ಐಪಿಎಲ್ 2022ರ (IPL 2022) 15ನೇ ಆವೃತ್ತಿಗೆ ಚಾಲನೆ ಸಿಕ್ಕಿದೆ. ಇಂದು ಸಂಜೆ 7:30ಕ್ಕೆ ಆರಂಭವಾದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್(Kolkata Knight Riders) ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಕೊಲ್ಕತ್ತಾ ನೈಟ್ ರೈಡರ್ಸ್ ಬೌಲಿಂಗ್ ಆಯ್ತುಕೊಂಡಿತ್ತು. ಮೊದಲ ಬಾರಿಗೆ ಜಡೇಜಾ(Jadeja) ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅಖಾಡಕ್ಕೆ ಇಳಿದಿದೆ. ಈ ಬಾರಿ ಹತ್ತು ತಂಡಗಳು(10 Teams) ಟೂರ್ನಿಯಲ್ಲಿ ಮುಖಾಮುಖಿಯಾಗುತ್ತಿರುವುದು ಟೂರ್ನಿಯ ಕುತೂಹಲ ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಇನ್ನೂ ಬ್ಯಾಟಿಂಗ್ಗೆ ಇಳಿದ ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಓವರನಲ್ಲಿ ಮೊದಲ ವಿಕೆಟ್ ಪತನವಾಯ್ತು. ಆರಂಭದಲ್ಲೇ ಕುಟುಂತ್ತ ಸಾಗಿದ್ದ ಚೆನ್ನೈಗೆ ಇಂದು ತಲಾ ಧೋನಿ(Dhoni) ತಾನೆಂಥ ಆಟಗಾರ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಚಾಂಪಿಯನ್ ಆಟ ಆಡಿದ ಧೋನಿ!
ಹೌದು, ಐಪಿಎಲ್ 2022ರ ಮೊದಲ ಪಂದ್ಯದಲ್ಲೇ ಮಹೇಂದ್ರ ಸಿಂಗ್ ಧೋನಿ ಚಾಂಪಿಯನ್ ಆಟ ಆಡಿದ್ದಾರೆ. 38 ಬಾಲ್ಗಳಲ್ಲಿ ಅಜೇಯ 50 ರನ್ ಬಾರಿಸಿದ್ದಾರೆ. ಗ್ರೌಂಡ್ನ ಮೂಲೆ ಮೂಲೆಗೆ ಬಾಲ್ ಅನ್ನು ಕಳುಹಿಸಿದ್ದಾರೆ. 2 ವರ್ಷದ ಬಳಿಕ ಧೋನಿ ಅವರ ಬ್ಯಾಟ್ನಿಂದ ರನ್ ಬಂದಿದ್ದು, ಸ್ಟೇಡಿಯಂನಲ್ಲಿ ನೆರೆದಿದ್ದ ಧೋನಿ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ. ರನ್ ಕಲೆಹಾಕಲು ತಿಣುಕಾಡುತ್ತಿದ್ದ ಸಿಎಸ್ಕೆ ತಂಡಕ್ಕೆಧೋನಿ ಆಸರೆಯಾಗಿದ್ದಾರೆ.
ರನ್ ಕಲೆಹಾಕಲು ತಿಣುಕಾಡಿದ ಸಿಎಸ್ಕೆ ಆಟಗಾರರು!
ಬ್ಯಾಟಿಂಗ್ ಮಾಡಲು ಬಂದಿದ್ದ ಗಾಯಕ್ವಾಡ್ ಹಾಗೂ ಕಾನ್ವೆ ಹೆಚ್ಚು ಹೊತ್ತು ಸ್ಕ್ರೀಜ್ನಲ್ಲಿ ನಿಲ್ಲಲಿಲ್ಲ. ರುಥುರಾಜ್ ಗಾಯಕ್ವಾಡ್ ಡಕ್ ಔಟ್ ಆಗಿ ಪೆವಿಲಿಯನ್ ಸೇರಿದರು. ಮತ್ತೆ 28 ರನ್ ಇರುವಾಘ ಕಾನ್ವೆ ತನ್ನ ವಿಕೆಟ್ ಒಪ್ಪಿಸಿ ವಾಪಾಸ್ ಆದರು. ಕೊಂಚ ಮಟ್ಟಿಗೆ ಸಿಎಸ್ಕೆ ಅಭಿಮಾನಿಗಳಲ್ಲಿ ಆಸೆ ಮೂಡಿಸಿದ ರಾಬಿನ್ ಉತ್ತಪ್ಪ, 21 ಬಾಲ್ಗಳಲ್ಲಿ 28ರನ್ ಗಳಿಸಿ ಔಟ್ ಆದರು. ಇದಾದ ನಂತರ ಅಂಬಟಿ ರಾಯುಡು ರನ್ಔಟ್ಗೆ ಬಲಿಯಾದರು. ಇನ್ನೂ ಶಿವಂ ದುಬೆ ಸುಲಭ ಕ್ಯಾಚ್ ನೀಡಿ ಪೆವಿಲಿಯನ್ಗೆ ಮರಳಿದರು.
ಇದನ್ನೂ ಓದಿ: ಚುಟುಕು ಸಮರಕ್ಕೆ ಸಿಕ್ತು ಚಾಲನೆ.. ಟಾಸ್ ಗೆದ್ದು ಚೇಸಿಂಗ್ ಚೂಸ್ ಮಾಡಿದ್ದೇಕೆ ಶ್ರೇಯಸ್? ಅದಕ್ಕೂ ಕಾರಣವಿದೆ!
ಧೋನಿ ಬಂದಮೇಲೆ ಆಟನೇ ಚೇಂಜ್!
ಎಂ.ಎಸ್.ಧೋನಿ ಬ್ಯಾಟ್ನಿಂದ ರನ್ ಬಂದು 2 ವರ್ಷಗಳೇ ಕಳೆದಿವೆ. ಕಳೆದ ಸೀಸನ್ ಹಾಗೂ 2019ರ ಸೀಸನ್ನಲ್ಲೂ ಧೋನಿ ಹೆಚ್ಚು ರನ್ಗಳಿಸಿರಲಿಲ್ಲ. ವಿಕೆಟ್ ಹಿಂದೆ ನಿಂತು ಚಾಂಪಿಯನ್ಸ್ ಆಗಿದ್ದರಯ. ಆದರೆ, ಇಂದು ಸ್ಕ್ರೀಜ್ಗೆ ಬಂದ ಧೋನಿ 15 ನೇ ಓವರ್ ಬಳಿಕ ಗ್ರೌಂಡ್ನ ಮೂಲೆ ಮೂಲೆಗೆ ಬಾಲ್ ಕಳುಹಿಸಿದ್ದಾರೆ. 2019ರಲ್ಲಿ ಧೋನಿ 84 ರನ್ಗಳಿಸಿದ್ದೆ ಶ್ರೇಷ್ಠವಾಗಿತ್ತು. ಆದರೆ, ಇಂದು ಹಾಫ್ ಸೆಂಚುರಿ ಬಾರಿಸುವ ಮೂಲಕ ಐಪಿಎಲ್ 2022ಗೆ ವಾರ್ನಿಂಗ್ ನೀಡಿದ್ದಾರೆ. 7 ಬೌಂಡರಿ ಹಾಗೂ ಒಂದು ಸಿಕ್ಸರ್ ಬಾರಿಸಿದರು ಧೋನಿ.
ಐಪಿಎಲ್ 2022 ಮೊದಲ ಬಾಲೇ ನೋ ಬಾಲ್!
ಹೌದು, ಮೊದಲ ಓವರ್ನಲ್ಲಿ ಬೌಲ್ ಮಾಡಲು ಬಂದ ಉಮೇಶ್ ಯಾದವ್ ಐಪಿಎಲ್ 2022ರ ಮೊದಲ ಬಾಲ್ ಅನ್ನು ನೋ ಬಾಲ್ ಮಾಡಿದರು. ಇದನ್ನು ಕಂಡ ನೆಟ್ಟಿಗರು ಉಮೇಶ್ ಯಾದವ್ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ಸೌಂದರ್ಯದ ಹಿಂದಿನ ವಿಷಾದ; ಐಪಿಎಲ್ ಚಿಯರ್ ಲೀಡರ್ಗಳ ಮಾಯಾಲೋಕ! ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ