IPL 2022 MI vs SRH: ಉಮ್ರಾನ್ ಮಲಿಕ್ ವೇಗಕ್ಕೆ ಬೆಚ್ಚಿದ ಮುಂಬೈ, ರೋಚಕ ಗೆಲುವು ದಾಖಲಿಸಿದ ಹೈದರಾಬಾದ್

ಸನ್ ರೈಸರ್ಸ್ ಹೈದರಾಬಾದ್ ತಂಡವು ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 193 ರನ್ ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಮೊತ್ತ ಬೆನ್ನಟ್ಟಿದ ಮುಂಬೈ ತಂಡವು ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 190 ರನ್ ಗಳಿಸುವ ಮೂಲಕ 3 ರನ್​ ಗಳಿಂದ ಸೋಲನ್ನು ಅನುಭವಿಸಿತು.

ಹೈದರಾಬಾದ್ ತಂಡಕ್ಕೆ ಗೆಲುವು

ಹೈದರಾಬಾದ್ ತಂಡಕ್ಕೆ ಗೆಲುವು

  • Share this:
ಐಪಿಎಲ್ 2022ರ (IPL 2022) 15ನೇ ಆವೃತ್ತಿಯ 65ನೇ ಪಂದ್ಯದಲ್ಲಿ ಇಂದು ಮುಂಬೈನ ವಾಂಖೆಡೆ ಮೈದಾನದಲ್ಲಿ ಸನ್ ರೈಸರ್ಸ್ ಹೈದರಾಬಾದ್ (SRH) ಮತ್ತು ಮುಂಬೈ ಇಂಡಿಯನ್ಸ್ (MI) ತಂಡಗಳು ಸೆಣಸಾಡಿದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಮೊದಲು ಬೌಲಿಂಗ್ ಆಯ್ದುಕೊಂಡರು. ಈ ಮೂಲಕ ಮೊದಲು ಬ್ಯಾಟಿಂಗ್ ಮಾಡಿದ ಕೇನ್ ವಿಲಿಯಂಸನ್ ನೇತೃತ್ವದ ಸನ್ ರೈಸರ್ಸ್ ಹೈದರಾಬಾದ್ ತಂಡವು ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 193 ರನ್ ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಮೊತ್ತ ಬೆನ್ನಟ್ಟಿದ ಮುಂಬೈ ತಂಡವು ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 190 ರನ್ ಗಳಿಸುವ ಮೂಲಕ 3 ರನ್​ ಗಳಿಂದ ಸೋಲನ್ನು ಅನುಭವಿಸಿತು.

ಅಬ್ಬರಿಸಿದ ರಾಹುಲ್ ತ್ರಿಪಾಠಿ:

ಇನ್ನು, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೇನ್ ವಿಲಿಯಂಸನ್ ನೇತೃತ್ವದ ಸನ್ ರೈಸರ್ಸ್ ಹೈದರಾಬಾದ್ ತಂಡವು ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 193 ರನ್ ಗಳ ಬೃಹತ್ ಮೊತ್ತ ಕಲೆಹಾಕಿತು. ಹೈದರಾಬದ್ ಪರ ರಾಹುಲ್ ತ್ರಿಪಾಠಿ 44 ಎಸೆತದಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್ ಗಳ ನೆರವಿನಿಂದ ಬರೋ್ಬಬರಿ 756 ರನ್ ಗಳಿಸಿ ಮಿಂಚಿದರು. ಉಳಿದಂತೆ ಅಭಿಷೇಕ್ ಶರ್ಮಾ 9 ರನ್, ಪ್ರಿಯಂ ಗಾರ್ಗ್ 42 ರನ್, ನಿಕೊಲೋಸ್ ಪೂರನ್ 38 ರನ್, ಆ್ಯಡಂ ಮಾರ್ಕ್ರಮ್ 2 ರನ್, ನಾಯಕ ಕೇನ್ ವಿಲಿಯಂ ಸನ್ 8 ರನ್ ಮತ್ತು ವಾಶಿಂಗ್ಟನ್ ಸುಂದರ್ 9 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸುವಲ್ಲಿ ಸಹಾಯಕರಾದರು.

ರಮಣದೀಪ್ ಸಿಂಗ್ ಉತ್ತಮ ಬೌಲಿಂಗ್:

ಟಾಸ್ ಗೆದ್ದು ಬೌಲಿಂಗ್ ಮಾಡಿದ ಮುಂಬೈ ತಂಡವು ಯಾವುದೇ ಹಂತದಲ್ಲಿಯೂ ಹೈದರಾಬಾಧ್ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಲಿಲ್ಲ. ಆದರೂ ಮುಂಬೈ ಪರ ರಮಣದೀಪ್ ಸಿಂಗ್ 3 ಓವರ್ ಮಾಡಿ 20 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಡೇನಿಯಲ್ ಸ್ಯಾಮ್ಸ್, ಮೇರಿಡಿತ್ ಮತ್ತು ಬೂಮ್ರಾ ತಲಾ 1 ವಿಕೆಟ್ ಪಡೆಯಲಷ್ಟೇ ಶಕ್ತರಾದರು. ಹೀಗಾಗಿ ಹೈದರಾಬಾದ್ ಬೃಹತ್ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಯಿತು.

ಇದನ್ನೂ ಓದಿ: Shikhar Dhawan: ಬಾಲಿವುಡ್​ಗೆ ಎಂಟ್ರಿ ನೀಡಲಿದ್ದಾರೆ ಗಬ್ಬರ್ ಸಿಂಗ್, ಈ ವರ್ಷವೇ ಫಿಲ್ಮ್ ಬಿಡುಗಡೆಯಂತೆ

ಚೇಸಿಂಗ್​ನಲ್ಲಿ ವಿಫಲಗೊಂಡ ಮುಂಬೈ:

ಇನ್ನು, ಹಯದರಾಬಾದ್ ತಂಡ ನೀಡಿದ 193 ರನ್ ಟಾರ್ಗೇಟ್ ಬೆನ್ನಟ್ಟಿದ ಮುಂಬೈ ಇಂಡಿಯುನ್ಸ್ ತಂಡದ ಪರ ನಾಯಕ ರೋಹಿತ್ ಶರ್ಮಾ 36 ಎಸೆತದಲ್ಲಿ 48 ರನ್ ಮತ್ತು ಇಶಾನ್ ಕಿಶನ್ 34 ಎಸೆತದಲ್ಲಿ 43 ರನ್ ಗಳಿಸುವ ಮೂಲಕ ಉತ್ತಮ ಆರಂಭ ಒದಗಿಸಿದರು. ನಂತರದಲ್ಲಿ ಡೇನಿಯಲ್ ಸ್ಯಾಮ್ಸ್ 15 ರನ್, ತಿಲಕ್ ವರ್ಮಾ 8 ರನ್ , ಟಿಂ ಡೇವಿಡ್18 ಎಸೆತದಲ್ಲಿ 46 ರನ್ ಹಾಘೂ ಕೊನೆಯಲ್ಲಿ ರಮಣದೀಪ್ ಸಿಂಗ್ 6 ಎಸೆತದಲ್ಲಿ 14 ರನ್ ಗಳಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಆಗಲಿಲ್ಲ.

 ಇದನ್ನೂ ಓದಿ: IPL 2022 SRH vs MI: ಹೈದರಾಬಾದ್ ತಂಡಕ್ಕೆ ಮುಂಬೈ ಸವಾಲ್, ಹೇಗಿರಲಿದೆ ಉಭಯ ತಂಡಗಳ ಪ್ಲೇಯಿಂಗ್ 11

ಉಮ್ರಾನ್ ಮಲಿಕ್ ವೇಗ್ಕಕೆ ಬೆಚ್ಚಿದ ಮುಂಬೈ:

ಇನ್ನು, ಹೈದರಾಬಾದ್ ಪರ ಉಮ್ರಾನ್ ಮಲಿಕ್ ಅದ್ಭುತ್ ಸ್ಪೆಲ್ ಮಾಡಿದ್ದು, 3 ಓವರ್ ಮಾಡಿ 23 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದು ಮೀಮಚಿದರು. ಉಳಿದಂತೆ ಭುವನೇಶ್ವರ್ ಕುಮಾರ್ ಮತ್ತು ವಾಶಿಂಗ್ ಟನ್ ಸುಂದರ್ ತಲಾ ಒಂದು ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
Published by:shrikrishna bhat
First published: