IPL 2022 LSG vs KKR: ಕೋಲ್ಕತ್ತಾ - ಲಕ್ನೋ ಮುಖಾಮುಖಿ, ಹೇಗಿರಲಿದೆ ಉಭಯ ತಂಡಗಳ ಪ್ಲೇಯಿಂಗ್ 11

ಐಪಿಎಲ್ 2022ರ (IPL 2022) 15ನೇ ಆವೃತ್ತಿಯ 53ನೇ ಪಂದ್ಯದಲ್ಲಿ ಇಂದು ಲಕ್ನೋ ಸೂಪರ್ ಜೈಂಟ್ಸ್ (GT) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ಆಡಲಿವೆ.

LSG vs KKR

LSG vs KKR

  • Share this:
ಐಪಿಎಲ್ 2022ರ (IPL 2022) 15ನೇ ಆವೃತ್ತಿಯ 53ನೇ ಪಂದ್ಯದಲ್ಲಿ ಇಂದು ಲಕ್ನೋ ಸೂಪರ್ ಜೈಂಟ್ಸ್ (GT) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ಆಡಲಿವೆ. ಇಂದಿನ ಪಂದ್ಯವು ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣ, ಪುಣೆಯಲ್ಲಿ ನಡೆಯಲಿದೆ. ಈಗಾಗಲೇ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಲಕ್ನೋ ತಂಡವು ಇಂದಿನ ಪಂದ್ಯದಲ್ಲಿ ಗೆಲ್ಲುವ ಮೂಲಕ ಪ್ಲೇ ಆಫ್ ಹಂತದ ಹಾದಿಯನ್ನು ಸುಗಮಗೊಳಿಸಿಕೊಳ್ಳಲು ಹವಣಿಸುತ್ತಿದೆ. ಇದರ ನಡುವೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಇಂದಿನ ಪಂದ್ಯ ಗೆಲ್ಲುವ ಮೂಲಕ ಪ್ಲೇ ಆಫ್ (Play-Off) ಹಂತಕ್ಕೆ ತಲುಪಲು ಏರಲು ಇದು ಹೆಚ್ಚು ಮಹತ್ವದ್ದಾಗಿದೆ. ಹಾಗಿದ್ದರೆ ಉಭಯ ತಂಡಗಳ ಬಲಾಬಲ ಹೇಗಿದೆ ಎಂದು ನೋಡೋಣ.

ಪಂದ್ಯದ ವಿವರ:

ಐಪಿಎಲ್ 2022ರ (IPL 2022) 53ನೇ ಪಂದ್ಯದಲ್ಲಿ ಇಂದು ಲಕ್ನೋ ಸೂಪರ್ ಜೈಂಟ್ಸ್ (GT) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ಆಡಲಿವೆ. ಇಂದಿನ ಪಂದ್ಯವು ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣ, ಪುಣೆಯಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಟಾಸ್ ಮತ್ತು 7:30ಕ್ಕೆ ಪಂದ್ಯ ಆರಂಭವಾಗಲಿದೆ.

ಪಿಚ್ ವರದಿ:

ಈ ಮೈದಾನದಲ್ಲಿ ಆಡಿದ 10 ಪಂದ್ಯಗಳ ಪೈಕಿ 7ರಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ಗೆಲುವು ಸಾಧಿಸಿದ್ದು, ಟಾಸ್ ಗೆದ್ದ ತಂಡ ಬ್ಯಾಟಿಂಗ್‌ಗೆ ಇಳಿಯುವ ಸಾಧ್ಯತೆ ಇದೆ. ಸ್ಪಿನ್ನರ್‌ಗಳು ಪಿಚ್‌ನಿಂದ ಸಾಕಷ್ಟು ಸಹಾಯವನ್ನು ಪಡೆಯುವ ಸಾಧ್ಯತೆಯಿದೆ ಮತ್ತು ಅವರು ಪ್ರಾಬಲ್ಯ ಸಾಧಿಸಲು ಸಾಧ್ಯವಾಗುತ್ತದೆ. ಬ್ಯಾಟರ್‌ಗಳು ವೇಗಿಗಳ ವಿರುದ್ಧ ತಮ್ಮ ಅವಕಾಶಗಳನ್ನು ತೆಗೆದುಕೊಳ್ಳಬಹುದು. ಹೀಗಾಗಿ ದೊಡ್ಡ ಮೊತ್ತ ಕಲೆಹಾಕುವ ನಿರೀಕ್ಷೆಯಿದೆ.

ಇದನ್ನೂ ಓದಿ: IPL 2022 PBKS vs RR: ಪಂಜಾಬ್ ತಂಡಕ್ಕೆ ರಾಜಸ್ಥಾನ್ ಸವಾಲ್, ಹೇಗಿದೆ ಉಭಯ ತಂಡಗಳ ಬಲಾಬಲ

ಉಭಯ ತಂಡಗಳ ಐಪಿಎಲ್ 2022ರ ಪ್ರದರ್ಶನ:

ಇದೇ ಮೊದಲ ಬಾರಿಗೆ ಲಕ್ನೋ ಮತ್ತು ಕೋಲ್ಕತ್ತಾ ತಂಡಗಳು ಮುಖಾಮುಖಿಯಾಗುತ್ತಿವೆ. ಹೀಗಾಗಿ ಈ ಬಾರಿಯ ಪ್ರದರ್ಶನವು ಇಲ್ಲಿ ಗಣನೆಗೆ ತೆಗೆದುಕೊಲ್ಳಬಹುದಾಗಿದೆ. ಈಗಾಗಲೇ ಕನ್ನಡಿಗ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಆಡಿರುವ 10 ಪಂದ್ಯಗಳಲ್ಲಿ 7ರಲ್ಲಿ ಗೆದ್ದು 3ರಲ್ಲಿ ಸೋಲುವ ಮೂಲಕ 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಅಂತೆಯೇ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಆಡಿರುವ 10 ಪಂದ್ಯದಲ್ಲಿ 4ರಲ್ಲಿ ಗೆದ್ದು 6ರಲ್ಲಿ ಸೋತು 8 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದ್ದು, ಇಂದಿನ ಪಂದ್ಯ ಉಭಯ ತಮಡಗಳೆರಡಕ್ಕೂ ಮಹತ್ವದ್ದಾಗಿದೆ. ಹಾಗಾಗಿ ಹೆಚ್ಚಿನ ಪೈಪೋಟಿ ನಡೆಯುವ ನಿರೀಕ್ಷೆಯಿದೆ.

ಇದನ್ನೂ ಓದಿ: IPL 2022 RCB vs CSK: ಚೆನ್ನೈ ಪರ ಹೊಸ ದಾಖಲೆ ನಿರ್ಮಿಸಿದ ಕ್ಯಾಪ್ಟನ್ ಕೂಲ್ ಧೋನಿ

LSG vs KKR ಸಂಭವನೀಯ ಪ್ಲೇಯಿಂಗ್ XI:

ಲಕ್ನೋ ಸೂಪರ್ ಜೈಂಟ್ಸ್: ಕ್ವಿಂಟನ್ ಡಿ ಕಾಕ್ (wk), ಲೋಕೇಶ್ ರಾಹುಲ್ (c), ಮಾರ್ಕಸ್ ಸ್ಟೋನಿಸ್, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ಆಯುಷ್ ಬಡೋನಿ, ಜೇಸನ್ ಹೋಲ್ಡರ್, ಕೃಷ್ಣಪ್ಪ ಗೌತಮ್, ಮೊಹ್ಸಿನ್ ಖಾನ್, ದುಷ್ಮಂತ ಚಮೀರಾ, ರವಿ ಬಿಷ್ಣೋಯ್.

ಕೋಲ್ಕತ್ತಾ ನೈಟ್ ರೈಡರ್ಸ್: ಸುನಿಲ್ ನರೈನ್, ಆರೋನ್ ಫಿಂಚ್, ಬಾಬಾ ಇಂದ್ರಜಿತ್ (WK), ಶ್ರೇಯಸ್ ಅಯ್ಯರ್ (c), ಅನುಕುಲ್ ಸುಧಾಕರ್ ರಾಯ್, ನಿತೀಶ್ ರಾಣಾ, ರಿಂಕು ಸಿಂಗ್, ಆಂಡ್ರೆ ರಸೆಲ್, ಟಿಮ್ ಸೌಥಿ, ಉಮೇಶ್ ಯಾದವ್, ಶಿವಂ ಮಾವಿ.
Published by:shrikrishna bhat
First published: