ಇಂದು ಐಪಿಎಲ್ 2022(IPL 2022) 15ನೇ ಆವೃತ್ತಿಗೆ ಚಾಲನೆ ಸಿಕ್ಕಿದೆ. ಮೊದಲ ಪಂದ್ಯದಲ್ಲೇ ಸಾಕಷ್ಟು ರೋಚಕತೆ ಮೂಡಿಸಿದ್ದ ಕೆಕೆಆರ್(KKR) ತಂಡ ಹಾಗೂ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ನಡುವಿನ ರಣರಂಗದಲ್ಲಿ ಕೆಕೆಆರ್ ಗೆದ್ದು ಬೀಗಿದೆ. ಮೊದಲ ಪಂದ್ಯದಲ್ಲೇ ಚೆನ್ನೈ ತಂಡದ ನೂತನ ನಾಯಕ ರವೀಂದ್ರ ಜಡೇಜಾ(Ravindra Jadega) ಸೋಲಿನ ರುಚಿ ತೋರಿಸಿದ್ದಾರೆ ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್(Shreyas Iyer). ಹೌದು, 132 ರನ್ಗಳ ಸಾಧಾರಣ ಗುರಿ ಬೆನ್ನತ್ತಿದ್ದ ಕೆಕೆಆರ್ ತಂಡ ಯಾವುದೇ ಟೆನ್ಶನ್ ಇಲ್ಲದೇ ಗುರಿ ಮುಟ್ಟಿ ಗೆಲುವಿನ ನಗೆ ಬೀರಿದೆ.
132 ರನ್ಗಳ ಗುರಿ ಬೆನ್ನತ್ತಿದ್ದ ಕೆಕೆಆರ್, ಅಂಜಿಕ್ಯಾ ರಹಾನೆ(Ajinkya Rahane) ಹಾಗೂ ವೆಂಕಟೇಶ್ ಅಯ್ಯರ್ ಆರಂಭಿಕ ಆಟಗಾರರಾಗಿ ಗ್ರೌಂಡ್ಗೆ ಎಂಟ್ರಿಯಾಗಿದ್ದರು. ಈ ಜೋಡಿ 43 ರನ್ಗಳ ಯಶಸ್ವಿಯಾಗಿ ಪೂರೈಸಿದ್ದಾಗ ವೆಂಕಟೇಶ್ ಅಯ್ಯರ್, ಬ್ರಾವೋಗೆ ವಿಕೆಟ್ ಒಪ್ಪಿಸಿದರು. ಬಳಿಕ ಸ್ಕ್ರೀಜ್ಗೆ ಬಂದ ನಿತಿಶ್ ರಾಣಾ 21 ರನ್ಗಳಿಸಲಷ್ಟೇ ಸಕ್ತರಾದರು.ಕೆಕೆಆರ್ ತಂಡ 76ರನ್ಗಳಿಸಿದ್ದಾಗ ಮತ್ತೆ ಬ್ರಾವೋಗೆ ನಿತಿಶ್ ರಾಣಾ ಔಟ್ ಆದರು. ಆರಂಭಿಕ ಆಟಗಾರನಾಗಿ ಬಂದಿದ್ದ ಅಜಿಂಕ್ಯಾ ರಹಾನೆ ಉತ್ತಮ್ಮ ಪ್ರದರ್ಶನ ನೀಡಿದರು 34 ಬಾಲ್ಗಳಲ್ಲಿ 44 ರನ್ಗಳಿಸಿ ರವೀಂದ್ರ ಜಡೇಜಾಗೆ ಕ್ಯಾಚ್ ನೀಡಿ ಔಟ್ ಆದರು.
ವಿನ್ನಿಂಗ್ ಟಚ್ ನೀಡಿದ ಶ್ರೇಯಸ್-ಜ್ಯಾಕ್ಷನ್!
ನಿತೀಶ್ ರಾಣಾ ಔಟ್ ಆಗುತ್ತಿದ್ದಂತೆ ನಾಯಕ ಶ್ರೇಯಸ್ ಅಯ್ಯರ್ ಸ್ಕ್ರೀಜ್ಗೆ ಬಂದ ಶ್ರೇಯಸ್ ಅಯ್ಯರ್ ತಾಳ್ಮೆ ಕಳೆದುಕೊಳ್ಳದೇ ತಂಡವನ್ನು ಗೆಲುವಿನ ದಡಕ್ಕೆ ತಲುಪಿಸಿದ್ದಾರೆ. ಇವರಿಗೆ ಸಾಥ್ ನೀಡಿದ ಸ್ಯಾಮ್ ಬಿಲ್ಲಿಂಗ್ಸ್ ಅದ್ಭುತ ಆಟವಾಡಿದರು. ಸ್ಯಾಮ್ ಬಿಲ್ಲಿಂಗ್ಸ್ 22 ಬಾಲ್ಗೆ 25 ರನ್ ಗಳಿಸಿ ಔಟ್ ಆದರು. ಇನ್ನೂ ಶ್ರೇಯಸ್ ಅಯ್ಯರ್ ಔಟಾಗದೆ 19 ಬಾಲ್ಗಳಲ್ಲಿ20 ರನ್ಗಳಿಸಿ ಗೆಲುವಿನ ನಗೆ ಬೀರಿದರು.
ಚಾಂಪಿಯನ್ ಆಟ ಆಡಿದ ಧೋನಿ!
ಹೌದು, ಐಪಿಎಲ್ 2022ರ ಮೊದಲ ಪಂದ್ಯದಲ್ಲೇ ಮಹೇಂದ್ರ ಸಿಂಗ್ ಧೋನಿ ಚಾಂಪಿಯನ್ ಆಟ ಆಡಿದ್ದಾರೆ. 38 ಬಾಲ್ಗಳಲ್ಲಿ ಅಜೇಯ 50 ರನ್ ಬಾರಿಸಿದ್ದಾರೆ. ಗ್ರೌಂಡ್ನ ಮೂಲೆ ಮೂಲೆಗೆ ಬಾಲ್ ಅನ್ನು ಕಳುಹಿಸಿದ್ದಾರೆ. 2 ವರ್ಷದ ಬಳಿಕ ಧೋನಿ ಅವರ ಬ್ಯಾಟ್ನಿಂದ ರನ್ ಬಂದಿದ್ದು, ಸ್ಟೇಡಿಯಂನಲ್ಲಿ ನೆರೆದಿದ್ದ ಧೋನಿ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ. ರನ್ ಕಲೆಹಾಕಲು ತಿಣುಕಾಡುತ್ತಿದ್ದ ಸಿಎಸ್ಕೆ ತಂಡಕ್ಕೆಧೋನಿ ಆಸರೆಯಾದರು.
ಇದನ್ನೂ ಓದಿ: ಚಾಂಪಿಯನ್ ಆಟ ಆಡಿದ ಧೋನಿ.. 3 ವರ್ಷದ ಬಳಿಕ 50 ರನ್ ಸ್ಕೋರ್ ಮಾಡಿದ ಮಾಹಿ!
ರನ್ ಕಲೆಹಾಕಲು ತಿಣುಕಾಡಿದ ಸಿಎಸ್ಕೆ ಆಟಗಾರರು!
ಬ್ಯಾಟಿಂಗ್ ಮಾಡಲು ಬಂದಿದ್ದ ಗಾಯಕ್ವಾಡ್ ಹಾಗೂ ಕಾನ್ವೆ ಹೆಚ್ಚು ಹೊತ್ತು ಸ್ಕ್ರೀಜ್ನಲ್ಲಿ ನಿಲ್ಲಲಿಲ್ಲ. ರುಥುರಾಜ್ ಗಾಯಕ್ವಾಡ್ ಡಕ್ ಔಟ್ ಆಗಿ ಪೆವಿಲಿಯನ್ ಸೇರಿದರು. ಮತ್ತೆ 28 ರನ್ ಇರುವಾಘ ಕಾನ್ವೆ ತನ್ನ ವಿಕೆಟ್ ಒಪ್ಪಿಸಿ ವಾಪಾಸ್ ಆದರು. ಕೊಂಚ ಮಟ್ಟಿಗೆ ಸಿಎಸ್ಕೆ ಅಭಿಮಾನಿಗಳಲ್ಲಿ ಆಸೆ ಮೂಡಿಸಿದ ರಾಬಿನ್ ಉತ್ತಪ್ಪ, 21 ಬಾಲ್ಗಳಲ್ಲಿ 28ರನ್ ಗಳಿಸಿ ಔಟ್ ಆದರು. ಇದಾದ ನಂತರ ಅಂಬಟಿ ರಾಯುಡು ರನ್ಔಟ್ಗೆ ಬಲಿಯಾದರು. ಇನ್ನೂ ಶಿವಂ ದುಬೆ ಸುಲಭ ಕ್ಯಾಚ್ ನೀಡಿ ಪೆವಿಲಿಯನ್ಗೆ ಮರಳಿದರು.
ಇದನ್ನೂ ಓದಿ: ಕರ್ನಾಟಕದ ಡಿಜಿ, ಐಜಿಪಿ ಅಳಿಯ IPLನ ಸ್ಟಾರ್ ಕ್ಯಾಪ್ಟನ್ ಮಯಾಂಕ್ ಅಗರ್ವಾಲ್!
ಐಪಿಎಲ್ 2022 ಮೊದಲ ಬಾಲೇ ನೋ ಬಾಲ್!
ಹೌದು, ಮೊದಲ ಓವರ್ನಲ್ಲಿ ಬೌಲ್ ಮಾಡಲು ಬಂದ ಉಮೇಶ್ ಯಾದವ್ ಐಪಿಎಲ್ 2022ರ ಮೊದಲ ಬಾಲ್ ಅನ್ನು ನೋ ಬಾಲ್ ಮಾಡಿದರು. ಇದನ್ನು ಕಂಡ ನೆಟ್ಟಿಗರು ಉಮೇಶ್ ಯಾದವ್ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ