IPL 2022 MI vs PBKS: ಗೆಲುವಿನ ಖಾತೆ ತೆರೆಯಲಿದ್ಯಾ ಮುಂಬೈ ಇಂಡಿಯನ್ಸ್? ಹೇಗಿರಲಿದೆ ಉಭಯ ತಂಡಗಳ ಪ್ಲೇಯಿಂಗ್ XI?

ಐಪಿಎಲ್ 2022ರ (IPL 2022) ಇಂದಿನ ಪಂದ್ಯದಲ್ಲಿ 5 ಬಾರಿ ಚಾಂಪಿಯನ್ ಆದ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ (MI vs PBKS) ತಂಡಗಳು ಸೆಣಸಾಡಲಿದೆ. 

Mi vs PBKS

Mi vs PBKS

  • Share this:
ಐಪಿಎಲ್ 2022ರ (IPL 2022) ಇಂದಿನ ಪಂದ್ಯದಲ್ಲಿ 5 ಬಾರಿ ಚಾಂಪಿಯನ್ ಆದ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ (MI vs PBKS) ತಂಡಗಳು ಸೆಣಸಾಡಲಿದೆ.  ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದ್ದು, ಈಗಾಗಲೇ ಸತತ ಸೋಲುಗಳಿಂದ ಕಂಗೆಟ್ಟಿರುವ ಮುಂಬೈ (MI) ತಂಡಕ್ಕೆ ಈ ಪಂದ್ಯ ಮಹತ್ವದ ಪಂದ್ಯವಾಗಿದೆ. ಈಗಾಗಲೇ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ 4 ಪಂದ್ಯಗಳನ್ನು ಆಡಿರುವ ರೋಹಿತ್ (Rohith) ಪಡೆ 4 ಪಂದ್ಯಗಳಲ್ಲಿಯೂ ಸೋಲನ್ನಪ್ಪಿದೆ. ಈದರ ನಡುವೆ ಪಂಜಾಬ್ ತಂಡ ಸಹ ಸೋಲು ಗೆಲುವಿನ ನಡುವೆ ಆಡುತ್ತಿದ್ದು, ಗೆಲುವಿನ ಟ್ರ್ಯಾಕ್​ ಗೆ ಮರಳಲು ಮುಂಬೈ ತಂಡಕ್ಕೆ ಈ ಪಂದ್ಯ ಹೆಚ್ಚು ಮಹತ್ವ ಪೂರ್ಣವಾಗಿದೆ. ಹಾಗಾದರೆ ಉಭಯ ತಂಡಗಳ ಈವರೆಗಿನ ಬಲಾಬಲ ಹೇಗಿದೆ ಎಂದು ನೋಡೋಣ ಬನ್ನಿ.

ಪಂದ್ಯದ ವಿವರ:

ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ಸೆಣಸಾಡಲಿದೆ. ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಟಾಸ್ ಮತ್ತು 7:30ಕ್ಕೆ ಪಂದ್ಯ ಆರಂಭವಾಗಲಿದೆ.

ಐಪಿಎಲ್ 2022 ರಲ್ಲಿ ಉಭಯ ತಂಡಗಳ ಪ್ರದರ್ಶನ:

ಈ ಬಾರಿ ಐಪಿಎಲ್​ ನಲ್ಲಿ ಚಾಂಪಿಯನ್ ತಂಡವಾದ ಮುಂಬೈ ಇಂಡಿಯನ್ಸ್ ತಂಡದ್ದು ನೀರಸ ಪ್ರದರ್ಶನ ಎಂದು ಹೇಳಬಹುದು. ಈವರೆಗೂ ಆಡಿರುವ 4 ಪಂದ್ಯಗಳಲ್ಲಿ 4 ರ್ಲಲಿಯೂ ಸೋತಿರುವ ರೋಹಿತ್ ಪಡೆ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಇತ್ತ ಪಂಜಾಬ್ ತಂಡದ ಪರಿಸ್ಥಿತಿಯೂ ಹೇಳಿಕೊಳ್ಳುವಷ್ಟು ಉತ್ತಮವಾಗಿಲ್ಲ. ಹೌದು, ಫಂಜಾಬ್ ತಂಡವು ಈವರೆಗೆ 4 ಪಂದ್ಯಗಳನ್ನು ಆಡಿದ್ದು, 4ರಲ್ಲಿ 2 ಸೋಲು 2 ಗೆಲುವಿನೊಂದಿಗೆ 4 ಅಂಕ ಸಂಪಾಧಿಸಿ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಅಂಕಿಅಂಶಗಳ ಪ್ರಾಕಾರ ಎರಡೂ ತಂಡಗಳು ಗೆಲುವಿನ ನಿರೀಕ್ಷೆಯಲ್ಲಿದೆ.

ಇದನ್ನೂ ಓದಿ: GT vs PBKS: ​ಪಂಜಾಬ್​ ಕಿಂಗ್ಸ್​ಗೆ ಗುಮ್ಮಿದ ಗುಜರಾತ್​ ಟೈಟನ್ಸ್​! ಮತ್ತೆ ಹೀರೋ ಆದ ತೇವಾಟಿಯಾ

ಮುಂಬೈ- ಪಂಜಾಬ್ ತಂಡಗಳ ಹೆಡ್​ ಟು ಹೆಡ್​:

ಮುಂಬೈ ಮತ್ತು ಪಂಜಾಬ್ ತಂಡಗಳು ಐಪಿಎಲ್‌ನಲ್ಲಿ 27 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ 27 ಪಂದ್ಯಗಳಲ್ಲಿ ಮುಂಬೈ 14 ಪಂದ್ಯಗಳನ್ನು ಗೆದ್ದಿದ್ದರೆ, ಪಂಜಾಬ್ 13 ಸಂದರ್ಭಗಳಲ್ಲಿ ಜಯಗಳಿಸಿದೆ. ಅಂಕಿಅಂಶದ ಪ್ರಕಾರ ಉಭಯ ತಂಡಗಳು ಎರಡೂ ಸಮಬಲ ಸಾಧಿಸಿದೆ.

ಪಿಚ್ ವರದಿ:

ಎಂಸಿಎ ಸ್ಟೇಡಿಯಂನಲ್ಲಿ ಈವರೆಗೆ ಆಡಿರುವ ಪಂದ್ಯಗಳಲ್ಲಿ ಹೆಚ್ಚು ಚೇಸಿಂಗ್ ಮಾಡಿರುವ ತಂಡಗಳೇ ಗೆದ್ದಿದ್ದು, ಇಂದು ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.

ಆಡಿದ ಟಿ20 ಪಂದ್ಯಗಳು: 42

ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು ಗೆದ್ದ ಪಂದ್ಯ: 20

ಎರಡನೇ ಬ್ಯಾಟಿಂಗ್ ಮಾಡಿದ ತಂಡಗಳು ಗೆದ್ದ ಪಂದ್ಯ: 22MI vs PBKS ಸಂಭವನೀಯ ತಂಡ:

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಡೆವಾಲ್ಡ್ ಬ್ರೆವಿಸ್, ಕೀರಾನ್ ಪೊಲಾರ್ಡ್, ಫ್ಯಾಬಿಯನ್ ಅಲೆನ್ / ರಮಣದೀಪ್ ಸಿಂಗ್, ಮುರುಗನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಟೈಮಲ್ ಮಿಲ್ಸ್ / ಜಯದೇವ್ ಉನಾದ್ಕತ್, ಬಾಸಿಲ್ ಥಂಪಿ.

ಇದನ್ನೂ ಓದಿ: IPL 2022 RCB vs CSK: ಅಂತೂ ಇಂತೂ RCB ವಿರುದ್ಧ ಭರ್ಜರಿಯಾಗೇ ಗೆದ್ದ CSK

ಪಂಜಾಬ್ ಕಿಂಗ್ಸ್: ಮಯಾಂಕ್ ಅಗರ್ವಾಲ್ (ನಾಯಕ), ಶಿಖರ್ ಧವನ್, ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಲಿಯಾಮ್ ಲಿವಿನ್‌ಸ್ಟೋನ್, ಶಾರುಖ್ ಖಾನ್, ಜಿತೇಶ್ ಶರ್ಮಾ / ರಿಷಿ ಧವನ್, ಓಡಿಯನ್ ಸ್ಮಿತ್ / ನಾಥನ್ ಎಲ್ಲಿಸ್, ಕಗಿಸೊ ರಬಾಡ, ರಾಹುಲ್ ಚಹಾರ್, ವರುಣ್ ಅರೋರಾ, ಅರ್ಶ್‌ದೀಪ್ ಸಿಂಗ್.
Published by:shrikrishna bhat
First published: