IPL 2022 SRH vs MI: ಹೈದರಾಬಾದ್ ತಂಡಕ್ಕೆ ಮುಂಬೈ ಸವಾಲ್, ಹೇಗಿರಲಿದೆ ಉಭಯ ತಂಡಗಳ ಪ್ಲೇಯಿಂಗ್ 11

ಐಪಿಎಲ್ 2022ರ (IPL 2022) 15ನೇ ಆವೃತ್ತಿಯ 65ನೇ ಪಂದ್ಯದಲ್ಲಿ ಇಂದು ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ (SRH vs MI) ತಂಡಗಳು ಸೆಣಸಾಡಲಿವೆ.

MI vs SRH

MI vs SRH

  • Share this:
ಐಪಿಎಲ್ 2022ರ (IPL 2022) 15ನೇ ಆವೃತ್ತಿಯ 65ನೇ ಪಂದ್ಯದಲ್ಲಿ ಇಂದು ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ (SRH vs MI) ತಂಡಗಳು ಸೆಣಸಾಡಲಿವೆ. ಇಂದಿನ ಪಂದ್ಯವು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ (Wankhede Stadium) ನಡೆಯಲಿದೆ. ಈಗಾಗಲೇ ಟೂರ್ನಿಯಿಂದ ಈ ಬಾರಿ ಹೊರಬಿದ್ದಿರುವ ರೋಹಿತ್ ಶರ್ಮಾ (Rohit Sharma) ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡಕ್ಕೆ ಇಂದಿನ ಪಂದ್ಯವು ಔಪಚಾರಿಕವಾಗಿದ್ದರೆ, ಇತ್ತ ಕೇನ್ ವಿಲಿಯಂಸನ್ ನಾಯಕತ್ವದ ಸನ್ ರೈಸರ್ಸ ಹೈದರಾಬಾದ್ ತಂಡಕ್ಕೆ ಇನ್ನೂ ಪ್ಲೇ ಆಫ್ ಕನಸು ಜೀವಂತವಾಗಿದ್ದು, ಹೀಗಾಗಿ ಇಂದಿನ ಪಂದ್ಯವು ಹೆಚ್ಚು ಮಹತ್ವದ್ದಾಗಿದೆ. ಹಾಗಿದ್ದಲ್ಲಿ ಉಭಯ ತಂಡಗಳ ಈವರೆಗಿನ ಅಂಕಿಅಂಶಗಳು ಹೇಗಿವೆ ಎಂದು ನೋಡೋಣ.

ಪಂದ್ಯದ ವಿವರ:

ಐಪಿಎಲ್ 2022ರ 65ನೇ ಪಂದ್ಯದಲ್ಲಿ ಇಂದು ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಸೆಣಸಾಡಲಿವೆ. ಇಂದಿನ ಪಂದ್ಯವು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ. ಇಂದಿನ ಪಂದ್ಯವು ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಟಾಸ್ ಮತ್ತು 7:30ಕ್ಕೆ ಪಂದ್ದಯ ಆರಂಭವಾಗಲಿದೆ.

ಪಿಚ್ ವರದಿ:

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಕಳೆದ 2 ಪಂದ್ಯಗಳೂಸ ಹ ಕಡಿಮೆ ಮೊತ್ತದಿಂದ ಕೂಡಿತ್ತು. ಅಲ್ಲದೇ ರಾತ್ರಿಯ ಪಂದ್ಯವಾಗಿರುವುದರಿಂದ ತೇವಾಂಸ ಮತ್ತು ಇಬ್ಬನಿ ಪಂದ್ಯದ ಮೇಲೆ ಪರಿಣಾಮ ಬೀರಿಲಿದೆ. ಹೀಗಾಗಿ ಟಾಸ್ ಗೆದ್ದ ನಾಯಕ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು.

ಇದನ್ನೂ ಓದಿ: IPL 2022 LSG vs RR: ಪ್ಲೇ ಆಫ್ ಹಂತಕ್ಕೇರಲು ಲಕ್ನೋ - ರಾಜಸ್ಥಾನ್ ಫೈಟ್, ಹೇಗಿದೆ ಉಭಯ ತಂಡಗಳ ಬಲಾಬಲ

MI vs SRH ಹೆಡ್ ಟು ಹೆಡ್:

ಇನ್ನು, ಈವರೆಗೆ ಐಪಿಎಲ್ ನಲ್ಲಿ ಮುಂಬೈ ಮತ್ತು ಹೈದರಾಬಾದ್ ತಂಡಗಳು ಒಟ್ಟು 18 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಮುಂಬೈ ಇಂಡಿಯನ್ಸ್ ತಂಡವು 10 ಬಾರಿ ಮತ್ತು 8 ಪಂದ್ಯಗಳನ್ನು ಗೆದ್ದಿದೆ. ಅಲ್ಲದೇ ಕಳೆದ ಬಾರಿ ನಡೆದ 2 ಪಂದ್ಯಗಳಲ್ಲಿ 2 ಪಂದ್ಯವನ್ನೂ ಮುಂಬೈ ಗೆದ್ದಿರುವುದರಿಂದ ಅಂಕಿಅಂಶಗಳ ಮುಂಬೈ ಹೆಚ್ಚು ಬಲವಾಗಿದ್ದರೂ, ಈ ಬಾರಿ ಹೈದರಾಬಾದ್ ತಂಡ ಹೆಚ್ಚು ಬಲವಾಗಿ ಕಾಣುತ್ತಿದೆ.

ಐಪಿಎಲ್ 2022ರಲ್ಲಿ ಉಭಯ ತಂಡಗಳ ಪ್ರದರ್ಶನ:

ಇನ್ನು, ಮುಂಬೈ ಇಂಡಿಯನ್ಸ್ ತಂಡದ ಈ ಬಾರಿ ಕಳಪೆ ಪ್ರದರ್ಶನ ತೋರುತ್ತಿದೆ. ಅಲ್ಲದೇ ಆಡಿರುವ 12 ಪಂದ್ಯಗಳಲ್ಲಿ 3ರಲ್ಲಿ ಗೆದ್ದು, 9ರಲ್ಲಿ ಸೋತು 6 ಅಂಕಗಳೊಂದಿಗೆ ಕೊನೇಯ ಸ್ಥಾನದಲ್ಲಿದೆ. ಅದರಂತೆ ಸನ್ ರೈಸರ್ಸ್ ಹೈದರಾಬಾದ್ ತಂಡವು ಈವರೆಗೆ ಆಡಿರುವ 12 ಪಂದ್ಯಗಳಲ್ಲಿ 5ರಲ್ಲಿ ಗೆದ್ದು 7ರಲ್ಲಿ ಸೋಲುವ ಮೂಲಕ 10 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದೆ. ಹೀಗಾಗಿ ಎಸ್​ಆರ್​ಎಚ್​ಗೆ ಇಂದಿನ ಹಾಘೂ ನಂತರದ ಎಲ್ಲಾ ಪಂದ್ಯಗಳನ್ನೂ ಗೆಲ್ಲಲೇ ಬೇಕಾಗಿದ್ದು, ಅದರಲ್ಲಿಯೂ ಹೆಚ್ಚಿನ ಅಂತರದಿಂದ ಗೆಲ್ಲಬೇಕಿದೆ.

ಇದನ್ನೂ ಓದಿ: Ambati Rayudu: ಐಪಿಎಲ್​ನಿಂದ ನಿವೃತ್ತಿ ಘೋಷಿಸಿದ ರಾಯಡು, ಕೆಲವೇ ನಿಮಿಷದಲ್ಲಿ ಟ್ವೀಟ್ ಡಿಲೀಟ್

MI vs SRH ಸಂಭಾವ್ಯ ತಂಡ:

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (c), ಇಶಾನ್ ಕಿಶನ್ (WK), ತಿಲಕ್ ವರ್ಮಾ, ಟ್ರಿಸ್ಟಾನ್ ಸ್ಟಬ್ಸ್, ರಮಣದೀಪ್ ಸಿಂಗ್, ಟಿಮ್ ಡೇವಿಡ್, ಡೇನಿಯಲ್ ಸಾಮ್ಸ್, ಕುಮಾರ್ ಕಾರ್ತಿಕೇಯ, ಹೃತಿಕ್ ಶೋಕೀನ್, ಜಸ್ಪ್ರೀತ್ ಬುಮ್ರಾ, ರಿಲೆ ಮೆರೆಡಿತ್

ಸನ್ ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್ (c), ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಾಮ್, ನಿಕೋಲಸ್ ಪೂರನ್ (WK), ಶಶಾಂಕ್ ಸಿಂಗ್, ವಾಷಿಂಗ್ಟನ್ ಸುಂದರ್, ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಉಮ್ರಾನ್ ಮಲಿಕ್
Published by:shrikrishna bhat
First published: