ಐಪಿಎಲ್ 2022ರ (IPL 2022) 15ನೇ ಆವೃತ್ತಿಯ 66ನೇ ಪಂದ್ಯದಲ್ಲಿ ಇಂದು ಲಕ್ನೋ ಸೂಪರ್ ಜೈಂಟ್ಸ್ (LSG) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡಗಳು ಸೆಣಸಾಡಲಿವೆ. ಇಂದಿನ ಪಂದ್ಯವು ಮುಂಬೈನ ಡಾ. ಡಿವೈ ಪಾಟೀಲ್ ಸ್ಪೋರ್ಟ್ಸ್ (D Y Patil Sports) ಅಕಾಡೆಮಿಯಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕನ್ನಡಿಗ ಕೆಎಲ್ ರಾಹುಲ್ (KL Rahul) ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಓಪನರ್ ಗಳು ಇಂದು ಅಕ್ಷರ ಸಹ ಅಬ್ಬರಿಸಿದ್ದಾರೆ. ನಿಗದಿತ 20 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ ಬರೋಬ್ಬರಿ 210 ರನ್ ಗಳಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ಕೋಲ್ಕತ್ತಾ (KKR) ತಂಡಕ್ಕೆ 211 ರನ್ ಗಳ ಬೃಹತ್ ಮೊತ್ತದ ಟಾರ್ಗೇಟ್ ನೀಡಿದೆ.
ದಾಖಲೆಯ ಜೊತೆಯಾಟ ಆಡಿದ ರಾಹುಲ್ - ಡಿ ಕಾಕ್ :
ಇನ್ನು, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಲಕ್ನೋ ತಂಡದ ನಾಯಕ ರಾಹುಲ್, ನಿರ್ಧಾರ ಉತ್ತಮವಾಗಿತ್ತೆಂದು ಹೇಳಬಹುದು. ಏಕೆಂದರೆ ತಂಡವು ಯಾವುದೇ ವಿಕೆಟ್ ನಷ್ಟವಿಲ್ಲದೇ ಬರೋಬ್ಬರಿ 210 ರನ್ ಬಾರಿಇಸಿದೆ. ಅಲ್ಲದೇ ದಾಖಲೆಯ ಜೊತೆಯಾಟವಾಡಿದ್ದು, ಕೋಲ್ಕತ್ತಾ ತಂಡದ ಬೌಲರ್ ಗಳ ಬೆವರಿಳಿಸಿದ್ದಾರೆ. ಈವರೆಗಿನ ಐಪಿಎಲ್ ಇತಿಹಾಸದಲ್ಲಿ ಮೊದಲನೇ ವಿಕೆಟ್ ಗೆ 210 ರನ್ ಜೊತೆಯಾಟ ದಾಖಲೆಯಾಗಿದೆ. ಈ ಮೂಲಕ ಕೋಲ್ಕತ್ತಾ ತಂಡಕ್ಕೆ 211 ರನ್ ಗಳ ಬೃಹತ್ ಮೊತ್ತದ ಟಾರ್ಗೇಟ್ ನೀಡಿದೆ.
ಅಬ್ಬರಿಸಿದ ಡಿಕಾಕ್:
ಇಂದು ಡಿವೈ ಪಾಟೀಲ್ ಸ್ಟೇಡಿಯಂ ನಲ್ಲಿ ಅಕ್ಷರಸಹ ಕ್ವಿಂಟನ್ ಡಿ ಕಾಕ್ ಅಬ್ಬರಿಸಿದ್ದಾರೆ. ಹೌದು, ಕೋಲ್ಕತ್ತಾ ನೈಟ್ ರಯಡರ್ಸ್ ತಂಡದ ಬೌಲರ್ ಗಳ ಬೆವರಿಳಿಸಿದ ಡಿ ಕಾಕ್ ಕೇವಲ 70 ಎಸೆತದಲ್ಲಿ 10 ಸಿಕ್ಸ್ ಮತ್ತು 10 ಬೌಂಡರಿಗಳ ನೆರವಿನಿಂದ ಬರೋಬ್ಬರಿ 140 ರನ್ ಗಳಿಸಿ ಮಿಂಚಿದರು. ಅಲ್ಲದೇ 200 ರನ್ ಸ್ಟ್ರೈಕ್ ರೇಟ್ ನಲ್ಲಿ ಡಿ ಕಾಕ್ ಬ್ಯಾಟಿಂಗ್ ಮಾಡಿದ್ದಾರೆ. ಇವರಿಗೆ ಸಾಥ್ ನೀಡಿದ ಲಕ್ನೋ ತಂಡದ ನಾಯಕ ಕನ್ನಡಿಗ ಕೆಎಲ್ ರಾಹುಲ್ 51 ಎಸೆತದಲ್ಲಿ 4 ಸಿಕ್ಸ್ ಮತ್ತು 3 ಬೌಂಡರಿಗಳ ಮೂಲಕ 68 ರನ್ ಗಳಿಸಿ ಡಿ ಕಾಕ್ ಗೆ ಉತ್ತಮ ಸಾಥ್ ನೀಡುವ ಮೂಲಕ ದಾಖಲೆಯ ಜೊತೆಯಾಟವಾಡಿದರು.
ಇದನ್ನೂ ಓದಿ: Arjun Tendulkar: ಅರ್ಜುನ್ ತೆಂಡೂಲ್ಕರ್ ಎಂಟ್ರಿ ಬಗ್ಗೆ ಸ್ಪಷ್ಟನೆ ನೀಡಿದ ರೋಹಿತ್, ಈ ಬಾರಿಯೂ ಬೆಂಚ್ ಕಾಯಬೇಕಾ ಸಚಿನ್ ಪುತ್ರ?
ಐಪಿಎಲ್ 2022ರಲ್ಲಿ ಡಿ ಕಾಕ್ ದಾಖಲೆ:
ಇನ್ನು, ಕೋಲ್ಕತ್ತಾ ತಂಡದ ಬೌಲರ್ ಗಳ ಚೆಂಡನ್ನು ಮೈದಾನದ ಪ್ರತಿ ಮೂಲೆಗೂ ಅಟ್ಟಿದ ಡಿ ಕಾಕ್, ಈ ಬಾರಿ ಪಂದ್ಯ ಒಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಲ್ಲದೇ ಮೊದಲ ಜೊತೆಯಾಟದಲ್ಲಿ ಅತಿ ಹೆಚ್ಚು ರನ್ ಗಳಸಿದ ಓಪನರ್ಸ್ ಎಂಬ ಖ್ಯಾತಿಗೂ ರಾಹುಲ್ ಮತ್ತು ಡಿ ಕಾಕ್ ಕೋಡಿ ಪಾತ್ರರಾದರು. ಐಪಿಎಲ್ ನಲ್ಲಿ ಡಿ ಕಾಕ್ ಅವರ ಇಂದಿನ ರನ್ ಅವರ ವೃತ್ತಿ ಜೀವನದಲ್ಲಿ ಗಳಿಸಿದ ಉತ್ತಮ ಇನ್ನಿಂಗ್ಸ್ ಗಳಲ್ಲಿ ಒಂದಾಗಿದೆ.
ಇದನ್ನೂ ಓದಿ: IPL 2022 KKR vs LSG: ಲಕ್ನೋ - ಕೋಲ್ಕತ್ತಾ ಮುಖಾಮುಖಿ, ಹೇಗಿದೆ ಉಭಯ ತಂಡಗಳ ಬಲಾಬಲ
KKR vs LSG ತಂಡ:
ಕೋಲ್ಕತ್ತಾ ನೈಟ್ ರೈಡರ್ಸ್: ವೆಂಕಟೇಶ್ ಅಯ್ಯರ್, ಬಾಬಾ ಇಂದ್ರಜಿತ್, ಶ್ರೇಯಸ್ ಅಯ್ಯರ್ (c), ನಿತೀಶ್ ರಾಣಾ, ಸ್ಯಾಮ್ ಬಿಲ್ಲಿಂಗ್ಸ್ (wk), ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೈನ್, ಉಮೇಶ್ ಯಾದವ್, ಟಿಮ್ ಸೌಥಿ, ವರುಣ್ ಚಕ್ರವರ್ತಿ.
ಲಕ್ನೋ ಸೂಪರ್ ಜೈಂಟ್ಸ್: ಕ್ವಿಂಟನ್ ಡಿ ಕಾಕ್ (WK), ಕೆಎಲ್ ರಾಹುಲ್ (C), ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ಆಯುಷ್ ಬಡೋನಿ, ಮಾರ್ಕಸ್ ಸ್ಟೋನಿಸ್, ಜೇಸನ್ ಹೋಲ್ಡರ್, ಮೊಹ್ಸಿನ್ ಖಾನ್, ರವಿ ಬಿಷ್ಣೋಯ್, ದುಷ್ಮಂತ ಚಮೀರಾ, ಅವೇಶ್ ಖಾನ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ