IPL 2022 MI vs RR: ರೋಹಿತ್ ಬರ್ತಡೇಗೆ ಮುಂಬೈ ಟೀಂ ಗೆಲುವಿನ ಗಿಫ್ಟ್, ರಾಜಸ್ಥಾನ್ ತಂಡಕ್ಕೆ ಮತ್ತೊಂದು ಸೋಲು
ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 158 ರನ್ ಗಳಿಸುವ ಮೂಲಕ ಸ್ಪರ್ಧಾತ್ಮಕ ಮೊತ್ತ ಪೇರೆಪಿಸಿತು. ಈ ಮೊತ್ತ ಬೆನ್ನತ್ತಿದ ಮುಂಬೈ ತಂಡವು 19.2 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 165 ರನ್ ಗಳಿಸುವ ಮೂಲಕ 5 ವಿಕೆಟ್ಗಳ ಜಯ ದಾಖಲಿಸಿತು.
ಐಪಿಎಲ್ 2022ರ (IPl 2022) 15ನೇ ಆವೃತ್ತಿಯ 44ನೇ ಪಂದ್ಯದಲ್ಲಿ ಇಂದು ರಾಜಸ್ಥಾನ್ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ (RR vs MI) ತಂಡಗಳು ಮುಂಬೈನ ಡಿವೈ ಪಾಟೀಲ್ (DY Patel) ಸ್ಟೇಡಿಯಂ ನಲ್ಲಿ ಮುಖಾಮುಖಿಯಾದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 158 ರನ್ ಗಳಿಸುವ ಮೂಲಕ ಸ್ಪರ್ಧಾತ್ಮಕ ಮೊತ್ತ ಪೇರೆಪಿಸಿತು. ಈ ಮೊತ್ತ ಬೆನ್ನತ್ತಿದ ಮುಂಬೈ ತಂಡವು 19.2 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 165 ರನ್ ಗಳಿಸುವ ಮೂಲಕ 5 ವಿಕೆಟ್ಗಳ ಜಯ ದಾಖಲಿಸಿತು.
ಮತ್ತೆ ಅಬ್ಬರಿಸ ಬಟ್ಲರ್:
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 158 ರನ್ ಗಳಿಸುವ ಮೂಲಕ ಸ್ಪರ್ಧಾತ್ಮಕ ಮೊತ್ತ ಪೇರೆಪಿಸಿತು. ರಾಜಸ್ಥಾನ್ ಪರ ಜೋಸ್ ಬಟ್ಲರ್ ಉತ್ತಮ ಆರಮಬ ನೀಡುವ ಮೂಲಕ 52 ಎಸೆತಗಳಲ್ಲಿ 4 ಸಿಕ್ಸ್ ಮತ್ತು 5 ಬೌಂಡರಿಗಳ ಮೂಲಕ ಆಕರ್ಷಕ 67 ರನ್ ಗಳ ಅರ್ಧ ಶತಕ ಸಿಡಿಸಿದರು. ಉಳಿದಂತೆ ದೇವದತ್ ಪಡ್ಡಿಕಲ್ 15 ರನ್, ಸಂಜು ಸ್ಯಾಮ್ಸಸನ್ 16 ರನ್, ಮಿಚೆಲ್ 17 ರನ್, ಹಿಟ್ ಮಾಯರ್ 6 ರನ್ ಮತ್ತು ರಿಯಾನ್ ಪರಾಗ್ 3 ರನ್, ರವಿಚಂದ್ರನ್ ಅಶ್ವೀನ್ 21 ರನ್ ಗಳಿಸುವ ಮೂಲಕ ತಂಡ ಸ್ಪರ್ಧಾತ್ಮಕ ಮೊತ್ತ ಕೆಲಹಾಕುವಲ್ಲಿ ಸಹಕಾರಿಯಾದರು.
ಸಂಘಟಿತ ಬೌಲಿಂಗ್ ಮಾಡಿದ ಮುಂಬೈ:
ಮುಂಬೈ ಬೌಲರ್ ಗಳು ಇಂದು ಉತ್ತಮ ಬೌಲಿಂಗ್ ಮಾಡಿದ್ದು, ರಾಜಸ್ಥಾನ್ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಮುಂಬೈ ಪರ ಹೃತಿಕ್ ಶೋಕೇನ್ ಮತ್ತು ಮೇರೆದಿತ್ ತಲಾ 2 ವಿಕೆಟ್ ಮತ್ತು ದಿನೇಶ್ ಸ್ಯಾಮ್ಸ್ ಮತ್ತು ಕುಮಾರ್ ಕಾರ್ತಿಕೇಯ ತಲಾ 1 ವಿಕೆಟ್ ಪಡೆದು ಮಿಂಚಿದರು.
ಮುಂಬೈ ಪರ ನಾಯಕ ರೋಹಿತ್ ಶರ್ಮಾ ಕೇವಲ 2 ರನ್ ಗಳಿಸಿದರೆ ಇಶಾನ್ ಕಿಶನ್ 26 ರನ್ ಗಳಿಗೆ ಪೇವೆಲಿಯನ್ ಗೆ ನಡೆದರು. ಆದರೆ ಉತ್ತಮ ಬ್ಯಾಟಿಂಗ್ ಮಾಡಿದ ಸೂರ್ಯಕುಮಾರ್ ಯಾದವ್ 39 ಎಸೆತದಲ್ಲಿ 2 ಸಿಕ್ಸ್ ಮತ್ತು 5 ಬೌಂಡರಿಗಳ ನೆರವಿನಿಂದ ಆಕರ್ಷಕ ಆರ್ಧಶತಕ ಸಿಡಿಸುವ ಮೂಲಕ 51 ರನ್ ಗಲಸಿದರು. ಉಳಿದಂತೆ ತಿಲಕ್ ವರ್ಮಾ 35 ರನ್, ಪೋಲಾರ್ಡ್ 10 ರನ್, ಟೀಮ್ ಡೇವಿಡ್ 20 ರನ್ ಗಳಿಸುವ ಮೂಲಕ ತಂಡಕ್ಕೆ ನೆರವಾದರು.
ರಾಜಸ್ಥಾನ್ ರಾಯಲ್ಸ್ ತಂಡದ ಬೌಲಿಂಗ್ ಯಾವುದೇ ಹಂತದಲ್ಲಿಯೂ ಮುಂಬೈ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಲಿಲ್ಲ. ರಾಜಸ್ಥಾನ್ ಪರ ಟ್ರೇನ್ ಬೋಲ್ಟ್, ಪ್ರಸಿದ್ಧ ಕೃಷ್ಣ, ರವಿಚಂದ್ರನ್ ಅಶ್ವೀನ್, ಕುಲದೀಪ್ ಸೇನ್ ಮತ್ತು ಚಹಾಲ್ ತಲಾ 1 ವಿಕೆಟ್ ಪಡೆದು ಮಿಂಚಿದರು.
Published by:shrikrishna bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ