IPL 2022: ಬಟ್ಲರ್ ಶತಕದ ಆಟಕ್ಕೆ ಮುಂಬೈಗೆ ಸತತ 2ನೇ ಸೋಲು, ಗೆದ್ದು ಬೀಗಿದ ರಾಜಸ್ಥಾನ್

ಮುಂಬೈ ಸತತ 2ನೇ ಸೋಲನ್ನು ಅನುಭವಿಸಿದರೆ. ರಾಜಸ್ತಾನ್ ಸತತ 2ನೇ ಗೆಲುವನ್ನು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಮೇಲೇರಿದೆ.

ಮುಂಬೈ ಎದುರು ರಾಜಸ್ಥಾನ್ ತಂಡಕ್ಕೆ ಗೆಲುವು

ಮುಂಬೈ ಎದುರು ರಾಜಸ್ಥಾನ್ ತಂಡಕ್ಕೆ ಗೆಲುವು

  • Share this:
ಐಪಿಎಲ್ 2022 (IPL 2022) ರಲ್ಲಿ ಇಂದುಡಬಲ್ ಹೆಡ್ಡರ್ ಪಂಡ್ಯ ನಡೆಯಲಿದೆ. ಮೊದಲ ಪಂದ್ಯವಾದ ಟೂರ್ನಿಯ 9ನೇ ಪಂದ್ಯದಲ್ಲಿ 5 ಬಾರಿ ಚಾಂಪಿಯನ್ ಆದ ಮುಂಬೈ ಇಂಡಿಯನ್ಸ್ (Mumbai Indians) ಮತ್ತು ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡಗಳು ಸೆಣಸಾಡಿದವು, ಇದರಲ್ಲಿ ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ ರಾಜಸ್ಥಾನ್ ರಾಯಲ್ಸ್ ಉತ್ತಮ ಬ್ಯಾಟಿಂಗ್ ಮಾಡುವ ಮೂಲಕ ನಿಗದಿತರ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 193 ರನ್​ ಗಳಿಸತ್ತು. ಈ ಮೊತ್ತವನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡವು ನಿಗದಿತ 20 ಓವರ್​ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 170 ರನ್​ ಗಳಿಸುವ ಮೂಲಕ 23 ರನ್​ ಗಳಿಂದ ಸೋಲನ್ನಪ್ಪಿತು. ಈ ಮೂಲಕ ಮುಂಬೈ ಸತತ 2ನೇ ಸೋಲನ್ನು ಅನುಭವಿಸಿದರೆ. ರಾಜಸ್ತಾನ್ ಸತತ 2ನೇ ಗೆಲುವನ್ನು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಮೇಲೇರಿದೆ.

ಮೊದಲು ಬ್ಯಾಟ್ ಮಾಡಿದ ರಾಜಸ್ತಾನ್:

ಐಪಿಎಲ್ ನ9ನೇ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡವನ್ನು ಬ್ಯಾಟಿಂಗ್​ ಗೆ ಆಹ್ವಾನಿಸಿತು. ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ತಂಡಕ್ಕೆ ಓಪನರ್ಸ್ ಆದ ಜೋಸ್​ ಬಟ್ಲರ್ ಮುಂಬೈ ಬೌಲರ್​ ಗ ಬೆವರಿಳಿಸಿದರು. ಅವರು 68 ಎಸೆತಗಳಲ್ಲಿ 11 ಬೌಂಡರಿ ಜೊತೆ 5 ಸಿಕ್ಸ್​ ಗಳ ನೆರವಿನಿಂದ ಬರೋಬ್ಬರಿ 100 ರನ್​ ಬಾರಿಸಿದರು. ಈ ಮೂಲಕ ಐಪಿಎಲ್​ 2022ರ ಮೊದಲ ಶತಕವನ್ನು ಸಿಡಿಸಿದರು.

ಇನ್ನು, ಉಳಿದಂತೆ ನಾಯಕ ಸಂಜು ಸ್ಯಾಮ್ಸನ್ 30, ಹಿಟ್​ಮಾಯರ್ 35 ರನ್​ ಗಳಿಸಿದರೆ ಉಳಿದವರೆಲ್ಲರೂ ಪೆವೆಲಿಯನ್ ಪರೇಡ್ ನಡೆಸಿದರು. ಅಂತಿಮವಾಗಿ ಮುಂಬೈ ತಂಡಕ್ಕೆ 193 ರನ್​ಗಳ ಬೃಹತ್ ಟಾರ್ಗೇಟ್ ನೀಡಿದರ.

ಇದನ್ನೂ ಓದಿ: IPL 2022: ಗೆಲುವಿನ ಖಾತೆ ತೆರೆದ ಲಕ್ನೋ, ಚೆನ್ನೈಗೆ ಸತತ 2ನೇ ಸೋಲು

ಐಪಿಎಲ್ 2022ರ ಮೊದಲ ಶತಕ ಬಾರಿಸಿದ ಬಟ್ಲರ್:

ರಾಜಸ್ಥಾನ್ ಪರ ಕಣಕ್ಕಿಳಿದ ಜೋಸ್ ಬಟ್ಲರ್ ಇಂದು ಅಕ್ಷರಸಹ ಮುಂಬೈ ತಂಡಕ್ಕೆ ಸಿಂಹಸ್ವಪ್ನರಾಗಿ ಕಾಡಿದರು ಎಂದರೂ ತಪ್ಪಾಗಲಾರದು. ಹೌದು, ಅವರು ಓಪನರ್​ ಆಗಿ ಬ್ಯಾಟಿಂಗ್ ಆರಂಭಿಸಿದ ಬಟ್ಲರ್ 68 ಎಸೆತಗಳಲ್ಲಿ 11 ಬೌಂಡರಿ ಜೊತೆ 5 ಸಿಕ್ಸ್​ ಗಳ ನೆರವಿನಿಂದ ಬರೋಬ್ಬರಿ 100 ರನ್​ ಬಾರಿಸಿದರು. ಈ ಮೂಲಕ ಐಪಿಎಲ್​ 2022ರ ಮೊದಲ ಶತಕವನ್ನು ಸಿಡಿಸಿದರು. ಅಲ್ಲದೇ ಈ ಮೂಲಕ ಪ್ರಸ್ತುತ ಆರೆಂಜ್ ಕ್ಯಾಪ್ ಅನ್ನು ತಮ್ಮದಾಗಿಸಿಕೊಂಡರು.

ಬ್ಯಾಟಿಂಗ್​ನಲ್ಲಿ ಮತ್ತೆ ಮುಂಬೈ ವೈಫಲ್ಯ:

ರಾಜಸ್ಥಾನ್ ನೀಡಿದ ಮೊತ್ತವನ್ನು ಬೆನ್ನತ್ತಿದ ಮುಂಬೈ ತಂಡಕ್ಕೆ ನಾಯಕ ರೋಹಿತ್ ಶರ್ಮಾ ಸಹ ಬ್ಯಾಟಿಂಗ್ ನಲ್ಲಿ ಕೈ ಹಿಡಿಯಲಿಲ್ಲ. ಮುಂಬೈ ಪರ ಕೇವಲ ಇಶಾನ್ ಕಿಶನ್ 54 ಮತ್ತು ತಿಲಕ್ ವರ್ಮಾ 61 ರನ್ ಗಳಿಸಿದರ ಹೊರತಾಗಿ ಯಾರೋಬ್ಬ ಬ್ಯಾಟ್ಸ್​ಮನ್ ಸಹ ರಾಜಸ್ಥಾನ್ ಬೌಲರ್​ಗಳಿಗೆ ಪ್ರತಿರೋಧ ಒಡ್ಡಲಿಲ್ಲದ ಕಾರಣ ಅಂತಿಮವಾಗಿ ಮುಂಬೈ ಸತತ 2ನೇ ಸೋಲನ್ನು ಅನುಭವಿಸುವಂತಾಯಿತು.

ಇದನ್ನೂ ಓದಿ: IPL 2022: ಗೆಲುವಿನ ಲಯಕ್ಕೆ ಮರಳಿದ ಕೋಲ್ಕತ್ತಾ, ಪಂಜಾಬ್ ರಾಜರ ಬೆವರಿಳಿಸದ ರಸೆಲ್

ಒಂದೇ ಪಂದ್ಯದಲ್ಲಿ 16 ವಿಕೆಟ್:

ಇನ್ನು, ಉಭಯ ತಂಡಗಳ ಬೌಲರ್​ಗಳು ತಲಾ 8 ವಿಕೆಟ್ ಪಡೆಯುವ ಮೂಲಕ ಒಂದೇ ಪಂದ್ಯದಲ್ಲಿ 16 ವಿಕೆಟ್​ಗಳು ಉರುಳಿದವು. ಮುಂಬೈ ಪರ ಬೂಮ್ರಾ ಮತ್ತು ಟೈಮಲ್ ಮೀಲ್ಸ್ ತಲಾ 3 ವಿಕೆಟ್ ಪಡೆದರೆ, ರಾಜಸ್ಥಾನ್ ಪರ ನವದೀಪ್ ಸೈನಿ ಮತ್ತು ಚಹಾಲ್ ತಲಾ 2 ವಿಕೆಟ್ ಪಡೆದು ಮಿಂಚಿದರು.

ಟಾಸ್ ಗೆದ್ದ ಡೆಲ್ಲಿ ಬೌಲಿಂಗ್ ಆಯ್ಕೆ:

ಐಪಿಎಲ್​ನ ಇಂದಿನ 2ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ತಂಡಗಳು ಮುಖಾಮುಖಿಯಾಗುತ್ತಿದೆ. ಈಗಾಗಲೇ ಟಾಸ್ ಗೆದ್ದ ಡೆಲ್ಲಿ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಗುಜರಾತ್ ಬ್ಯಾಟಿಂಗ್ ಆರಂಭಿಸಿದೆ.
Published by:shrikrishna bhat
First published: