ಐಪಿಎಲ್ 2022ರ (IPL 2022) 15ನೇ ಆವೃತ್ತಿಯ 48ನೇ ಪಂದ್ಯದಲ್ಲಿ ಇಂದು ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ಮತ್ತು ಪಂಜಾಬ್ ಕಿಂಗ್ಸ್ (GT vs PBKS) ತಂಡಗಳು ಸೆಣಸಾಡಲಿವೆ. ಇಂದಿನ ಪಂದ್ಯವು ಮುಂಬೈನ ಡಿವೈ ಪಾಟೀಲ್ (DY Patel) ಸ್ಟೇಡಿಯಂ ನಲ್ಲಿ ನಡೆಯಲಿದೆ. ಈಗಾಗಲೇ ಸತತ ಗೆಲುವಿನಿಂದ ಆತ್ಮ ವಿರ್ಶವಾದಲ್ಲಿರುವ ಗುಜರಾತ್ (GT) ತಂಡವು ಇಂದಿನ ಪಂದ್ಯ ಗೆಲ್ಲುವ ಮೂಲಕ ಪ್ಲೇ ಆಫ್ ಹಂತಕ್ಕೆ ಮೊದಲ ತಂಡವಾಗಿ ಎಂಟ್ರಿ ನೀಡಲು ಕಾತುರವಾಗಿದ್ದರೆ, ಇತ್ತ ಪಂಜಾಬ್ (PBKS) ತಂಡ ಇಂದಿನ ಪಂದ್ಯ ಗೆಲ್ಲುವ ಮೂಲಕ ಪ್ಲೇ ಆಫ್ ಹಂತಕ್ಕೆ ಏರಲು ಹವಣಿಸುತ್ತಿದೆ. ಹಾಗಿದ್ದರೆ ಹೇಗಿದೆ ಉಭಯ ತಂಡಗಳ ಬಲಾಬಲ.
ಪಂದ್ಯದ ವಿವರ:
ಐಪಿಎಲ್ 2022ರ 48ನೇ ಪಂದ್ಯದಲ್ಲಿ ಇಂದು ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ. ಇಂದಿನ ಪಂದ್ಯವು ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂ ನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಟಾಸ್ ಮತ್ತು 7:30 ಪಂದ್ಯ ಆರಂಭವಾಗಲಿದೆ.
ಪಿಚ್ ವರದಿ:
ಪಂದ್ಯದುದ್ದಕ್ಕೂ ಪಿಚ್ ಸಮತೋಲಿತವಾಗಿ ಉಳಿಯುವ ನಿರೀಕ್ಷೆಯಿದೆ. ಬ್ಯಾಟರ್ಗಳು ಇದು ಉತ್ತಮ ಮೈದಾನವಾಗಿದ್ದು, ಹೆಚ್ಚಿನ ರ್ನ ಹರಿದುಬರುವ ನಿರೀಕ್ಷೆಯಿದೆ. ತೇವಾಂಶ ಪರಿಣಾಮ ಬೀರಿದ್ದಲ್ಲಿ ಮಧ್ಯಮ ಓವರ್ಗಳಲ್ಲಿ ಸ್ಪಿನ್ನರ್ಗಳಿಗೆ ಸಹಾಯವಾಗಲಿದೆ. ಆದರೂ ಟಾಸ್ ಗೆದ್ದ ನಾಯಕ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ: IPL 2022: ಐಪಿಎಲ್ನಲ್ಲಿ ಟೀಂ ಇಂಡಿಯಾದ ಭವಿಷ್ಯದ ನಾಯಕರು ವಿಫಲ; ಪಾಂಡ್ಯ, ರಾಹುಲ್ ಮೇಲೆ ಮೇಲೆ ಹೆಚ್ಚಿದ ನಿರೀಕ್ಷೆ
ಐಪಿಎಲ್ 2022ರಲ್ಲಿ ಉಭಯ ತಂಡಗಳ ಪ್ರದರ್ಶನ:
ಉಭಯ ತಂಡಗಳ ನಡುವಿನ ಎರಡನೇ ಲೀಗ್ ಹಂತದ ಪಂದ್ಯ ಇದಾಗಿದೆ. ಮೊದಲ ಪಂದ್ಯದಲ್ಲಿ ರಾಹುಲ್ ತೆವಾಟಿಯಾ ಅವರ ಕೊನೆಯ ಎಸೆತದಲ್ಲಿ ಸಿಕ್ಸರ್ನಿಂದ 190 ರನ್ಗಳ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಮೊದಲ ಲೆಗ್ನಲ್ಲಿ 6 ವಿಕೆಟ್ಗಳಿಂದ ಜಯಗಳಿಸಿತು. ಹೀಗಾಗಿ ಇಂದಿನ ಪಂದ್ಯದಲ್ಲಿ ಪಂಜಾಬ್ ಸೇಡು ತೀರಿಸುಕೊಳ್ಳು ಸಜ್ಜಾಗಿದೆ.
ಇನ್ನು, ಈ ಆವೃತ್ತಿಯಲ್ಲಿ ಗುಜರಾತ್ ತಂಡವು ಭರ್ಜರಿ ಪ್ರದರ್ಶನ ತೋರುತ್ತಿದ್ದು, ಆಡಿರುವ 9 ಪಂದ್ಯಗಳಲ್ಲಿ 8ರಲ್ಲಿ ಗೆದ್ದು ಕೇವಲ 1ರಲ್ಲಿ ಸೋತಿದೆ. 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈಗಾಗಲೇ ಪ್ಲೇ ಆಫ್ ಹಂತಕ್ಕೆ ತಲುಪಲು ಇನ್ನೊಂದೇ ಗೆಲುವಿನ ಅವಶ್ಯಕತೆ ಇದ್ದು, ಇಂದಿನ ಪಂದ್ಯ ಗೆಲ್ಲುವ ನಿರೀಕ್ಷೆಯಲ್ಲಿದೆ. ಅದರಂತೆ ಪಂಜಾಬ್ ತಂಡವು ಆಡಿರುವ 9 ಪಂದ್ಯದಲ್ಲಿ 4ರಲ್ಲಿ ಗೆದ್ದು 5ರ್ಲಲಿ ಸೋಲನ್ನನುಭವಿಸಿದೆ. 8 ಅಂಕಗಳೊಂದಿಗೆ ಈ ಬಾರಿಯ ಅಂಕಪಟ್ಟಿಯಲ್ಲಿ ಪಂಜಾಬ್ 8ಣೇ ಸ್ಥಾನದಲ್ಲಿದೆ. ಹೀಗಾಗಿ ಪಂಜಅಬ್ ಪ್ಲೇ ಆಫ್ ಹಂತಕ್ಕೆ ತಲುಪಲು ಇಂದಿನಿ ಪಂದ್ಯ ಸೇರಿದಂತೆ ಮುಂಬರುವ ಎಲ್ಲಾ ಪಂದ್ಯಗಳನ್ನೂ ಗೆಲ್ಲಲೇ ಬೇಕಾಗಿದೆ.
ಇದನ್ನೂ ಓದಿ: IPL 2022: ಅಂದು ಕೊಹ್ಲಿ ಇಂದು ಗಾಯಕ್ವಾಡ್, ಐಪಿಎಲ್ನಲ್ಲಿ ನರ್ವಸ್ ನೈಂಟಿಗೆ ಔಟಾದ ಆಟಗಾರರು
GT vs PBKS ಸಂಭಾವ್ಯ ತಂಡ:
ಗುಜರಾತ್ ಟೈಟನ್ಸ್: ವೃದ್ಧಿಮಾನ್ ಸಹಾ (WK), ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ (c), ಸಾಯಿ ಸುದರ್ಶನ್, ರಾಹುಲ್ ತೆವಾಟಿಯಾ, ಡೇವಿಡ್ ಮಿಲ್ಲರ್, ಪ್ರದೀಪ್ ಸಾಂಗ್ವಾನ್, ರಶೀದ್ ಖಾನ್, ಲಾಕಿ ಫರ್ಗುಸನ್, ಅಲ್ಜಾರಿ ಜೋಸೆಫ್, ಮೊಹಮ್ಮದ್ ಶಮಿ.
ಪಂಜಾಬ್ ಕಿಂಗ್ಸ್: ಶಿಖರ್ ಧವನ್, ಮಯಾಂಕ್ ಅಗರ್ವಾಲ್ (c), ಜಾನಿ ಬೈರ್ಸ್ಟೋವ್, ಭಾನುಕಾ ರಾಜಪಕ್ಸೆ, ಜಿತೇಶ್ ಶರ್ಮಾ (WK), ಲಿಯಾಮ್ ಲಿವಿಂಗ್ಸ್ಟೋನ್, ಕಗಿಸೊ ರಬಾಡ, ರಿಷಿ ಧವನ್, ಸಂದೀಪ್ ಶರ್ಮಾ, ರಾಹುಲ್ ಚಾಹರ್, ಅರ್ಶ್ದೀಪ್ ಸಿಂಗ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ