IPL 2022 MI vs CSK: ಚೆನ್ನೈ ತಂಡಕ್ಕೆ ಮುಂಬೈ ಸವಾಲ್, ಹೇಗಿರಲಿದೆ ಉಭಯ ತಂಡಗಳ ಬಲಾಬಲ

ಐಪಿಎಲ್ 2022 (IPL 2022) 15ನೇ ಆವೃತ್ತಿಯ 59ನೇ ಪಂದ್ಯದಲ್ಲಿ ಇಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ (CSK vs MI) ತಂಡಗಳು ಸೆಣಸಾಡಲಿವೆ.

CSK vs MI

CSK vs MI

  • Share this:
ಐಪಿಎಲ್ 2022 (IPL 2022) 15ನೇ ಆವೃತ್ತಿಯ 59ನೇ ಪಂದ್ಯದಲ್ಲಿ ಇಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ (CSK vs MI) ತಂಡಗಳು ಸೆಣಸಾಡಲಿವೆ. ಇಂದಿನ ಪಂದ್ಯವು ಮುಂಬೈನ ವಾಂಖೆಡೆ ಸ್ಟೇಡಿಯಂ ನಲ್ಲಿ ನಡೆಯಲಿದೆ. ಇಗಾಗಲೇ ಟೂರ್ನಿಯಿಂ ಹೊರಬಿದ್ದಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಇಂದಿನ ಪಂದ್ಯ ಔಪಚಾರಿಕವಾಗಿದೆ. ಆದರೂ ಕೊನೆಯ 2 ಪಂದ್ಯಗಳನ್ನೂ ಗೆದ್ದಿರುವ ರೋಹಿತ್ ಶರ್ಮಾ (Rohit Sharma) ನಾಯಕತ್ವದ ಮುಂಬೈ ತಂಡ ಇಂದಿನ ಪಂದ್ಯವನ್ನೂ ಗೆಲ್ಲುವ ವಿಶ್ವಾಸದಲ್ಲಿದೆ. ಆದರೆ ಧೋನಿ (Dhoni) ನೇತೃತ್ವದ ಚೆನ್ನೈ ಸೂರ್ ಕಿಂಗ್ಸ್ ತಂಡಕ್ಕೆ ಇನ್ನೂ ಪ್ಲೇ ಆಫ್ ಹಂತಕ್ಕೇರಲು ಅವಕಶವಿದ್ದು, ಇಂದಿನ ಪಂದ್ಯ ಸೇರಿದಂತೆ ಉಳಿದ ಎಲ್ಲಾ ಪಂದ್ಯಗಳನ್ನೂ ಹೆಚ್ಚಿನ ರನ್ ರೇಟ್​​ ಮೂಲಕ ಗೆಲ್ಲಲೇ ಬೇಕಾದ ಅವಶ್ಯಕತೆ ಇದೆ. ಕಳೆದ ಪಂದ್ಯದಲ್ಲಿ ಉತ್ತಮವಾಗಿ ಆಡಿ ಗೆದ್ದ ಚೆನ್ನೈ ಇಂದಿನ ಪಂದ್ಯದಲ್ಲಿಯೂ ಗೆಲ್ಲುವ ಅವಶ್ಯಕತೆ ಇದೆ. ಹಾಗಿದ್ದರೆ ಉಭಯ ತಂಡಗಳ ಬಲಾಬಲ ಹೇಗಿದೆನೋಡೋಣ.

ಪಂದ್ಯದ ವಿವರ:

ಐಪಿಎಲ್ 2022ರ 59ನೇ ಪಂದ್ಯದಲ್ಲಿ ಇಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಾಡಲಿವೆ. ಇಂದಿನ ಪಂದ್ಯವು ಮುಂಬೈನ ವಾಂಖೆಡೆ ಸ್ಟೇಡಿಯಂ ನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಟಾಸ್ ಮತ್ತು 7:30ಕ್ಕೆ ಪಂದ್ಯ ಆರಂಭವಾಗಲಿದೆ.

ಪಿಚ್ ವರದಿ:

ವಾಂಖೆಡೆ ಮೈದಾನ ಮೇಲ್ಮೈ ಬ್ಯಾಟರ್‌ಗಳಿಗೆ ಸಾಕಷ್ಟು ಬೆಂಬಲವನ್ನು ನೀಡುವ ನಿರೀಕ್ಷೆಯಿದೆ ಮತ್ತು ಅವರು ಬೃಹತ್ ಮೊತ್ತವನ್ನು ಪೇರಿಸುವ ಸಾಧ್ಯತೆಯಿದೆ. ಆದಾಗ್ಯೂ, ಎರಡನೇ ಇನ್ನಿಂಗ್ಸ್‌ನಲ್ಲಿ ಪಿಚ್ ನಿಧಾನವಾಗಬಹುದು ಮತ್ತು ಸ್ಪಿನ್ನರ್‌ಗಳಿಗೆ ಪ್ರಾಬಲ್ಯ ಸಾಧಿಸುವ ಸಾಧ್ಯತೆಯಿದೆ. ಹೀಗಾಗಿ ಟಾಸ್ ಗೆದ್ದ ನಾಯಕ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: IPL 2022 CSK Team: ಈ ಆಟಗಾರನ ವಿಚಾರದಲ್ಲಿ ಚೆನ್ನೈ ತಪ್ಪು ಮಾಡಿದೆಯೇ? CSK ಟೀಂ ಈ ಬಾರಿ ಎಡವಿದ್ದೆಲ್ಲಿ?

CSK vs MI ಹೆಡ್ ಟು ಹೆಡ್:

ಈವರೆಗೆ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಒಟ್ಟು 33 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ 14 ಬಾರಿ ಚೆನ್ನೈ ಮತ್ತು 19 ಬಾರಿ ಮುಂಬೈ ತಂಡಗಳು ಗೆದ್ದಿವೆ. ಕಳೆದ ಬಾರಿ ನಡೆದ 1 ಪಂದ್ಯದಲ್ಲಿ ಚೆನ್ನೈ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದಿತ್ತು, ಅಂಕಿಅಂಶಗಳ ಪ್ರಕಾರ ಉಭಯ ತಂಡಗಳೆರಡೂ ಬಲಿಷ್ಠವಾಗಿದೆ ಎನ್ನಬಹುದು.

ಉಭಯ ತಂಡಗಳ ಐಪಿಎಲ್ 2022ರ ಪ್ರದರ್ಶನ:

IPL 2022 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಇದುವರೆಗೆ 11 ಪಂದ್ಯಗಳನ್ನು ಆಡಿದೆ. ಅವರು 4 ಪಂದ್ಯಗಳನ್ನು ಗೆದ್ದಿದ್ದಾರೆ ಮತ್ತು 7 ರಲ್ಲಿ ಸೋತಿದ್ದಾರೆ. CSK 8 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿದೆ. ಅದರಂತೆ ಮುಂಬೈ ಇಂಡಿಯನ್ಸ್ ಇಲ್ಲಿಯವರೆಗೆ 11 ಪಂದ್ಯಗಳನ್ನು ಆಡಿದೆ, ಅವರು 2 ಪಂದ್ಯಗಳನ್ನು ಗೆದ್ದು 9 ರಲ್ಲಿ ಸೋತಿದ್ದಾರೆ. ಅವರು 4 ಅಂಕಗಳೊಂದಿಗೆ 10ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: Team India: ವಿಶ್ವಕಪ್​ಗೂ ಮುನ್ನ ಟಿ20 ಸರಣಿ ಆಡಲಿದೆ ಟೀಂ ಇಂಡಿಯಾ, ಆಸ್ಟ್ರೇಲಿಯಾ ನಡುವಿನ ಸರಣಿಯ ವೇಳಾಪಟ್ಟಿ ಬಿಡುಗಡೆ

CSK vs MI ಸಂಭಾವ್ಯ ತಂಡ:

ಚೆನ್ನೈ ಸೂಪರ್ ಕಿಂಗ್ಸ್: ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಮೊಯಿನ್ ಅಲಿ, ಎಂಎಸ್ ಧೋನಿ (ಸಿ & ವಿಕೆ), ಶಿವಂ ದುಬೆ, ಡ್ವೇನ್ ಬ್ರಾವೋ, ಮಹೇಶ್ ತೀಕ್ಷಣ, ಸಿಮರ್ಜೀತ್ ಸಿಂಗ್, ಮುಖೇಶ್ ಚೌಧರಿ.

ಮುಂಬೈ ಇಂಡಿಯನ್ಸ್: ಇಶಾನ್ ಕಿಶನ್ (WK), ರೋಹಿತ್ ಶರ್ಮಾ (c), ತಿಲಕ್ ವರ್ಮಾ, ಟಿಮ್ ಡೇವಿಡ್, ಕೀರಾನ್ ಪೊಲಾರ್ಡ್, ರಮಣದೀಪ್ ಸಿಂಗ್, ಡೇನಿಯಲ್ ಸಾಮ್ಸ್, ಮುರುಗನ್ ಅಶ್ವಿನ್, ಕುಮಾರ್ ಕಾರ್ತಿಕೇಯ, ಜಸ್ಪ್ರೀತ್ ಬುಮ್ರಾ, ರಿಲೆ ಮೆರೆಡಿತ್.
Published by:shrikrishna bhat
First published: