ಐಪಿಎಲ್ 2022ರ (IPL 2022) 15ನೇ ಆವೃತ್ತಿಯ 42ನೇ ಪಂದ್ಯದಲ್ಲಿ ಇಂದು ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ (PBKS vs LSG) ತಂಡಗಳು ಸೆಣಸಾಡಲಿವೆ. ಇಂದಿನ ಪಂದ್ಯವು ಮುಂಬೈನ ಪುಣೆಯ ಎಂಸಿಎ (MCA) ಸ್ಟೇಡಿಯಂನಲ್ಲಿ ನಡೆಯಲಿದೆ. ಉಭಯ ತಂಡಗಳು ಎರಡೂ ಸಹ ತಮ್ಮ ಹಿಂದಿನ ಪಂದ್ಯದಲ್ಲಿ ಗೆಲುವನ್ನು ಸಾಧಿಸುವ ಮೂಲಕ ಇಂದಿನ ಪಂದ್ಯದ ಮೇಲೆ ವಿಶ್ವಾಸದಲ್ಲಿದೆ. ಅಲ್ಲದೇ ಉಭಯ ತಂಡಗಳೆರಡೂ ಸಹ ಪ್ಲೇ ಆಫ್ ಪ್ರವೇಶಿಲು ಇಂದಿನ ಪಂದ್ಯದ (Match) ಗೆಲುವು ಪ್ರಮುಖ ಪಾತ್ರ ನಿರ್ವಹಿಸುವುದರಿಂದ ಈ ಪಂದ್ಯದ ಮೇಲೆ ಹೆಚ್ಚಿನ ನಿರೀಕ್ಷೆಗಳಿವೆ. ಹಾಗಿದ್ದಲ್ಲಿ ಉಭಯ ತಂಡಗಳ ಬಲಾಬಲ ಹೇಗಿರಲಿದೆ ಎಂದು ತಿಳಿದುಕೊಳ್ಳೋಣ ಬನ್ನಿ.
ಪಂದ್ಯದ ವಿವರ:
ಐಪಿಎಲ್ 2022ರ 42ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ಸೆಣಸಾಡಲಿವೆ. ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಟಾಸ್ ಮತ್ತು 7:30ಕ್ಕೆ ಪಂದ್ಯ ಆರಂಭವಾಗಲಿದೆ.
ಪಿಚ್ ವರದಿ:
ಈ ಮೈದಾನದಲ್ಲಿ ನಡೆದ ಕೊನೆಯ ಪಂದ್ಯವು ಕಡಿಮೆ ಸ್ಕೋರ್ ಗಳಿಸುವ ಮೂಲಕ ಬೌಲರ್ ಗಳಿಗೆ ಹೆಚ್ಚಿನ ನೆರವನ್ನು ನೀಡಿತ್ತು. ಹೀಗಾಗಿ MCA ಸ್ಟೇಡಿಯಂ ವಿಕೆಟ್ನಿಂದ ವೇಗದ ಬೌಲರ್ಗಳಿಗೆ ಸಾಕಷ್ಟು ಕೊಡುಗೆಗಳಿವೆ. ಇದರಿಂದಾಗಿ ಇಂದು ಟಾಸ್ ಗೆದ್ದ ತಂಡವು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಗಳಿವೆ.
ಇದನ್ನೂ ಓದಿ: IPL 2022: ಕೆಲ ಫ್ರಾಂಚೈಸಿಗಳು ನನಗೆ ದ್ರೋಹ ಬಗೆದಿವೆ, ಶಾಕಿಂಗ್ ಹೇಳಿಕೆ ನೀಡಿದ RCB ಸ್ಟಾರ್ ಬೌಲರ್
ಒಟ್ಟು ಪಂದ್ಯಗಳು- 3
ಮೊದಲು ಬ್ಯಾಟಿಂಗ್ ಗೆದ್ದ ಪಂದ್ಯಗಳು - 1
ಮೊದಲು ಬೌಲಿಂಗ್ ಗೆದ್ದ ಪಂದ್ಯಗಳು - 2
ಸರಾಸರಿ 1ನೇ ಇನ್ಸ್ ಸ್ಕೋರ್ಗಳು- 153
ಸರಾಸರಿ 2ನೇ ಇನ್ಸ್ ಸ್ಕೋರ್ಗಳು- 128
ಉಭಯ ತಂಡಗಳ ಐಪಿಎಲ್ 2022ರ ಪ್ರದರ್ಶನ:
ಇನ್ನೇನು ಐಪಿಎಲ್ 2022ರ ಮೊದಲ ಹಂತ ಮುಗಿದಿದ್ದು 2ನೇ ಹಂತ ಆರಂಭವಾಗಿದೆ. ಅದರಲ್ಲಿಯೂ ಹೊಸ ತಂಡವಾದ ಲಕ್ನೋ ಸೂಪರ್ ಜೈಂಟ್ಸ್ ಉತ್ತಮ ಪ್ರದರ್ಶನ ನೀಡುತ್ತಿದ್ದು, ಆಡಿರುವ 8 ಪಂದ್ಯಗಳಲ್ಲಿ 5ರಲ್ಲಿ ಗೆದ್ದು 3ರಲ್ಲಿ ಸೋತಿದ್ದು, ಅಂಕಪಟ್ಟಿಯಲ್ಲಿ 10 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಇಂದಿನ ಪಂದ್ಯ ಗೆಲ್ಲುವ ಮೂಲಕ ಪ್ಲೇ ಆಫ್ ಹಾದಿಯನ್ನು ಸುಗಮ ಗೊಳಿಸಿಕೊಳ್ಳುವ ಯೋಜನೆಯಲ್ಲಿದೆ. ಅದರಂತೆ ಪಂಜಾಬ್ ಕಿಂಗ್ಸ್ ತಂಡವು ಆಡಿರುವ 8 ಪಂದ್ಯದಲ್ಲಿ 4ರಲ್ಲಿ ಗೆದ್ದು 4ರಲ್ಲಿ ಸೋಲನ್ನಪ್ಪಿದೆ. ಇದು 8 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿದೆ. ಪಮಜಾಬ್ ಮುಂದಿನ ಎಲ್ಲಾ ಪಂದ್ಯಗಳನ್ನೂ ಗೆದ್ದಲ್ಲಿ ಮಾತ್ರ ಪ್ಲೇ ಆಫ್ ಸ್ಥಾನಕ್ಕೆ ಏರುವ ಸಾಧ್ಯತೆ ಇದ್ದು, ಇಂದಿನ ಪಂದ್ಯ ಹೆಚ್ಚು ನಿರ್ಣಾಯಕವಾಗಿದೆ.
ಇದನ್ನೂ ಓದಿ: IPL 2022: ಪ್ಲೇ ಆಫ್ ಪ್ರವೇಶಿಸಲಿದ್ಯಾ RCB? ಏನು ಹೇಳುತ್ತಿದೆ ಐಪಿಎಲ್ ಅಂಕಪಟ್ಟಿ
PBKS vs LSG ಸಂಭಾವ್ಯ ತಂಡ:
ಪಂಜಾಬ್ ಕಿಂಗ್ಸ್: ಮಯಾಂಕ್ ಅಗರ್ವಾಲ್ (c), ಶಿಖರ್ ಧವನ್, ಜಾನಿ ಬೈರ್ಸ್ಟೋವ್, ಲಿಯಾಮ್ ಲಿವಿಂಗ್ಸ್ಟೋನ್, ಜಿತೇಶ್ ಶರ್ಮಾ (WK), ಭಾನುಕಾ ರಾಜಪಕ್ಸೆ, ರಿಷಿ ಧವನ್, ಕಗಿಸೊ ರಬಾಡ, ರಾಹುಲ್ ಚಾಹರ್, ಸಂದೀಪ್ ಶರ್ಮಾ, ಅರ್ಷ್ದೀಪ್ ಸಿಂಗ್
ಲಕ್ನೋ ಸೂಪರ್ ಜೈಂಟ್ಸ್: ಕ್ವಿಂಟನ್ ಡಿ ಕಾಕ್ (wk), KL ರಾಹುಲ್ (c), ಮನೀಶ್ ಪಾಂಡೆ, ಕೃನಾಲ್ ಪಾಂಡ್ಯ, ದೀಪಕ್ ಹೂಡಾ, ಆಯುಷ್ ಬಡೋನಿ, ಮಾರ್ಕಸ್ ಸ್ಟೋನಿಸ್, ಜೇಸನ್ ಹೋಲ್ಡರ್, ದುಷ್ಮಂತ ಚಮೀರಾ, ರವಿ ಬಿಷ್ಣೋಯ್, ಅವೇಶ್ ಖಾನ್ / ಮೊಹ್ಸಿನ್ ಖಾನ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ