IPL 2022: RCB vs LSG ಪಂದ್ಯಕ್ಕೆ ವರುಣನ ಕಾಟ, ವಿಶೇಷ ಮಾರ್ಗಸೂಚಿ ಬಿಡುಗಡೆ ಮಾಡಿದ BCCI

ಇಂದು ಆರ್​ಸಿಬಿ ಮತ್ತು ಲಕ್ನೋ ತಂಡಗಳು ಫ್ಲೇ ಆಫ್​ ನ 2ನೇ ಪಂದ್ಯದಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಸೆಣಸಾಡಲಿದೆ. ಆದರೆ ಮಳೆ ಮತ್ತು ಗಾಳಿ ಜೋರಾಗಿ ಬೀಸುತ್ತಿರುವ ಕಾರಣದಿಂದ ಟಾಸ್ ಪ್ರಕ್ರಿಯೆ ತಡವಾಗುವುದಾಗಿ ತಿಳಿಸಲಾಗಿದೆ.

RCB vs LSG

RCB vs LSG

  • Share this:
ಐಪಿಎಲ್ 2022ರ (IPL 2022) 2ನೇ ಫ್ಲೇ ಆಫ್ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ (RCB vs LSG) ತಂಡಗಳು ಸೆಣಸಾಡಲಿವೆ. ಇಂದಿನ ಪಂದ್ಯವು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದ್ದು, ಈಗಾಗಲೇ ಮಳೆಯಿಂದಾಗಿ (Rain) ಪಂದ್ಯ ತಡವಾಗಿ ಹಾಗೂ ಟಾಸ್ (Toss) ತಡವಾಗಿ ಆಗಲಿದೆ ಎಂದು ತಿಳಿದುಬಂದಿದೆ. ಇದರ ನಡುವೆ ಇಂದಿನ ಪಂದ್ಯ ಆರ್​ಸಿಬಿ ತಂಡಕ್ಕೆ ಮಹತ್ವದ್ದಾಗಿದ್ದು, ಯಾವುದೇ ಕಾರಣಕ್ಕೂ ಈ ಪಂದ್ಯ RCB ತಂಡಕ್ಕೆ ರದ್ದಾಗಬಾರದು. ಮಳೆಯಿಂದ ಪಂದ್ಯ ತಡವಾಗುತ್ತಿರುವುದರಿಂದ ಬಿಸಿಸಿಐ, ಎಲಿಮಿನೇಟರ್ ಪಮದ್ಯಕ್ಕಾಗಿ ಹೊಸ ನಿಯಮಗಳನ್ನು ಪರಿಚಯಿಸಿದೆ. ಈ ಮೂಲಕ ಇಂದು ಪಂದ್ಯ ನಡೆಯುತ್ತದೆ ಎಂಬ ಆಶಾಭಾವನೆ ಅಭಿಮಾನಿಗಳಲ್ಲಿ ಮೂಡಿದೆ.

ಕೋಲ್ಕತ್ತಾದಲ್ಲಿ ಮಳೆ:

ಇನ್ನು, ಇಂದು ಆರ್​ಸಿಬಿ ಮತ್ತು ಲಕ್ನೋ ತಂಡಗಳು ಫ್ಲೇ ಆಫ್​ ನ 2ನೇ ಪಂದ್ಯದಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಸೆಣಸಾಡಲಿದೆ. ಆದರೆ ಮಳೆ ಮತ್ತು ಗಾಳಿ ಜೋರಾಗಿ ಬೀಸುತ್ತಿರುವ ಕಾರಣದಿಂದ ಟಾಸ್ ಪ್ರಕ್ರಿಯೆ ತಡವಾಗುವುದಾಗಿ ತಿಳಿಸಲಾಗಿದೆ. ಒಂದು ವೇಳೆ ಮಳೆಯಿಂದ ಪಂದ್ಯ ಏಣಾಗಲಿದೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಆದರೆ ಈ ಕುರಿತು ಬಿಸಿಸಿಐ ಸ್ಪಷ್ಟನೆ ನೀಡಿದ್ದು, ಮಳೆ ಬಂದರೂ ಪಂದ್ಯ ಮುಂದುವರೆಸುವುದಾಗಿ ತಿಳಿಸಿದ್ದು, ವಿಶೇಷ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಟಾಸ್​ ಗೆದ್ದ ಲಕ್ನೋ ಬೌಲಿಂಗ್ ಆಯ್ಕೆ:

ಇನ್ನು, ಮಳೆಯು ಕೊಂಚ ಬಿಡುವನ್ನು ನೀಡಿದ್ದು, ಟಾಸ್ ಪ್ರಕ್ರಿಯೆ ನಡೆದಿದೆ. ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಹೀಗಾಗಿ ಆರ್​ಸಿಬಿ ತಂಡ ಮೊದಲು ಬ್ಯಾಟಿಂಗ್ ಮಾಡಲಿದೆ.

ಇದನ್ನೂ ಓದಿ: IPL 2022 RCB vs LSG: ಲಕ್ನೋ ತಂಡಕ್ಕೆ RCB ಸವಾಲ್, ಹೇಗಿರಲಿದೆ ಉಭಯ ತಂಡಗಳ ಬಲಾಬಲ

ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಬಿಸಿಸಿಐ:

ಇನ್ನು, ಮಳೆಯಿಂದ ತಡವಾಗಿ ಟಾಸ್ ಆದರೂ ಇಮದಿನ ಪಂದ್ಯ ಅಂತಿಮವಾಗಿ ನಡೆಯಲೇ ಬೇಕು ಎಂಬ ಕಾರಣಕ್ಕಾಗಿ ಬಿಸಿಸಿಐ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಅದರಂತೆ ಏನಾದರೂ ಪಂದ್ಯಾ ರಂಭವಾದ ಮೇಲೂ ಮತ್ತೆ ಮಳೆ ಬಂದಲ್ಲಿ ಹೆಚ್ಚುವರಿಯಾಗಿ 2 ಗಂಟೆಗೆಳ ಅಮಯವನ್ನು ನೀಡಲಾಗುತ್ತದೆ. ಅಂದರೆ ಮತ್ತೆ ಮಳೆ ನಿಂತ ಬಳಿಕ ಪಂದ್ಯ ಆರಂಭವಾಗಲಿದೆ. ಅಲ್ಲದೇ ಇದು ಸಂಪೂರ್ಣ 20 ಓವರ್ ಗಳನ್ನೂ ಆಡಿಸಲಾಗುತ್ತದೆ ಎಂದು ತಿಳಸಿದೆ.

ಇದಲ್ಲದೇ ಮಳೆ ನಿಲ್ಲುವುದು ಮತ್ತಷ್ಟು ತಡವಾದಲ್ಲಿ ಓವರ್ ಗಳಲ್ಲಿ ಕೊಂಚ ಕಡಿಮೆ ಮಾಡಿ ರಾತ್ರಿ 9:40ಕ್ಕೆ ಪಂದ್ಯವನ್ನು ಆರಂಭಿಸಲಾಗುತ್ತದೆ.

ಇದರ ನಂತರವೂ ಮಳೆ ಮತ್ತೆ ಬಂದಲ್ಲಿ ಅಥವಾ ತಡವಾದಲ್ಲಿ ಉಭಯ ತಂಡಗಳಿಗೆ ಸಮವಾಗಿ ತಲಾ 5 ಓವರ್ ಗಳ ಪಂದ್ಯವನ್ನು ಆಡಿಸಲಾಗುತ್ತದೆ. ಆದರೆ ಈ ಪಂದ್ಯ ಆಯೋಜಿಸಲು ರಾತ್ರಿ 11:50ರ ನಂತರ ಎಂದು ಸಮಯವನ್ನು ನಿಗದಿಪಡಿಸಲಾಗಿದೆ.

ಒಂದು ವೇಳೆ 5 ಓವರ್ ಗಳ ಪಂದ್ಯ ನಡೆದಲ್ಲಿ ತಂಡಗಳಿಗೆ ಟೈಂ ಔಟ್ ಇರುವುದಿಲ್ಲ. ಎಂದು ತಿಳಿಸಿದೆ. ಅಲ್ಲದೇ ರಾತ್ರಿ 12:50 ರೊಳಗಾಗಿ ಪಂದ್ಯವನ್ನು ಮುಗಿಸುವಂತೆ ಬಿಸಿಸಿಐ ತಿಳಸಿದೆ. ಅಲ್ಲದೇ 12:50ರೊಳಗೆ ಒಂದು ವೇಳೆ ಪಂದ್ಯ ಮುಗಿಯದಿದ್ದಲ್ಲಿ ಸೂಪರ್ ಓವರ್ ಆಡಿಸಲಾಗುತ್ತದೆ.

ಇದನ್ನೂ ಓದಿ: Sachin Tendulkar: ಅರ್ಜುನ್ ಆಯ್ಕೆ ಕುರಿತು ಕೊನೆಗೂ ಮೌನ ಮುರಿದ ಸಚಿನ್, ತಂಡದ ಆಯ್ಕೆಯಲ್ಲಿ ಭಾಗವಹಿಸುವುದಿಲ್ಲ ಎಂದು ತೆಂಡೂಲ್ಕರ್

ಇನ್ನು ಯಾವುದೇ ರೀತಿಯಲ್ಲಿ ಮಳೆ ನಿಲ್ಲದೇ ಪಂದ್ಯ ನಡೆಯದಿದ್ದಲ್ಲಿ ಲೀಗ್ ಹಂತದ ಪಾಯಿಂಟ್ ಟೇಬಲ್ ಆಧರಿಸಿ ಹೆಚ್ಚು ಅಂಕ ಹೊಂದಿರುವ ತಂಡ ಕ್ವಾಲಿಫೈಯರ್ ಹಂತಕ್ಕೆ ತಲುಪಲಿದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ.

RCB ತಂಡಕ್ಕೆ ಆರಂಭಿಕ ಆಘಾತ:

ಇನ್ನು, ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿರುವ ಆರ್​ಸಿಬಿ ತಂಡಕ್ಕೆ ಆರಂಭಿಕ ಆಘಾತ ಉಂಟಾಗಿದೆ. ಬೆಂಗಳೂರು ತಂಡದ ನಾಯಕ ಡುಪ್ಲೇಸಿಸ್ ಶುನ್ಯ್ಕಕೆ ಔಟಾಗಿದ್ದು, ತಂಡದ ಮೊತ್ತ 1 ಓವರ್ ಗೆ 4 ರನ್ ಗೆ 1 ವಿಕೆಟ್ ಕಳೆದುಕೊಂಡಿದೆ.

ಆರ್​ಸಿಬಿ ತಂಡದ ಮತ್ತೊಂದು ವಿಕೆಟ್ ಪತನವಾಗಿದೆ. ಪ್ರಮುಖ ಪಂದ್ಯದಲ್ಲಿ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದ ವಿರಾಟ್ ಕೊಹ್ಲಿ ಕೇವಲ 24 ಬೌಲ್ ಗಳಿಗೆ 25 ರನ್ ಗಳಿಸಿಆವೇಶ್ ಖಾನ್ ಬೌಲಿಂಗ್ ನಲ್ಲಿ ಕ್ಯಾಚ್ ಕೊಟ್ಟು ಔಟಾದರು. ಈ ಮೂಲಕ ಮತ್ತೆ ಆರ್​ಸಿಬಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.
Published by:shrikrishna bhat
First published: