IPL 2022 PBKS vs GT: ಪಂಜಾಬ್ ರಾಜರಿಗೆ ಗುಜರಾತ್ ಸವಾಲು, ಹೇಗಿರಲಿದೆ ಉಭಯ ತಂಡಗಳ ಪ್ಲೇಯಿಂಗ್ XI

ಐಪಿಎಲ್​ 2022ರ (IPL 2022) ಟೂರ್ನಿಯ 16ನೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ (Hardik Pandya) ನಾಯಕತ್ವದ ಗುಜರಾತ್ ಟೈಟಾನ್ಸ್ (Gujarat Titans)ಮತ್ತು ಮಯಾಂಕ್ ಅಗರ್ವಾಲ್ (Mayank Agarwal) ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ.

ಪಂಜಾಬ್ vs ಗುಜರಾತ್

ಪಂಜಾಬ್ vs ಗುಜರಾತ್

  • Share this:
ಐಪಿಎಲ್​ 2022ರ (IPL 2022) ಟೂರ್ನಿಯ 16ನೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ (Hardik Pandya) ನಾಯಕತ್ವದ ಗುಜರಾತ್ ಟೈಟಾನ್ಸ್ (Gujarat Titans)ಮತ್ತು ಮಯಾಂಕ್ ಅಗರ್ವಾಲ್ (Mayank Agarwal) ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಪಂದ್ಯ ಜನಡೆಯಲಿದೆ. ಈಗಾಗಲೇ ಪಂಜಾಬ್ ಕಿಂಗ್ಸ್ ಸರಣಿಯಲ್ಲಿ 3 ಪಂದ್ಯಗಳನ್ನು ಆಡಿದೆ ಮತ್ತು ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಆದರೆ ಗುಜರಾತ್ ಟೈಟಾನ್ಸ್ ಸರಣಿಯಲ್ಲಿ 2 ಪಂದ್ಯಗಳನ್ನು ಆಡಿದೆ ಮತ್ತು ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದು, ಉಭಯ ತಂಡಗಳ ಬಲಾಬಲ ಹೇಗಿರಲಿದೆ  ಎಂಬುದನ್ನು ನೋಡೋಣ ಬನ್ನಿ.

ಪಂದ್ಯದ ವಿವರ:

ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳು ಮುಂಬೈನ ಬ್ರರ್ಬೋನ್​ ಸ್ಟೇಡಿಯಂನಲ್ಲಿ ಸೆಣಸಾಡಲಿದೆ.  ಭಾರತೀಯ ಕಾಲಮಾನ ರಾತ್ರಿ 7 ಗಂಟೆಗೆ ಟಾಸ್ ಮತ್ತು 7:30ಕ್ಕೆ ಪಂದ್ಯ ಆರಂಭವಾಗಲಿದೆ.

ಎರಡೂ ತಂಡಗಳ ಬಲಾಬಲ:

ಐಪಿಎಲ್‌ನಲ್ಲಿ ಉಭಯ ತಂಡಗಳ ನಡುವಿನ ಮೊದಲ ಮುಖಾಮುಖಿ ಇದಾಗಿದೆ. ಆದರೆ, ಪಂಜಾಬ್ ಈ ಹಿಂದೆ ಬ್ರಬೋರ್ನ್‌ ಮೈದಾನದಲ್ಲಿ ಆಡಿದೆ ಮತ್ತು ಕೆಲವು ಗುಜರಾತ್ ಟೈಟಾನ್ಸ್ ಆಟಗಾರರು ತಮ್ಮ ಹಿಂದಿನ ಫ್ರಾಂಚೈಸಿಗಳೊಂದಿಗೆ PBKS ವಿರುದ್ಧ ಉತ್ತಮ ಆಟಗಳನ್ನು ಆಡಿರುವ ದಾಖಲೆಯನ್ನೂ ಹೊಂದಿದ್ದಾರೆ.

ಇದನ್ನೂ ಓದಿ: IPL 2022- CSK vs PBKS: ರಾಜರುಗಳ ಕದನದಲ್ಲಿ ಬಲಿಷ್ಠರಾರು? ಏನು ಹೇಳುತ್ತಿದೆ ಅಂಕಿಅಂಶ?

ಉಭಯ ತಂಡಗಳಲ್ಲಿ ಬದಲಾವಣೆ:

ಈಗಾಗಲೇ  ಗುಜರಾತ್ ಟೈಟಾನ್ಸ್  ತಂಡವು ಈ ಬಾರಿ ಐಪಿಎಲ್​ ನಲ್ಲಿ ಆಡಿರುವ 2 ಪಂದ್ಯಗಳನ್ನು ಗೆದ್ದಿರುವ ಕಾರಣ ಪ್ಲೇಯಿಂಗ್​ XI ನಲ್ಲಿ ಯಾವುದೇ ಬದಲಾವಣೆಯನ್ನು ಮಾಡುವ ಸಾಧ್ಯತೆ ಇಲ್ಲ ಎನ್ನಬಹುದಾಗಿದೆ. ಹಾಗೆಯೇ ಪಂಜಾಬ್ ಕಿಂಗ್ಸ್‌ ತಂಡ ಕೊನೆಯ ಪಂದ್ಯವಾದ ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಕಾರಣ, ಇಲ್ಲಿಯೂ ಯಾವುದೇ ಬದಲಾವಣೆ ಇಲ್ಲದೇ ಅದೇ ತಂಡ ಕಣಕ್ಕಿಳಿಯುವ ಸಾಧ್ಯತೆಗಳಿವೆ.

ಹಿಂದಿನ ಸೀಸನ್​ಗಳಲ್ಲಿ ಈ 2 ತಂಡಗಳಲ್ಲಿನ ಸ್ಟಾರ್ ಆಟಗಾರರ ಪ್ರದರ್ಶನ:

- ಅತಿ ಹೆಚ್ಚು ರನ್‌: ಶುಭಮನ್ ಗಿಲ್ - 7 ಇನ್ನಿಂಗ್ಸ್‌ 225 ರನ್‌ಗಳು
- ಗರಿಷ್ಠ ಸ್ಕೋರ್: ಶುಭಮನ್ ಗಿಲ್ - 2019 ರಲ್ಲಿ 49 ಎಸೆತಗಳಲ್ಲಿ 65*
- ಹೆಚ್ಚು ವಿಕೆಟ್: ರಶೀದ್ ಖಾನ್ - 10 ಪಂದ್ಯಗಳಲ್ಲಿ 18 ವಿಕೆಟ್
- ಅತಿ ಹೆಚ್ಚು ಸಿಕ್ಸರ್‌ಗಳು: ಹಾರ್ದಿಕ್ ಪಾಂಡ್ಯ - 11 ಇನ್ನಿಂಗ್ಸ್‌ಗಳಲ್ಲಿ 12 ಸಿಕ್ಸರ್‌ಗಳು
- ಹೆಚ್ಚಿನ ಬೌಂಡರಿಗಳು: ಶುಭಮನ್ ಗಿಲ್ - 7 ಇನ್ನಿಂಗ್ಸ್‌ಗಳಲ್ಲಿ 21 ಬೌಂಡರಿಗಳು

ಇದನ್ನೂ ಓದಿ: IPL 2022 GT vs DC: ಮೊದಲ ಹಣಾಹಣಿಯಲ್ಲಿ ಯಾರು ಗೆಲ್ತಾರೆ?, ಹೇಗಿದೆ ಡೆಲ್ಲಿ-ಗುಜರಾತ್ ಬಲಾಬಲ

ಉಭಯ ತಂಡಗಳ ಸಂಭಾವ್ಯ  ತಂಡ:

ಪಂಜಾಬ್ ಕಿಂಗ್ಸ್: ಶಿಖರ್ ಧವನ್, ಮಯಾಂಕ್ ಅಗರ್ವಾಲ್, ಭಾನುಕಾ ರಾಜಪಕ್ಸೆ, ಜಿತೇಶ್ ಶರ್ಮಾ, ಲಿಯಾಮ್ ಲಿವಿಂಗ್ಸ್ಟನ್, ಶಾರುಖ್ ಖಾನ್, ಓಡಿಯನ್ ಸ್ಮಿತ್, ಕಗಿಸೊ ರಬಾಡ, ರಾಹುಲ್ ಚಹಾರ್, ವೈಭವ್ ಅರೋರಾ.

ಗುಜರಾತ್ ಟೈಟಾನ್ಸ್: ಶುಭಮನ್ ಗಿಲ್, ಮ್ಯಾಥ್ಯೂ ವೇಡ್, ವಿಜಯ್ ಶಂಕರ್, ಹಾರ್ದಿಕ್ ಪಾಂಡ್ಯ, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ಅಭಿನವ್ ಮನೋಹರ್, ರಶೀದ್ ಖಾನ್, ವರುಣ್ ಆರೋನ್, ಲಾಕಿ ಫರ್ಗುಸನ್, ಮೊಹಮ್ಮದ್ ಶಮಿ

PBKS vs GT ಪಂದ್ಯದಲ್ಲಿ ಆಗಬಹುದಾದ ದಾಖಲೆಗಳು:

ಮಯಾಂಕ್ ಅಗರ್ವಾಲ್ (ಪಂಜಾಬ್ ಕಿಂಗ್ಸ್): T20 ಕ್ರಿಕೆಟ್‌ನಲ್ಲಿ (ಒಟ್ಟಾರೆ) 4000 ರನ್‌ಗಳನ್ನು ಪೂರೈಸಲು 46 ರನ್‌ಗಳ ಅಂತರದಲ್ಲಿದ್ದಾರೆ.

ಹಾರ್ದಿಕ್ ಪಾಂಡ್ಯ (ಗುಜರಾತ್ ಟೈಟಾನ್ಸ್): ಐಪಿಎಲ್‌ನಲ್ಲಿ 100 ಸಿಕ್ಸರ್‌ ಸಂಪೂರ್ಣಗೊಳಿಸಲು ಕೇವಲ ಒಂದು ಸಿಕ್ಸರ್ ದೂರದಲ್ಲಿದ್ದಾರೆ. T20 ಕ್ರಿಕೆಟ್‌ನಲ್ಲಿ (ಒಟ್ಟಾರೆ) 100 ಕ್ಯಾಚ್‌ಗಳಿಂದ ಭಾರತೀಯ ಆಲ್‌ರೌಂಡರ್ 2 ಕ್ಯಾಚ್‌ಗಳ ದೂರದಲ್ಲಿದ್ದಾರೆ.

ಶಿಖರ್ ಧವನ್ (ಪಂಜಾಬ್ ಕಿಂಗ್ಸ್): T20 ಕ್ರಿಕೆಟ್‌ನಲ್ಲಿ 1000 ಬೌಂಡರಿಗಳನ್ನು ಬಾರಿಸಿದ ಐದನೇ ಆಟಗಾರನಾಗಲು ಕೇವಲ 3 ಬೌಂಡರಿಗಳ ಅಂತರದಲ್ಲಿದ್ದಾರೆ.
Published by:shrikrishna bhat
First published: