IPL 2022: ನಾಯಕನ ಸ್ಥಾನದಿಂದ ಜಡೇಜಾ ಕೆಳಗಿಳಿಯಲು ಇಲ್ಲಿವೆ 3 ಪ್ರಮುಖ ಕಾರಣಗಳು

ರವೀಂದ್ರ ಜಡೇಜಾ ಸಿಎಸ್‌ಕೆ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ಸ್ಥಾನಕ್ಕೆ ಎಂಎಸ್ ಧೋನಿ ಮತ್ತೊಮ್ಮೆ ನಾಯಕರಾಗಿ ಆಯ್ಕೆಯಾಗಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಐಪಿಎಲ್ 2022 (IPL 2022) ಆರಂಭವಾಗುತ್ತಿದ್ದಂತೆ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ನಾಯಕ ಬದಲಾಗಿದ್ದರು. ಹೌದು, ಈ ಸೀಸನ್ ಆರಂಭದಲ್ಲಿಯೇ ಚೆನ್ನೈ ತಂಡದ ನಾಯಕನ ಸ್ಥಾನದಿಂದ ಧೋನಿ (Dhoni) ಕೆಳಗಿಳಿದು ರವೀಂದ್ರ ಜಡೇಜಾ (Ravindra Jadeja) ಅವರಿಗೆ ನಾಯಕಯಕ ಪಟ್ಟವನ್ನು ಕಟ್ಟಿದ್ದರು. ಆದರೆ ಇದೀಗ ರವೀಂದ್ರ ಜಡೇಜಾ ಸಿಎಸ್‌ಕೆ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ಸ್ಥಾನಕ್ಕೆ ಎಂಎಸ್ ಧೋನಿ ಮತ್ತೊಮ್ಮೆ ನಾಯಕರಾಗಿ ಆಯ್ಕೆಯಾಗಿದ್ದಾರೆ. ಋತುವಿನ ಆರಂಭಕ್ಕೆ ಎರಡು ದಿನಗಳ ಮೊದಲು ಧೋನಿ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ನಂತರ ಆ ಸ್ಥಾನಕ್ಕೆ ಜಡೇಜಾ ಅವರನ್ನು ನೇಮಿಸಲಾಯಿತು. ಆದರೆ ಈಗ ಒಂದು ತಿಂಗಳೊಳಗೆ ಧೋನಿ ಅವರನ್ನು ಸಿಎಸ್‌ಕೆ ನಾಯಕನಾಗಿ ಮರು ನೇಮಕ ಮಾಲಾಗಿದೆ. ಹಾಗಿದ್ದರೆ ಮತ್ತೆ ಧೋನಿ ಅವರನ್ನು ಮರು ಆಯ್ಕೆ ಮಾಡಲು ಮತ್ತು ರವೀಂದ್ರ ಜಡೇಜಾ ನಾಯಕನ ಸ್ಥಾನದಿಂದ ಕೆಳಗಿಳಿಯಲು ಇಲ್ಲಿದೆ ಪ್ರಮುಖ ಕಾರಣಗಳು.

ಧೋನಿ ಅವರನ್ನು ಮರು ಆಯ್ಕೆ ಮಾಡಲು ಮತ್ತು ಜಡೇಜಾ ರಾಜೀನಾಮೆ ನೀಡಲು ಇಲ್ಲಿದೆ ಕಾರಣಗಳು:

CSK ಕಳಪೆ ಪ್ರದರ್ಶನ:

ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್‌ನಲ್ಲಿ ಎರಡನೇ ಅತ್ಯಂತ ಯಶಸ್ವಿ ತಂಡವಾಗಿದೆ. ಸಿಎಸ್ ಕೆ ಇದುವರೆಗೆ 4 ಬಾರಿ ಐಪಿಎಲ್ ಟ್ರೋಪಿ ಗೆದ್ದಿದೆ. ಇದು ಕಳೆದ ವರ್ಷದ (ಐಪಿಎಲ್ 2021) ಐಪಿಎಲ್ ಪ್ರಶಸ್ತಿಯನ್ನೂ ಒಳಗೊಂಡಿದೆ. ಈ ಋತುವಿನಲ್ಲಿ CSK ಪ್ರದರ್ಶನವು ನಿರಾಶಾದಾಯಕವಾಗಿದೆ. ಮೊದಲ 8 ಪಂದ್ಯಗಳಲ್ಲಿ ಸಿಎಸ್‌ಕೆ ಕೇವಲ 2 ಪಂದ್ಯಗಳನ್ನು ಗೆದ್ದು 6 ಪಂದ್ಯಗಳಲ್ಲಿ ಸೋತಿದೆ.

ಇದನ್ನೂ ಓದಿ: IPL 2022: CSK ಗೆ ಮತ್ತೆ ಧೋನಿ ನಾಯಕ! ಕ್ಯಾಪ್ಟನ್ ಪಟ್ಟ ಬಿಟ್ಟುಕೊಟ್ಟ ರವೀಂದ್ರ ಜಡೇಜಾ

ಸಿಎಸ್‌ಕೆ ತಂಡ ಪ್ರಸ್ತುತ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಸ್ಪರ್ಧೆಯಲ್ಲಿ ಈ ತಂಡದ ಸವಾಲು ಕೊನೆಗೊಳ್ಳುವ ಅಪಾಯದಲ್ಲಿದೆ. ಸಿಎಸ್ ಕೆ ಕಳಪೆ ಪ್ರದರ್ಶನದ ಹೊಣೆ ಹೊತ್ತು ಜಡೇಜಾ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಜಡೇಜಾ ಪ್ರದರ್ಶನದ ಮೇಲೆ ಪರಿಣಾಮ:

ರವೀಂದ್ರ ಜಡೇಜಾ ಟೀಂ ಇಂಡಿಯಾದ ನಂ.1 ಆಲ್ ರೌಂಡರ್. ಕಳೆದ ಕೆಲವು ವರ್ಷಗಳಿಂದ ಅವರು ಬ್ಯಾಟ್ ಮತ್ತು ಬಾಲ್‌ನಲ್ಲಿ ಹುರುಪಿನ ಪ್ರದರ್ಶನ ನೀಡುತ್ತಿದ್ದಾರೆ. ಐಪಿಎಲ್‌ಗೂ ಮುನ್ನ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಜಡೇಜಾ ಉತ್ತಮ ಪ್ರದರ್ಶನ ತೋರಿದ್ದರು. ಕಳೆದ ವರ್ಷ ಚೆನ್ನೈ ಗೆಲುವಿನಲ್ಲಿ ಜಡೇಜಾ ಅವರ ಆಲ್ ರೌಂಡ್ ಪ್ರದರ್ಶನವೂ ದೊಡ್ಡ ಪಾತ್ರವನ್ನು ವಹಿಸಿತ್ತು.

ಜಡೇಜಾ ಆಟದ ಮೇಲೆ ನಾಯಕತ್ವದ ಪ್ರಭಾವವು ಈ ಋತುವಿನಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ. ಜಡೇಜಾ 8 ಪಂದ್ಯಗಳಲ್ಲಿ ಕೇವಲ 112 ರನ್ ಗಳಿಸಿದ್ದಾರೆ. ಅಲ್ಲದೆ 5 ವಿಕೆಟ್ ಪಡೆದಿದ್ದಾರೆ. ಜಡೇಜಾ ಅವರ ಕಳಪೆ ಫಾರ್ಮ್ ಸಿಎಸ್‌ಕೆ ಒಟ್ಟಾರೆ ಪ್ರದರ್ಶನದ ಮೇಲೂ ಪರಿಣಾಮ ಬೀರುತ್ತಿದೆ.

ಇದನ್ನೂ ಓದಿ: IPL 2022 CSK vs SRH: ಚೆನ್ನೈ ತಂಡಕ್ಕೆ ಹೈದರಾಬಾದ್ ಸವಾಲ್, ಧೋನಿ ನಾಯಕತ್ವದಲ್ಲಿ ಮತ್ತೆ ಬದಲಾಗಲಿದೆಯಾ CSK ಲಕ್

ಧೋನಿ ಮೇಲೆ ಕೊನೆಯ ಭರವಸೆ:

ಮಹೇಂದ್ರ ಸಿಂಗ್ ಧೋನಿ ಐಪಿಎಲ್ ಮೊದಲ ಸೀಸನ್ ನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿದ್ದರು. ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ ಎಲ್ಲಾ ನಾಲ್ಕು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದಿದೆ. ಪ್ರಸ್ತುತ ಅಂಕಪಟ್ಟಿಯಲ್ಲಿ ಸಿಎಸ್ ಕೆ 9ನೇ ಸ್ಥಾನದಲ್ಲಿದೆ. ಆದರೆ, ಪ್ಲೇ-ಆಫ್ ತಲುಪುವ ಅವರ ನಿರೀಕ್ಷೆ ಇನ್ನೂ ಮುಗಿದಿಲ್ಲ. ಅವರು ಈಗ ಉಳಿದಿರುವ ಪ್ರತಿಯೊಂದು ಪಂದ್ಯವನ್ನು ಗೆಲ್ಲಬೇಕಾಗಿದೆ. ಈ ಸವಾಲಿನ ಪರಿಸ್ಥಿತಿಯಲ್ಲಿ ಸಿಎಸ್‌ಕೆಗೆ ಧೋನಿ ಕೊನೆಯ ಭರವಸೆಯಾಗಿದ್ದಾರೆ. ಹೀಗಾಗಿ ಜಡೇಜಾ ಬದಲಿಗೆ ಧೋನಿ ನಾಯಕನಾಗಿ ಮರು ನೇಮಕಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
Published by:shrikrishna bhat
First published: