ಐಪಿಎಲ್ 2022ರ (IPL 2022) 15ನೇ ಆವೃತ್ತಿಯ 42ನೇ ಪಂದ್ಯದಲ್ಲಿ ಇಂದು ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ (PBKS vs LSG) ತಂಡಗಳು ಪುಣೆಯ ಎಂಸಿಎ (MCA) ಸ್ಟೇಡಿಯಂ ನಲ್ಲಿ ಸೆಣಸಾಡಿದವು. ಉಭಯ ತಂಡಗಳಿಗೆರಡೂ ಪ್ಲೇ ಆಫ್ ಸಂಬಂಧ ಇಂದಿನ ಪಂದ್ಯ ಬಹುಮುಖ್ಯವಾಗಿದ್ದವು. ಇನ್ನು, ಮೊದಲು ಬ್ಯಾಟಿಂಗ್ ಮಾಡಿದ ಕನ್ನಡಿಗ ಕೆಎಲ್ ರಾಹುಲ್ (KL Rahul) ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡವು ನಿಗದಿತ 20 ಓವರ್ ಗಳಲ್ಲಿ 8 ವಿಕಟ್ ನಷ್ಟಕ್ಕೆ 153 ರನ್ ಗಳ ಸಾಧಾರಣ ಮೊತ್ತ ಕಲೆಹಾಕಿದರು. ಈ ಮೊತ್ತ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ತಂಡವು ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 133 ರನ್ ಗಳಿಸುವ ಮೂಲಕ 20 ರನ್ ಗಳಿಂದ ಸೋಲನ್ನಪ್ಪಿತು.
ಮೊದಲು ಬ್ಯಾಟ್ ಮಾಡಿದ ಲಕ್ನೋ:
ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಲಕ್ನೋ ಸೂಪರ್ ಜೈಂಟ್ಸ್ ತಂಡವು ನಿಗದಿತ 20 ಓವರ್ ಗಳಲ್ಲಿ 8 ವಿಕಟ್ ನಷ್ಟಕ್ಕೆ 153 ರನ್ ಗಳ ಸಾಧಾರಣ ಮೊತ್ತ ಕಲೆಹಾಕಿತು. ಲಕ್ನೋ ಪರ ಕ್ವಿಂಟನ್ ಡಿ ಕಾಕ್ 37 ಎಸೆತದಲ್ಲಿ 2 ಸಿಕ್ಸ್ ಮತ್ತು 4 ಬೌಂಡರಿಗಳ ನೆರವಿನಿಂದ 46 ರನ್ ಮತ್ತು ದೀಪಕ್ ಹೂಡಾ 28 ಎಸೆತದಲ್ಲಿ 2 ಸಿಕ್ಸ್ 1 ಪೋರ್ ಮೂಲಕ 34 ರನ್ ಗಳಸಿ ಮಿಂಚಿದರು.
ಉಳಿದಂತೆ ನಾಯಕ ಕೆಎಲ್ ರಾಹುಲ್ 6 ರನ್ , ಕೃನಲ್ ಪಾಂಡ್ಯ 7 ರನ್, ಸ್ಟೋಯ್ನಿಸ್ 1 ರನ್, ಆಯೂಶ್ ಬದೋನಿ 4 ರನ್, ಜೋಸನ್ ಹೋಲ್ಡರ್ 11 ರನ್, ಚಮೀರಾ 17 ರನ್, ಮೋಸಿನ್ ಖಾನ್ 13 ರನ್ ಮತ್ತು ಕೊನೆಯಲ್ಲಿ ಆವೇಶ್ ಖಾನ್ 2 ರನ್ ಗಳಸುವ ಮೂಲಕ ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕುವಲ್ಲಿ ಸಹಾಯಕರಾದರು.
ಇದನ್ನೂ ಓದಿ: IPL 2022 DC vs KKR: ಗೆಲುವಿನ ಲಯಕ್ಕೆ ಮರಳಿದ ಡೆಲ್ಲಿ, ಕೊಲ್ಕತ್ತಾ ಎದುರು ಗೆದ್ದು ಬೀಗಿದ ಪಂಥ್ ಪಡೆ
ರಬಾಡಾ ದಾಳಿಗೆ ತತ್ತರಿಸಿದ ಲಕ್ನೋ:
ಇನ್ನು, ಪಂಜಾಬ್ ಕಿಂಗ್ಸ್ ಪರ ಕಗಿಸೋ ರಬಾಡಾ ಉತ್ತಮ ಸ್ಪೇಲ್ ಮಾಡಿದ್ದು, 4 ಓವರ್ ಗೆ 38 ರನ್ ನೀಡಿ 4 ವಿಕೆಟ್ ತೆಗೆದು ಮಿಂಚಿದರು. ಉಳಿದಂತೆ ರಾಹುಲ್ ಚಹಾರ್ 2 ವಿಕೆಟ್ ಮತ್ತು ಸಂದೀಪ್ ಶರ್ಮಾ 1 ವಿಕೆಟ್ ತೆಗೆದು ಲಕ್ನೋ ತಂಡವನ್ನು ಕಟ್ಟುಹಾಕುವಲ್ಲಿ ಯಶಸ್ವಿಯಾದರು.
ಉತ್ತಮ ಆರಂಭವಿಲ್ಲದೆ ತೆಣಕಾಡಿದ ಪಂಜಾಬ್:
ಇನ್ನು, 153 ರನ್ ಗಳ ಸಾಧಾರಣ ಮೊತ್ತ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡಕ್ಕೆ ಉತ್ತಮ ಆರಂಭ ದೊರಕಲಿಲ್ಲ. ಮೊದಲಿನಿಂದಲೂ ಲಕ್ನೋ ಬೌಲರ್ ಗಳು ಪಂಜಾಬ್ ತಂಡದ ಬ್ಯಾಟಿಂಗ್ ಲೈನ್ ಅನ್ನು ಹತೋಟಿಯಲ್ಲಿಟ್ಟಿದ್ದರು. ಪಮಜಾಬ್ ಪರ ನಾಯಕ ಮಾಯಾಂಕ್ ಅರ್ಗವಾಲ್ 25 ರನ್, ಶಿಖರ್ ಧವನ್ 5 ರನ್, ಜಾನಿ ಬೇರ್ಸ್ಟೋ 32 ರನ್ರಾಜಪಕ್ಷ 9 ರನ್, ಲಿವಿಂಗಸ್ಟನ್ 18 ರನ್, ಜಿತೇಶ್ ಶರ್ಮಾ 2 ರನ್, ಕಗಿಸೋ ರಬಾಡಾ 2 ರನ್, ರಿಷಿ ಧವನ್ 21 ರನ್ ಗಳಿಸಿದರು.
ಇದನ್ನೂ ಓದಿ: Virat Kohli: 101 ಪಂದ್ಯಗಳಾದರೂ ಶತಕ ಸಿಡಿಸದ ವಿರಾಟ್, ಕೊಹ್ಲಿ ಕಳಪೆ ಫಾರ್ಮ್ಗೆ ಕಾರಣವೇನು?
ಉತ್ತಮ ಬೌಲಿಂಗ್ ಪ್ರದರ್ಶಿಸಿದ ಲಕ್ನೋ ತಂಡ:
ಇನ್ನು, ಸಾಧಾರಣ ಮೊತ್ತವನ್ನು ಡಿಫೆಂಡ್ ಮಾಡಿಕೊಳ್ಳುವಲ್ಲಿ ಲಕ್ನೋ ತಂಡ ಮತ್ತೊಮ್ಮೆ ಯಶಸ್ವಿಯಾಯಿತು. ಲಕ್ನೋ ಪರ
ಮೊಹ್ಸಿನ್ ಖಾನ್ 4 ಓವರ್ ಮಾಡಿ 24 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ಕೃನಲ್ ಪಾಂಡ್ಯ ಮತ್ತು ಚಮೀರಾ ತಲಾ 2 ವಿಕೆಟ್ ಮತ್ತು ರವಿ ಬಿಶ್ನೋಯ್ 1 ವಿಕೆಟ್ ಪಡೆಯುವ ಮೂಲಕ ಪಂಜಾಬ್ ತಂಡವನ್ನು ಕಟ್ಟಿಹಾಕಿವಲ್ಲಿ ಯಶಸ್ವಿಯಾದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ