IPL 2022: RCB - DC ಪಂದ್ಯದ ಬಳಿಕ ಹೇಗಿದೆ ಐಪಿಎಲ್ ಅಂಕಪಟ್ಟಿ, ಯಾರ ಬಳಿಯಿದೆ ಆರೆಂಜ್, ಪರ್ಪಲ್ ಕ್ಯಾಪ್?

ಕಳೆದ ರಾತ್ರಿ ನಡೆದ ಡೆಲ್ಲಿ ಕ್ಪಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್​ ಬೆಂಗಳೂರು (DC vs RCB) ಪಂದ್ಯದ ಬಳಿಕೆ ಅಂಕಪಟ್ಟಿಯಲ್ಲಿ ದೊಡ್ಡ ಬದಲಾವಣೆ ಆಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಐಪಿಎಲ್ 2022ರ (IPL 2022) 15ನೇ ಸೀಸನ್ ದಿನೇ ದಿನೇ ರಂಗೇರುತ್ತಿದೆ. ಚಾಂಪಿಯನ್ ತಂಡಗಳು ಒಂದೆಡೆ ಗೆಲುವಿಗಾಗಿ ಕಾಯುತ್ತಿದ್ದರೆ, ಹೊಸ ತಂಡಗಳು ಗೆಲುವಿನ ನಾಗಾಲೋಟದಲ್ಲಿದೆ. ಅದಲ್ಲದೇ ಹೊಸ ಹೊಸ ಪ್ರತಿಭೆಗಳು ಸೂಪರ್ ಆಟವಾಡುತ್ತಿದ್ದು, ಆರೆಂಜ್ (Orange Cap) ಮತ್ತು ಪರ್ಫಲ್ ಕ್ಯಾಫ್​ ಗಾಗಿ (Purple Cap) ಈ ಬಾರಿ ಹೆಚ್ಚಿನ ಪೈಪೋಟಿ ನಡೆಯುತ್ತಿದೆ. ಇದರ ನಡುವೆ ಐಪಿಎಲ್ 2022ರ ಅಂಕಪಟ್ಟಿಯಲ್ಲಿ ಬದಲಾವಣೆಗಳು ಆಗುತ್ತಿದೆ. ಕಳೆದ ರಾತ್ರಿ ನಡೆದ ಡೆಲ್ಲಿ ಕ್ಪಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್​ ಬೆಂಗಳೂರು (DC vs RCB) ಪಂದ್ಯದ ಬಳಿಕೆ ಅಂಕಪಟ್ಟಿಯಲ್ಲಿ ದೊಡ್ಡ ಬದಲಾವಣೆ ಆಗಿದೆ. ಅಲ್ಲದೇ ಬ್ಯಾಟಿಂಗ್ ಮತ್ತು ಬೌಲಿಂಗ್ ಶೇಯಾಂಕದಲ್ಲಿಯೂ ಕೊಂಚ ಬದಲಾವಣೆ ಆಗಿದೆ. ಇನ್ನು ಡೆಲ್ಲಿ ವಿರುದ್ಧ ರೋಚಕ ಗೆಲುವಿನ ನಂತರ ಆರ್​ಸಿಬಿ ಅಂಕಪಟ್ಟಿಯಲ್ಲಿ ಭರ್ಜರಿ ಏರಿಕೆ ಕಂಡುಬಂದಿದೆ.

ಹಾಗಾದರೆ ಯಾವ ತಂಡ ಅಂಕಪಟ್ಟಯಲ್ಲಿ ಯಾವ ಸ್ಥಾನದಲ್ಲಿದೆ? ಯಾವ ಪ್ಲೇಯರ್​ ಬಳಿ ಆರೆಂಜ್ ಹಾಗೂ ಪರ್ಫಲ್ ಕ್ಯಾಪ್ ಗಳಿವೆ ಎಂಬ ಅಂಶವನ್ನು ನೋಡೋಣ ಬನ್ನಿ.

ಐಪಿಎಲ್ 2022 ಅಂಕಪಟ್ಟಿ:

ನಿನ್ನೆ (ಏ.16) ನಡೆದ ಡೆಲ್ಲಿ ಮತ್ತು ಬೆಂಗಳೂರು ಪಂದ್ಯದಲ್ಲಿ ಆರ್​ಸಿಬಿ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದೆ. ಈ ಗೆಲುವಿನ ನಂತರ ಆರ್​ಸಿಬಿ ತಂಡವು ಐಪಿಎಲ್ 2022ರ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಿಗಿತ ಕಂಡಿದೆ. ಈವರೆಗೆ ಆಡಿರುವ 6 ಪಂದ್ಯಗಲ್ಲಿ 4ರಲ್ಲಿ ಗೆದ್ದು 8 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ.

ಉಳಿದಂತೆ ಗುಜರಾತ್ ಟೈಟನ್ಸ್ ತಂಡವು 5 ಪಂದ್ಯದಲ್ಲಿ 4ರಲ್ಲಿ ಗೆದ್ದು 8 ಅಂಕಗಳೊಂದಿಗೆ ಅಗ್ರ ಸ್ಥಾಮದಲ್ಲಿದ್ದರೆ, ಲಕ್ನೋ ಸೂಪರ್ ಜೈಂಟ್ಸ್ 6 ಪಂದ್ಯಗಳಲ್ಲಿ 4ರಲ್ಲಿ ಗೆದ್ದು 2ನೇ ಸ್ಥಾನದಲ್ಲಿದೆ. ರಾಜಸ್ಥಾನ್ ರಾಯಲ್ಸ್ 5 ಪಂದ್ಯದಿಂದ 6 ಪಾಯಿಂಟ್ ಗಳಿಸಿ 4ನೇ ಸ್ಥಾನ, ಪಂಜಾಬ್ ಕಿಂಗ್ಸ್ 5 ಪಂದ್ಯಗಳಲ್ಲಿ 3ರಲ್ಲಿ ಗೆದ್ದು 6 ಅಂಕಗಳೊಂದಿಗೆ 5ನೇ ಸ್ಥಾನ, ಕೋಲ್ಕತ್ತಾ ನೈಟ್ ರೈಡರ್ಸ್ 6 ಪಂದ್ಯಗಳಿಂದ 6 ಅಂಕ ಸಂಪಾಧಿಸಿ 6ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: Dinesh karthik: 4, 4, 4, 6, 6, 4 ಅಂತಿಮ ಹಂತದಲ್ಲಿ ಅಬ್ಬರಿಸಿದ ಕಾರ್ತಿಕ್, ಮತ್ತೆ ಗೇಮ್ ಚೇಂಜರ್ ಆದ RCB ಫಿನಿಶರ್

ಇನ್ನು, ಸನ್ ರೈಸರ್ಸ್ ಹೈದರಾಬಾದ್ 5 ಪಂದ್ಯಗಳಿಂದ 3ರಲ್ಲಿ ಗೆದ್ದು 6 ಪಾಯಿಂಟ್ ಗಳಿಸಿ7ನೇ ಸ್ಥಾನ, ಡೆಲ್ಲಿ ಕ್ಯಾಪಿಟಲ್ಸ್ 5 ಪಂದ್ಯದಿಂದ 2ರಲ್ಲಿ ಗೆದ್ದು 4 ಅಂಕಗಳೊಂದಿಗೆ 8ನೇ ಸ್ಥಾನ, ಚೆನ್ನೈ ಸೂಪರ್ ಕಿಂಗ್ಸ್ 5ರಲ್ಲಿ 1 ಪಂದ್ಯ ಗೆದ್ದು 9ನೇ ಸ್ಥಾನ ಮತ್ತು ಕೊನೆಯಲ್ಲಿ ಮುಂಬೈ ಇಂಡಿಯನ್ಸ್ ಆಡಿರು 6 ಪಂದ್ಯಗಳನ್ನು ಸೋತು 10ನೇ ಸ್ಥಾನದಲ್ಲಿದೆ.

ಆರೆಂಜ್ ಕ್ಯಾಪ್ ರೇಸ್​ನಲ್ಲಿರು ಟಾಪ್ 5 ಪ್ಲೇಯರ್ಸ್:

ರಾಜಸ್ಥಾನ್ ತಂಡದ ಜೋಸ್​ ಬಟ್ಲರ್ 5 ಪಂದ್ಯಗಳಿಂದ 272 ರನ್ ಗಳಿಸುವ ಮೂಲಕ ಪ್ರಸ್ಥುತ ಆರೆಂಜ್ ಕ್ಯಾಪ್ ಹೋಲ್ಡರ್ ಆಗಿದ್ದಾರೆ. ನಂತರದ ಸ್ಥಾನದಲ್ಲಿ ಕನ್ನಡಿಗ ಲಕ್ನೋ ತಂಡದ ನಾಯಕ ಕೆಎಲ್ ರಾಹುಲ್ 6 ಪಂದ್ಯದಿಂದ 235 ರನ್ ಗಳಿಸಿ 2ನೇ ಸ್ಥಾನದಲ್ಲಿದ್ದಾರೆ.

ಗುಜರಾತ್ ಟೈಟನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ 5 ಮ್ಯಾಚ್​ ನಿಂದ 228 ರನ್ ಗಳಸಿ 3ನೇ ಸ್ಥಾನ, ಲಕ್ನೋ ತಂಡದ ಕ್ವಿಂಟನ್ ಡಿ ಕಾಕ್ 6 ಪಂದ್ಯದಿಂದ 212 ರನ್ ಗಳಿಸಿ 4ನೇ ಸ್ಥಾನ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನ ಶಿವಂದುಭೆ 5 ಪಂದ್ಯದದಿಂದ 207 ರನ್ ಗಳಿಸಿ 5ನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: IPL 2022: RCB - CSK ಪಂದ್ಯದ ಬಳಿಕ ಹೇಗಿದೆ ಐಪಿಎಲ್ ಅಂಕಪಟ್ಟಿ, ಯಾರ ಬಳಿಯಿದೆ ಆರೆಂಜ್, ಪರ್ಪಲ್ ಕ್ಯಾಪ್?

ಪರ್ಫಲ್ ಕ್ಯಾಪ್ ಟಾಪ್ 5 ಆಟಗಾರರು:

ರಾಜಸ್ಥಾನ್ ತಂಡದ ಯಜುವೇಂದ್ರ ಜಹಾಲ್ 5 ಪಂದ್ಯಗಳ್ಲಿ 12 ವಿಕೆಟ್ ಪಡೆದು ಪ್ರಸ್ಥುತ ಪರ್ಫಲ್ ಕ್ಯಾಪ್ ತಮ್ಮದಾಗಿಸಿಕೊಂಡರೆ, ಈ ರೇಸ್​ ನಲ್ಲಿ ಲಕ್ನೋ ತಂಡದ ಆವೇಶ್ ಖಾನ್ 6 ಪಂದ್ಯಗಳಿಂದ 11 ವಿಕೆಟ್ 2ನೇ ಸ್ಥಾನ, ಡೆಲ್ಲಿ ತಂಡದ ಕುಲದೀಪ್ ಯಾದವ್ 5 ಪಂದ್ಯಗಳಲ್ಲಿ 11 ವಿಕೆಟ್ ಪಡೆದು 3ನೇ ಸ್ಥಾನದಲ್ಲಿದ್ದಾರೆ.

ಸನ್ ರೈಸರ್ಸ್ ಹೈದರಾಬಾದ್ ತಂಡ ಟಿ. ನಟರಾಜನ್ 5 ಪಂದ್ಯದಿಂದ 11 ವಿಕೆಟ್ ಪಡೆದು 4ನೇ ಸ್ಥಾನ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವನಿಂದು ಹಸರಂಗ 6 ಪಂದ್ಯದಿಂದ 11 ವಿಕೆಟ್ ಪಡೆದು 5ನೇ ಸ್ಥಾನದಲ್ಲಿದ್ದಾರೆ. (ಈ ಪಟ್ಟಿಯಲ್ಲಿ 2ರಿಂದ 5 ಸ್ಥಾನದ ವರೆಗಿನ ಆಡಗಾರರು 11 ವಿಕೆಟ್ ಪಡೆದರೂ ಎಕಾನಮಿಯಲ್ಲಿ ವಿಭಿನ್ನ ಸ್ಥಾನಗಳಲ್ಲಿದ್ದಾರೆ).
Published by:shrikrishna bhat
First published: