IPL 2022: ಚೆನ್ನೈ ತಂಡಕ್ಕೆ ಮುಂಬೈ ಸವಾಲ್, ಹಲವು ದಾಖಲೆಗಳಿಗೆ ಸಾಕ್ಷಿಯಾಗಲಿದ್ಯಾ ಇಂದಿನ ಪಂದ್ಯ?

ಐಪಿಎಲ್ 2022ರ (IPL 2022) 15ನೇ ಸೀಸನ್​ನ 33ನೇ ಪಂದ್ಯದಲ್ಲಿ ಇಂದು ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (MI vs CSK) ತಂಡಗಳು ಸೆಣಸಾಡಲಿವೆ. ಮುಂಬೈನ ಡಿವೈ ಪಾಟೀಲ್ (DY Patel) ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ.

MI vs CSK

MI vs CSK

  • Share this:
ಐಪಿಎಲ್ 2022ರ (IPL 2022) 15ನೇ ಸೀಸನ್​ನ 33ನೇ ಪಂದ್ಯದಲ್ಲಿ ಇಂದು ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (MI vs CSK) ತಂಡಗಳು ಸೆಣಸಾಡಲಿವೆ. ಮುಂಬೈನ ಡಿವೈ ಪಾಟೀಲ್ (DY Patel) ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ. ಈ ಎರಡೂ ತಂಡಗಳು ಐಪಿಎಲ್​ನ ಚಾಂಪಿಯನ್ ತಂಡಗಳು ಎಂದೇ ಖ್ಯಾತವಾಗಿದ್ದವು. ಆದರೆ ಈ ಬಾರಿ ಈ ತಂಡಗಳ ಪ್ರದರ್ಶನ ಅತ್ತಯಂತ ಕಳಪೇ ಆಗಿದ್ದು, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಹೀಗಾಗಿ ಉಭಯ ತಂಡಗಳೆಡೂ ಈ ಬಾರಿ ಪ್ಲೇ ಆಫ್ (PlayOff)​ ಸಹ ತಲುಪುವುದು ಕಷ್ಟಕರವಾಗಿದೆ. ಆದರೆ ಇಂದಿನ ಪಂದ್ಯದಲ್ಲಿ ಉಭಯ ತಂಡಗಳಲ್ಲಿನ ಆಟಗಾರರಿಗೆ ಅನೇಕ ದಾಖಲೆಗಳನ್ನು ಮಾಡಲು ಅವಕಾವಿದ್ದು, ಯಾವೆಲ್ಲಾ ದಾಖಲೆಗಳು ಆಗಬಹುದೆಂಬ ಪಟ್ಟಿ ಇಲ್ಲಿದೆ.

ಹಲವು ದಾಖಲೆಗಳಿಗೆ ಸಾಕ್ಷಿಯಾಗಲಿದೆ ಇಂದಿನ ಪಂದ್ಯ:

1. ಮುಂಬೈ ಇಂಡಿಯನ್ಸ್ ಸತತ 6 ಸೋಲುಗಳೊಂದಿಗೆ ಈ ಐಪಿಎಲ್ ನಲ್ಲಿ ಕೊನೆಯ ಸ್ಥಾನದಲ್ಲಿದೆ. ಇಂದಿನ ಪಂದ್ಯ ಸೋತಲ್ಲಿ ಸತತ 7 ಪಂದ್ಯಗಳನ್ನು ಸೋತ ಏಕೈಕ ಮೊದಲ ಟೀಂ ಇದಾಗಲಿದೆ.

2. ಐಪಿಎಲ್‌ನಲ್ಲಿ 50 ಸಿಕ್ಸರ್‌ ಪಟ್ಟಿಗೆ ಸೇರಲು ಮೊಯಿನ್ ಅಲಿ ಇನ್ನೂ 4 ಸಿಕ್ಸರ್‌ಗಳನ್ನು ಬಾರಿಸಬೇಕಾಗಿದೆ.

ಇದನ್ನೂ ಓದಿ: Kieron Pollard Retirement: ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ ವೆಸ್ಟ್ ಇಂಡೀಸ್ ಆಟಗಾರ ಕೀರನ್ ಪೊಲಾರ್ಡ್

3. ಇಶಾನ್ ಕಿಶನ್ ಐಪಿಎಲ್​ ನಲ್ಲಿ 150 ಬೌಂಡರಿ ತಲುಪಲು ಇನ್ನು ಕೇವಲ 7 ಬೌಂಡರಿಗಳ ಅಗತ್ಯವಿದೆ.

4. ಐಪಿಎಲ್‌ನಲ್ಲಿ 5000 ರನ್‌ಗಳನ್ನು ತಲುಪಲು ರಾಬಿನ್ ಉತ್ತಪ್ಪಗೆ 81 ರನ್​ ಗಳ ಅಗತ್ಯವಿದೆ.

5. ರಾಬಿನ್ ಉತ್ತಪ್ಪ ಅವರು ತಮ್ಮ 200 ನೇ ಐಪಿಎಲ್ ಪಂದ್ಯವನ್ನು ಆಡಲಿದ್ದಾರೆ, ಈ ಮೈಲಿಗಲ್ಲು ಏಳನೇ ಆಟಗಾರರಾಗಿದ್ದಾರೆ.

6. ಜಸ್ಪ್ರೀತ್ ಬುಮ್ರಾ ಅವರು ತಮ್ಮ 200 ನೇ T20 ಪಂದ್ಯವನ್ನು ಆಡುತ್ತಿದ್ದು, ಭುವನೇಶ್ವರ್ ಕುಮಾರ್ ನಂತರ ಹೆಚ್ಚು ಪಂದ್ಯಗಳನ್ನು ಆಡಿದ 2ನೇ ಭಾರತೀಯ ವೇಗಿಯಾಗಲಿದ್ದಾರೆ.

7. ರುತುರಾಜ್ ಗಾಯಕ್ವಾಡ್ (947) ಐಪಿಎಲ್‌ನಲ್ಲಿ 1000 ರನ್ ಪೂರೈಸಲು 53 ರನ್‌ಗಳ ಅಗತ್ಯವಿದೆ.

8. ಸೂರ್ಯಕುಮಾರ್ ಯಾದವ್ (1933) ಐಪಿಎಲ್‌ನಲ್ಲಿ MI ಗಾಗಿ 2000 ರನ್ ಪೂರ್ಣಗೊಳಿಸಲು 67 ರನ್‌ಗಳ ಅಗತ್ಯವಿದೆ.

9. ಗಾಯಕ್ವಾಡ್ (91) ಐಪಿಎಲ್‌ನಲ್ಲಿ 100 ಬೌಂಡರಿಗಳನ್ನು ತಲುಪಲು 9 ಬೌಂಡರಿಗಳು ಬೇಕಿದೆ.

10. ಜಯದೇವ್ ಉನದ್ಕತ್ (199) T20 ಪಂದ್ಯಗಳಲ್ಲಿ 200 ವಿಕೆಟ್‌ ಕ್ಲಬ್ ಸೇರಲು ಕೇವಲ 1 ವಿಕೆಟ್ ಅಂತರದಲ್ಲಿದ್ದಾರೆ.

11. ರೋಹಿತ್ ಶರ್ಮಾ (198) T20 ಕ್ರಿಕೆಟ್‌ನಲ್ಲಿ ಮುಂಬೈ ಪರ 200 ಸಿಕ್ಸರ್‌ಗಳನ್ನು ಪೂರೈಸಲು 2 ಸಿಕ್ಸ್​ ಗಳ ದೂರದಲ್ಲಿದ್ದಾರೆ.

12. ಮೊಯೀನ್ ಅಲಿ (149) ಟಿ20 ಪಂದ್ಯಗಳಲ್ಲಿ 150 ವಿಕೆಟ್‌ಗಳನ್ನು ಪಡೆಯಲು ಒಂದು ವಿಕೆಟ್ ಅಗತ್ಯವಿದೆ.

ಇದನ್ನೂ ಓದಿ: IPL 2022: ಸೋಲಿನ ಸುಳಿಯಿಂದ ಹೊರ ಬರ್ತಾರಾ ಮುಂಬೈ? ಹೇಗಿರಲಿದೆ ಉಭಯ ತಂಡಗಳ ಪ್ಲೇಯಿಂಗ್ 11

13. ರವೀಂದ್ರ ಜಡೇಜಾ ಅವರು ತಮ್ಮ 200 ನೇ ಟಿ20 ಪಂದ್ಯವನ್ನಾಡಲಿದ್ದಾರೆ.

14. ಟಿ20 ಕ್ರಿಕೆಟ್‌ನಲ್ಲಿ MI ಪರ 250 ಬೌಂಡರಿಗಳನ್ನು ಗಳಿಸಲು ಕೀರನ್ ಪೊಲಾರ್ಡ್ ಗೆ ಕೇವಲ 1 ಫೋರ್ ಅಗತ್ಯವಿದೆ.

15. ಶಿವಂ ದುಬೆ (42) ಐಪಿಎಲ್‌ನಲ್ಲಿ 50 ಬೌಂಡರಿಗಳನ್ನು ಪೂರೈಸಲು ಎಂಟು ಬೌಂಡರಿಗಳ ಅಂತರದಲ್ಲಿದ್ದಾರೆ.

ಮುಂಬೈ ಮತ್ತು ಚೆನ್ನೈ ತಂಡದ ಸಂಭಾವ್ಯ ತಂಡ:

ಚೆನ್ನೈ ಸೂಪರ್ ಕಿಂಗ್ಸ್: ರಾಬಿನ್ ಉತ್ತಪ್ಪ, ರುತುರಾಜ್ ಗಾಯಕ್ವಾಡ್, ಮೊಯಿನ್ ಅಲಿ, ಅಂಬಟಿ ರಾಯುಡು, ಶಿವಂ ದುಬೆ, ರವೀಂದ್ರ ಜಡೇಜಾ (c), ಎಂಎಸ್ ಧೋನಿ (WK), ಡ್ವೇನ್ ಬ್ರಾವೋ, ಕ್ರಿಸ್ ಜೋರ್ಡಾನ್, ಮಹೇಶ್ ತೀಕ್ಷಣ, ಮುಖೇಶ್ ಚೌಧರಿ

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (c), ಇಶಾನ್ ಕಿಶನ್ (wk), ಡೆವಾಲ್ಡ್ ಬ್ರೆವಿಸ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಕೀರಾನ್ ಪೊಲಾರ್ಡ್, ಫ್ಯಾಬಿಯನ್ ಅಲೆನ್, ಜಯದೇವ್ ಉನದ್ಕತ್, ಮುರುಗನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಟೈಮಲ್ ಮಿಲ್ಸ್
Published by:shrikrishna bhat
First published: