IPL 2022: KKR vs PBKS ಪಂದ್ಯದ ನಂತರ ಹೀಗಿದೆ ಐಪಿಎಲ್ ಅಂಕ ಪಟ್ಟಿ! ಆರೆಂಜ್, ಪರ್ಪಲ್ ಕ್ಯಾಪ್ ಯಾರ ಬಳಿಯಿದೆ?

ಕೆಕೆಆರ್ ತಂಡದ ವೇಗಿ ಉಮೇಶ್ ಯಾದವ್ 4 ವಿಕೆಟ್ ಕಬಳಿಸಿ ಪರ್ಪಲ್ ಕ್ಯಾಪ್ ರೇಸ್ ನಲ್ಲಿ ಶ್ರೀಲಂಕಾದ ಬೌಲರ್ ಆದ ವನಿಂದು ಹಸರಂಗ ಅವರನ್ನು ಹಿಂದಿಕ್ಕಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL) ನ 15ನೇ ಆವೃತ್ತಿ ಮಾರ್ಚ್ 26 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ರನ್ನರ್ ಅಪ್ ಆದಂತಹ ಕೋಲ್ಕತ್ತಾ ನೈಟ್ ರೈಡರ್ಸ್ (KKR) ನಡುವಿನ ಪಂದ್ಯದೊಂದಿಗೆ ಪ್ರಾರಂಭವಾಯಿತು ಎನ್ನುವುದು ಎಲ್ಲಾ ಐಪಿಎಲ್ ಅಭಿಮಾನಿಗಳಿಗೆ ಗೊತ್ತಿರುವ ವಿಚಾರವೇ ಆಗಿದೆ. ಈ ಆವೃತ್ತಿಯಲ್ಲಿ 10 ತಂಡಗಳು ಎಂದರೆ ಎರಡು ಹೊಸ ತಂಡಗಳ ಸೇರ್ಪಡೆಯಾಗಿದ್ದು, ವಿಶ್ವದ ಅತಿದೊಡ್ಡ ಟಿ20 ಲೀಗ್ ಪ್ರಶಸ್ತಿಗಾಗಿ ಹೋರಾಟ ಶುರುವಾಗಿದೆ. ಇದೀಗ ಸ್ವಲ್ಪ ರೋಚಕತೆ ಪಡೆಯುತ್ತಿರುವ ಐಪಿಎಲ್ 202 (IPL 2022) ನಲ್ಲಿ ಸುಮಾರು 70 ಲೀಗ್ ಹಂತದ ಪಂದ್ಯಗಳು ನಡೆಯಲಿದ್ದು, ಪ್ರತಿ ತಂಡವು ತಲಾ 14 ಪಂದ್ಯಗಳನ್ನು ಆಡಲಿದೆ ಮತ್ತು ಲೀಗ್ ಹಂತದ ಕೊನೆಯಲ್ಲಿ, ಅಗ್ರ ನಾಲ್ಕು ತಂಡಗಳು ಪ್ಲೇ-ಆಫ್ ಗೆ ಮುನ್ನಡೆಯುತ್ತವೆ. ಅದರಲ್ಲಿ ಗೆದ್ದ ಎರಡು ತಂಡಗಳು ಪ್ರಶಸ್ತಿಗಾಗಿ ಸೆಣೆಸಾಟ ನಡೆಸಲಿವೆ.

ಈ ಗುಂಪು ಹಂತದ ಮೊದಲ ಸುತ್ತಿನ ಪಂದ್ಯಗಳ ಕೊನೆಯಲ್ಲಿ, ಕೆಕೆಆರ್, ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ಥಾನ್ ರಾಯಲ್ಸ್, ಪಂಜಾಬ್ ಕಿಂಗ್ಸ್ ಮತ್ತು ಹೊಸದಾಗಿ ಪ್ರವೇಶಿಸಿದ ಗುಜರಾತ್ ಟೈಟಾನ್ಸ್ ವಿಜಯಶಾಲಿಗಳಾಗಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್, ಸನ್‌ರೈಸರ್ಸ್ ಹೈದರಾಬಾದ್ ಮತ್ತು ಆರಂಭಿಕ ಲಕ್ನೋ ಸೂಪರ್ ಜೈಂಟ್ಸ್ ತಮ್ಮ ಪಂದ್ಯಗಳನ್ನು ಕಳೆದು ಕೊಂಡವು. 8ನೇ ಪಂದ್ಯದಲ್ಲಿ ಆಂಡ್ರೆ ರಸೆಲ್ 31 ಎಸೆತಗಳಲ್ಲಿ 70 ರನ್ ಗಳಿಸಿದರು, 8 ಸಿಕ್ಸರ್ ಸಿಡಿಸಿದ ಕೆಕೆಆರ್, ಪಿಬಿಕೆಎಸ್ ತಂಡವನ್ನು 6 ವಿಕೆಟ್ ಗಳಿಂದ ಸೋಲಿಸಿ ಟೂರ್ನಿಯಲ್ಲಿ 2ನೇ ಗೆಲುವು ದಾಖಲಿಸಿತು.

ಪ್ರತಿ ಪಂದ್ಯದಿಂದಲೂ ಬದಲಾಗುತ್ತಿದೆ ಅಂಕಪಟ್ಟಿ:

ಈ ಪಂದ್ಯದಲ್ಲಿ ಕೆಕೆಆರ್ ತಂಡದ ವೇಗಿ ಉಮೇಶ್ ಯಾದವ್ 4 ವಿಕೆಟ್ ಕಬಳಿಸಿ ಪರ್ಪಲ್ ಕ್ಯಾಪ್ ರೇಸ್ ನಲ್ಲಿ ಶ್ರೀಲಂಕಾದ ಬೌಲರ್ ಆದ ವನಿಂದು ಹಸರಂಗ ಅವರನ್ನು ಹಿಂದಿಕ್ಕಿದರು. ಏತನ್ಮಧ್ಯೆ, ಆರೆಂಜ್ ಕ್ಯಾಪ್ ರೇಸ್ ನಲ್ಲಿ ಆಂಡ್ರೆ ರಸೆಲ್ ಅವರು ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಹೊಸ ನಾಯಕನಾದ ಫಾಫ್ ಡು ಪ್ಲೆಸಿಸ್ ಅವರನ್ನು ಹಿಂದಿಕ್ಕಿದರು. ಕೆಕೆಆರ್ ಕೆಲವು ದಿನಗಳ ಹಿಂದೆ ಆರ್‌ಸಿಬಿ ವಿರುದ್ಧದ ಸೋಲಿನಿಂದ ಪುಟಿದೇದ್ದಿತು ಮತ್ತು ಐಪಿಎಲ್ ಅಂಕಪಟ್ಟಿಯಲ್ಲಿ ಉತ್ತುಂಗಕ್ಕೆ ಏರಿತು, ಆದರೆ ಪಿಬಿಕೆಎಸ್ ತನ್ನ ಆರಂಭಿಕ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು ದಿಗ್ಭ್ರಮೆಗೊಳಿಸಿತು, ಈ ಆವೃತ್ತಿಯಲ್ಲಿ ಮೊದಲ ಸೋಲಿಗೆ ಶರಣಾಯಿತು ಎಂದು ಹೇಳಬಹುದು.

ಇದನ್ನೂ ಓದಿ: IPL 2022: ಗೆಲುವಿನ ಲಯಕ್ಕೆ ಮರಳಿದ ಕೋಲ್ಕತ್ತಾ, ಪಂಜಾಬ್ ರಾಜರ ಬೆವರಿಳಿಸದ ರಸೆಲ್

ಏಪ್ರಿಲ್ 1, 2022 ರ ಪಂದ್ಯದ ನಂತರ ಐಪಿಎಲ್ 2022 ಅಂಕಪಟ್ಟಿ:

1. ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಆಡಿದ 3 ಪಂದ್ಯಗಳಲ್ಲಿ 2 ಪಂದ್ಯಗಳಲ್ಲಿ ಜಯ ಸಾಧಿಸಿ 4 ಅಂಕಗಳನ್ನು ಸಂಪಾದಿಸಿದೆ.

2. ರಾಜಸ್ಥಾನ್ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳು ಆಡಿದ ಒಂದು ಪಂದ್ಯಗಳಲ್ಲಿ ಜಯಭೇರಿ ಬಾರಿಸಿ 2 ಅಂಕಗಳನ್ನು ಸಂಪಾದಿಸಿದ್ದಾರೆ.

3. ಲಖನೌ ಸೂಪರ್ ಜೈಂಟ್ಸ್, ರಾಯಲ್ ಚಾಲೆಂಜರ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ತಲಾ 2 ಪಂದ್ಯಗಳನ್ನು ಆಡಿದ್ದು, ಒಂದು ಪಂದ್ಯವನ್ನು ಗೆದ್ದು ಒಂದು ಪಂದ್ಯದಲ್ಲಿ ಸೋಲನ್ನು ಅನುಭವಿಸಿದ್ದಾರೆ. ಇದರೊಂದಿಗೆ ಈ ತಂಡಗಳು ತಲಾ 2 ಅಂಕಗಳನ್ನು ಸಂಪಾದಿಸಿದ್ದಾರೆ.

4. ಇನ್ನೂ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಒಂದು ಪಂದ್ಯವನ್ನು ಗೆದ್ದಿಲ್ಲ.

ಇದನ್ನೂ ಓದಿ: IPL 2022 Latest Updates: RCB ಅಭಿಮಾನಿಗಳಿಗೆ ಗುಡ್ ನ್ಯೂಸ್, ಮುಂದಿನ ಪಂದ್ಯಕ್ಕೆ ಮ್ಯಾಕ್ಸ್​ವೆಲ್ ಕಮ್​ಬ್ಯಾಕ್

ಪರ್ಪಲ್ ಕ್ಯಾಪ್ ಯಾರ ಬಳಿ ಇದೆ:

ಕೆಕೆಆರ್ ತಂಡದ ವೇಗಿ ಉಮೇಶ್ ಯಾದವ್ ಅವರು ಇದುವರೆಗೂ ನಡೆದ 3 ಪಂದ್ಯಗಳಲ್ಲಿ 8 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಅನ್ನು ಪಡೆದಿದ್ದಾರೆ. ಎರಡನೇ ಸ್ಥಾನದಲ್ಲಿ ಇವರಿಗೆ ಪೈಪೋಟಿ ನೀಡುತ್ತಿರುವುದು ಅದೇ ತಂಡದ ಇನ್ನೊಬ್ಬ ವೇಗಿ ಟಿಮ್ ಸೌಥಿ ಆಡಿದ 2 ಪಂದ್ಯಗಳಲ್ಲಿ 5 ವಿಕೆಟ್ ಗಳನ್ನು ಪಡೆದಿದ್ದಾರೆ.

ಆರೆಂಜ್ ಕ್ಯಾಪ್ ಪಡೆದ ಆಂಡ್ರೆ ರಸೆಲ್:

ಕೆಕೆಆರ್ ತಂಡದ ಆಂಡ್ರೆ ರಸೆಲ್ ಅವರು ಆಡಿದ ಒಟ್ಟು 3 ಪಂದ್ಯಗಳಲ್ಲಿ ಒಟ್ಟು 95 ರನ್ ಗಳನ್ನು ಭಾರಿಸಿ ಆರೆಂಜ್ ಕ್ಯಾಪ್ ಅನ್ನು ಪಡೆದಿದ್ದಾರೆ. ಇವರಿಗೆ ಪೈಪೋಟಿ ನೀಡುತ್ತಿರುವುದು ಮತ್ತು ಎರಡನೇ ಸ್ಥಾನದಲ್ಲಿ ಇರುವವರು ಆರ್‌ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್, ಇವರು ಆಡಿದ 2 ಪಂದ್ಯಗಳಲ್ಲಿ 93 ರನ್ ಗಳಿಸಿದ್ದಾರೆ. ಆದರೆ ಇಂದು ನಡೆಯುತ್ತಿರುವ ಪಂದ್ಯದಲ್ಲಿ ಪ್ರಸ್ತುತ ರಾಜಸ್ತಾನ್ ರಾಯಲ್ಸ್​ನ ಜೋಸ್​ ಬಟ್ಲರ್ ಈ ಬಾರಿ ಐಪಿಎಲ್​ ನ ಮೊದಲ ಶತಕ ಸಿಡಿಸುವ ಮೂಲಕ ಆರೆಂಜ್ ಕ್ಯಾಪ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ.
Published by:shrikrishna bhat
First published: