IPL 2022: ಐಪಿಎಲ್​ ಇತಿಹಾಸದಲ್ಲೇ ಹೆಚ್ಚಿನ ಗೆಲುವು ದಾಖಲಿಸಿದ ಟಾಪ್​ 4 ತಂಡಗಳು ಇವು.. ಆರ್​​ಸಿಬಿನೂ ಇದೇ ರೀ!

65 ದಿನಗಳ ಅವಧಿಯಲ್ಲಿ ಒಟ್ಟು 70 ಲೀಗ್ ಪಂದ್ಯಗಳು ಮತ್ತು 4 ಪ್ಲೇಆಫ್ ಪಂದ್ಯಗಳನ್ನು ನಡೆಯಲಿದೆ. ಈ ಬಾರಿಯ ಟೂರ್ನಿಯಲ್ಲಿ ಹತ್ತು ತಂಡಗಳು ಕಣಕ್ಕಿಳಿದಿದ್ದು ಟೂರ್ನಿಯ ಕುತೂಹಲವನ್ನು ಹೆಚ್ಚಿಸಿದೆ. ಈ ಟೂರ್ನಿಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು(Fans) ಕೂಡ ಸಜ್ಜಾಗುತ್ತಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇಂಡಿಯನ್ ಪ್ರೀಮಿಯರ್ ಲೀಗ್(Indian Premier League) 15ನೇ ಆವೃತ್ತಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಅಭಿಮಾನಿಗಳಲ್ಲಿ ಈಗಾಗಲೇ ಐಪಿಎಲ್ 2022 (IPL 2022) ಫೀವರ್ ಶುರುವಾಗಿದೆ. ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (CSK vs KKR) ತಂಡ ಮಾರ್ಚ್ 26ರ ಮೊದಲ ಪಂದ್ಯದಲ್ಲಿ ಮುಖಾಮುಖಿ ಆಗಲಿದೆ. 65 ದಿನಗಳ ಅವಧಿಯಲ್ಲಿ ಒಟ್ಟು 70 ಲೀಗ್ ಪಂದ್ಯಗಳು ಮತ್ತು 4 ಪ್ಲೇಆಫ್ ಪಂದ್ಯಗಳನ್ನು ನಡೆಯಲಿದೆ. ಈ ಬಾರಿಯ ಟೂರ್ನಿಯಲ್ಲಿ ಹತ್ತು ತಂಡಗಳು ಕಣಕ್ಕಿಳಿದಿದ್ದು ಟೂರ್ನಿಯ ಕುತೂಹಲವನ್ನು ಹೆಚ್ಚಿಸಿದೆ. ಈ ಟೂರ್ನಿಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು(Fans) ಕೂಡ ಸಜ್ಜಾಗುತ್ತಿದ್ದಾರೆ. ಐಪಿಎಲ್ ಇತಿಹಾಸ(IPL History)ವನ್ನು ನೋಡಿದೆ,  ಅತೀ ಬಲಿಷ್ಠ ತಂಡವಾಗಿ ರೋಹಿತ್ ಶರ್ಮಾ(Rohit Sharma) ನಾಯಕತ್ವದ ಮುಂಬೈ ಇಂಡಿಯನ್ಸ್(Mumbai Indians) ಕಾಣಿಸುತ್ತದೆ.

ಹೆಚ್ಚಿನ ಗೆಲುವು ದಾಖಲಿಸಿದ ತಂಡಗಳು

ಮುಂಬೈ ಇಂಡಿಯನ್ಸ್​​ ಒಟ್ಟಾರೆ 5 ಐಪಿಎಲ್ ಟ್ರೋಫಿಗಳನ್ನು ಗೆದ್ದಿದೆ. ಅದು ಬಿಟ್ಟರೆ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್‌ 4 ಬಾರಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ. ಐಪಿಎಲ್‌ನಲ್ಲಿ ಅತೀ ಹೆಚ್ಚು ಗೆಲುವುಗಳ ದಾಖಲೆಯಿರುವ ತಂಡಗಳನ್ನು ನೋಡಿದಾಗಲೂ,  ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಅಗ್ರ ಸ್ಥಾನವನ್ನು ಪಡೆಯುತ್ತದೆ. ಕುತೂಹಲಕಾರಿ ಅಂಶವೆಂದರೆ ಒಂದು ಬಾರಿಯೂ ಟ್ರೋಫಿಯೇ ಗೆಲ್ಲದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಈ ಟಾಪ್ 4 ಪಟ್ಟಿಯಲ್ಲಿದೆ.

ಮುಂಬೈ ಇಂಡಿಯನ್ಸ್​ (ರೋಹಿತ್ ಶರ್ಮಾ ಕ್ಯಾಪ್ಟನ್​)

ಮುಂಬೈ ಇಂಡಿಯನ್ಸ್ ಐಪಿಎಲ್‌ನಲ್ಲಿ 2008- 2021ರ ಆವೃತ್ತಿಯವರೆಗೆ ಒಟ್ಟು 217 ಪಂದ್ಯಗಳನ್ನು ಆಡಿದೆ. ಇದರಲ್ಲಿ 125 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು 88 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. 4 ಪಂದ್ಯಗಳು ಟೈ ಆಗಿದೆ. ಹಾಗಾಗಿ ಮುಂಬೈ ಇಂಡಿಯನ್ಸ್ ತಾನು ಆಡಿದ ಪಂದ್ಯಗಳ ಪೈಕಿ 57.6 ಪ್ರತಿಶತ ಪಂದ್ಯಗಳನ್ನು ಗೆದ್ದು ಕೊಂಡಂತಾಗಿದೆ.

ಇದನ್ನೂ ಓದಿ: MS Dhoni ಒಳ್ಳೆಯ ಕ್ಯಾಪ್ಟನ್​ ಅಲ್ಲ ಎಂದ್ರಾ ಗಂಭೀರ್​? ನಿನ್​ಗ್ಯಾಕ್​ ಬೇಕ್​ ಗುರೂ ಕಾಮೆಂಟರಿ ಮಾಡ್ಕೊಂಡು ಇರು ಎಂದ ಫ್ಯಾನ್ಸ್​!

2ನೇ ಸ್ಥಾನದಲ್ಲಿ ಚೆನ್ನೈ ಸೂಪರ್​ ಕಿಂಗ್​

ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್‌ನಲ್ಲಿ ಎರಡನೇ ಅತ್ಯಂತ ಯಶಸ್ವೀ ತಂಡ ಎನಿಸಿಕೊಂಡಿದೆ. ಈವರೆಗೆ 195 ಪಂದ್ಯಗಳನ್ನು ಆಡಿರುವ ಚೆನ್ನೈ ಸೂಪರ್ ಕಿಂಗ್ಸ್ 117 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 76 ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದು ಒಂದು ಪಂದ್ಯದಲ್ಲಿ ಟೈ ಫಲಿತಾಂಶ ಪಡೆದುಕೊಂಡಿದೆ.

3ನೇ ಸ್ಥಾನದಲ್ಲಿದೆ ಕೊಲ್ಕತ್ತ ನೈಟ್​ ರೈಡರ್ಸ್!

ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಮೂರನೇ ಸ್ಥಾನದಲ್ಲಿದೆ. ಕಳೆದ ಆವೃತ್ತಿಯಲ್ಲಿ ರನ್ನರ್‌ಅಪ್ ತಂಡವಾಗಿರುವ ಕೆಕೆಆರ್ ಈ ಬಾರಿ ಹೊಸ ನಾಯಕನ ಮುಂದಾಳತ್ವದಲ್ಲಿ ಮುನ್ನಡೆಯಲಿದೆ. ಐಪಿಎಲ್‌ನಲ್ಲಿ ಈವರೆಗೆ 212 ಪಂದ್ಯಗಳನ್ನಾಡಿರುವ ಕೆಕೆಆರ್ 107 ಗೆಲುವು ಸಾಧಿಸಿ ಈ ಸಾಧನೆ ಮಾಡಿದೆ. 98 ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದರೆ ನಾಲ್ಕು ಪಂದ್ಯಗಳಲ್ಲಿ ಟೈ ಕಂಡಿದೆ.

ಇದನ್ನೂ ಓದಿ: ಗೀಟ್ ಎಳೆದಾಯ್ತು-ಗ್ರೌಂಡ್​ಗೆ ಇಳಿದಾಯ್ತು, ಈ ಸಲ ಕಪ್​ ಆರ್​ಸಿಬಿದೆ! ಏನೆಲ್ಲಾ ಸ್ಟ್ಯಾಟರ್ಜಿ ಮಾಡಿಕೊಂಡಿದ್ದಾರೆ ನೋಡಿ..

ನಾಲ್ಕನೇ ಸ್ಥಾನದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು!

ಇಲ್ಲಿಯವರೆಗೂ ಐಪಿಎಲ್​ ಕಪ್​ ಗೆಲ್ಲದಿದ್ದರೂ, ಆರ್​ಸಿಬಿ ತಂಡ ಹೆಚ್ಚು ಪಂದ್ಯಗಳನ್ನು ಗೆದ್ದ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಆರ್‌ಸಿಬಿ ತಂಡ ಐಪಿಎಲ್‌ನಲ್ಲಿ ಈವರೆಗೆ 212 ಪಂದ್ಯಗಳನ್ನು ಆಡಿದ್ದು 98 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 106 ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದು 3 ಟೈ ಪಂದ್ಯಗಳನ್ನು ಕಂಡಿದೆ.

ಅಭ್ಯಾಸ ಆರಂಭಿಸಿದ ಆರ್​ಸಿಬಿ ಆಟಗಾರರು!

ಮಾರ್ಚ್ 27 ರಂದು ರಾಯಲ್ ಚಾಲೆಂಜರ್ಸ್​ ಬೆಂಗಳೂರು (Royal Challengers Bangalore) ತಂಡ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಶುರು ಮಾಡಲಿದೆ. ಈಗಾಗಲೇ ಎಲ್ಲ ತಂಡಯಗಳು ಅಭ್ಯಾಸವನ್ನು ಶುರು ಮಾಡಿದೆ.ಇತ್ತ ಆರ್​ಸಿಬಿ ವಿಚಾರಕ್ಕೆ ಬಂದರೆ,  ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ನಾಯಕರುಗಳ ರೇಸ್​ನಲ್ಲಿ ಫಾಫ್ ಡು ಪ್ಲೆಸಿಸ್​ ಜೊತೆಗೆ ದಿನೇಶ್ ಕಾರ್ತಿಕ್ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಅವರ ಹೆಸರುಗಳಿತ್ತು. ಅಂತಿಮವಾಗಿ ಆರ್​ಸಿಬಿ ತಂಡವು ಫಾಫ್ ಡುಪ್ಲೆಸಿಸ್​ಗೆ ಮಣೆಹಾಕಿದೆ. ಇದೀಗ ಆಟಗಾರರು ಗ್ರೌಂಡ್​ಗೆ ಇಳಿದು ಅಭ್ಯಾಸ ನಡೆಸುತ್ತಿದ್ದಾರೆ.
Published by:Vasudeva M
First published: