IPL 2022 LSG vs DC: ಮೊಹ್ಸಿನ್ ಖಾನ್ ದಾಳಿಗೆ ಬೆದರಿದ ಡೆಲ್ಲಿ, ಗೆಲುವಿನ ನಗೆಬೀರಿದ ಲಕ್ನೋ ತಂಡ

ಲಕ್ನೋ ಸೂಪರ್ ಜೈಂಟ್ಸ್ ತಂಡವು ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 195 ರನ್ ಗಳ ಬೃಹತ್ ಮೊತ್ತವನ್ನು ಪೇರೆಪಿಸಿತು. ಈ ಮೊತ್ತ ಬೆನ್ನಟ್ಟಿದ ರಿಷಭ್ ಪಂಥ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 189 ರನ್ ಗಳಿಸುವ ಮೂಲಕ 6 ರನ್ ಗಳಿಂದ ಸೋಲನ್ನಪ್ಪಿತು.

ಲಕ್ನೋ ತಂಡಕ್ಕೆ ಗೆಲುವು

ಲಕ್ನೋ ತಂಡಕ್ಕೆ ಗೆಲುವು

  • Share this:
ಐಪಿಎಲ್ 2022ರ (IPL 2022) 15ನೇ ಆವೃತ್ತಿಯ 46 ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ (LSG vs DC) ತಂಡವು ಸೆಣಸಾಡಿದವು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕೆಎಲ್ ರಾಹುಲ್ (KL Rahul) ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡವು ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 195 ರನ್ ಗಳ ಬೃಹತ್ ಮೊತ್ತವನ್ನು ಪೇರೆಪಿಸಿತು. ಈ ಮೊತ್ತ ಬೆನ್ನಟ್ಟಿದ ರಿಷಭ್ ಪಂಥ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 189 ರನ್ ಗಳಿಸುವ ಮೂಲಕ 6 ರನ್ ಗಳಿಂದ ಸೋಲನ್ನಪ್ಪಿತು.

ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ:

ಲಕ್ನೋ ಸೂಪರ್ ಜೈಂಟ್ಸ್ ತಂಡವು ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 195 ರನ್ ಗಳ ಬೃಹತ್ ಮೊತ್ತವನ್ನು ಪೇರೆಪಿಸಿತು. ಲಕ್ನೋ ಪರ ನಾಯಕ ಕೆಎಲ್ ರಾಹುಲ್ ಅದ್ಭುತ ಬ್ಯಾಟಿಂಗ್ ಮಾಡುವ ಮೂಲಕ ತಂಡದ ಮೊತ್ತ ಹೆಚ್ಚಿಸಲು ನೆರವಾದರು. ರಾಹುಲ್ 51 ಎಸೆತದಲ್ಲಿ 5 ಸಿಕ್ಸ್ ಮತ್ತು 4 ಪೋರ್ ಮೂಲಕ 77 ರನ್ ಗಳಸಿದರು. ಉಳಿದಂತೆ ದೀಪಕ್ ಹೂಡಾ ಸಹ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಇವರು 34 ಎಸತದಲ್ಲಿ 1 ಸಿಕ್ಸ್ ಮತ್ತು 6 ಬೌಂಡರಿಗಳ ನೆರವಿನಿಂದ 52 ರನ್ ಗಳಿಸಿದರು. ಕ್ವಿಂಟನ್ ಡಿ ಕಾಕ್ 23 ರನ್, ಮಾರ್ಕೂಸ್ ಸ್ಟೋನಿಸ್ 17 ರನ್, ಕೃನಲ್ ಪಾಂಡ್ಯ 9 ರನ್ ಗಳಿಸಿದರು.

ಉತ್ತಮ ಬೌಲಿಂಗ್ ಮಾಡಿದ ಶಾರ್ದೂಲ್:

ಡೆಲ್ಲಿ ಪರ ಯಾವಬ್ಬ ಬೌಲರ್ ಸಹ ಲಕ್ನೋ ಸೂಪರ್ ಜೈಂಟ್ಸ್ ತಂಡದ ಬ್ಯಾಟರ್ ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಲಿಲ್ಲ. ಆದರೆ ಡೆಲ್ಲಿ ಪರ ಶಾರ್ದೂಲ್ ಠಾಕೂರ್ 4 ಓವರ್ ಮಾಡಿ 40 ರನ್ ನೀಡಿ 3 ವಿಕೆಟ್ ಪಡೆದರು.

ಇದನ್ನೂ ಓದಿ: IPL 2022 PBKS vs LSG: ಮೊಹ್ಸಿನ್ ಖಾನ್ ದಾಳಿಗೆ ಬೆದರಿದ ಪಂಜಾಬ್, ಗೆಲುವಿನ ನಗೆಬೀರಿದ ಲಕ್ನೋ ತಂಡ

ಚೇಸಿಂಗ್​ ನಲ್ಲಿ ಎಡವಿದ ಡೆಲ್ಲಿ ಕ್ಯಾಪಿಟಲ್ಸ್:

ಲಕ್ನೋ ನೀಡಿದ ಬೃಹತ್ ಮೊತ್ತವನ್ನು ಬೆನ್ನತ್ತಿದ ಡೆಲ್ಲಿ ತಂಡವು ಆರಂಭಿಕ ಆಘಾತ ಅನುಭವಿಸಿತು. ಓಪನರ್ ಗಳಾಗಿ ಬಂದ ಪ್ರಥ್ವಿ ಶಾ 5 ರನ್ ಮತ್ತು ಡೇವಿಡ್ ವಾರ್ನರ್ 3 ರನ್ ಗಳಿಸಿ ಫೆವೆಲಿಯನ್ ಗೆ ನಡೆದರು. ಉಳಿದಂತೆ ಮಿಚೇಲ್ ಮಾರ್ಷ್ 37 ರನ್, ನಾಯಕ ರಿಷಭ ಪಂಥ್ 44 ರನ್, ಲಲಿತ್ ಯಾದವ್ 3 ರನ್, ಪೋವೆಲ್ 35 ರನ್, ಶಾರ್ದೂಲ್ ಠಾಕೂರ್ 1 ರನ್ ಮತ್ತು ಅಕ್ಷರ್ ಪಟೇಲ್ ರನ್ ಕುಲದೀಪ್ ಯಾದವ್ ರನ್ ಗಳಿಸಿದರು.

ಇದನ್ನೂ ಓದಿ: IPL 2022 Virat Kohli: ವಿರಾಟ್ ಕೊಹ್ಲಿ ಅರ್ಧಶತಕಕ್ಕೆ ಸಂಭ್ರಮಿಸಿದ ಪತ್ನಿ ಅನುಷ್ಕಾ, ಕಿಂಗ್ ಇಸ್ ಬ್ಯಾಕ್ ಎಂದ ಅಭಿಮಾನಿಗಳು

ಮೊಹ್ಸಿನ್ ಖಾನ್ ದಾಳಿಗೆ ಬೆದರಿದ ಡೆಲ್ಲಿ:

ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಮೊಹ್ಸಿನ್ ಖಾನ್ ಉತ್ತಮ ಬೌಲಿಂಗ್ ಮಾಡಿದ್ದು, 4 ಓವರ್​ ಗೆ 16 ರನ್ ನೀಡಿ ಪ್ರಮುಖ 4 ವಿಕೆಟ್ ಗಳನ್ನು ಉರುಳಿಸಿದರು. ಉಳಿದಂತೆ ಚಮೀರಾ, ರವಿ ಬಿಶ್ನೋಯ್ ಮತ್ತು ಕೃಷ್ಣಪ್ಪ ಗೌತಮ್ ತಲಾ 1 ವಿಕೆಟ್ ಪಡೆದು ಮಿಂಚಿದರು.
Published by:shrikrishna bhat
First published: