IPL Auction: ಫೆ. 12-13ಕ್ಕೆ ಬೆಂಗಳೂರಿನಲ್ಲೇ ಮೆಗಾ ಹರಾಜು: ಮತ್ತೆ​ ಭಾರತ-ವೆಸ್ಟ್​ ಇಂಡೀಸ್​ ಪಂದ್ಯದ ಕಥೆಯೇನು?

2022 ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿ(Bengaluru)ನಲ್ಲಿ ನಡೆಯಲಿದೆ. ನಿನ್ನೆಯಷ್ಟೇ ಮೆಗಾ ಹರಾಜು ಫೆ 7, 8ರಂದು ನಡೆಯುತ್ತೆ ಎಂಬ ಮಾಹಿತಿ ಸಿಕ್ಕಿತ್ತು. ಈಗ ದಿನಾಂಕ ಬದಲಾವಣೆ ಮಾಡಿದ್ದು, ಫೆಬ್ರವರಿ 12 ಮತ್ತು 13ರಂದು ಹರಾಜು ನಡೆಸಲು ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಬಿಸಿಸಿಐ(BCCI) ಮೂಲಗಳು ತಿಳಿಸಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚುಟುಕು ಕ್ರಿಕೆಟ್​ ಹಬ್ಬ ಅಂದರೆ, ಯಾರಿಗೆ ಇಷ್ಟ ಇಲ್ಲ. ಐಪಿಎಲ್(IPL)​ ಕ್ರಿಕೆಟ್​ಗೆ ಹೆಚ್ಚು ಮಂದಿ ಫ್ಯಾನ್ಸ್​ ಇದ್ದಾರೆ. ನೀವು ಮಳೆಗಾಲ, ಚಳಿಗಾಲ, ಬೇಸಿಗೆ ಕಾಲ ಅನುಭವಿಸಿರುತ್ತೀರ. ಆದರೆ, ಕ್ರಿಕೆಟ್​ ಪ್ರೇಮಿಗಳಿಗ ನೆಚ್ಚಿನ ಕಾಲ ಯಾವುದು ಗೊತ್ತಾ? ಅದೇ.. ಐಪಿಎಲ್​ ಕಾಲ(IPL Time).. ಹೌದು..ಐಪಿಎಲ್​ ಸೀಸನ್​ ಬಂದರೆ ಸಾಕು ನಮ್ಮ ಮಂದಿಗೆ ಅದೇನೋ ಒಂಥರಾ ಜೋಶ್(Josh)​. ನಮ್ಮೂರಿನ ತಂಡ ಗೆಲ್ಲಬೇಕು ಎಂಬ ಹಂಬಲ. ಎಲ್ಲರೂ ನಮ್ಮವರೇ ಎಂಬುವ ಭಾವ. ಇದೆಲ್ಲಕ್ಕಿಂತ ಮುಂಚಿತವಾಗಿ ಹರಾಜು ಪ್ರಕ್ರಿಯೆ ಕೂಡ ನಡೆಸಲಾಗುತ್ತೆ. ಅದರಂತೆ  ಈ ಬಾರಿಯ ಅಂದರೆ  ಇಂಡಿಯನ್​ ಪ್ರೀಮಿಯರ್​ ಲೀಗ್​ಗಾಗಿ ಮೆಗಾ ಹರಾಜಿ(Mega Auction)ನ ವೇಳಾಪಟ್ಟಿಯನ್ನು ಅಂತಿಮಗೊಳಿಸಿದೆ.  2022 ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿ(Bengaluru)ನಲ್ಲಿ ನಡೆಯಲಿದೆ. ನಿನ್ನೆಯಷ್ಟೇ ಮೆಗಾ ಹರಾಜು ಫೆ 7, 8ರಂದು ನಡೆಯುತ್ತೆ ಎಂಬ ಮಾಹಿತಿ ಸಿಕ್ಕಿತ್ತು. ಈಗ ದಿನಾಂಕ ಬದಲಾವಣೆ ಮಾಡಿದ್ದು, ಫೆಬ್ರವರಿ 12 ಮತ್ತು 13ರಂದು ಹರಾಜು ನಡೆಸಲು ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಬಿಸಿಸಿಐ(BCCI) ಮೂಲಗಳು ತಿಳಿಸಿವೆ. ಹರಾಜು ಪ್ರಕ್ರಿಯೆಯ ದಿನಾಂಕವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧಿಕೃತವಾಗಿ ಘೋಷಿಸಿಲ್ಲ. ಆದರೆ ಐಪಿಎಲ್ ಫ್ರಾಂಚೈಸ್‍ಗಳಿಗೆ ಈ ಬಗ್ಗೆ ತಿಳಿಸಿದೆ ಎಂದು ಆಪ್ತಮೂಲಗಳಿಂದ ವರದಿ ಹೊರಬಿದ್ದಿದೆ.

4 ಮಂದಿ ಆಟಗಾರರನ್ನು ಉಳಿಸಿಕೊಂಡಿರುವ ತಂಡಗಳು!

ಈಗಾಗಲೇ 8 ತಂಡಗಳು ಮೆಗಾ ಹರಾಜಿಗೂ ಮುನ್ನ ಗರಿಷ್ಠ 4 ಮಂದಿ ಆಟಗಾರರನ್ನು ಉಳಿಸಿಕೊಂಡಿದೆ. ಆ ಬಳಿಕ ಇದೀಗ ಹೊಸದಾಗಿ ಸೇರ್ಪಡೆಗೊಂಡಿರುವ 2 ತಂಡಗಳು ಸಹಿತ ಒಟ್ಟು 10 ತಂಡಗಳು ಆಟಗಾರರನ್ನು ಖರೀದಿಸಲು ತುದಿಗಾಲಲ್ಲಿ ನಿಂತಿದೆ. ಈ ನಡುವೆ ಬಿಸಿಸಿಐ ಹರಾಜು ಪ್ರಕ್ರಿಯೆ, ಟಿವಿ ಪ್ರಸಾರದ ಹಕ್ಕು ಬಗ್ಗೆ ಈಗಾಗಲೇ ಚರ್ಚೆನಡೆಸಿದ್ದು ಮುಂದಿನ ಕೆಲ ದಿನಗಳಲ್ಲಿ ಈ ಬಗ್ಗೆ ಅಧಿಕೃತವಾಗಿ ತಿಳಿಸುವ ಸಾಧ್ಯತೆ ಇದೆ. ಈ ಬಾರಿ ಬೆಂಗಳೂರಿನಲ್ಲಿ ನಡೆಯುತ್ತಿರುವುದು ಮತ್ತಷ್ಟು ಜೋಶ್​ ನೀಡಿದೆ. ಯಾವ ತಂಡಕ್ಕೆ ಯಾವ ಆಟಗಾರ ಹೋಗುತ್ತಾನೆಂದು ಈಗಾಗಲೇ ಕ್ರೀಡಾಭಿಮಾನಿಗಳು ಚರ್ಚೆ ನಡೆಸುತ್ತಿದ್ದಾರೆ.

ಯಾವ ತಂಡದ ಬಳಿ ಎಷ್ಟು ಮೊತ್ತ ಬಾಕಿ?

ಡೆಲ್ಲಿ ಕಾಪಿಟಲ್ಸ್ 47.5 ಕೋಟಿ, ಚೆನ್ನೈ ಸೂಪರ್ ಕಿಂಗ್ಸ್ 48 ಕೋಟಿ, ಕೋಲ್ಕತ್ತಾ ನೈಟ್ ರೈಡರ್ಸ್ 48 ಕೋಟಿ, ಮುಂಬೈ ಇಂಡಿಯನ್ಸ್ 48 ಕೋಟಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು 57 ಕೋಟಿ, ರಾಜಸ್ಥಾನ್ ರಾಯಲ್ಸ್ 62 ಕೋಟಿ, ಸನ್ ರೈಸರ್ಸ್ ಹೈದರಾಬಾದ್ 68 ಕೋಟಿ,ಪಂಜಾಬ್ ಕಿಂಗ್ಸ್ 72 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದ್ದು, ಈ ಹಣದಲ್ಲಿ ಇತರ ಆಟಗಾರರನ್ನು ಖರೀದಿಸಬೇಕಾಗಿದೆ. ಹೊಸದಾಗಿ ಸೇರ್ಪಡೆಗೊಂಡ ಲಕ್ನೋ ಮತ್ತು ಅಹಮದಾಬಾದ್ ತಂಡಗಳು ತಲಾ 90 ಕೋಟಿ ರೂಪಾಯಿಯನ್ನು ಹರಾಜಿನಲ್ಲಿ ವ್ಯಯಿಸಲಿದೆ. ಹೀಗಾಗಿ ಸಾಕಷ್ಟು ಕುತೂಹಲ ಮೂಡಿಸಿದೆ.

ಇದನ್ನು ಓದಿ :ಇಂದು ದಬಂಗ್​​​ ಡೆಲ್ಲಿV/S ಪುಣೇರಿ ಪಲ್ಟನ್​: ಪಂದ್ಯ ಗೆಲ್ಲೋದ್ಯಾರು? ಪಕ್ಕಾ ಪ್ರೆಡಿಕ್ಷನ್‌ ಇಲ್ಲಿದೆ..

ಭಾರತ- ವೆಸ್ಟ್​ ಇಂಡಿಯಾ ಪಂದ್ಯದ ಕಥೆಯೇನು?

ಇನ್ನೂ ಫೆಬ್ರವರಿ 12 ಕ್ಕೆ ಭಾರತ ಹಾಗೂ ವೆಸ್ಟ್​ ಇಂಡೀಸ್​ ನಡುವೆ ಏಕದಿನ ಟೂರ್ನಿ ಆರಂಭವಾಗಲಿದೆ. ಹಾಗಾಗಿ ಹರಾಜು ಪ್ರಕ್ರಿಯೆಯಿಂದ ಪಂದ್ಯದ ಮೇಲೆ ಯಾವುದೇ ಪರಿಣಾಮ ಬೀರಬಾರದು ಎಂದು ಬಿಸಿಸಿಐ ಅಧಿಕಾರಿಗಳು ಮನವಿ ಮಾಡಿದ್ದಾರೆ. ಇದಕ್ಕೆ ಉತ್ತರಿಸಿರುವು ಐಪಿಎಲ್​ ಆಡಳಿತ ಮಂಡಳಿ, ಹರಾಜು ಪ್ರಕ್ರಿಯೆಯಿಂದ ಏಕದಿನ ಪಂದ್ಯಕ್ಕೆ ಯಾವುದೇ ತೊಂದರೆಯಾಗಲ್ಲ ಎಂದು ಹೇಳಿದ್ದಾರೆ. ಫೆಬ್ರವರಿ 12ರಂದು ಕೊಲ್ಕತ್ತಾದಲ್ಲಿ ಏಕದಿನ ಪಂದ್ಯ ನಿಗದಿಯಾಗಿದೆ.

ಇದನ್ನು ಓದಿ: ಪ್ರೋಕಬಡ್ಡಿಯಲ್ಲಿ 15ಕ್ಕೂ ಹೆಚ್ಚು ಕನ್ನಡಿಗರು; ಇಬ್ಬರು ಕ್ಯಾಪ್ಟನ್ಸ್; ಮೂವರು ಕೋಚ್

ಈ ಎರಡೂ ಕಾರ್ಯಕ್ರಮಗಳ ಪ್ರಸಾರದ ಹಕ್ಕನ್ನು ಸ್ಟಾರ್​ ಸ್ಪೋರ್ಟ್ಸ್​ ಹೊಂದಿದೆ. ಈ ಬಗ್ಗೆ ಚಾನೆಲ್​ನ ಅಧಿಕಾರಿಗಳೂ ಮಾಹಿತಿ ನೀಡಲಾಗಿದೆ. ಒಂದೇ ದಿನ ಪಂದ್ಯ ಹಾಗೂ ಹರಾಜು ಪ್ರಕ್ರಿಯೆ ಲೈವ್​ ಟೆಲಿಕಾಸ್ಟ್​ ಮಾಡಲು ಯಾವುದು ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಸೂಚಿಸಲಾಗಿದೆ.
Published by:Vasudeva M
First published: