IPL 2022: RCB - CSK ಪಂದ್ಯದ ಬಳಿಕ ಹೇಗಿದೆ ಐಪಿಎಲ್ ಅಂಕಪಟ್ಟಿ, ಯಾರ ಬಳಿಯಿದೆ ಆರೆಂಜ್, ಪರ್ಪಲ್ ಕ್ಯಾಪ್?

ಐಪಿಎಲ್ 2022ರ (IPL 2022) 15ನೇ ಸೀಸನ್ ದಿನೇ ದಿನೇ ರಂಗೇರುತ್ತಿದೆ. ಚಾಂಪಿಯನ್ ತಂಡಗಳು ಒಂದೆಡೆ ಗೆಲುವಿಗಾಗಿ ಕಾಯುತ್ತಿದ್ದರೆ, ಹೊಸ ತಂಡಗಳು ಗೆಲುವಿನ ನಾಗಾಲೋಟದಲ್ಲಿದೆ.

ಐಪಿಎಲ್ ಅಂಕಪಟ್ಟಿ

ಐಪಿಎಲ್ ಅಂಕಪಟ್ಟಿ

  • Share this:
ಐಪಿಎಲ್ 2022ರ (IPL 2022) 15ನೇ ಸೀಸನ್ ದಿನೇ ದಿನೇ ರಂಗೇರುತ್ತಿದೆ. ಚಾಂಪಿಯನ್ ತಂಡಗಳು ಒಂದೆಡೆ ಗೆಲುವಿಗಾಗಿ ಕಾಯುತ್ತಿದ್ದರೆ, ಹೊಸ ತಂಡಗಳು ಗೆಲುವಿನ ನಾಗಾಲೋಟದಲ್ಲಿದೆ. ಅದಲ್ಲದೇ ಹೊಸ ಹೊಸ ಪ್ರತಿಭೆಗಳು ಸೂಪರ್ ಆಟವಾಡುತ್ತಿದ್ದು, ಆರೆಂಜ್ (Orange Cap) ಮತ್ತು ಪರ್ಫಲ್ ಕ್ಯಾಫ್​ ಗಾಗಿ (Purple Cap) ಭರ್ಜರಿ ಸೆಣಸಾಟ ನಡೆಯುತ್ತಿದೆ. ಇದರ ನಡುವೆ ಐಪಿಎಲ್ 2022ರ ಅಂಕಪಟ್ಟಿಯಲ್ಲಿ ಬದಲಾವಣೆಗಳು ಆಗುತ್ತಿದೆ. ಕಳೆದ ರಾತ್ರಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್​ ಬೆಂಗಳೂರು (CSK vs RCB) ಪಂದ್ಯದ ಬಳಿಕೆ ಅಂಕಪಟ್ಟಿಯಲ್ಲಿ ದೊಡ್ಡ ಬದಲಾವಣೆ ಆಗಿದೆ. ಅಲ್ಲದೇ ಬ್ಯಾಟಿಂಗ್ ಮತ್ತು ಬೌಲಿಂಗ್ ಶೇಯಾಂಕದಲ್ಲಿಯೂ ಕೊಂಚ ಬದಲಾವಣೆ ಆಗಿದೆ. ಇನ್ನು ಸಿಎಸ್​ಕೆ ಮತ್ತು ಆರ್​ಸಿಬಿ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಗೆಲುವಿನ ಖಾತೆ ತೆರೆದಿದೆ. ಈ ಮೂಲಕ ಅಂಕಪಟ್ಟಿಯಲ್ಲಿಯೂ ಸಿಎಸ್​ಕೆ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ.

ಹಾಗಾದರೆ ಯಾವ ತಂಡ ಅಂಕಪಟ್ಟಯಲ್ಲಿ ಯಾವ ಸ್ಥಾನದಲ್ಲಿದೆ? ಯಾವ ಪ್ಲೇಯರ್​ ಬಳಿ ಆರೆಂಜ್ ಹಾಗೂ ಪರ್ಫಲ್ ಕ್ಯಾಪ್ ಗಳಿವೆ ಎಂಬ ಅಂಶವನ್ನು ನೋಡೋಣ ಬನ್ನಿ.

ಐಪಿಎಲ್ 2022 ಅಂಕಪಟ್ಟಿ:

ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಗೆಲುವನ್ನು ದಾಖಲಿಸುವ ಮೂಲಕ ಚೆನ್ನೈ ಅಂಕಪಟ್ಟಿಯಲ್ಲಿ ತನ್ನ ಗೆಲುವಿನ ಖಾತೆ ತೆರೆದಿದೆ. ಈ ಮೂಲಕ 10ನೇ ಸ್ಥಾನದಿಂದ ಚೆನ್ನೈ 9ನೇ ಸ್ಥಾನಕ್ಕೆ ಏರಿದೆ. ಅದರಂತೆ ಬೆಂಗಳೂರು ತಂಡವು ಸೋಲಿನಿಂದ 4ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಕುಸಿದಿದೆ.

ಇದನ್ನೂ ಓದಿ: IPL 2022: RCB ಬೇಡ ಎಂದು ರಿಜೆಕ್ಟ್ ಮಾಡಿದ ಆಟಗಾರರು ಇದೀಗ ಮತ್ತೊಂದು ತಂಡದ ಸೂಪರ್ ಪ್ಲೇಯರ್ಸ್..!

ರಾಜಸ್ಥಾನ್ ರಾಯಲ್ಸ್ 4 ಪಂದ್ಯದಲ್ಲಿ 3 ಪಂದ್ಯದವನ್ನು ಗೆಲ್ಲುವ ಮೂಲಕ 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದೆ. ಅದರಂತೆ ಕೊಲ್ಕತ್ತಾ ನೈಟ್ ರೈಡರ್ಸ್ 5 ಪಂದ್ಯದಗಳಲ್ಲಿ 3ರಲ್ಲಿ ಗೆದ್ದು 2ನೇ ಸ್ಥಾನ, ಲಕ್ನೋ ಸೂಪರ್ ಜೈಂಟ್ಸ್ 5 ಪಂದ್ಯದಲ್ಲಿ 3ರಲ್ಲಿ ಗೆದ್ದು, 3ನೇ ಸ್ಥಾನ, ಗುಜರಾತ್ ಟೈಟಂನ್ಸ್ 4 ಪಂದ್ಯದಲ್ಲಿ 3ರಲ್ಲಿ ಗೆದ್ದು 4ನೇ ಸ್ಥಾನ, ಬೆಂಗಳೂರು ರಾಯಲ್ ಚಾಲೆಂಜರ್ಸ್ 5ಪಂದ್ಯದಲ್ಲಿ 3ರಲ್ಲಿ ಗೆಲುವು ಸಾಧಿಸಿ 5ನೇ ಸ್ಥಾನ, ಡೆಲ್ಲಿ ಕ್ಯಾಪಿಟಲ್ಸ್ 4 ಪಂದ್ಯ 2 ಜಯದೊಂದಿಗೆ 6ನೇ ಸ್ಥಾನ, ಪಂಜಾಬ್ ಕಿಂಗ್ಸ್ 4 ಪಂದ್ಯದಿಂದ 2 ಗೆದ್ದು 7ನೇ ಸ್ಥಾನ, ಸನ್ ರೈಸರ್ಸ್ ಹೈದರಾಬಾದ್ 4 ಪಂದ್ಯದಲ್ಲಿ 2ರಲ್ಲಿ ಗೆದ್ದು 2 ಗೆದ್ದು 8ನೇ ಸ್ಥಾನ ಹಾಗೂ ಅಂತಿಮವಾಗಿ ಚೆನ್ನೈ ಸೂಪರ್ ಕಿಂಗ್ಸ್ 5 ಪಂದ್ಯದಲ್ಲಿ 1ರಲ್ಲಿ ಗೆದ್ದು 9ನೇ ಸ್ಥಾನ ಹಾಗೂ ಕೊನೆಯಲ್ಲಿ ಮುಂಬೈ ಇಂಡಿಯನ್ಸ್ 4 ಪಂದ್ಯ ಆಡಿದ್ದು 4ರಲ್ಲಿಯೂ ಸೋತು 10ನೇ ಸ್ಥಾನದಲ್ಲಿದೆ.

ಆರೆಂಜ್ ಕ್ಯಾಪ್ ಟಾಪ್ 5 ಆಟಗಾರರು:

ರಾಜಸ್ಥಾನ್ ತಂಡದ ಜೋಸ್​ ಬಟ್ಲರ್ 4 ಪಂದ್ಯಗಳಿಂದ 218 ರನ್ ಗಳಿಸುವ ಮೂಲಕ ಪ್ರಸ್ಥುತ ಆರೆಂಜ್ ಕ್ಯಾಪ್ ಹೋಲ್ಡರ್ ಆಗಿದ್ದಾರೆ. ನಂತರದ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಶಿವಂ ದುಭೆ 5 ಪಂದ್ಯಗಳಿಂದ 207 ರನ್ ಗಳಿಸಿ 2ನೇ ಸ್ಥಾನ, ಚೆನ್ನೈ ತಂಡದ ರಾಬಿನ್ ಉತ್ತಪ್ಪ 5 ಪಂದ್ಯಗಳಿಂದ 194 ರನ್ ಗಳಿಸಿ 3ನೇ ಸ್ಥಾನ, ಲಕ್ನೋ ತಂಡದ ಕ್ವಿಂಟನ್ ಡಿ ಕಾಕ್ 5 ಪಂದ್ಯಗಳಿಂದ 188 ರನ್ ಗಳಿಸಿ 4ನೇ ಸ್ಥಾನ ಹಾಗೂ ಗುಜರಾತ್ ತಂಡದ ಶುಭಂ ಗಿಲ್ 4 ಪಂದ್ಯಗಳಿಂದ 187 ರನ್ ಗಳಿಸಿ 5ನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: RCB vs RR: ಟಾಸ್​ ಗೆದ್ದಾಯ್ತು.. ಅಖಾಡಕ್ಕೆ ಇಳಿದಾಯ್ತು! ಇನ್ನೂ ಆರ್​​ಸಿಬಿ ಗೆಲ್ಲೊದೊಂದೆ ಬಾಕಿ

ಪರ್ಫಲ್ ಕ್ಯಾಪ್ ಟಾಪ್ 5 ಆಟಗಾರರು:

ರಾಜಸ್ಥಾನ್ ತಂಡದ ಯಜುವೇಂದ್ರ ಜಹಾಲ್ 4 ಪಂದ್ಯಗಳ್ಲಿ 11 ವಿಕೆಟ್ ಪಡೆದು ಪ್ರಸ್ಥುತ ಪರ್ಫಲ್ ಕ್ಯಾಪ್ ತಮ್ಮದಾಗಿಸಿಕೊಂಡರೆ, ಈ ರೇಸ್​ ನಲ್ಲಿ ಡೆಲ್ಲಿ ತಂಡದ ಕುಲದೀಪ್ ಯಾದವ್ 4 ಪಂದ್ಯಗಳಲ್ಲಿ 10 ವಿಕೆಟ್ ಪಡೆದು 2ನೇ ಸ್ಥಾನ, ಕೊಲ್ಕತ್ತಾ ತಂಡ ಉಮೇಶ್ ಯಾದವ್ 5 ಪಂದ್ಯಗಳಿಂದ 10 ವಿಕೆಟ್ ಪಡೆದು 3ನೇ ಸ್ಥಾನ, ಲಕ್ನೋ ತಂಡದ ಆವೇಶ್ ಖಾನ್ 5 ಪಂದ್ಯಗಳಿಂದ 8 ವಿಕೆಟ್ 4ನೇ ಸ್ಥಾನ ಹಾಗೂ ಹೈದರಾಬಾದ್ ತಂಡದ ಟಿ. ನಟರಾಜನ್ 4 ಪಂದ್ಯಗಳಿಂದ 8 ವಿಕೆಟ್ ಪಡೆದು 5ನೇ ಸ್ಥಾನದಲ್ಲಿದ್ದಾರೆ.
Published by:shrikrishna bhat
First published: