• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • Virat Kohli: ಮಹತ್ವದ ಪಂದ್ಯದಲ್ಲಿ ಎಡವಿದ ಕೊಹ್ಲಿ, ಹೇಗಿದೆ ನೋಡಿ ನಾಕೌಟ್‌ನಲ್ಲಿ ವಿರಾಟ್ ಸಾಧನೆ

Virat Kohli: ಮಹತ್ವದ ಪಂದ್ಯದಲ್ಲಿ ಎಡವಿದ ಕೊಹ್ಲಿ, ಹೇಗಿದೆ ನೋಡಿ ನಾಕೌಟ್‌ನಲ್ಲಿ ವಿರಾಟ್ ಸಾಧನೆ

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

ರಾಜಸ್ಥಾನ್ ರಾಯಲ್ಸ್ ವಿರುದ್ಧದ ಕ್ವಾಲಿಫೈಯರ್-2 ಪಂದ್ಯದಲ್ಲಿ ವಿರಾಟ್ ಕೊಹ್ಲಿ 8 ಎಸೆತಗಳಲ್ಲಿ 7 ರನ್ ಗಳಿಸಿ ಔಟಾದರು.

  • Share this:

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್ (RCB vs RR)  ನಡುವಿನ ಎರಡನೇ ಕ್ವಾಲಿಫೈಯರ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ RCB ತಂಡವು ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 157 ರನ್ ಗಳ ಸಾಧಾರಣ ಮೊತ್ತ ಕಲೆಹಾಕಿತು. ಅದರಲ್ಲಿಯೂ ಆರ್​ಸಿಬಿ ತಂಡದ ಪರ ಕಳೆದ ಪಂದ್ಯ ಹೀರೋ ರಜತ್ ಪಾಟಿದಾರ್ (Rajat Patidar) ಹೊರತು ಪಡಿಸಿ ಯಾವೊಬ್ಬ ಆಟಗಾರನೂ ಉತ್ತಮ ಪ್ರದರ್ಶನ ತೋರಲಿಲ್ಲ. ಅದರಲ್ಲಿಯೂ ವಿರಾಟ್ ಕೊಹ್ಲಿ (Virat Kohli) ಮಹತ್ವದ ಪಂದ್ಯದಲ್ಲಿ ಎಡವಿದ್ದು, ಅಭಿಮಾನಿಗಳಿಗೆ ಹೆಚ್ಚಿನ ನಿರಾಸೆ ಮೂಡಿಸಿತು. ಐಪಿಎಲ್ 2022ರಲ್ಲಿ ವಿರಾಟ್ ಕೊಹ್ಲಿಯ ನಿರಾಶಾದಾಯಕ ಪ್ರದರ್ಶನ ಮುಂದುವರಿದಿದೆ.


ರಾಜಸ್ಥಾನ್ ರಾಯಲ್ಸ್ ವಿರುದ್ಧದ ಕ್ವಾಲಿಫೈಯರ್-2 ಪಂದ್ಯದಲ್ಲಿ ವಿರಾಟ್ ಕೊಹ್ಲಿ 8 ಎಸೆತಗಳಲ್ಲಿ 7 ರನ್ ಗಳಿಸಿ ಔಟಾದರು. ರಾಜಸ್ಥಾನ ತಂಡದ ನಾಯಕ ಸಂಜು ಸ್ಯಾಮ್ಸನ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು.


ಐಪಿಎಲ್ 2022ರಲ್ಲಿ ಅಬ್ಬರಿಸಿದ ಕೊಹ್ಲಿ:


ಇನ್ನು, ವರ್ಷಗಳಿಂದೀಚೆಗೆ ವಿರಾಟ್ ಕೊಹ್ಲಿ ಬ್ಯಾಟ್ ಯಾಕೋ ಅಬ್ಬರಿಸುತ್ತಿಲ್ಲ. ಸತತ ವೈಫಲ್ಯದಿಂದ ಕೊಹ್ಲಿ ಬಳಲುತ್ತಿದ್ದಾರೆ. ಸರಿಸುಮಾರು 4 ವರ್ಷಗಳಿಂದ ಕೊಹ್ಲಿ ಶತಕವನ್ನೂ ಸಿಡಿಸಿಲ್ಲ. ಅದೇ ರಿತಿ ಈ ಬಾರಿ ಐಪಿಎಲ್ ನಲ್ಲಿಯೂ ಅವರ ಪ್ರದರ್ಶ ನಿರಾಸಾದಾಯಕವಾಗಿದ್ದು, ವಿರಾಟ್ ಈ ಋತುವಿನ ಐಪಿಎಲ್‌ನಲ್ಲಿ 16 ಪಂದ್ಯಗಳಲ್ಲಿ 22.73 ಸರಾಸರಿ ಮತ್ತು 115.98 ಸ್ಟ್ರೈಕ್ ರೇಟ್‌ನಲ್ಲಿ 2 ಅರ್ಧ ಶತಕಗಳನ್ನು ಒಳಗೊಂಡಂತೆ 341 ರನ್ ಗಳಿಸಿದ್ದಾರೆ. 73 ರನ್ ಅವರ ಗರಿಷ್ಠ ಸ್ಕೋರ್ ಆಗಿದೆ.


ಇದನ್ನೂ ಓದಿ: Shikhar Dhawan: ಫ್ಲೇ ಆಫ್ ತಲುಪಲು ವಿಫಲವಾಗಿದ್ದಕ್ಕೆ ಧವನ್​ಗೆ ತಂದೆಯಿಂದ ಥಳಿತ, ವಿಡಿಯೋ ವೈರಲ್


ನಾಕೌಟ್ ಪಂದ್ಯಗಳಲ್ಲಿ ಅಬ್ಬರಿಸದ ವಿರಾಟ್:


ವಿರಾಟ್ ಕೊಹ್ಲಿ ಐಪಿಎಲ್ ಮೊದಲ ಸೀಸನ್‌ನಿಂದ ಆರ್‌ಸಿಬಿ ಪರ ಆಡುತ್ತಿದ್ದಾರೆ. ಇದುವರೆಗೆ ಅವರು 11 ಐಪಿಎಲ್ ನಾಕೌಟ್ ಪಂದ್ಯಗಳಲ್ಲಿ ಆಡಿದ್ದು, ಅದರಲ್ಲಿ ಒಮ್ಮೆ ಮಾತ್ರ ಅರ್ಧಶತಕ ಗಳಿಸಲು ಸಾಧ್ಯವಾಗಿದೆ. ಐಪಿಎಲ್ 2011 ರ ಮೊದಲ ಅರ್ಹತಾ ಫೈನಲ್‌ನಲ್ಲಿ ವಿರಾಟ್ 70 ರನ್ ಗಳಿಸಿದರು, ಆದರೆ ಅದನ್ನು ಹೊರತುಪಡಿಸಿ ನಾಕೌಟ್‌ನಂತಹ ಪ್ರಮುಖ ಪಂದ್ಯಗಳಲ್ಲಿ ದೊಡ್ಡ ಮೊತ್ತವನ್ನು ಗಳಿಸಲು ಸಾಧ್ಯವಾಗಲಿಲ್ಲ. ವಿರಾಟ್ 11 ಐಪಿಎಲ್ ನಾಕೌಟ್ ಪಂದ್ಯಗಳಲ್ಲಿ ಕೇವಲ 212 ರನ್ ಗಳಿಸಿದ್ದಾರೆ.


ಐಪಿಎಲ್ ನಾಕೌಟ್‌ನಲ್ಲಿ ವಿರಾಟ್ ಸಾಧನೆ:


IPL 2009 ಸೆಮಿಫೈನಲ್ - 24 ನಾಟೌಟ್
IPL 2010 ಸೆಮಿಫೈನಲ್ - 9 ರನ್
IPL 2011 ಮೊದಲ ಅರ್ಹತಾ ಫೈನಲ್ - 70 ನಾಟೌಟ್
IPL 2011 ಎರಡನೇ ಅರ್ಹತಾ ಫೈನಲ್ - 8 ರನ್
IPL 2015 ಎಲಿಮಿನೇಟರ್ - 12 ರನ್
IPL 2015 ಎರಡನೇ ಕ್ವಾಲಿಫೈಯರ್ - 12 ರನ್
IPL 2016 ಮೊದಲ ಕ್ವಾಲಿಫೈಯರ್ - 0 ರನ್
IPL 2020 ಎಲಿಮಿನೇಟರ್ - 6 ರನ್
IPL 2021 ಎಲಿಮಿನೇಟರ್ - 39 ರನ್
IPL 2022 ಎಲಿಮಿನೇಟರ್ - 25 ರನ್
IPL 2022 ಕ್ವಾಲಿಫೈಯರ್ 2 - 7 ರನ್


ಇದನ್ನೂ ಓದಿ: IPL 2022: ಐಪಿಎಲ್ ನಿಯಮ ಉಲ್ಲಂಘಿಸಿದ ಕಾರ್ತಿಕ್, ಇಂದು RCB ಪರ ಆಟವಾಡ್ತಾರಾ DK?


ಮತ್ತೆ ಅಬ್ಬರಿಸಿದ ಪಾಟಿದಾರ್:


ಇನ್ನು, ಇಂದು ನಡೆಯುತ್ತಿರುವ ರಾಯಲ್ ಚಾಲೆಂಜರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಎಲಿಮಿನೇಟರ್ ಪಂದ್ಯದಲ್ಲಿ ಕಳೆದ ಪಂದ್ಯದ ಶತಕ ವೀರ ರಜತ್ ಪಾಟಿದಾರ್ ಮತ್ತೆ ಅಬ್ಬರಿಸಿದ್ದಾರೆ. ಅವರು 42 ಎಸೆತದಲ್ಲಿ 3 ಸಿಕ್ಸ್ ಮತ್ತು 4 ಬೌಂಡರಿಗಳ ನೆರವಿನಿಂದ 58 ರನ್ ಗಳಿಸಿದರು. ಉಳಿದಂತೆ ವಿರಾಟ್ ಕೊಹ್ಲಿ 7 ರನ್, ನಾಯಕ ಪಾಫ್ ಡುಪ್ಲೇಸಿಸ್ 25 ರನ್, ಗ್ಲೇನ್ ಮ್ಯಾಕ್ಸ್ ವೆಲ್ 24 ರನ್, ಮಹಿಪಾಲ್ ಲೊರ್ಮೊರ್ 8 ರನ್, ದಿನೇಶ್ ಕಾರ್ತಿಕ್ 6 ರನ್, ಶಬಾಝ್ ಅಹ್ಮದ್ 12 ರನ್ ಮತ್ತು ಹರ್ಷಲ್ ಪಟೇಲ್, ಹ್ಯಾಜಲ್ವುಡ್ ತಲಾ 1 ರನ್ ಗಳಿಸುವ ಮೂಲಕ ತಂಡದ ಮೊತ್ತ 150ರ ಗಡಿ ದಾಟಲು ಸಹಾಯಕರಾದರು.

Published by:shrikrishna bhat
First published: