IPL 2022 MI vs RR: ಬಲಿಷ್ಠ ರಾಜಸ್ಥಾನ್ ತಂಡಕ್ಕೆ ಮುಂಬೈ ಸವಾಲ್, ಹೇಗಿದೆ ಉಭಯ ತಂಡಗಳ ಬಲಾಬಲ

ಐಪಿಎಲ್ 2022ರ (IPL 222) 15ನೇ ಆವೃತ್ತಿಯಲ್ಲಿ ಇಂದು ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ (MI vs RR) ತಂಡಗಳು ಸೆಣಸಾಡಲಿವೆ. ಈ ಪಂದ್ಯವು DY ಪಾಟೀಲ್ (DY Patel) ಸ್ಟೇಡಿಯಂನಲ್ಲಿ ನಡೆಯಲಿದೆ.

MI vs RR

MI vs RR

  • Share this:
ಐಪಿಎಲ್ 2022ರ (IPL 222) 15ನೇ ಆವೃತ್ತಿಯಲ್ಲಿ ಇಂದು 2 ಪಂದ್ಯಗಳು ನಡೆಯಲಿದೆ. ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟನ್ಸ್ (RCB vs GT) ಪಂದ್ಯ ನಡೆದರೆ, 2ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ (MI vs RR) ತಂಡಗಳು ಸೆಣಸಾಡಲಿವೆ. ಈ ಪಂದ್ಯವು DY ಪಾಟೀಲ್ (DY Patel) ಸ್ಟೇಡಿಯಂನಲ್ಲಿ ನಡೆಯಲಿದೆ. ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಮುಂಬೈ ಇಂಡಿಯನ್ಸ್ ಈವರೆಗೆ ಒಂದೇ ಒಂದು ಪಂದ್ಯವನ್ನೂ ಸಹ ಗೆದ್ದಿಲ್ಲ. ಹೀಗಾಗಿ ಇ ಪಂದ್ಯವನ್ನಾದರೂ ಗೆಲ್ಲುವ ಮೂಲಕ ಈ ಬಾರಿಯ ಐಪಿಎಲ್ ನಲ್ಲಿ ಗೆಲುವಿನ ಖಾತೆ ತೆರೆಯಲಿದೆಯೇ ಎಂದು ನೋಡಬೇಕಿದೆ. ಇತ್ತ ರಾಜಸ್ಥಾನ್ ರಾಯಲ್ಸ್ ತಂಡವು ಇಂದಿನ ಪಂದ್ಯ ಗೆದ್ದು ಪ್ಲೇ ಆಫ್ ಹಾದಿಯನ್ನು ಮತ್ತಷ್ಟು ಸುಗಮ ಗೊಳಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಹಾಗಿದ್ದರೆ ಉಭಯ ತಂಡಗಳ ಬಲಾಬಲ ಹೇಘಿದೆ ನೋಡೋಣ.

ಪಂದ್ಯದ ವಿವರ:

ಐಪಿಎಲ್ 2022ರ 44ನೇ ಪಂದ್ಯದಲ್ಲಿ ಇಂದು ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಸೆಣಸಾಡಲಿವೆ. ಈ ಪಂದ್ಯವು DY ಪಾಟೀಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಟಾಸ್ ಮತ್ತು 7:30ಕ್ಕೆ ಪಂದ್ಯ ಆರಂಭವಾಗಲಿದೆ.

ಪಿಚ್ ವರದಿ:

ಡಿವೈ ಪಾಟೀಲ್ ಸ್ಟೇಡಿಯಂ ಮೈದಾನವು ಹೆಚ್ಚು ಬ್ಯಾಟರ್​ ಗಳಿಗೆ ಸಹಾಯಕವಾಗಿದೆ. ಆದರೆ ಕೆಲ ಪಂದ್ಯಗಳಲ್ಲಿ ತೇವಾಂಶ ಪ್ರಮುಖ ಪಾತ್ರ ನಿರ್ವಹಿಸಿದ್ದು, 2ನೇ ಬ್ಯಾಟಿಂಗ್ ತಂಡವನ್ನು ನಿಯಂತ್ರಿಸುವಲ್ಲಿಯೂ ಯಶಸ್ವಿಯಾಗಿದೆ. ಆದರೂ ಅಂಕಿಅಂಶದ ಪ್ರಕಾರ ಈ ಋತುವಿನಲ್ಲಿ ಡಿವೈ ಪಾಟೀಲ್ ನಲ್ಲಿ ಇದುವರೆಗೆ ನಿಗದಿತ 20 ಪಂದ್ಯಗಳಲ್ಲಿ 13 ಪಂದ್ಯಗಳನ್ನು ಆಯೋಜಿಸಿದ್ದಾರೆ. ಹೆಚ್ಚಿನ ಪಂದ್ಯಗಳನ್ನು ತಂಡವು ಚೇಸಿಂಗ್ ಮೂಲಕ ಗೆದ್ದಿದೆ. ಹೀಗಾಗಿ ಮೊದಲು ಟಾಸ್ ಗೆದ್ದ ನಾಯಕ ಬೌಲಿಂಗ್ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ: IPL 2022 RCB vs GT: ಗೆಲುವಿನ ಲಯಕ್ಕೆ ಮರಳಲಿದೆಯಾ RCB? ಹೇಗಿರಲಿದೆ ಉಭಯ ತಂಡಗಳ ಪ್ಲೇಯಿಂಗ್ 11

RR vs MI ಹೆಡ್ ಟು ಹೆಡ್:

ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡವು ಈವರೆಗೆ 28 ಪಂದ್ಯಗಳನ್ನಾಡಿದ್ದು, ಅದರಲ್ಲಿ 14 ಮುಂಬೈ ಮತ್ತು 13 ಪಂದ್ಯಗಳನ್ನು ರಾಜಸ್ಥಾನ್ ತಂಡಗಳು ಗೆದ್ದಿವೆ. ಹಿಂದಿನ ಸೀಸನ್​ ನಲ್ಲಿ ಆಡಿದ ಎರಡೂ ಪಂದ್ಯವನ್ನು ಮುಂಬೈ ಗೆದ್ದಿದೆ. ಒಟ್ಟಾರೆ ಸಮಬಲದ ಹೋರಾಟ ನಡೆದಿದ್ದು, ಈ ಬಾರಿ ಮುಂಬೈ ತಂಡಕ್ಕಿಂತ ರಾಜಸ್ಥಾನ್ ಬಲಿಷ್ಠವಾಗಿದ್ದು, ಇಂದಿನ ಪಂದ್ಯ ಗೆಲ್ಲುವ ಮೆಚ್ಚಿನ ತಂಡವಾಗಿದೆ.

ಐಪಿಎಲ್ 2022ರಲ್ಲಿ ಉಭಯ ತಂಡಗಳ ಪ್ರದರ್ಶನ:

ಈ ಬಾರಿ ಐಪಿಎಲ್​ ನಲ್ಲಿ ಮುಂಬೈ ತಂಡವು ಸತತ ಸೋಲಿನಿಂದ ಕಂಗೆಟ್ಟಿದೆ. ಆಡಿರುವ 8 ಪಂದ್ಯಗಳಲ್ಲಿ 8ರಲ್ಲಿಯೂ ಸೋಲನ್ನಪ್ಪಿದೆ. ಹೀಗಾಗಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಇನ್ನು, ಉತ್ತಮ ಫಾರ್ಮ್ ನಲ್ಲಿರುವ ರಾಜಸ್ಥಾನ್ ತಂಡವು ಆಡಿರುವ 8 ಪಂದ್ಯದಲ್ಲಿ 6ರಲ್ಲಿ ಗೆದ್ದು 2ರಲ್ಲಿ ಸೋತು 12 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: IPL 2022 PBKS vs LSG: ಮೊಹ್ಸಿನ್ ಖಾನ್ ದಾಳಿಗೆ ಬೆದರಿದ ಪಂಜಾಬ್, ಗೆಲುವಿನ ನಗೆಬೀರಿದ ಲಕ್ನೋ ತಂಡ

RR vs MI ಸಂಭಾವ್ಯ ತಂಡ:

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (c), ಇಶಾನ್ ಕಿಶನ್ (WK), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಟಿಮ್ ಡೇವಿಡ್, ಕೀರಾನ್ ಪೊಲಾರ್ಡ್, ಫ್ಯಾಬಿಯನ್ ಅಲೆನ್, ಮಯಾಂಕ್ ಮಾರ್ಕಂಡೆ, ಜಯದೇವ್ ಉನದ್ಕತ್, ರಿಲೆ ಮೆರೆಡಿತ್, ಜಸ್ಪ್ರೀತ್ ಬುಮ್ರಾ

ರಾಜಸ್ಥಾನ್ ರಾಯಲ್ಸ್: ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್ (c & wk), ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ಜೇಮ್ಸ್ ನೀಶಮ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಕುಲದೀಪ್ ಸೇನ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಹಾಲ್
Published by:shrikrishna bhat
First published: