IPL 2022: ಈ ಸಲ ಕಪ್ ನಮ್ದೇ ಅಂತಿದ್ದಾರೆ RCB ​ಫ್ಯಾನ್ಸ್! ಕಾರಣ ಏನು ಗೊತ್ತಾ?

ಐಪಿಎಲ್ ಪ್ರಶಸ್ತಿಯ ರೇಸ್‌ನಲ್ಲಿ ಇನ್ನೂ 3 ತಂಡಗಳಿದ್ದರೂ, ಈ ಬಾರಿ ಆರ್‌ಸಿಬಿ ಐಪಿಎಲ್ ಟ್ರೋಫಿಯನ್ನು ಗೆಲ್ಲಲಿದೆ ಎಂಬ ಒಂದು ನಂಬಿಕೆಯನ್ನು ಅಭಿಮಾನಿಗಳು ಹೇಳುತ್ತಿದ್ದಾರೆ. ಅದಕ್ಕೂ ಒಂದು ಕಾರಣವಿದೆಯಂತೆ, ಹಾಗಿದ್ದರೆ ಅದರ ಹಿಂದಿನ ಕಾರಣವೇನು ಎಂದು ತಿಳಿಯೋಣ.

RCB Team

RCB Team

  • Share this:
ಐಪಿಎಲ್ 2022ರ (IPL 2022) ಚಾಂಪಿಯನ್ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ಇನ್ನೇನು ಕೇವಲ 2 ಪಂದ್ಯಗಳ ನಂತರ ತಿಳಿದುಬರಲಿದೆ. ಈ ವರ್ಷ 10 ತಂಡಗಳು ಐಪಿಎಲ್ 15ನೇ ಋತುವಿನಲ್ಲಿ ಭಾಗವಹಿಸಿದ್ದವು. 72 ಪಂದ್ಯಗಳ ನಂತರ, ಗುಜರಾತ್ ಟೈಟಾನ್ಸ್ (GT), ರಾಜಸ್ಥಾನ್ ರಾಯಲ್ಸ್ (RR) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) 3 ತಂಡಗಳು ಉಳಿದಿವೆ. ಈಗಾಗಲೇ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ತಂಡ ಫೈನಲ್ ತಲುಪಿದ್ದು, ರಾಜಸ್ಥಾನ ಮತ್ತು RCB ನಡುವಿನ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೋ ಅವರು ಗುಜರಾತ್ ವಿರುದ್ಧ ಸೆಣಸಾಡಲಿದೆ. ಐಪಿಎಲ್ ಪ್ರಶಸ್ತಿಯ ರೇಸ್‌ನಲ್ಲಿ ಇನ್ನೂ 3 ತಂಡಗಳಿದ್ದರೂ, ಈ ಬಾರಿ ಆರ್‌ಸಿಬಿ ಐಪಿಎಲ್ ಟ್ರೋಫಿಯನ್ನು ಗೆಲ್ಲಲಿದೆ ಎಂಬ ಒಂದು ನಂಬಿಕೆಯನ್ನು ಅಭಿಮಾನಿಗಳು ಹೇಳುತ್ತಿದ್ದಾರೆ. ಅದಕ್ಕೂ ಒಂದು ಕಾರಣವಿದೆಯಂತೆ, ಹಾಗಿದ್ದರೆ ಅದರ ಹಿಂದಿನ ಕಾರಣವೇನು ಎಂದು ತಿಳಿಯೋಣ.

ಫ್ಲೆ ಆಫ್ ಪ್ರವೇಶಿಸಿದ್ದ ಆರ್​ಸಿಬಿ:

ಇನ್ನು, ಕೆಲ ವರ್ಷಗಳ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿ ಐಪಿಎಲ್ ನಲ್ಲಿ ಫ್ಲೇ ಆಫ್ ಪ್ರವೇಶಿಸಿದೆ. ಆರ್‌ಸಿಬಿ ನಾಲ್ಕನೇ ಸ್ಥಾನದೊಂದಿಗೆ ಪ್ಲೇ ಆಫ್‌ಗೆ ಪ್ರವೇಶಿಸಿತ್ತು. ನಂತರ ನಿನ್ನೆ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಬೆಂಗಳೂರು ತಂಡ ಗೆದ್ದಿದೆ. ಇದೀಗ ಎಲಿಮಿನೇಟರ್ ಪಂದ್ಯದಲ್ಲಿ ಆರ್​ಸಿಬಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ.

ಇಲ್ಲಿಯೂ ಗೆದ್ದಲ್ಲಿ ಫೈನಲ್​ ನಲ್ಲಿ ಗುಜರಾತ್ ತಂಡದ ವಿರುದ್ಧ ಆರ್​ಸಿಬಿ ಸೆಣಸಲಿದೆ. ಇದರ ನಡುವೆ ಕೆಲ ಮಾತುಗಳು ಕೇಳಿಬರುತ್ತಿದ್ದು, ಈ ಬಾರಿ ಪಕ್ಕಾ ಆರ್​ಸಿಬಿ ಕಪ್ ಗೆಲ್ಲಲಿದೆ ಎಂದು ಹೇಳಲಅಗುತ್ತಿದೆ.

ಇದನ್ನೂ ಓದಿ: IPL 2022 RCB vs LSG: ಹ್ಯಾಜಲ್ವುಡ್ ದಾಳಿಗೆ ತತ್ತರಿಸಿದ ಲಕ್ನೋ, ಗೆದ್ದು ಬೀಗಿದ RCB

RCB ಈ ವರ್ಷ ಹೇಗೆ ಗೆಲ್ಲುತ್ತದೆ?:

ಪ್ರಮುಖವಾಗಿ ಮೇಲ್ನೋಟಕ್ಕೆ ಕಾಣುವುದಾದಲ್ಲಿ, ಈ ಬಾರಿ ಆರ್​ಸಿಬಿ ತಂಡವು ಸ್ಥಿರವಾಗಿದ್ದು, ಹೆಚ್ಚು ಬಲಿಷ್ಠವಾಗಿದೆ. ಅಲ್ಲದೇ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲಿಯೂ ಆಟಗಾರರು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಹೀಗಾಗಿ ಈ ಬಾರಿ ಪಕ್ಕಾ ಬೆಂಗಳುರು ತಂಡ ಟ್ರೂಫಿ ಗೆಲ್ಲುವ ನಿರೀಕ್ಷೆಯಿದೆ. ಅಲ್ಲದೇ ಅಭಿಮಾನಿಗಳು ಈಗಾಗಲೇ ಈ ಸಲ ಕಪ್ ನಮ್ದೇ ಎಂದು ಹೇಳುತ್ತಿದ್ದಾರೆ. ಇದರೊಂದಿಗೆ ಮತ್ತೊಂದು ನಂಬಿಕೆಯೂ ಆರ್​ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ ಎಂಬ ಮಾತುಗಳು ಕೇಳಿಬರುತ್ತಲಿದೆ.

ಲಕ್ಕಿ ಚಾರ್ಮ್ ಕರ್ಣ್ ಶರ್ಮಾ:

ಹೌದು, ಈ ಋತುವಿನಲ್ಲಿ ಒಂದೇ ಒಂದು ಪಂದ್ಯವನ್ನು ಆಡದ ಕರ್ಣ್ ಶರ್ಮಾ ಈ ಬಾರಿ ಆರ್‌ಸಿಬಿ ತಂಡದಲ್ಲಿದ್ದಾರೆ. ಇವರಿಂದ ಆರ್​ಸಿಬಿ ಪ್ರಶಸ್ತಿ ಗೆಲ್ಲಲಿದೆ ಎಂದು ಹೇಳಲಾಗುತ್ತಿದೆ. ಈ ವರ್ಷ ಆರ್‌ಸಿಬಿ 50 ಲಕ್ಷಕ್ಕೆ ಕರ್ಣ್ ಶರ್ಮಾ ಅವರನ್ನು ಖರೀದಿಸಿತ್ತು. ಕರ್ಣ ಶರ್ಮಾ ಅವರನ್ನು ಐಪಿಎಲ್‌ನಲ್ಲಿ ಅದೃಷ್ಟದ ಚಾರ್ಮ್ ಎಂದು ಪರಿಗಣಿಸಲಾಗಿದೆ. ಅವರಿರುವ ತಂಡವೇ ಐಪಿಎಲ್ ಪ್ರಶಸ್ತಿ ಗೆಲ್ಲುತ್ತದೆ ಎಂಬ ನಂಬಿಕೆ ಸಹ ಇದೆ.

ಇದನ್ನೂ ಓದಿ: AB de Villiers: RCB ಅಭಿಮಾನಿಗಳಿಗೆ ಗುಡ್ ನ್ಯೂಸ್, ಮುಂದಿನ ವರ್ಷ ಐಪಿಎಲ್​ಗೆ ಮರಳಲಿದ್ದಾರೆ ಮಿ. 360!

ಕರ್ಣ್ ಶರ್ಮಾ 2016 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನಲ್ಲಿದ್ದಾಗ, ಅವರು ಮೊದಲ ಬಾರಿಗೆ ಐಪಿಎಲ್ ಪ್ರಶಸ್ತಿಯನ್ನು ಗೆದ್ದರು. ಅವರು 2017 ರಲ್ಲಿ ಪ್ರಶಸ್ತಿ ಗೆದ್ದ ಮುಂಬೈ ಇಂಡಿಯನ್ಸ್‌ನ ತಂಡದ ಸದಸ್ಯರಾಗಿದ್ದರು. ಅವರು ನಂತರ 2018 ರಿಂದ 2021ರ ವರೆಗೆ ಚೆನ್ನೈ ಸೂಪರ್ ಕಿಂಗ್ಸ್ ಜೊತೆಯಲ್ಲಿದ್ದರು. ಈ ಅವಧಿಯಲ್ಲಿ ಸಿಎಸ್ ಕೆ ಎರಡು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿತ್ತು. ಆದರೆ ಈ ವರ್ಷ ಕರ್ಣ್ ಶರ್ಮಾ RCB ಜೊತೆಗಿದ್ದಾರೆ. ಹಾಗಾಗಿ ಈ ‘ಅದೃಷ್ಟ ಚಾರ್ಮ್’ ವಿರಾಟ್ ಕೊಹ್ಲಿ ಅವರ ಐಪಿಎಲ್ ಪ್ರಶಸ್ತಿ ಗೆಲ್ಲುವ ಕನಸನ್ನು ನನಸಾಗಿಸುತ್ತದೆ ಎಂದು ನಂಬಲಾಗಿದೆ.
Published by:shrikrishna bhat
First published: