MS Dhoni: ನಂಬರ್ 7 ಜರ್ಸಿ ಹಿಂದಿನ ರಹಸ್ಯ ಬಹಿರಂಗಪಡಿಸಿದ ಧೋನಿ..! ಮಾಹಿ ಬಿಚ್ಚಿಟ್ಟ ರಹಸ್ಯವೇನು?

ಭಾರತದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ಧೋನಿ, ಐಪಿಎಲ್ 15ನೇ ಸೀಸನ್‌ಗೂ ಮುನ್ನ ತಮ್ಮ 7 ನೇ ನಂಬರ್ ಜೆರ್ಸಿಯ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.

ಎಂ.ಎಸ್​ ಧೋನಿ

ಎಂ.ಎಸ್​ ಧೋನಿ

  • Share this:
ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ ಸರಿ ಸುಮಾರು 2 ವರ್ಷಗಳೇ ಆಗಿವೆ. ಆದರೂ ಈವರೆಗೂ ಅವರಿಗೆ ಅಭಿಮಾನಿಗಳ ಸಂಖ್ಯೆ ಹಾಗೆಯೇ ಇದೆ. ಧೋನಿ ಸದ್ಯ ಐಪಿಎಲ್‌ನಲ್ಲಿ (IPL) ಮಾತ್ರ ಆಡುತ್ತಿದ್ದಾರೆ. ಅವರ ಬ್ರಾಂಡ್​ ವ್ಯಾಲ್ಯೂ ಇನ್ನೂ ಸಹ ಮೊದಲಿನ ಹಾಗೆಯೇ ಉಳಿದಿದೆ ಎಂದರೂ ತಪ್ಪಾಗಲಾರದು. ಇನ್ನು, ಧೋನಿ ಕ್ರಿಕೆಟ್ ಲೋಕಕ್ಕೆ ಪಾದಾರ್ಪಣೆ ಮಾಡಿದಾಗಿಂದಲೂ ಅವರ ಜರ್ಸಿ ನಂಬರ್ ಕೇವಲ ಒಂದೇ ಆಗಿದೆ. 7 ನಂಬರ್ (Number 7)​ ಜರ್ಸಿಯಲ್ಲಿ ಅವರು ಅಂತಾರಾಷ್ಟ್ರೀಯ ಮತ್ತು ಐಪಿಎಲ್ ಪಂದ್ಯಗಳಲ್ಲಿ ಕಣಕ್ಕಿಳಿಯುತ್ತಾರೆ. ಅವರ ಯಶಸ್ಸಿನ ಹಿಂದೆ ಈ ಜರ್ಸಿಯ 7 ಎಂಬ ನಂಬರ್ ಇದೆ, 7 ಎಂಬ ನಂಬರ್ ಧೋನಿಗೆ ಲಕ್ಕಿ ನಂಬರ್ ಎಂದೆಲ್ಲಾ ಅವರ ಅಭಿಮಾನಿಗಳು ಹೇಳುವುದನ್ನು ನಾವು ಕೇಳುತ್ತಿರುತ್ತೇವೆ. ಆದರೆ ಮಹೇಂದ್ರ ಸಿಂಗ್ ಧೋನಿ ಮತ್ತು 7 ನೇ ಸಂಖ್ಯೆಯ ಜೆರ್ಸಿ (Jersey) ನಿಕಟ ಸಂಬಂಧವನ್ನು ಹೊಂದಿದೆ ಎಂದು ಸ್ವತಃ ಧೋನಿಯೇ ತಿಳಿಸಿದ್ದಾರೆ.

7 ನೇ ನಂಬರ್ ಜೆರ್ಸಿಯ ರಹಸ್ಯವನ್ನು ಬಹಿರಂಗ:

ಭಾರತದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ಧೋನಿ, ಐಪಿಎಲ್ 15ನೇ ಸೀಸನ್‌ಗೂ ಮುನ್ನ ತಮ್ಮ 7 ನೇ ನಂಬರ್ ಜೆರ್ಸಿಯ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ಹೌದು, 7ನೇ ನಂಬರ್ ಧೋನಿಗೆ ಅದೃಷ್ಟ ಎಂದು ಪರಿಗಣಿಸಲಾಗಿದೆ. ಆದರೆ, ಇದು ನಿಜವಲ್ಲ. ಕಾರ್ಯಕ್ರಮವೊಂದರಲ್ಲಿ ಧೋನಿ ಈ ವಿಷಯವನ್ನು ಬಹಿರಂಗಪಡಿಸಿದ್ದು, ನಾನು ಈ ಸಂಖ್ಯೆಯನ್ನು ಸುಲಭವಾಗಿ ಆಯ್ಕೆ ಮಾಡಿಕೊಂಡೆ ಎಂದು ಧೋನಿ ಹೇಳಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಒಡೆತನದ ಇಂಡಿಯಾ ಸಿಮೆಂಟ್ಸ್ ಸಮಾರಂಭದಲ್ಲಿ ಮಾತನಾಡಿದ ಧೋನಿ, 7 ನನ್ನ ಅದೃಷ್ಟ ಸಂಖ್ಯೆ ಎಂದು ಹಲವರು ಭಾವಿಸಿದ್ದರು. ಆದರೆ ಯಾವುದೇ ವಿಶೇಷ ಕಾರಣದಿಂದ ನಾನು ಈ ಜೆರ್ಸಿಯನ್ನು ಆಯ್ಕೆ ಮಾಡಿಲ್ಲ. ನಾನು ಜುಲೈ 7 ರಂದು ಜನಿಸಿದೆ. ಜೊತೆಗೆ 7ನೇ ತಿಂಗಳ 7ನೇ ದಿನ ಅದು. ಹೀಗಾಗಿ ನಾನು ಈ ಜೆರ್ಸಿ ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡೆ ಎಂದು 7ರ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: IPL ಇದ್ರೆ ಮನೋರಂಜನೆಗೆ ತೊಂದ್ರೆ ಇಲ್ಲಾ ಅಂತಿದ್ದಾರೆ Dhoni, ಇಂಥಾ ನಾಟಕ ಈಗಾ ನಾರ್ಮಲ್ ಅಂತೆ

ಕೊಲ್ಕತ್ತಾ ವಿರುದ್ಧ ಮೊದಲ ಪಂದ್ಯ:

ಐಪಿಎಲ್ 2022ರ 15ನೇ ಸೀಸನ್​ ಇದೇ ಮಾರ್ಚ್ 26ರಿಂದ ಪ್ರಾರಂಭವಾಗಲಿದೆ. ಐಪಿಎಲ್ 15ನೇ ಸೀಸನ್​ನಲ್ಲಿ ಮೊದಲ ಪಂದ್ಯದಲ್ಲಿ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೊಲ್ಕತ್ತಾ ನೈಟ್​ ರೈಡರ್ಸ್ ವಿರುದ್ಧ ಸೆಣಸಾಡಲಿದೆ. ಕಳೆದ ಬಾರಿ ಚಾಂಪಿಯನ್ ಆಗಿದ್ದಂತಹ ಚೆನ್ನೈ  ತಂಡ ಈ ಬಾರಿಯೂ ಟ್ರೋಫಿ ಗೆಲ್ಲುವ ಮೆಚ್ಚಿನ ತಂಡಗಳಲ್ಲಿ ಒಂದಾಗಿದೆ.

'ಅಥರ್ವ ದಿ ಒರಿಜಿನ್' ಗ್ರಾಫಿಕ್ಸ್ ಕಾದಂಬರಿಯಲ್ಲಿ ನಾಯಕನಾದ ಧೋನಿ:

'ಅಥರ್ವ ದಿ ಒರಿಜಿನ್' ಎಂಬ ಗ್ರಾಫಿಕ್ಸ್ ಕಾದಂಬರಿಗಾಗಿ ಧೋನಿ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಬಿಡುಗಡೆ ಆದ ಆನಿಮೇಟಡ್ ಚಿತ್ರಕ್ಕೆ ಸಮೀಪ ಇರುವ ಈಗ ಕಾದಂಬರಿಯಲ್ಲಿ ಎಂಎಸ್ ಧೋನಿ ನಾಯಕ ಅಥರ್ವನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಧೋನಿ ಅಭಿಮಾನಿಗಳಲ್ಲಿ ಈ ವರ್ಷದ ಡಬಲ್ ಸಂತಸವನ್ನು ನೀಡಿದೆ.

ಇದನ್ನೂ ಓದಿ: IPL 2022: ಈ ಬಾರಿ ಐಪಿಎಲ್​ ಕಣಕ್ಕಿಳಿಯಲಿರುವ ಟಾಪ್ ಹಿರಿಯ ಆಟಗಾರರು..!

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ವಿವರ:

ಎಂಎಸ್ ಧೋನಿ (ನಾಯಕ/ವಿಕೆಟ್‌ಕೀಪರ್‌), ಮೊಯಿನ್ ಅಲಿ, ಋತುರಾಜ್ ಗಾಯಕ್ವಾಡ್, ರವೀಂದ್ರ ಜಡೇಜಾ, ಅಂಬಾಟಿ ರಾಯುಡು, ಡ್ವೇನ್ ಬ್ರಾವೋ, ರಾಬಿನ್ ಉತ್ತಪ್ಪ, ದೀಪಕ್ ಚಹರ್, ಕೆ.ಎಂ ಆಸಿಫ್, ತುಷಾರ್ ದೇಶಪಾಂಡೆ, ಶಿವಂ ದುಬೆ, ಮಹೀಶ್ ತೀಕ್ಷಣ, ರಾಜವರ್ಧನ್ ಹಂಗರ್ಗೇಕರ್, ಸಿಮರ್ಜೀತ್ ಸಿಂಗ್, ಡೆವೊನ್ ಕಾನ್ವೇ, ಡ್ವೇನ್‌ ಪ್ರೆಟೋರಿಯಸ್‌, ಮಿಚೆಲ್‌ ಸ್ಯಾಂಟ್ನರ್‌, ಆಡಮ್ ಮಿಲ್ನ್, ಸುಭ್ರಾಂಶು ಸೇನಾಪತಿ, ಮುಖೇಶ್ ಚೌಧರಿ, ಪ್ರಶಾಂತ್ ಸೋಲಂಕಿ, ಸಿ ಹರಿ ನಿಶಾಂತ್, ಎನ್ ಜಗದೀಸನ್, ಕ್ರಿಸ್ ಜಾರ್ಡನ್, ಕೆ ಭಗತ್ ವರ್ಮಾ.
Published by:shrikrishna bhat
First published: