IPL 2022 SRH vs PBKS: ಪಂಜಾಬ್ ತಂಡಕ್ಕೆ ಹೈದರಾಬಾದ್ ಸವಾಲ್, ಹೇಗಿದೆ ಉಭಯ ತಂಡಗಳ ಪ್ಲೇಯಿಂಗ್ 11

ಐಪಿಎಲ್ 2022ರ (IPL 2022) 15ನೇ ಆವೃತ್ತಿಯಲ್ಲಿ ಇಂದು ಡಬ್ಬಲ್ ಹೆಡ್ಡರ್ ಮ್ಯಾಚ್ ನಡೆಯಲಿದೆ. ಮೊದಲನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್​ ತಂಡವು ಸನ್ ರೈಸರ್ಸ್ ಹೈದರಾಬಾದ್ (PBKS vs SRH) ತಂಡವನ್ನು ಎದುರಿಸಲಿದೆ.

PBKS vs SRH

PBKS vs SRH

  • Share this:
ಐಪಿಎಲ್ 2022ರ (IPL 2022) 15ನೇ ಆವೃತ್ತಿಯಲ್ಲಿ ಇಂದು ಡಬ್ಬಲ್ ಹೆಡ್ಡರ್ ಮ್ಯಾಚ್ ನಡೆಯಲಿದೆ. ಮೊದಲನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್​ ತಂಡವು ಸನ್ ರೈಸರ್ಸ್ ಹೈದರಾಬಾದ್ (PBKS vs SRH) ತಂಡವನ್ನು ಎದುರಿಸಲಿದೆ. ಹಾಗೂ 2ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ (CSK vs GT) ವಿರುದ್ಧ ಸೆನಸಾಡಲಿದೆ. ಮೊದಲ ಪಂದ್ಯವು ಮುಂಬೈನ ಡಿವೈ ಪಾಟೀಲ್  ಸ್ಪೋರ್ಟ್ಸ್ ಅಕಾಡಮಿಯಲ್ಲಿ (D Y Patil Sports Stadium) ನಡೆಯಲಿದೆ. ಈಗಾಗಲೇ ಉಭಯ ತಂಡಗಳು ಈ ಬಾರಿ ಐಪಿಎಲ್ ನಲ್ಲಿ ಸಾಧಾರಣ ಪ್ರದರ್ಶನ ನೀಡುತ್ತಿದ್ದು, ಇಂದಿನ ಪಂದ್ಯವನ್ನು ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಮೇಲೆರಲು ಪ್ರಯತ್ನಿಸುತ್ತಿದೆ. ಹಾಗಿದ್ದರೆ ಈ ಎರಡೂ ತಂಡಗಳ ಬಲಾಬಲ ಮತ್ತು ಈವರೆಗಿನ ಅಂಕಿಅಂಶಗಳ ಮಾಹಿತಿ ಇಲ್ಲಿದೆ.

ಪಂದ್ಯದ ವಿವರ:

ಮುಂಬೈನ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡಮಿಯಲ್ಲಿ ಇಂದು ಪಂಜಾಬ್ ಕಿಂಗ್ಸ್​ ತಂಡವು ಸನ್ ರೈಸರ್ಸ್ ಹೈದರಾಬಾದ್ ತಂಡವು ಸೆಣಸಾಡಲಿದೆ. ಭಾರತೀಯ ಕಾಲಮಾನ ಮದ್ಯಾಹ್ನ 3 ಗಂಟೆಗೆ ಟಾಸ್ ಮತ್ತು 3:30ಕ್ಕೆ ಪಂದ್ಯ ಆರಂಭವಾಗಲಿದೆ.

ಪಿಚ್ ವರದಿ:

ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಕಳೆದ 25 ಪಂದ್ಯಗಳಲ್ಲಿ ಸರಾಸರಿ ಮೊದಲ ಇನಿಂಗ್ಸ್ ಸ್ಕೋರ್ 175 ರನ್ ಆಗಿದೆ. ಪಿಚ್ ವೇಗಿಗಳ ಕಡೆಗೆ ಒಲವು ತೋರುವುದರೊಂದಿಗೆ ಬ್ಯಾಟರ್‌ಗಳು ಮತ್ತು ಬೌಲರ್‌ಗಳಿಗೆ ಅನುಕೂಲಕರವಾಗಿರುತ್ತದೆ.

ಇದನ್ನೂ ಓದಿ: IPL 2022 MI vs PBKS: ಸತತ 5ನೇ ಸೋಲು ಕಂಡ ಮುಂಬೈ, ಗೆದ್ದು ಬೀಗಿದ ಪಂಜಾಬ್ ರಾಜರು

ಐಪಿಎಲ್ 2022ರಲ್ಲಿ ಉಭಯ ತಂಡಗಳ ಪ್ರದರ್ಶನ:

ಪಂಜಾಬ್ ಕಿಂಗ್ಸ್ ಇದುವರೆಗೆ ಟೂರ್ನಿಯಲ್ಲಿ 5 ಪಂದ್ಯಗಳನ್ನು ಆಡಿದೆ. ಅವರು 3 ಪಂದ್ಯಗಳನ್ನು ಗೆದ್ದು 2 ರಲ್ಲಿ ಸೋತಿದ್ದಾರೆ. 6 ಅಂಕಗಳೊಂದಿಗೆ, PBKS ಪಾಯಿಂಟ್ ಪಟ್ಟಿಯಲ್ಲಿ 5ನೇ ಸ್ಥಾನವನ್ನು ಪಡೆದುಕೊಂಡಿದೆ. ಸನ್‌ರೈಸರ್ಸ್ ಹೈದರಾಬಾದ್ ಇದುವರೆಗೆ 5 ಪಂದ್ಯಗಳನ್ನು ಆಡಿದ್ದು, 3 ಗೆದ್ದು 2 ಸೋತಿದೆ. 6 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 7ನೇ ಸ್ಥಾನವನ್ನು ಪಡೆದುಕೊಂಡಿದೆ. ಹೀಗಾಗಿ ಉಭಯ ತಂಡಗಳು ಸಮಬಲದ ಪ್ರದರ್ಶನ ತೋರಿದ್ದು, ಇಂದಿನ ಪಂದ್ಯದ ಮೇಲೆ ಹೆಚ್ಚಿನ ನಿರೀಕ್ಷೆಯಿದೆ.

PBKS vs SRH ಹೆಡ್-ಟು-ಹೆಡ್:

ಈವರೆಗೆ ಐಪಿಎಲ್​ ನಲ್ಲಿ ಪಂಜಾಬ್ ಮತ್ತು ಹೈದರಾಬಾದ್ ತಂಡಗಳು ಒಟ್ಟು 18 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಪಂಜಾಬ್ ತಂಡ ಹೈದರಾಬಾದ್ ಎದುರು 6 ಬಾರಿ ಗೆದ್ದರೆ, ಹೈದರಾಬಾದ್ 12 ಬಾರಿ ಗೆದ್ದು ಬೀಗಿದೆ. ಅಂಕಿಅಂಶದ ಪ್ರಕಾರ ಹೈದರಾಬಾದ್ ತಂಡ ಹೆಚ್ಚು ಬಲಿಷ್ಢವಾಗಿ ಕಾಣುತ್ತದೆ. ಉಳಿದಂತೆ ಕಳೆದ ಸೀಸನ್​ ನಲ್ಲಿ ಉಭಯ ತಂಡಗಳು 2 ಬಾರಿ ಮುಖಾಮುಖಿಯಾಗಿದ್ದವು. ಇದರಲ್ಲಿ 1-1ರಲ್ಲಿ ಗೆಲುವು ಸಾಧಿಸಿದೆ.

ಇದನ್ನೂ ಓದಿ: IPL 2022 SRH vs KKR: ರಾಹುಲ್ ಅಬ್ಬರಕ್ಕೆ ಬೆಚ್ಚಿದ ಕೋಲ್ಕತ್ತಾ, ಹೈದರಾಬಾದ್​ಗೆ ಹ್ಯಾಟ್ರಿಕ್ ಗೆಲುವು

PBKS vs SRH ಸಂಭಾವ್ಯ ತಂಡ:

ಪಂಜಾಬ್ ಕಿಂಗ್ಸ್: ಮಯಾಂಕ್ ಅಗರ್ವಾಲ್ (ನಾಯಕ), ಶಿಖರ್ ಧವನ್, ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಲಿಯಾಮ್ ಲಿವಿಂಗ್‌ಸ್ಟೋನ್, ಶಾರುಖ್ ಖಾನ್, ಜಿತೇಶ್ ಶರ್ಮಾ, ಓಡಿಯನ್ ಸ್ಮಿತ್, ಕಗಿಸೊ ರಬಾಡ, ರಾಹುಲ್ ಚಹಾರ್, ವರುಣ್ ಸಿಂಗ್ ಅರೋರಾ, ಅರ್ಶ್‌ದೀಪ್ ಅರೋರಾ

ಸನ್‌ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಕೇನ್ ವಿಲಿಯಮ್ಸನ್ (c), ಏಡನ್ ಮಾರ್ಕ್ರಾಮ್, ನಿಕೋಲಸ್ ಪೂರನ್ (WK), ಶಶಾಂಕ್ ಸಿಂಗ್, ಜೆ ಸುಚಿತ್ ಭುವನೇಶ್ವರ್ ಕುಮಾರ್, ಮಾರ್ಕೊ ಜಾನ್ಸೆನ್, ಟಿ ನಟರಾಜನ್, ಉಮ್ರಾನ್ ಮಲಿಕ್.
Published by:shrikrishna bhat
First published: