪಿಎಲ್ ಸೀಸನ್ 15 ರಲ್ಲಿ ಬೆಂಗಳೂರು ತಂಡವು ಮಾರ್ಚ್ 27 ರಂದು ತನ್ನ ಮೊದಲ ಪಂದ್ಯವನ್ನು ಪಂಜಾಬ್ ಕಿಂಗ್ಸ್ ವಿರುದ್ಧ ಆಡಲಿದೆ. ಈ ಪಂದ್ಯದೊಂದಿಗೆ ಆರ್ಸಿಬಿ ಐಪಿಎಲ್ 2022 ರ ತನ್ನ ಅಭಿಯಾನವನ್ನು ಆರಂಭಿಸಲಿದೆ.
ಇದನ್ನೂ ಓದಿ: IPL 2022: ಮಾರ್ಚ್ 12ಕ್ಕೆ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ನೀಡಲಿದೆ RCB
ಈ ಬಾರಿಯ RCB ತಂಡ:
ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್, ದಿನೇಶ್ ಕಾರ್ತಿಕ್, ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಮಹಿಪಾಲ್ ಲೊಮ್ರೋರ್, ಫಿನ್ ಅಲೆನ್, ಶೆರ್ಫೇನ್ ರುದರ್ಫೋರ್ಡ್, ವನಿಂದು ಹಸರಂಗ, ಶಹಬಾಜ್ ಅಹ್ಮದ್, ಅನುಜ್ ರಾವತ್, ಚಮಾ ಮಿಲಿಂದ್, ಕರ್ಣ್ ಶರ್ಮಾ, ಸಿದ್ಧಾರ್ಥ್ ಕೌಲ್, ಜೇಸನ್ ಬೆಹ್ರೆನ್ಡಾರ್ಫ್, ಸುಯಶ್ ಪ್ರಭುದೇಸ್, ಲವ್ನೀತ್ ಸಿಸೋಡಿಯಾ, ಡೇವಿಡ್ ವಿಲ್ಲಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ