ಐಪಿಎಲ್ 2022ರ (IPL 2022) 15ನೇ ಸೀಸನ್ ನ 52ನೇ ಪಂದ್ಯದಲ್ಲಿ ಇಂದು ಪಂಜಾಬ್ ಕಿಂಗ್ಸ್ (PBKS) ಮತ್ತು ರಾಜಸ್ಥಾನ್ ರಾಯಲ್ಸ್ (RR) ತಂಡಗಳು ಸೆಣಸಾಡಿದವು. ಈ ಪಂದ್ಯದಲ್ಲಿ ಉಭಯ ತಂಡಗಳೆರಡ್ಕಕೂ ಗೆಲುವಿನ ಅವಶ್ಯಕತೆ ಹೆಚ್ಚಿತ್ತು ಎಂದರೂ ತಪ್ಪಾಗಲಾರದು. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಪಿಬಿಕೆಸ್ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 189 ರನ್ ಗಳಸಿಸುವ ಮೂಲಕ ಉತ್ತಮ ಮೊತ್ತ ಕಲೆಹಾಕಿತು. ಈ ಮೊತ್ತ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡವು 19.4 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 190 ರನ್ ಗಳಿಸುವ ಮೂಲಕ 6 ವಿಕೆಟ್ ಗಳ ಗೆಲುವಿನ (Win) ನಗೆ ಬೀರಿತು.
ಮೊದಲು ಬ್ಯಾಟ್ ಮಾಡಿದ ಪಂಜಾಬ್:
ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡವು ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 189 ರನ್ ಗಳ ಉತ್ತಮ ಮೊತ್ತ ಕಲೆಹಾಕಿತು. ಪಂಜಾಬ್ ಪರ ಜಾನಿ ಬೇರ್ಸ್ಟೋ 56 ರನ್, ಶಿಖರ್ ದವನ್ 12 ರನ್, ರಾಜಪಕ್ಷೇ 27 ರನ್, ನಾಯಜಕ ಮಾಯಾಂಕ್ ಅರ್ಗವಾಲ್ 15 ರನ್, ಜಿತೇಶ್ ಶರ್ಮಾ 38 ರನ್, ಲಿವಿಂಗ್ ಸ್ಟನ್ 22 ರನ್, ರಿಷಿ ಧವನ್ 5 ರನ್ ಗಳಸಿಸುವ ಮೂಲಕ ತಂಡ ಉತ್ತಮ ಮೊತ್ತ ಪೇರೆಪಿಸುವಲ್ಲಿ ಸಹಾಯಕರಾದರು.
ಚಹಲ್ ದಾಳಿಗೆ ತತ್ತರಿಸಿದ ಪಂಜಾಬ್:
ಇನ್ನು, ಟಾಸ್ ಸೋತು ಮೊದಲು ಬೌಲಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡದ ಬೌಲರ್ಸ್ ಉತ್ತಮ ಬೌಲಿಂಗ್ ಮಾಡುವ ಮೂಲಕ ಮಿಂಚಿದರು. ರಾಜಸ್ಥಾನ್ ಪರ ಚಹಾಲ್ ಉತ್ತಮ ಸ್ಪೇಲ್ ಮಾಡಿ ಮಿಮಚಿದರು. ಅವರು 4 ಓವರ್ ಗಳಲ್ಲಿ 28 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದರು. ಉಳಿದಂತೆ ಪ್ರಸಿದ್ಧ ಕೃಷ್ಣ ಮತ್ತು ರವಿಚಂದ್ರನ್ ಅಶ್ವೀನ್ ತಲಾ 1 ವಿಕೆಟ್ ಪಡೆದು ಮಿಂಚಿದರು.
ಇದನ್ನೂ ಓದಿ: Virat Kohli RCB: ಆರ್ಸಿಬಿ ಬಿಟ್ಟು ಬೇರೆ ತಂಡ ಸೇರದ ಕಾರಣ ರಿವೀಲ್ ಮಾಡಿದ ಕೊಹ್ಲಿ!
ಜೇಸ್ವಾಲ್ ಆಕರ್ಷಕ ಅರ್ಧಶತಕ:
ಇನ್ನು, ಪಂಜಾಬ್ ನೀಡಿದ 189 ರನ್ ಗಳ ಮೊತ್ತ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಜೆಸ್ವಾಲ್ ಉತ್ತಮ ಓಪನಿಂಗ್ ನೀಡಿದರು. ಅವರು 41 ಎಸೆತದಲ್ಲಿ 9 ಪೋರ್ ಮತ್ತು 2 ಸಿಕ್ಸ್ ಸಿಡಿಸುವ ಮೂಲಕ 68 ರನ್ ಗಳಸಿ ಮಿಂಚಿದರು. ಉಳಿದಂತೆ ಜೋಸ್ ಬಟ್ಲರ್ 30 ರನ್, ನಾಯಕ ಸಂಜು ಸ್ಯಾಮ್ಸ್ಸನ್ 23 ರನ್, ದೇವದತ್ ಪಡ್ಡಿಕಲ್ 31 ರನ್, ಹಿಟ್ ಮಾಯರ್ 31 ರನ್ ಗಳಿಸುವ ಮೂಲಕ ತಂಢವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.
ಇದನ್ನೂ ಓದಿ: IPL 2022 David Warner: ಧೋನಿ, ಕೊಹ್ಲಿ ದಾಖಲೆಗಳನ್ನೂ ಹಿಂದಿಕ್ಕಿದ ಡೇವಿಡ್ ವಾರ್ನರ್
ಬೌಲಿಂಗ್ ನಲ್ಲಿ ಎಡವಿದ ಪಂಜಾಬ್:
ಇನ್ನು, ರಾಜಸ್ಥಾನ್ ತಂಡದ ಬ್ಯಾಟರ್ ಗಳನ್ನು ಕಟ್ಟಿಹಾಕುವಲ್ಲಿ ಪಂಜಾಬ್ ತಂಡದ ಬೌಲರ್ ಗಳು ವಿಫಲರಾದರು. ಪಂಜಾಬ್ ಪರ ಆರ್ಶದೀಪ್ ಸಿಂಗ್ 2 ವಿಕೆಟ್, ಕಗಿಸೋ ರಬಾಡಾ ಮತ್ತು ರಿಷಿ ಧವನ್ ತಲಾ 1 ವಿಕೆಟ್ ಪಡೆದರು. ಯಾವಬ್ಬ ಬೌಲರ್ ಸಹ ರಾಜಸ್ಥಾನ್ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾಲಿಲ್ಲ. ಅಂತಿಮವಾಗಿ ರಾಜಸ್ಥಾನ್ ರಾಯಲ್ಸ್ ಗೆಲುವಿನ ನಗೆ ಬೀರಿತು,.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ