IPL 2022 LSG vs KKR: ಲಕ್ನೋ ದಾಳಿಗೆ ಬೆದರಿದ ಕೋಲ್ಕತ್ತಾ, ಗೆದ್ದು ಬೀಗಿದ ರಾಹುಲ್ ಪಡೆ

ಲಕ್ನೋ ಸೂಪರ್ ಜೈಂಟ್ಸ್ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್ ಗಳ ಉತ್ತಮ ಮೊತ್ತ ಕಲೆಹಾಕಿತು. ಈ ಮೊತ್ತ ಬೆನ್ನತ್ತಿದ ಕೋಲ್ಕತ್ತಾ ತಂಡವು ನಿಗದಿತ 14.3 ಓವರ್ ಗಳಲ್ಲಿ 10 ವಿಕೆಟ್ ನಷ್ಟಕ್ಕೆ 101 ರನ್ ಗಳಸುವ ಮೂಲಕ ಮತ್ತೊಮ್ಮೆ ಸೋಲನ್ನು ಅನುಭವಿಸಿತು.

ಲಕ್ನೋ ತಂಡಕ್ಕೆ ಗೆಲುವು

ಲಕ್ನೋ ತಂಡಕ್ಕೆ ಗೆಲುವು

  • Share this:
ಐಪಿಎಲ್ 2022ರ (IPL 2022) 15ನೇ ಆವೃತ್ತಿಯ 53ನೇ ಪಂದ್ಯದಲ್ಲಿ ಇಂದು ಲಕ್ನೋ ಸೂಪರ್ ಜೈಂಟ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (LSG vs KKR) ತಂಡಗಳು ಸೆಣಸಾಡಿದವು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕನ್ನಡಿಗ ಕೆಎಲ್ ರಾಹುಲ್ (KL Rahul) ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್ ಗಳ ಉತ್ತಮ ಮೊತ್ತ ಕಲೆಹಾಕಿತು. ಈ ಮೊತ್ತ ಬೆನ್ನತ್ತಿದ ಕೋಲ್ಕತ್ತಾ (KKR) ತಂಡವು ನಿಗದಿತ 14.3 ಓವರ್ ಗಳಲ್ಲಿ 10 ವಿಕೆಟ್ ನಷ್ಟಕ್ಕೆ 101 ರನ್ ಗಳಸುವ ಮೂಲಕ ಮತ್ತೊಮ್ಮೆ ಸೋಲನ್ನು ಅನುಭವಿಸಿತು. ಈ ಮೂಲಕ ಲಕ್ನೋ (LSG) ತಂಡ ಪ್ಲೇ ಆಫ್ ಹಂತದ ಹಾದಿಯನ್ನು ಸುಗಮಗೊಳಿಸಿಕೊಂಡಿತು. ಲಕ್ನೋ 75 ರನ್ ಗಳ ಗೆಲುವನ್ನು ದಾಖಲಿಸಿತು.

ಮೊದಲು ಬ್ಯಾಟ್ ಮಾಡಿದ ಲಕ್ನೋ:

ಇನ್ನು, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕನ್ನಡಿಗ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್ ಗಳ ಉತ್ತಮ ಮೊತ್ತ ಕಲೆಹಾಕಿತು. ಲಕ್ನೋ ಪರ ಕ್ವಿಂಟನ್ ಡಿಕಾಕ್ 29 ಎಸೆತದಲ್ಲಿ 3 ಸಿಕ್ಸ್ ಮತ್ತು 4 ಬೌಂಡರಿಗಳ ನೆರವಿನಿಂದ 50 ರನ್ ಸಿಡಿಸಿದರು. ಉಳಿದಂತೆ ನಾಯಕ ಕೆಲ್ ರಾಹುಲ್ ಶೂನ್ಯ ಸುತ್ತಿದರು. ದೀಪಕ್ ಹೂಡ 41 ರನ್, ಕೃನಲ್ ಪಾಂಡ್ಯ 25 ರನ್, ಆಯುಶ್ ಬದೋನಿ 15 ರನ್, ಸ್ಟೋನಿಸ್ 28 ರನ್, ಜೋಸನ್ ಹೋಲ್ಡರ್ 13 ರನ್ ಮತ್ತು ಚಮೀರಾ 0 ರನ್ ಗಳಿಸುವ ಮೂಲಕ ತಂಡದ ಮೊತ್ತ 176 ರನ್ ಗಳ ಉತ್ತಮ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ: ಇಂಗ್ಲೆಂಡ್ ನಂತರ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ Team India, ಸಂಪೂರ್ಣ ವೇಳಾಪಟ್ಟಿ ಬಿಡುಗಡೆ

ಸಂಘಟಿತ ಬೌಲಿಂಗ್ ಮಾಡಿದ ಕೋಲ್ಕತ್ತಾ:

ಇನ್ನು, ಕೋಲ್ಕತ್ತಾ ಪರ ಸಂಘಟಿತ ಬೌಲಿಂಗ್ ಮಾಡಿದರೂ ಲಕ್ನೋ ತಂದ ಬ್ಯಾಟರ್ ಗಳನ್ನು ತಡೆಯುವಲ್ಲಿ ಯಶಸ್ವಿಯಾಗಲಿಲ್ಲ. ಆಡ್ರೂ ರಸಲ್ 2 ವಿಕೆಟ್, ಟೀಮ್ ಸೌಥಿ, ಶಿವಂ ಮಾವಿ ಮತ್ತು ಸುನೀಲ್ ನರೇನ್ ತಲಾ 1 ವಿಕೆಟ್ ಪಡೆದು ಮಿಂಚಿದರು.

ಬ್ಯಾಟಿಂಗ್ ನಲ್ಲಿ ಎಡವಿದ ಕೋಲ್ಕತ್ತಾ ತಂಡ:

ಇನ್ನು, ಕೋಲ್ಕತ್ತಾ ನಯಟ್ ರೈಡರ್ಸ್ ತಂಡವು ಲಕ್ನೋ ನೀಡಿದ 176 ರನ್ ಗಳ ಮೊತ್ತ ಚೇಸಿಂಗ್ ಮಾಡಿವಲ್ಲಿ ಎಡವಿತು. ಕೇವಲ 101 ರನ್ ಗಳಿಸುವ ಮೂಲಕ 75 ರನ್ ಗಳಿಂದ ಸೋಲನ್ನಪ್ಪಿತು. ಇನ್ನು, ಕೋಲ್ಕತ್ತಾ ತಂಡದ ಪರ ಓಪನರ್ ಆದ ಬಾಬಾ ಇಂದ್ರಜೀತ್ ಶೂನ್ಯಕ್ಕೆ ಔಟಾದರೆ, ಆರೋನ್ ಪಿಂಚ್ 14 ರನ್, ನಾಯಕ ಶ್ರೇಯಸ್ ಐಯರ್ 6 ರನ್, ನಿತೀಶ್ ರಾಣಾ 2 ರನ್, ರಿಂಕು ಸಿಂಗ್ 6 ರನ್, ಆಡ್ರೂ ರಸಲ್ 45 ರನ್, ಸುನೀಲ್ ನರೇನ್ 22 ರನ್, ಅನ್ಕುಲ್ ರಾಯ್ ಶೂನ್ಯ, ಹಾಗೂ ಶಿವಂ ಮಾವಿ1 ರನ್ ಮತ್ತು ಹರ್ಷಿತ್ ರಾಣಾ 2 ರನ್ ಗಲಸಿಉವ ಮೂಲಕ ಅಲ್ಪ ಮೊತ್ತಕ್ಕೆ ಕೋಲ್ಕತ್ತಾ ಸರ್ಪಪತನ ಕಂಡಿತು. ಈ ಮೂಲಕ ಪ್ಲೇ ಆಪ್ ಹಂತದ ಹಾದಿಯನ್ನು ಇನ್ನಷ್ಟು ಕಠಿಣವಾಗುವಂತೆ ಆಯಿತು.

ಇದನ್ನೂ ಓದಿ: Yuzvendra Chahal: ಶ್ರೇಯಸ್ ಗೋಪಾಲ್ ಅವರ ದಾಖಲೆ ಸರಿಗಟ್ಟಿದ ಯುಜ್ವೇಂದ್ರ ಚಹಾಲ್

ಉತ್ತಮ ಬೌಲಿಂಗ್ ಮಾಡಿದ ಲಕ್ನೋ:

ಇನ್ನು, ಲಕ್ನೋ ಸೂಪರ್ ಜೈಂಟ್ಸ್ ಪರ ಬೌಲರ್ ಗಳು ಇಂದು ಸೂಪರ್ ಆಗಿ ಮಿಂಚಿದರು ಎಂದರೂ ತಪ್ಪಾಗಲಾರದು. ಹೌದು, ಲಕ್ನೋ ಪರ ಆವೇಶ್ ಖಾನ್ ಮತ್ತು ಜೋಸನ್ ಹೋಲ್ಡರ್ ತಲಾ 3 ವಿಕೆಟ್ ಪಡೆಯುವ ಮೂಲಕ ಕೋಲ್ಕತ್ತಾ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಉಳಿದಂತೆ  ಮೋಶಿನ್ ಖಾನ್, ಚಮೀರಾ ಮತ್ತು ರವಿ ಬಿಶ್ನೋಯ್ ತಲಾ 1 ವಿಕೆಟ್ ಪಡೆದು ಮಿಂಚಿದರು.
Published by:shrikrishna bhat
First published: