ಐಪಿಎಲ್ 2022ರ (IPL 2022) 7ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ (CSK vs LSG) ಮುಖಾಮುಖಯಾಗಿದ್ದವು. ಈ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ (KL Rahul) ನಾಯಕತ್ವದ ಲಕ್ನೋ ತಂಡ ಜಡ್ಡು ನಾಯಕತ್ವದ ಚೆನ್ನೈ ವಿರುದ್ಧ ಗೆದ್ದು ಐಪಿಎಲ್ ನಲ್ಲಿ ತನ್ನ ಗೆಲುವಿನ ಖಾತೆ ತೆರದಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಬರೊಬ್ಬರಿ 210 ರನ್ ಗಳನ್ನು ಕಲೆಹಾಕಿತು. ಈ ಮೊತ್ತ ಬೆನ್ನತ್ತಿದ ಲಕ್ನೋ ತಂಡ ನಿಗದಿತ 19.3 ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 211 ರನ್ ಗಳಿಸುವ ಮೂಲಕ 6 ವಿಕೆಟ್ಗಳ ಗೆಲುವನ್ನು ದಾಖಲಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಮೇಲಿನ ಸ್ಥಾನಕ್ಕೇರಿದೆ.
ಭರ್ಜರಿ ಬ್ಯಾಟಿಂಗ್ ಮಾಡಿದ ಲಿವೀಸ್:
ಚೆನ್ನೈ ನೀಡಿದ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಲಕ್ನೋ ತಂಡಕ್ಕೆ ನಾಯಕ ಕೆಎಲ್ ರಾಹುಲ್ ಮತ್ತು ಡಿಕಾಕ್ ಉತ್ತಮ ಈಪನಿಂಗ್ ನೀಡಿದರು. ರಾಹುಲ್ 40 ರನ್ ಮತ್ತು ಕ್ವಿಂಟನ್ ಡಿಕಾಕ್ ಆಕರ್ಷಕ 61 ರನ್ ಗಳಿಸುವ ಮೂಲಕ ತಂಡಕ್ಕೆ ಭದ್ರಬುನಾದಿ ಹಾಕಿದರು. ನಂತರದಲ್ಲಿ ಇವಿನ್ ಲಿವೀಸ್ ಅಂತಿಮ ಓವರ್ ಗಳಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡುವ ಮೂಲಕ ಚೆನ್ನೈ ತಂಡದ ಬೌಲರ್ಗಳ ಬೆವರಿಳಿಸಿದರು. ಅಂತಿಮವಾಗಿ ಲಿವೀಸ್ 23 ಎಸೆತಗಳಲ್ಲಿ ಆಕರ್ಷಕ 3 ಸಿಕ್ಸ್ ಮತ್ತು 6 ಬೌಂಡರಿಗಳ ನೆರವಿನಿಂದ 55 ರನ್ ಗಳಿಸಿ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು.
ಮೊದಲು ಬ್ಯಾಟ್ ಮಾಡಿದ ಚೆನ್ನೈ:
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಬರೊಬ್ಬರಿ 210 ರನ್ ಗಳನ್ನು ಕಲೆಹಾಕಿತು. ಚೆನ್ನೈ ಪರ ಇಂದು ಸಹ ಓಪನಿಂಗ್ ನಲ್ಲಿ ರುತ್ವಿರಾಜ್ ಗಾಯಕವಾಡ ಕೇವಲ 1 ರನ್ ಗಳಿಸಿ ಔಟ್ ಆದರು. ಆದರೆ ನಂತರ ಜೊತೆಯಾದ ರಾಬಿನ್ ಉತ್ತಪ್ಪ ಮತ್ತು ಮೊಯಿನ್ ಅಲಿ ಅಉತ್ತಮ ಜೊತೆಯಾಟ ಪ್ರದರ್ಶಿಸಿದರು. ಉತ್ತಪ್ಪ ಅಮೋಘ 50 ರನ್ ಗಳಿಸಿದರೆ ಮೊಯಿನ್ ಅಲಿ 35 ರನ್ ಗಳಿಸಿ ಮಿಂಚಿದರು.
ಇದರ ನಡುವೆ ಯುವ ಪ್ರತಿಭೆ ಶಿವಂ ದುಭೆ 49 ರನ್ ಗಳಿಸಿ ಮಿಂಚಿದರು, ಉಳಿದಂತೆ ರಾಯಡು 27 ಹಾಗೂ ನಾಯಕ ಜಡೇಜಾ 16 ಮತ್ತು ಅಂತಿಮವಾಗಿ ಮಹೇಂದ್ರ ಸಿಂಗ್ ಧೋನಿ 2 ಫೋರ್ ಮತ್ತು 1 ಸಿಕ್ಸ್ ನೆರವಿನಿಂದ 16 ರನ್ ಗಳಿಸಿದರು.
7000 ಸಾವಿರ ಟಿ20 ರನ್ ಪೂರೈಸಿದ ಧೋನಿ
ಮಹೇಂದ್ರ ಸಿಂಗ್ ಧೋನಿ ಟಿ20 ಕ್ರಿಕೆಟ್ ನಲ್ಲಿ 7000 ರನ್ ಪೂರೈಸಿದ್ದಾರೆ. ಈ ಹಿಂದೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್, ಸುರೇಶ್ ರೈನಾ ಮತ್ತು ರಾಬಿನ್ ಉತ್ತಪ್ಪ ಸೇರಿದಂತೆ ಐವರು ಭಾರತೀಯ ಬ್ಯಾಟ್ಸ್ಮನ್ಗಳು ಈ ಸ್ಥಾನವನ್ನು ಸಾಧಿಸಿದ್ದರು. ಇದೀಗ ಧೋನಿ ಸಹ ಈ ಸಾಲಿಗೆ ಸೇರ್ಪಡೆಗೊಳ್ಳುವ ಮೂಲಕ ವಿನೂತನ ದಾಖಲೆಯನ್ನು ತಮ್ಮ ಹೆಸರಿಗೆ ನೊಂದಾಯಿಸಿಕೊಂಡಿದ್ದಾರೆ.
ಟಾಸ್ ಗೆದ್ದು ಬೌಲಿಂಗ್ ಆರಂಭಿಸಿದ ಲಕ್ನೋ ತಂಡ ಮೊದಲಿಗೆ ಗಾಕ್ವಾಡ ವಿಕೆಟ್ ಪಡೆದರೂ ನಂತರದಲ್ಲಿ ಎಲ್ಲಾ ಬೌಲರ್ಗಳು ದುಬಾರಿಯಾದರು. ಲಕ್ನೋ ಸೂಪರ್ ಜೈಂಟ್ಸ್ ಪರ ಆವೆಶ್ ಖಾನ್ 38 ರನ್ ನೀಡಿ 2 ವಿಕೆಟ್, ರವಿ ಬಿಶ್ನೋಯಿ 24 ರನ್ಗೆ 2 ವಿಕೆಟ್ ಮತ್ತು ಆಡ್ರೂ ಟೈ 40 ರನ್ ನೀಡಿ 2 ವಿಕೆಟ್ ಪಡೆದರು.
Published by:shrikrishna bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ