IPL 2022: ಕೊನೆಗೂ ವಿಸಾ ಪಡೆದು ಭಾರತಕ್ಕೆ ಬಂದ ಮೊಯಿನ್​ ಆಲಿ.. ಆದ್ರೂ ಚೆನ್ನೈ ಸೂಪರ್​ ಕಿಂಗ್ಸ್​​ಗಿಲ್ಲ ಖುಷಿ!

ಇಂಗ್ಲೆಂಡ್ ಕ್ರಿಕೆಟಿಗ ಮೊಯೀನ್ ಅಲಿ ಗುರುವಾರ ಮುಂಬೈನಲ್ಲಿ ಬಂದಿಳಿದಿದ್ದಾರೆ ಆದರೆ ಮೂರು ದಿನಗಳ ಕಡ್ಡಾಯ ಕ್ವಾರಂಟೈನ್ ಪೂರೈಸಬೇಕಿರುವ ಕಾರಣ ಮೊಯೀನ್ ಅಲಿ ಶನಿವಾರ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ನಡೆಯಲಿರುವ ಈ ಟೂರ್ನಿಯ ಉದ್ಘಾಟನಾ ಪಂದ್ಯಕ್ಕೆ ಲಭ್ಯವಾಗುವ ಸಾಧ್ಯತೆಯಿಲ್ಲ

ಮೊಯಿನ್​ ಅಲಿ

ಮೊಯಿನ್​ ಅಲಿ

  • Share this:
ಚೆನ್ನೈ(Chennai) ತಂಡದಿಂದ ಬಹುದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಹೌದು, ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ನಾಯಕತ್ವಕ್ಕೆ ಮಹೇಂದ್ರ ಸಿಂಗ್ ಧೋನಿ (M.S Dhoni) ರಾಜೀನಾಮೆ ನೀಡಿದ್ದಾರೆ. ಅವರ ಬದಲಿಗೆ ಈಗ ರವೀಂದ್ರ ಜಡೇಜಾ (Ravindra Jadeja) ಸಿಎಸ್​ಕೆ ತಂಡದ ನಾಯಕತ್ವವಹಿಸಿಕೊಳ್ಳಲಿದ್ದಾರೆ ಎಂದು ಅಧಿಕೃತವಾಗಿ ಚೆನ್ನೈ ಪ್ರಾಂಚೈಸಿ ತಿಳಿಸಿದೆ. ಇದರ ಜೊತೆಗೆ ಟೂರ್ನಿ ಆರಂಭಕ್ಕೂ ಮೊದಲೇ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಟೈಮ್​ ಸರಿಗಿಲ್ಲ ಅನ್ನಿಸುತ್ತೆ. ಅತ್ತ ವಿಸಾ ಸಿಗದೇ ಮೊಯಿನ್ ಅಲಿ(Moeen Ali) ಪರದಾಡುತ್ತಿದ್ದರೆ. ಇತ್ತ ದೀಪಕ್​ ಚಹಾರ್(Deepak Chahar)​​ ಗಾಯದ ಸಮಸ್ಯೆಯಿಂದ ಆಸ್ಪತ್ರೆ ಸೇರಿದ್ದರು. ಇದೀಗ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಕಡೆಗೂ ನಿಟ್ಟುಸಿರುವ ಬಿಡುವಂತಾ ಸುದ್ದಿ ಲಭ್ಯವಾಗಿದೆ. ಈ ಬಾರಿಯ ಟೂರ್ನಿಯಲ್ಲಿ ಭಾಗಿಯಾಗಲು ಸಜ್ಜಾಗಿದ್ದ ಮೊಯೀನ್ ಅಲಿ ವೀಸಾ(Visa) ಸಮಸ್ಯೆಯ ಕಾರಣದಿಂದಾಗಿ ಭಾರತಕ್ಕೆ ಪ್ರಯಾಣಿಸಲು ಸಾಧ್ಯವಾಗಿರಲಿಲ್ಲ. ಇದೀಗ ವೀಸಾ ಸಮಸ್ಯೆ ಬಗೆಹರಿದಿದ್ದು ಮೊಯಿನ್​ ಅಲಿ ಭಾರತಕ್ಕೆ ಪ್ರಯಾಣಿಸಲು ಅನುಮತಿ ದೊರೆತಂತಾಗಿದೆ. 

ಭಾರತಕ್ಕೆ ಬಂದ್ರೂ ಮ್ಯಾಚ್​ ಆಡಲ್ಲ ಮೊಯಿನ್​ ಅಲಿ!

ಇಂಗ್ಲೆಂಡ್ ಕ್ರಿಕೆಟಿಗ ಮೊಯೀನ್ ಅಲಿ ಗುರುವಾರ ಮುಂಬೈನಲ್ಲಿ ಬಂದಿಳಿದಿದ್ದಾರೆ ಆದರೆ ಮೂರು ದಿನಗಳ ಕಡ್ಡಾಯ ಕ್ವಾರಂಟೈನ್ ಪೂರೈಸಬೇಕಿರುವ ಕಾರಣ ಮೊಯೀನ್ ಅಲಿ ಶನಿವಾರ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ನಡೆಯಲಿರುವ ಈ ಟೂರ್ನಿಯ ಉದ್ಘಾಟನಾ ಪಂದ್ಯಕ್ಕೆ ಲಭ್ಯವಾಗುವ ಸಾಧ್ಯತೆಯಿಲ್ಲ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ 2ನೇ ಪಂದ್ಯಕ್ಕೆ ಲಭ್ಯವಾಗಲಿದ್ದಾರೆ. ಏಪ್ರಿಲ್​ 2ರಂದು ನಡೆಯಲಿರುವ ಚೆನ್ನೈ ಸೂಪರ್​ ಕಿಂಗ್ಸ್​ ಪಂದ್ಯದಲ್ಲಿ ಮೊಯಿನ್ ಆಡಲಿದ್ದಾರೆ.

ಮೊಯಿನ್​ ಅಲಿ ಬಂದ್ರೂ ಸಿಎಸ್​ಕೆ ಖುಷಿ ಇಲ್ಲ!

ಟೂರ್ನಿ ಆರಂಭಕ್ಕೂ ಮೊದಲೇ ಸಿಎಸ್​ಕೆ ಸಾಕಷ್ಟು ಸಮಸ್ಯೆ ಎದುರಾಗಿದೆ. ಈಗ ಧೋನಿ ಬೇರೆ ರಾಜೀನಾಮೆ ಕೊಟ್ಟಿರುವುದು ಚೆನ್ನೈ ಸೂಪರ್​ ಕಿಂಗ್ಸ್​​ ಅಭಿಮಾನಿಗಳಿಗೆ ಭಾರಿ ಬೇಸರ ಮೂಡಿಸಿದೆ. ಇದರ ಜೊತೆಗೆ ನೆಚ್ಚಿನ ಆಟಗಾರರು ಅಲಭ್ಯರಾಗಿರುವುದು ಇನ್ನೂ ಬೇಜಾರಾಗಿದೆ. ಪಾಕಿಸ್ತಾನಿ ಮೂಲದ ಆಟಗಾರರಿಗೆ ಪ್ರತ್ಯೇಕ ವಿಧಾನವನ್ನು ಅನುಸರಿಸುತ್ತಿರುವ ಕಾರಣದಿಂದಾಗಿ ವೀಸಾ ಪ್ರಕ್ರಿಯೆಯಲ್ಲಿ ವಿಳಂಬವಾಗಿದೆ ಎನ್ನಲಾಗಿದೆ. ಮೊಯೀನ್ ಅಲಿ ಅವರ ಅಜ್ಜ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಇಂಗ್ಲೆಂಡ್‌ಗೆ ವಲಸೆ ಬಂದವರಾಗಿದ್ದಾರೆ.

ಇದನ್ನೂ ಓದಿ: ಈ ಬಾರಿ ಕಪ್​ ಗೆಲ್ಲೋದು ಮುಂಬೈ, ಚೆನ್ನೈ ಅಲ್ವಂತೆ, ಗವಾಸ್ಕರ್ ನೀಡಿದ್ರು ಶಾಕಿಂಗ್ ಆನ್ಸರ್..!

8 ಕೋಟಿಗೆ ಚೆನ್ನೈ ಪಾಲಾಗಿದ್ದ ಮೊಯಿನ್ ಅಲಿ!

ಎಡಗೈ ಆಕ್ರಮಣಕಾರಿ ಬ್ಯಾಟ್ಸ್‌ಮನ್ ಮತ್ತು ಬಲಗೈ ಆಫ್ ಸ್ಪಿನ್ನರ್ ಮೊಯಿನ್ ಅಲಿ ತಮ್ಮ ಆಲ್‌ರೌಂಡ್ ಪ್ರದರ್ಶನದೊಂದಿಗೆ ಚೆನ್ನೈ ನಾಲ್ಕನೇ ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.  ಕಳೆದ ವರ್ಷದ ಹರಾಜಿನಲ್ಲಿ ಮೊಯಿನ್ ಅಲಿ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಖರೀದಿಸಿತ್ತು. ಈ ಇಂಗ್ಲೆಂಡ್ ಆಲ್ರೌಂಡರ್ ಅನ್ನು ರೂ 8 ಕೋಟಿಗೆ ತನ್ನಲ್ಲೇ ಉಳಿಸಿಕೊಂಡಿತ್ತು. ಇದೀಗ ಆದಷ್ಟು ಬೇಗ ಅವರು ತಂಡವನ್ನು ಸೇರಿಕೊಳ್ಳುಲಿದ್ದಾರೆ ಎಂದು ಚೆನ್ನೈ ಮ್ಯಾನೆಂಜ್​ಮೆಂಟ್ ತಿಳಿಸಿದೆ.

ಇದನ್ನೂ ಓದಿ: ನಾಯಕತ್ವಕ್ಕೆ ರಾಜೀನಾಮೆ ನೀಡಿದ ಧೋನಿ, ಚೆನ್ನೈ ತಂಡದ ಹೊಸ ಕ್ಯಾಪ್ಟನ್ ಯಾರು?

ಕಳೆದ ಸೀಸನ್​ನಲ್ಲಿ ಮಿಂಚಿದ್ದ ಮೊಯಿನ್​ ಅಲಿ!

ಕಳೆದ ವರ್ಷದ ಐಪಿಎಲ್ ಟೂರ್ನಿಯಲ್ಲಿ 15 ಪಂದ್ಯಗಳಲ್ಲಿ ಆಡಿದ್ದ ಮೊಯೀನ್ ಅಲಿ 357 ರನ್‌ಗಳನ್ನು ಗಳಿಸಿದ್ದರು. ಇನ್ನು ಬೌಲಿಂಗ್‌ನಲ್ಲಿಯೂ ಮಿಂಚಿದ್ದ ಅಲಿ 6 ವಿಕೆಟ್ ಪಡೆದಿದ್ದಾರೆ.
Published by:Vasudeva M
First published: