ಐಪಿಎಲ್ 2022ರ (IPL 2022) 15ನೇ ಆವೃತ್ತಿಯ 66ನೇ ಪಂದ್ಯದಲ್ಲಿ ಇಂದು ಲಕ್ನೋ ಸೂಪರ್ ಜೈಂಟ್ಸ್ (LSG) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡಗಳು ಸೆಣಸಾಡಿದವು. ಇಂದಿನ ಪಂದ್ಯವು ಮುಂಬೈನ ಡಾ. ಡಿವೈ ಪಾಟೀಲ್ ಸ್ಪೋರ್ಟ್ಸ್ (D Y Patil Sports) ಅಕಾಡೆಮಿಯಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕನ್ನಡಿಗ ಕೆಎಲ್ ರಾಹುಲ್ (KL Rahul) ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಓಪನರ್ ಗಳು ಇಂದು ಅಕ್ಷರ ಸಹ ಅಬ್ಬರಿಸಿದ್ದಾರೆ. ನಿಗದಿತ 20 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ ಬರೋಬ್ಬರಿ 210 ರನ್ ಗಳಿಸಿದರು. ಈ ಬೃಹತ್ ಮೊತ್ತ ಬೆನ್ನತ್ತಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ನಿಗದಿತ 20 ಓವರ್ ಗಳ್ಲಲಿ 8 ವಿಕೆಟ್ ನಷ್ಟಕ್ಕೆ 208 ರನ್ ಗಳಿಸುವ ಮೂಲಕ 2 ರನ್ ಗಳಿಂದ ರೋಚಕವಾಗಿ ಸೋಲನ್ನಪ್ಪಿತು.
ದಾಖಲೆಯ ಜೊತೆಯಾಟ ಆಡಿದ ರಾಹುಲ್ - ಡಿ ಕಾಕ್:
ಇನ್ನು, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು ನಿಗದಿತ 20 ಓವರ್ ಗಳಲ್ಲಿ 210 ರನ್ ಬಾರಿಸಿದೆ. ಅಲ್ಲದೇ ದಾಖಲೆಯ ಜೊತೆಯಾಟವಾಡಿದ್ದು, ಕೋಲ್ಕತ್ತಾ ತಂಡದ ಬೌಲರ್ ಗಳ ಬೆವರಿಳಿಸಿದ್ದಾರೆ. ಈವರೆಗಿನ ಐಪಿಎಲ್ ಇತಿಹಾಸದಲ್ಲಿ ಮೊದಲನೇ ವಿಕೆಟ್ ಗೆ 210 ರನ್ ಜೊತೆಯಾಟ ದಾಖಲೆಯಾಗಿದೆ. ಈ ಮೂಲಕ ಕೋಲ್ಕತ್ತಾ ತಂಡಕ್ಕೆ 211 ರನ್ ಗಳ ಬೃಹತ್ ಮೊತ್ತದ ಟಾರ್ಗೇಟ್ ನೀಡಿದೆ.
ಕೋಲ್ಕತ್ತ ಬೌಲರ್ ಗಳನ್ನು ಬೆವರಿಳಿಸಿದ ಡಿ ಕಾಕ್:
ಇಂದು ಅಕ್ಷರಸಹ ಕ್ವಿಂಟನ್ ಡಿ ಕಾಕ್ ಅಬ್ಬರಿಸಿದ್ದಾರೆ. ಹೌದು, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಬೌಲರ್ ಗಳ ಬೆವರಿಳಿಸಿದ ಡಿ ಕಾಕ್ ಕೇವಲ 70 ಎಸೆತದಲ್ಲಿ 10 ಸಿಕ್ಸ್ ಮತ್ತು 10 ಬೌಂಡರಿಗಳ ನೆರವಿನಿಂದ ಬರೋಬ್ಬರಿ 140 ರನ್ ಗಳಿಸಿ ಮಿಂಚಿದರು. ಅಲ್ಲದೇ 200 ರನ್ ಸ್ಟ್ರೈಕ್ ರೇಟ್ ನಲ್ಲಿ ಡಿ ಕಾಕ್ ಬ್ಯಾಟಿಂಗ್ ಮಾಡಿದ್ದಾರೆ. ಇವರಿಗೆ ಸಾಥ್ ನೀಡಿದ ಲಕ್ನೋ ತಂಡದ ನಾಯಕ ಕನ್ನಡಿಗ ಕೆಎಲ್ ರಾಹುಲ್ 51 ಎಸೆತದಲ್ಲಿ 4 ಸಿಕ್ಸ್ ಮತ್ತು 3 ಬೌಂಡರಿಗಳ ಮೂಲಕ 68 ರನ್ ಗಳಿಸಿ ಡಿ ಕಾಕ್ ಗೆ ಉತ್ತಮ ಸಾಥ್ ನೀಡುವ ಮೂಲಕ ದಾಖಲೆಯ ಜೊತೆಯಾಟವಾಡಿದರು.
ಇದನ್ನೂ ಓದಿ: IPL 2022 KKR vs LSG: ಕೋಲ್ಕತ್ತಾ ಬೌಲರ್ಗಳ ಬೆವರಿಳಿಸಿದ ಡಿ ಕಾಕ್, ಬೃಹತ್ ಮೊತ್ತ ಕಲೆಹಾಕಿದ ಲಕ್ನೋ
ಮಂಕಾದ ಕೋಲ್ಕತ್ತ ಬೌಲರ್ಸ್:
ಡಿ ಕಾಕ್ ಮತ್ತು ರಾಹುಲ್ ಅಬ್ಬರದ ಮುಂದೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಬೌಲರ್ ಗಳು ಮಂಕಾದರು. ಯಾವೊಬ್ಬ ಬೌಲರ್ ಸಹ ಲಕ್ನೋ ತಂಡವನ್ನು ಕಟ್ಟಿಕಅಹುವಲ್ಲಿ ಅಥವಾ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾಗಲಿಲ್ಲ. ಕೋಲ್ಕತ್ತಾ ಪರ ಇಂದು 6 ಜನ ಬೌಲಿಂಗ್ ಮಾಡಿದರೂ ಲಕ್ನೋ ತಂಡದ ಒಂದೇ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಲಿಲ್ಲ.
ಉತ್ತಮ ಪೈಪೋಟಿ ನೀಡಿದ ಕೆಕೆಆರ್:
ಲಕ್ನೋ ತಂಡ ನೀಡಿದ 211 ರನ್ ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಕೋಲ್ಕತ್ತಾ ತಂಡವು ಉತ್ತಮ ಪೈಪೋಟಿ ನೀಡಿತು. ಕೆಕೆಆರ್ ಪೆ ನಿತೀಶ್ ರಾಣಾ 42 ರನ್, ನಾಯಕ ಶ್ರೇಯಸ್ ಐಯ್ಯರ್ 50 ರನ್, ಸ್ಯಾಮ್ ಬಿಲ್ಲಿಂಗ್ಸ್ 36 ರನ್, ಅಂತಿಮವಾಗಿ ರಿಂಕು ಸಿಂಗ್ ಪಂದ್ಯದ ಗತಿಯನ್ನು ಬದಲಿದ್ದರು ಅವರು 15 ಬೌಲ್ ಗಳಲ್ಲಿ 40 ರನ್ ಮತ್ತು ಸುನೀಲ್ ನರೇನ್ 21 ರನ್ ಗಳಿಸಿದರೂ ತಂಡ ಕೇವಲ 2 ರನ್ ಗಳಿಂದ ಸೋಲನ್ನು ಅನುಭವಿಸಿತು.
ಇದನ್ನೂ ಓದಿ: Sara Tendulkar: ಸಾರಾ ತೆಂಡೂಲ್ಕರ್ ಲುಕ್ಗೆ ಮನಸೋತ ಖ್ಯಾತ ಕ್ರಿಕೆಟಿಗನ ಪತ್ನಿ, ರಾಜಕುಮಾರಿ ಹಾಗಿದ್ದಾರಂತೆ ಸಾರಾ!
ಉತ್ತಮ ದಾಳಿ ನಡೆಸಿದ ಮೋಶಿನ್ ಖಾನ್ :
ಇನ್ನು, ಲಕ್ನೋ ಪರ ಮೋಶಿನ್ ಖಾನ್ 4 ಓವರ್ ಮಾಡಿ 20 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರೆ, ಸ್ಟೋನಿಸ್ 2 ವಿಕೆಟ್, ಕೃಷ್ಣಪ್ಪ ಗೌತಮ್ ಮತ್ತು ರವಿ ಬಿರ್ಶನೋಯ್ ತಲಾ 1 ವಿಕೆಟ್ ಪಡೆದು ಮಿಂಚಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ