IPL 2022 MI vs PBKS: ಸತತ 5ನೇ ಸೋಲು ಕಂಡ ಮುಂಬೈ, ಗೆದ್ದು ಬೀಗಿದ ಪಂಜಾಬ್ ರಾಜರು

ಮೊದಲ ಬ್ಯಾಟಿಂಗ್ ಮಾಡಿದ ಪಂಜಾಬ್ ನಿಗದಿತ 20 ಓವರ್​ (Over) ಗಳಲ್ಲಿ 5 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿತು. ಈ ಮೊತ್ತ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ನಿಗದಿತ  20 ಓವರ್​ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 186 ರನ್​ ಗಳಿಸುವ ಮೂಲಕ ಐಪಿಎಲ್​ (IPL)  ಸತತ 5ನೇ ಸೋಲನ್ನು ಅನುಭವಿಸಿತು.

ಪಂಜಾಬ್ ತಂಡಕ್ಕೆ ಜಯ

ಪಂಜಾಬ್ ತಂಡಕ್ಕೆ ಜಯ

  • Share this:
ಐಪಿಎಲ್ 2022ರ (IPL 2022) 15ನೇ ಆವೃತ್ತಿಯ 23ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ (MI vs PBKS) ತಂಡಗಳು ಮಹಾರಾಷ್ಟ್ರ ಅಸೋಸಿಯೇಟ್ ಸ್ಟೇಡಿಯಂ ನಲ್ಲಿ ಸೆಣಸಾಡಿದವು. ಇದರಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಂಜಾಬ್ ಕಿಂಗ್ಸ್ ತಂಡವು ಮುಂಬೈ ವಿರುದ್ಧ ಅಬ್ಬರಸಿ ಬೃಹತ್ ಮೊತ್ತದ ಟಾರ್ಗೇಟ್ ನೀಡಿತು. ಮೊದಲ ಬ್ಯಾಟಿಂಗ್ ಮಾಡಿದ ಪಂಜಾಬ್ ನಿಗದಿತ 20 ಓವರ್​ (Over) ಗಳಲ್ಲಿ 5 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿತು. ಈ ಮೊತ್ತ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ನಿಗದಿತ  20 ಓವರ್​ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 186 ರನ್​ ಗಳಿಸುವ ಮೂಲಕ ಐಪಿಎಲ್​ (IPL)  ಸತತ 5ನೇ ಸೋಲನ್ನು ಅನುಭವಿಸಿತು.

ಅಬ್ಬರಿಸಿದ ಗಬ್ಬರ್ ಸಿಂಗ್:

ಪಂಜಾಬ್ ನಿಗದಿತ 20 ಓವರ್​ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿತು.  ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡಕ್ಕೆ ಉತ್ತಮ ಆರಂಭ ದೊರಕಿತು. ಪಂಜಾಬ್ ಪರ ಆರಂಭಿಕರಾದ ನಾಯಕ ಮಾಯಾಂಕ್ ಅಗ್ರವಾಲ್ ಮತ್ತು ಶಿಖರ್ ಧವನ್ 97 ರನ್​ ಗಳ ಜೊತೆಯಾಟವಾಡಿದರು. ಇವರುಗಳಲ್ಲಿ ಮಾಯಾಂಕ್ ಅರ್ಗವಾಲ್ 32 ಎಸೆತದಲ್ಲಿ 2 ಸಿಕ್ಸ್ ಮತ್ತು 6 ಬೌಂಡರಿಗಳ ನೆರವಿನಿಂದ 52 ರನ್ ಗಳಸಿದರೆ, ಶಿಖರ್ ಧವನ್ 50 ಎಸೆತದಲ್ಲಿ 3 ಸಿಕ್ಸ್ ಹಾಗೂ 5 ಫೋರ್​ ನೆರವಿನಿಂದ 70 ರನ್ ಸಿಡಿಸಿ ಮಿಂಚಿದರು.

ಉಳಿದಂತೆ ಜಾನಿ ಬೇರ್​ಸ್ಟೋ 12 ರನ್, ಜಿತೇಶ್ ಶರ್ಮಾ 30 ರನ್ ಹಾಗೂ ಶಾರುಖ್ ಖಾನ್ 15 ರನ್ ಗಳಿಸುವ ಮೂಲಕ ತಂಡದ ಮೊತ್ತ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇದನ್ನೂ ಓದಿ: IPL 2022 RCB vs CSK: ಅಂತೂ ಇಂತೂ RCB ವಿರುದ್ಧ ಭರ್ಜರಿಯಾಗೇ ಗೆದ್ದ CSK

ಮುಂಬೈ ಬೌಲಿಂಗ್:

ಮುಂಬೈ ಪರ ಬೌಲಿಂಗ್​ ನಲ್ಲಿ ಬಾಸಿಲ್ ತಾಂಪಿ 2 ವಿಕೆಟ್ ಪಡೆದರು. ಉಳಿದಂತೆ ಜಯದೇವ್ ಉನದ್ಕಟ್, ಬೂಮ್ರಾ ಮತ್ತು ಮುರುಗನ್ ಅಶ್ವಿನ್ ತಲಾ 1 ವಿಕೆಟ್ ಪಡೆದರು.

ಉತ್ತಮ ಪೈಪೋಟಿ ನೀಡಿದ ಮುಂಬೈ:

ಪಂಜಾಬ್ ನೀಡಿದ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಮುಂಬೈ ತಂಡವು ಮುಂಬೈ ಪರ ನಾಯಕ ರೋಹಿತ್ ಶರ್ಮಾ 28 ರನ್ ಹಾಗೂ ಇಶಾನ್ ಕಿಶನ್ ಕೇಔಲ 3 ರನ್ ಗಳಿಸುವ ಮೂಲಕ ಆರಂಭಿಕರಾಗಿ ತಂಡಕ್ಕೆ ಸಾಥ್ ನೀಡಲಿಲ್ಲ. ಆದರೆ ನಂತರದಲ್ಲಿ ಕ್ರೀಸ್​ಗೆ ಬಂದ ಡೆವಾಲ್ಡ್ ಬ್ರೇವಿಸ್ 25 ಎಸೆತದಲ್ಲಿ 49 ರನ್​ ಗಳಸಿದರು. ಇದರಲ್ಲಿ 5 ಸಿಕ್ಸ್ ಮತ್ತು 4 ಬೌಂಡರಿಗಳು ಒಳಗೊಂದಿದ್ದವು. ಇವರೊಂದಿಗೆ ಸೂರ್ಯಕುಮಾರ್ ಯಾದವ್ ಸಹ 4 ಸಿಕ್ಸ್ ಗಳ ನೆರವಿನಿಂದ 43 ರನ್​ ಗಳಿಸಿದರು.

ಇದನ್ನೂ ಓದಿ: IPL 2022 SRH vs GT: ಗುಜರಾತ್ ತಂಡಕ್ಕೆ ಮೊದಲ ಸೋಲು, ಗೆದ್ದು ಬೀಗಿದ ಹೈದರಾಬಾದ್..!

ಉಳಿದಂತೆ ತಿಲಕ್ ವರ್ಮಾ 36 ರನ್, ಕಿರಾನ್ ಪೋಲಾರ್ಡ್ 10 ರನ್ ಮತ್ತು ಜಯದೇವ್ ಉನದ್ಕಟ್ 12 ರನ್ ಗಳಸಿದರು.

ಪಂಜಾಬ್ ಬೌಲಿಂಗ್ ಉತ್ತಮ ಬೌಲಿಂಗ್:

ಇನ್ನು, ಪಂಜಾಬ್ ಕಿಂಗ್ಸ್ ಪರ ಓಡೆನಾ ಸ್ಮಿತ್ 4 ಓವರ್ ಮಾಡಿ 4 ವಿಕೆಟ್ ಪಡೆಯುವ ಮೂಲಕ ಮುಂಬೈ ಇಂಡಿಯನ್ಸ್ ಸೋಲಿಗೆ ಪ್ರಮುಖ ಕಾರಣರಾದರು. ಉಳಿದಂತೆ ಪಂಜಾಬ್ ಪರ  ಕಗಿಸೋ ರಬಾಡ  2 ವಿಕೆಟ್ ಪಡೆದರು. ಉಳಿದವರಲ್ಲಿ ವಿಭವ್ ಅರೋರಾ 1 ವಿಕೆಟ್ ಪಡೆದು ಮಿಂಚಿದರು.
Published by:shrikrishna bhat
First published: