ೆಇಂಡಿಯನ್ ಪ್ರೀಮಿಯರ್ ಲೀಗ್ 2022 (IPL 2022) ವೇಳಾಪಟ್ಟಿ ಈಗಾಗಲೇ ಬಿಡುಗಡೆಯಾಗಿದ್ದು, ಇದೇ ಮಾರ್ಚ್ 26 ರಿಂದ ಐಪಿಎಲ್ 2022 ರ ಮೊದಲ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ (Wankhede Stadium) ನಡೆಯಲಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (CSK vs KKR) ಮುಖಾಮುಖಿಯಾಗಲಿದ್ದು, ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದೆ. ಜೊತೆಗೆ ಐಪಿಎಲ್ 2022 ಲೀಗ್ನ ಫೈನಲ್ ಪಂದ್ಯವು ಮೇ 22 ರಂದು ರಾತ್ರಿ 7.30 ಕ್ಕೆ ವಾಂಖೆಡೆ ಮೈದಾನದಲ್ಲಿ ನಡೆಯಲಿದೆ. ಈ ನಡುವೆ ಐಪಿಎಲ್ ಪ್ರಮೋಷನ್ ವಿಡಿಯೋಗಳು ಸಖತ್ ಸದ್ದು ಮಾಡುತ್ತಿದ್ದು, ಅದರಲ್ಲಿಯೂ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (Ms Dhoni) ಅವರ ಜಾಹೀರಾತುಗಳು ಎಲ್ಲಡೆ ಸಖತ್ ವೈರಲ್ ಆಗುತ್ತಿದೆ.
IPL ಇದ್ರೆ ಮನೋರಂಜನೆಗಿಲ್ಲ ತೊಂದರೆ:
ಐಪಿಎಲ್ 2022ರ 15ನೇ ಆವೃತ್ತಿಗೆ ಈಗಾಗಲೇ ಸಿದ್ಧತೆಗಳು ಭರದಿಂದ ಸಾಗಿದೆ. ಈ ನಡುವೆ ಪ್ರತಿಬಾರಿಯಂತೆಯೇ ಈ ಬಾರಿಯು ಐಪಿಎಲ್ ಜಾಹೀರಾತಿಗೆ ಧೋನಿ ಅವರನ್ನು ಬಳಸಿಕೊಳ್ಳಲಾಗಿದ್ದು, ’ಐಪಿಎಲ್ ಇದ್ರೆ ಮನೋರಂಜನೆಗಿಲ್ಲ ತೊಂದರೆ’ ಎಂಬ ಕ್ಯಾಪ್ಷನ್ ನೀಡಿ ಸ್ಟಾರ್ ಸ್ಪೋರ್ಟ್ಸ್ ಕನ್ನಡ ಜಾಹೀರಾತನ್ನು ಹಂಚಿಕೊಂಡಿದೆ.
ಅಜ್ಜನ ಅವತಾರದಲ್ಲಿ ಧೋನಿ:
ಐಪಿಎಲ್ 2022 ರ ಪ್ರೋಮೋದಲ್ಲಿ ಧೋನಿ ಅಜ್ಜನ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಮನೆಯವರೆಲ್ಲಾ ಐಪಿಎಲ್ ಪಂದ್ಯವನ್ನು ವೀಕ್ಷಿಸುವಾಗ ಯಾವ ಫೋನ್ ಕಾಲ್ ಬಂದರೂ ಅವರ ಮನೋರಂಜನೆಗೆ ಅಡೆತಡೆ ಆಗುವುದಿಲ್ಲ. ಏಕೆಂದರೆ ಇಂತಾ ನಾಟಕ ಈಗ ನಾರ್ಮಲ್ಲು ಎನ್ನುತ್ತಾ ಧೋನಿ ಸಖತ್ ಆಗಿ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.
ಡ್ರೈವರ್ ಅವತಾರ ತಾಳಿದ ಕ್ಯಾಫ್ಟನ್ ಕೂಲ್:
ಐಪಿಎಲ್ 2022 ರ ಮೊದಲ ಪ್ರೋಮೋದಲ್ಲಿ ಧೋನಿ ಓರ್ವ ಬಸ್ ಡ್ರೈವರ್ ಆಗಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ನಡು ರಸ್ತೆಯಲ್ಲಿ ಬಸ್ ನಿಲ್ಲಿಸಿ ಮಹೀ ಐಪಿಎಲ್ ಸೂಪರ್ ಓವರ್ ನೋಡುತ್ತಿರುತ್ತಾರೆ. ಈ ಮೂಲಕ ಈ ಬಾರಿಯ ಐಪಿಎಲ್ ಕ್ರೇಜ್ ಎಷ್ಟಿದೆ ಎಂದು ತೋರಿಸಿದ್ದಾರೆ.
ಇದನ್ನೂ ಓದಿ: IPL 2022: RCB ತಂಡದ ಸಂಪೂರ್ಣ ವೇಳಾಪಟ್ಟಿ, ಮಾರ್ಚ್ 27ರಂದು ಮೊದಲ ಪಂದ್ಯ
ಈ ಬಾರಿಯ ಐಪಿಎಲ್ ವಿಶೇಷತೆ:
ಈ ಬಾರಿ ಐಪಿಎಲ್ 2022ರಲ್ಲಿ ಬರೊಬ್ಬರಿ 10 ತಂಡಗಳು ಕಣಕ್ಕಿಳಿಯಲಿವೆ. ಆದರೆ ಇದೇ ಮೊದಲ ಬಾರಿಗೆ ಐಪಿಎಲ್ ನಲ್ಲಿ 10 ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಅದರಂತೆ ಮೊದಲ ಗುಂಪಿನಲ್ಲಿ, ರಾಜಸ್ಥಾನ ರಾಯಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ಇದೆ. ಎರಡನೇ ಗುಂಪಿನಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್, ಸನ್ ರೈಸರ್ಸ್ ಹೈದರಾಬಾದ್, ಗುಜರಾತ್ ಟೈಟಾನ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳಿವೆ.
ಐಪಿಎಲ್ ಹೊಸ ನಿಯಮದ ಪ್ರಕಾರ, ಲೀಗ್ ಹಂತದಲ್ಲಿ, ಪ್ರತಿ ತಂಡವು 5 ಎದುರಾಳಿಗಳ ವಿರುದ್ಧ 2 ಪಂದ್ಯಗಳನ್ನು ಮತ್ತು ಉಳಿದ 4 ತಂಡಗಳ ವಿರುದ್ಧ ಕೇವಲ 1 ಪಂದ್ಯಗಳನ್ನು ಆಡ ಬೇಕು. ಆದರೆ ಪ್ರತಿ ಬಾರಿಯಂತೆ ಎಲ್ಲಾ ತಂಡವು ಲೀಗ್ ಹಂತದಲ್ಲಿ ಒಟ್ಟು 14 ಪಂದ್ಯಗಳನ್ನು ಆಡುತ್ತದೆ.
ಇದನ್ನೂ ಓದಿ: IPL 2022 ವೇಳಾಪಟ್ಟಿ ಬಿಡುಗಡೆ: ಮಾರ್ಚ್ 26 ರಂದು CSK-KKR ಮೊದಲ ಪಂದ್ಯ
ಮಾರ್ಚ್ 12ಕ್ಕೆ RCB ನಾಯಕನ ಘೋಷಣೆ:
ಈ ಬಾರಿಯ ಐಪಿಎಲ್ ನಿಂದ ಆರ್ ಸಿಬಿ ತಂಡದ ನಾಯಕನಾಗಿದ್ದ ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದಿದ್ದು, ಮುಂದಿನ ನಾಯಕ ಯಾರಗಲಿದ್ದಾರೆ ಎಂಬ ಪ್ರಶ್ನೆ ಸದ್ಯ ಎಲ್ಲರಲ್ಲಿಯೂ ಮನೆಮಾಡಿದೆ. ಈ ನಡುವೆ ಬೆಂಗಳೂರು ತಂಡದ ಪ್ರಾಂಚೈಸಿ ಇದೇ ಮಾರ್ಚ್ 12ರಂದು (ನಾಳೆ) ಸಂಜೆ 4 ಗಂಟೆಗೆ ಆರ್ ಸಿಬಿ ತಂಡದ ಮುಂದಿನ ನಾಯಕ ಯಾರು ಎನ್ನುವುದನ್ನು ತಿಳಿಸುವುದಾಗಿ ಹೇಳಿಕೊಂಡಿದೆ. ಜೊತೆಗೆ ಹೊಸ ಜರ್ಸಿಯನ್ನು ಸಹ ಬಿಡುಗಡೆ ಮಾಡಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ