IPL 2022: ಪಂಜಾಬ್ ತಂಡದ ನಾಯಕನಾಗಿ ಮಾಯಾಂಕ್ ಅಗರ್ವಾಲ್, ಮೊದಲ ಬಾರಿ ಪ್ರಶಸ್ತಿ ಗೆಲ್ಲುವ ತವಕದಲ್ಲಿ ಪಂಜಾಬ್ ಕಿಂಗ್ಸ್!

ಪಂಜಾಬ್ ತಂಡವು ಯುವ ಆಟಗಾರರ ಜೊತೆ ಅನುಭವಿ ಆಟಗಾರರಿಂದ ಕೂಡಿದ್ದು, ಸ್ಟ್ರಾಂಗ್ ಟೀಂ ಆಗಿ ಕಾಣುತ್ತಿದೆ. ಹೀಗಾಗಿ ಈ ಬಾರಿ ಆದರೂ ಪಂಜಾಬ್ ಕಿಂಗ್ಸ್ ಐಪಿಎಲ್ ಪ್ರಶಸ್ತಿಗೆ ಮುತ್ತಿಕ್ಕುವ ತವಕದಲ್ಲಿದೆ. ಹಾಗಾದರೆ ಪಂಜಾಬ್ ಕಿಂಗ್ಸ್​ನ ಶಕ್ತಿ ಮತ್ತು ದೌರ್ಬಲ್ಯ ಏನೆಂಬುದನ್ನು ತಿಳಿದುಕೊಳ್ಳೋಣ.

ಮಾಯಾಂಕ್ ಅರ್ಗವಾಲ್

ಮಾಯಾಂಕ್ ಅರ್ಗವಾಲ್

  • Share this:
IPL 2022ರಲ್ಲಿ ಪಂಜಾಬ್ ಕಿಂಗ್ಸ್ (Punjab Kings) ತಮ್ಮ ಹೊಸ ನಾಯಕನೊಂದಿಗೆ ಕಣಕ್ಕಿಳಿಯುತ್ತಿದೆ. ಐಪಿಎಲ್ 2022 ಹರಾಜಿನ ಮೂಲಕ ಪಂಜಾಬ್ ಕಿಂಗ್ಸ್ ಮತ್ತೆ ಹೊಸ ತಂಡವನ್ನು ಸಿದ್ಧಪಡಿಸಿದೆ. ಟೀಂ ಇಂಡಿಯಾದ (Team India) ಅತ್ಯಂತ ವಿಶ್ವಾಸಾರ್ಹ ಬ್ಯಾಟ್ಸ್‌ಮನ್ ಆಗಿರುವ ಮಯಾಂಕ್ ಅಗರ್ವಾಲ್ (Mayank Agarwal) ಈ ತಂಡವನ್ನು ಮುನ್ನಡೆಸಲಿದ್ದಾರೆ . ಅನುಭವಿ ಆಟಗಾರ ಶಿಖರ್ ಧವನ್ (Shikhar Dhawan) ಬದಲಿಗೆ ಮಯಾಂಕ್ ಮೇಲೆ ಪಂಜಾಬ್ ಫ್ರಾಂಚೈಸಿ ನಂಬಿಕೆ ಇಟ್ಟಂತೆ ಕಾಣುತ್ತಿದೆ. ಈ ನಡುವೆ ತಂಡದಲ್ಲಿ ಇದೇ ಮೊದಲ ಬಾರಿಗೆ ಪಂಜಾಬ್ ತಂಡವು ಯುವ ಆಟಗಾರರ ಜೊತೆ ಅನುಭವಿ ಆಟಗಾರರಿಂದ ಕೂಡಿದ್ದು, ಸ್ಟ್ರಾಂಗ್ ಟೀಂ ಆಗಿ ಕಾಣುತ್ತಿದೆ. ಹೀಗಾಗಿ ಈ ಬಾರಿ ಆದರೂ ಪಂಜಾಬ್ ಕಿಂಗ್ಸ್ ಐಪಿಎಲ್ ಪ್ರಶಸ್ತಿಗೆ ಮುತ್ತಿಕ್ಕುವ ತವಕದಲ್ಲಿದೆ. ಇನ್ನು, ಮಾರ್ಚ್ 26ರಿಂದ ಐಪಿಎಲ್​ 2022ರ 15ನೇ ಸೀಸನ್​ ಆರಂಭಗೊಳ್ಳಲಿದೆ. ಹಾಗಾದರೆ ಪಂಜಾಬ್ ಕಿಂಗ್ಸ್​ನ ಶಕ್ತಿ ಮತ್ತು ದೌರ್ಬಲ್ಯ ಏನೆಂಬುದನ್ನು ತಿಳಿದುಕೊಳ್ಳೋಣ.

ಪಂಜಾಬ್ ಕಿಂಗ್ಸ್‌ನ ಶಕ್ತಿ:

ಪಂಜಾಬ್ ಕಿಂಗ್ಸ್‌ಗೆ ಆರಂಭಿಕರಾಗಿ ಮಯಾಂಕ್ ಅಗರ್ವಾಲ್, ಶಿಖರ್ ಧವನ್ ಮತ್ತು ಜಾನಿ ಬೈರ್‌ಸ್ಟೋವ್ ಆಯ್ಕೆಯಾಗಿದ್ದಾರೆ. ಈ ಆಟಗಾರರು ಯಾವುದೇ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ. ಮೂವರೂ ಆಟಗಾರರು ಸುದೀರ್ಘ ಇನ್ನಿಂಗ್ಸ್ ಆಡಿದ ಅನುಭವ ಮತ್ತು ಆಟದ ಮೂಡ್ ಗೆ ತಕ್ಕಂತೆ ಬದಲಾಯಿಸುವ ಸಾಮರ್ಥ್ಯ ಹೊಂದಿದ್ದಾರೆ. ಕಳೆದ ಋತುವಿನಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಪಂಜಾಬ್‌ಗೆ ಚಿಂತೆಯ ವಿಷಯವಾಗಿತ್ತು. ಹೀಗಾಗಿ ಈ ಬಾರಿ ಲಿಯಾಮ್ ಲಿವಿಂಗ್ ಸ್ಟೋನ್, ಓಡಿಯನ್ ಸ್ಮಿತ್ ಮತ್ತು ರಿಷಿ ಧವನ್ ಅವರಂತಹ ಆಟಗಾರರು ಈ ಕೊರತೆಯನ್ನು ತುಂಬಬಹುದು. ಫಿನಿಶರ್ ಆಗಿ ಶಾರುಖ್ ಖಾನ್ ಆಯ್ಕೆಯನ್ನು ತಂಡ ಹೊಂದಿದೆ.

ಪಂಜಾಬ್ ಕಿಂಗ್ಸ್‌ನ ದೌರ್ಬಲ್ಯ:

ವೇಗದ ಬೌಲರ್ ಕಗಿಸೊ ರಬಾಡ ಮತ್ತು ಲೆಗ್ ಸ್ಪಿನ್ನರ್ ರಾಹುಲ್ ಚಹಾರ್ ತಂಡದಲ್ಲಿದ್ದರೂ ಬೌಲಿಂಗ್ ಘಟಕವು ಸ್ವಲ್ಪ ದುರ್ಬಲವಾದಂತೆ ಕಾಣುತ್ತಿದೆ. ರಬಾಡ ವೇಗದ ಬೌಲಿಂಗ್ ದಾಳಿಯನ್ನು ಮುನ್ನಡೆಸಲಿದ್ದಾರೆ. ಒಂದು ವೇಳೆ ಅವರು ಗಾಯಗೊಂಡರೆ, ತಂಡಕ್ಕೆ ಅವರಿಗೆ ಯಾವುದೇ ಆಯ್ಕೆಗಳಿಲ್ಲ. ಅನುಭವದ ಕೊರತೆಯಿರುವ ನಾಥನ್ ಎಲ್ಲಿಸ್ ಎರಡನೇ ವೇಗದ ಬೌಲರ್. ಪಂಜಾಬ್ ತಂಡದ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಆದರೆ ಅವರು ಹರಾಜಿನಲ್ಲಿ ಸ್ಪಿನ್ನರ್‌ಗಳ ಮೇಲೆ ಹೆಚ್ಚು ಗಮನ ಹರಿಸಿಲ್ಲ ಎಂದು ಹೇಳಬಹುದು. ರಾಹುಲ್ ಸ್ಟ್ರೈಕ್ ಸ್ಪಿನ್ನರ್ ಆಗಲಿದ್ದಾರೆ. ಅದೇ ಸಮಯದಲ್ಲಿ, ಲಿವಿಂಗ್ಸ್ಟೋನ್ ಲೆಗ್ ಸ್ಪಿನ್ ಬೌಲ್ ಮಾಡಬಹುದು. ಎಡಗೈ ಸ್ಪಿನ್ನರ್ ಆಗಿ, ತಂಡವು ಹರ್ಪ್ರೀತ್ ಬ್ರಾರ್ ಅವರ ಮೇಲೆ ಅವಲಂಭಿತವಾಗಿದೆ.

ಇದನ್ನೂ ಓದಿ: RCB ತಂಡದ ನೂತನ ನಾಯಕನ ಘೋಷಣೆ, ಈ ಸಲ ಕಪ್ ನಮ್ದೇ ಎಂದ ಅಭಿಮಾನಿಗಳು..!

ಆರ್​ಸಿಬಿ ವಿರುದ್ಧ ಮೊದಲ ಪಂದ್ಯ:

ಪಂಜಾಬ್ ಕಿಂಗ್ಸ್ ತಂಡವು ಮಾರ್ಚ್ 27ರಂದು ಆರ್​ಸಿಬಿ ತಂಡದ ವಿರುದ್ಧ ಮೊದಲ ಪಂದ್ಯವಾಡಲಿದೆ. ಈ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಕಣಕ್ಕಿಳಿಯುವ ಸಂಭಾವ್ಯ ತಂಡ ಇಂತಿರಲಿದೆ.
ಮೊದಲ ಪಂದ್ಯಕ್ಕೆ ಪಂಜಾಬ್ ಕಿಂಗ್ಸ್ ಸಂಭಾವ್ಯ 11: ಶಿಖರ್ ಧವನ್, ಮಯಾಂಕ್ ಅಗರ್ವಾಲ್ (ನಾಯಕ), ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಲಿಯಾಮ್ ಲಿವಿಂಗ್‌ಸ್ಟೋನ್, ಶಾರುಖ್ ಖಾನ್, ಓಡಿಯನ್ ಸ್ಮಿತ್, ಹರ್‌ಪ್ರೀತ್ ಬ್ರಾರ್, ರಿಷಿ ಧವನ್, ಕಗಿಸೊ ರಬಾಡ, ಅರ್ಶ್‌ದೀಪ್ ಸಿಂಗ್ ಮತ್ತು ರಾಹುಲ್ ಚಾಹರ್.

ಇದನ್ನೂ ಓದಿ: IPL 2022: ಶೇನ್ ವ್ಯಾಟ್ಸನ್​ಗೆ ಹೊಸ ಜವಾಬ್ದಾರಿ! ಡೆಲ್ಲಿ ಕ್ಯಾಪಿಟಲ್ಸ್ ಸಹಾಯಕ ಕೋಚ್ ಆಗಿ ನೇಮಕ

ಪಂಜಾಬ್ ಕಿಂಗ್ಸ್ ಸಂಪೂರ್ಣ ತಂಡ:

ಮಯಾಂಕ್ ಅಗರ್ವಾಲ್, ಅರ್ಶ್ದೀಪ್ ಸಿಂಗ್, ಶಿಖರ್ ಧವನ್, ಕಗಿಸೊ ರಬಾಡ, ಜಾನಿ ಬೈರ್‌ಸ್ಟೋವ್, ರಾಹುಲ್ ಚಾಹರ್, ಹರ್‌ಪ್ರೀತ್ ಬ್ರಾರ್, ಶಾರುಖ್ ಖಾನ್, ಜಿತೇಶ್ ಶರ್ಮಾ, ಪ್ರಭ್‌ಸಿಮ್ರಾನ್ ಸಿಂಗ್, ಇಶಾನ್ ಪೊರೆಲ್, ಲಿಯಾಮ್ ಲಿವಿಂಗ್‌ಸ್ಟೋನ್, ಓಡಿಯನ್ ಸ್ಮಿತ್, ರಾಜ್ ಬವಾ ಶರ್ಮಾ , ರಿಷಿ ಧವನ್, ನಾಥನ್ ಎಲ್ಲಿಸ್, ಅಥರ್ವ ತಾಂಡೆ, ಪ್ರೇರಕ್ ಮಂಕಡ್, ಭಾನುಕಾ ರಾಜಪಕ್ಸೆ, ಬೆನ್ನಿ ಹೋವೆಲ್, ವೈಭವ್ ಅರೋರಾ, ಹೃತಿಕ್ ಚಟರ್ಜಿ, ಬಾಲ್ತೇಜ್ ಧಂಡಾ, ಅನ್ಶ್ ಪಟೇಲ್.
Published by:shrikrishna bhat
First published: