IPL PBKS vs SRH: ಪಂಜಾಬ್ ದಾಳಿಗೆ ತತ್ತರಿಸಿದ ಹೈದರಾಬಾದ್, ಕೊನೆಯ ಪಂದ್ಯವನ್ನು ಗೆದ್ದು ಬೀಗಿದ PBKS

ಪಂಜಾಬ್ ಕಿಂಗ್ಸ್ (PBKS) ತಂಡವು 15.1 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 160 ರನ್ ಗಳಿಸುವ ಮೂಲಕ ಟೂರ್ನಿಯ ಕೊನೆಯ ಪಂದ್ಯವನ್ನು ಗೆದ್ದು ಬೀಗಿತು.

ಪಂಜಾಬ್ ತಂಡಕ್ಕೆ ಜಯ

ಪಂಜಾಬ್ ತಂಡಕ್ಕೆ ಜಯ

  • Share this:
ಐಪಿಎಲ್ 2022ರ (IPL 2022) 15ನೇ ಆವೃತ್ತಿಯ 70ನೇ ಪಂದ್ಯದಲ್ಲಿ ಇಂದು ಸನ್ ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ (PBKS vs SRH) ತಂಡಗಳು ಸೆಣಸಾಡಿದವು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಇಂದಿನ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದ ಸನ್ ರೈಸರ್ಸ್ ಹೈದರಾಬಾದ್ (SRH) ತಂಡವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಸನ್ ರೈಸರ್ಸ್ ಹೈದರಾಬಾಧ್ ತಂಡವು ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 157 ರನ್ ಗಳ ಸಾಧಾರಣ ಮೊತ್ತ ಕಲೆಹಾಕಿತು. ಈ ಮೊತ್ತ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ (PBKS) ತಂಡವು 15.1 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 160 ರನ್ ಗಳಿಸುವ ಮೂಲಕ ಟೂರ್ನಿಯ ಕೊನೆಯ ಪಂದ್ಯವನ್ನು ಗೆದ್ದು ಬೀಗಿತು.

ಸಾಧಾರಣ ಮೊತ್ತಕ್ಕೆ ಕುಸಿದ ಹೈದರಾಬಾದ್:

ಟಾಸ್ ಗೆದ್ದ ಸನ್ ರೈಸರ್ಸ್ ಹೈದರಾಬಾದ್ ತಂಡವು ಮೊದಲು ಬ್ಯಾಟಿಂಗ್ ಆಯ್ದು ಕೊಂಡಿತು. ಸನ್ ರೈಸರ್ಸ್ ಹೈದರಾಬಾಧ್ ತಂಡವು ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 157 ರನ್ ಗಳ ಸಾಧಾರಣ ಮೊತ್ತ ಕಲೆಹಾಕಿತು. ಪಂಜಾಬ್ ಕರಾರುವಕ್ ದಾಳಿಗೆ ಹೈದರಾಬಾಧ್ ತಂಡದ ಬ್ಯಾಟ್ಸ್​ಮನ್ ಗಳು ತತ್ತರಿಸಿ ಹೋದರು.

ಹೈದರಾಬಾದ್ ಪರ ಅಭಿಷೇಕ್ ಶರ್ಮಾ 43 ರನ್, ರಾಹುಲ್ ತ್ರಿಪಾಠಿ 20 ರನ್, ಮಾರ್ಕ್ರಮ್ 21 ರನ್, ಪೂರನ್ 5 ರನ್, ವಾಶಿಂಗ್ಟನ್ ಸುಂದರ್ 25 ರನ್, ಶೆರ್ಫರ್ಡ್ 26 ರನ್ ಗಳಿಸುವ ಮೂಲಕ ತಂಡ ಸಾಧಾರಣ ಮೊತ್ತ ಕಲೆಹಾಕುವಲ್ಲಿ ಸಹಾಯಕರಾದರು.

ಇದನ್ನೂ ಓದಿ: IND vs SA: 3 ವರ್ಷಗಳ ನಂತರ ಟೀಂ ಇಂಡಿಯಾಕ್ಕೆ ಮರಳಿದ ಕಾರ್ತಿಕ್, ಎಲ್ಲಕ್ಕೂ ಐಪಿಎಲ್ ಕಾರಣವಂತೆ

ಪಂಜಾಬ್ ದಾಳಿಗೆ ತತ್ತರಿಸಿದ ಹೈದರಾಬಾದ್:

ಇನ್ನು, ಟಾಸ್ ಗೆದ್ದು ಮೊದಲು ಬ್ಯಾಟಿಗ್ ಮಾಡಿದ ಹೈದರಾಬಾದ್ ತಂಡ ಸಾಧಾರಣ ಮೊತ್ತಕ್ಕೆ ಕುಸಿಯಿತು. ಪಂಜಾಬ್ ಬೌಲರ್ ಗಳ ದಾಳಿಗೆ ಹೈದರಾಬಾದ್ ಬ್ಯಾಟರ್ ಗಳು ತತ್ತರಿಸಿಹೋದರು. ಪಂಜಾಬ್ ಪರ ನಥನ್ ಎಲಿಸ್ ಮತ್ತು ಹಾರ್ಪೆಟ್ ತಲಾ 4 ಓವರ್ ಮಾಡಿ ಪ್ರಮುಖ 3 ವಿಕೆಟ್ ಪಡೆದು ಮಿಂಚಿದರು. ಇವರಿಗೆ ಸಾರ್ಥ ನೀಡಿದ ಕಗಿಸೋ ರಬಾಡಾ 1 ವಿಕೆಟ್ ಪಡೆದು ಮಿಂಚಿದರು. ಸಂಘಟಿತ ಬೌಲಿಂಗ್ ದಾಳಿಯಿಂದ ಎಸ್ಆರ್​ಎಸ್ ತಂಡ ಅಲ್ಪ ಮೊತ್ತಕ್ಕೆ ಕುಸಿತಕಂಡಿತು.

ಅಬ್ಬರಿಸಿದ ಲಿವೀಂಗ್​ಸ್ಟನ್:

ಇನ್ನು, ಹೈದರಾಬಾದ್ ನೀಡಿದ 157 ರನ್ ಗಳ ಸಾಧಾರಂ ಮೊತ್ತ ಬೆನ್ನಟ್ಟಿದ ಪಂಜಾಬ್ ತಂಡವು 15.1 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 160 ರನ್ ಗಳಿಸುವ ಮೂಲಕ ಟೂರ್ನಿಯ ಕೊನೆಯ ಪಂದ್ಯವನ್ನು ಗೆದ್ದು ಬೀಗಿತು. ಪಂಜಾಬ್ ಪರ ಕೊನೆಯಲ್ಲಿ ಅಬ್ಬರಿಸಿದ ಲಿವಿಂಗ್​ಸ್ಟನ್ ಕೇವಲ 22 ಎಸೆತದಲ್ಲಿ 5 ಸಿಕ್ಸ್​ ಮತ್ತು 2 ಪೋರ್​ ಗಳ ನೆರವಿನಿಂದ 49 ರನ್ ಗಳಿಸಿ ತಂಡ ಗೆಲುವಿನ ದಡ ಸೇರಲು ಪ್ರಮುಖ ಪಾತ್ರವಹಿಸಿದರು.

ಇದನ್ನೂ ಓದಿ: ಫ್ಲೇ ಆಫ್ ನಲ್ಲಿ RCB ತಂಡಕ್ಕೆ ಲಕ್ನೋ ಸವಾಲ್, ಬೆಂಗಳೂರು ತಂಡಕ್ಕೆ ಇವರುಗಳೇ ವಿಲನ್

ಉಳಿದಂತೆ ಜಾನಿ ಬೃ್​ಸ್ಟೋ 23 ರನ್, ಶಿಖರ್ ಧವನ್ 39 ರನ್, ಶಾರುಖ್ ಖಾನ್ 19 ರನ್, ಜಿತೇಶ್ ಶರ್ಮಾ 19 ರನ್ ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ನೆರವಾದರು.
Published by:shrikrishna bhat
First published: