IPL 2022 KKR vs SRH: ಕೋಲ್ಕತ್ತಾ - ಹೈದರಾಬಾದ್ ತಂಡಗಳ ಮುಖಾಮುಖಿ, ಹೇಗಿದೆ ಉಭಯ ತಂಡಗಳ ಪ್ಲೇಯಿಂಗ್ 11

ಐಪಿಎಲ್ 2022ರ (IPL 2022) 15ನೇ ಸೀಸನ್​ನ 61ನೇ ಪಂದ್ಯದಲ್ಲಿ ಇಂದು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್​ ರೈಸರ್ಸ್ ಹೈದರಾಬಾದ್ (KKR vs SRH) ತಂಡಗಳು ಸೆಣಸಾಡಲಿವೆ.

KKR vs SRH

KKR vs SRH

  • Share this:
ಐಪಿಎಲ್ 2022ರ (IPL 2022) 15ನೇ ಸೀಸನ್​ನ 61ನೇ ಪಂದ್ಯದಲ್ಲಿ ಇಂದು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್​ ರೈಸರ್ಸ್ ಹೈದರಾಬಾದ್ (KKR vs SRH) ತಂಡಗಳು ಸೆಣಸಾಡಲಿವೆ. ಇಂದಿನ ಪಂದ್ಯವು ಪುಣೆಯ ಎಂಸಿಎ (MCA) ಸ್ಟೇಡಿಯಂನಲ್ಲಿ ನಡೆಯಲಿದೆ. ಇನ್ನು, ಸನ್‌ರೈಸರ್ಸ್ ಹೈದರಾಬಾದ್ ಪ್ರಸಕ್ತ ಋತುವಿನಲ್ಲಿ ಸತತ ನಾಲ್ಕು ಪಂದ್ಯಗಳನ್ನು ಕಳೆದುಕೊಂಡಿದ್ದು, ಪ್ಲೇ ಆಫ್ ರೇಸ್​ ನಲ್ಲಿ ಬಹಳ ಹಿಂದೆ ಉಳಿದಿದೆ. ಇಂದಿನ ಪಂದ್ಯವನ್ನು ಹಾಗೂ ಮುಂಬರುವ ಎಲ್ಲಾ ಪಂದ್ಯಗಳನ್ನು ಹೆಚ್ಚಿನ ಅಂತರದಿಂದ ಗೆದ್ದಲ್ಲಿ ಪ್ಲೇ ಆಫ್ ಹಂತಕ್ಕೆ ತಲುಪುವ ಸಾಧ್ಯತೆ ಇದೆ . ಅದರಂತೆ ಕೋಲ್ಕತ್ತಾ (KKR) ತಂಡವು ಸಹ ಪ್ಲೇ ಆಪ್ ಹಂತದಿಂದ ಸರಿಸುಮಾರು ಹಿಂದೆ ಬಿದ್ದಿದ್ದು, ಇಂದಿನ ಪಂದ್ಯ ಸೋತಲ್ಲಿ ಕೋಲ್ಕತ್ತಾ ಟೂರ್ನಿಯಿಂದ ಹೊರ ಬೀಳಲಿದೆ. ಹಾಗಿದ್ದಲ್ಲಿ ಉಭಯ ತಂಡಗಳ ಬಲಾಬಲ ಹೇಗಿದೆ ನೋಡೋಣ.

ಪಂದ್ಯದ ವಿವರ:

ಐಪಿಎಲ್ 2022ರ 61ನೇ ಪಂದ್ಯದಲ್ಲಿ ಇಂದು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್​ ರೈಸರ್ಸ್ ಹೈದರಾಬಾದ್ ತಂಡಗಳು ಸೆಣಸಾಡಲಿವೆ. ಇಂದಿನ ಪಂದ್ಯವು ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಟಾಸ್ ಮತ್ತು 7:30ಕ್ಕೆ ಪಂದ್ಯ ಆರಂಭವಾಗಲಿದೆ.

ಪಿಚ್ ವರದಿ:

ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಕಡಿಮೆ ಸ್ಕೋರ್ ನಲ್ಲಿ ಅಂತ್ಯಗೊಂಡಿತ್ತು.ಈ ಪಿಚ್ ಹೆಚ್ಚು ಬೌಲರ್‌ಗಳಿಗೆ ಸಹಾಯಕವಾಗಿದ್ದು, ಇಲ್ಲಿ 150 ಕ್ಕಿಂತ ಹೆಚ್ಚಿನ ಸ್ಕೋರ್ ಅನ್ನು ಬೆನ್ನಟ್ಟಲು ಕಷ್ಟವಾಗುತ್ತದೆ, ಆದಾಗ್ಯೂ, ಟಾಸ್ ಗೆದ್ದ ನಾಯಕ ಮೊದಲು ಬ್ಯಾಟಿಂಗ್ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ: Team India: ರೋಹಿತ್ ಶರ್ಮಾಗೆ ಹೆಚ್ಚಿದ ತಲೆನೋವು, ಟೀಂ ಇಂಡಿಯಾದಲ್ಲಿ ಗಾಯಾಳುಗಳ ಸಮಸ್ಯೆ

KKR vs SRH ಹೆಡ್ ಟು ಹೆಡ್:

ಈವರೆಗೆ ಐಪಿಎಲ್ ನಲ್ಲಿ ಉಭಯ ತಂಡಗಳು ಒಟ್ಟಾರೆ 22 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಒಟ್ಟು 14 ಪಂದ್ಯಗಳಲ್ಲಿ ಕೋಲ್ಕತ್ತಾ ಗೆದ್ದರೆ, ಉಳಿದ 8 ಪಮದ್ಯಗಳಲ್ಲಿ ಹೈದರಾಬಾದ್ ತಂಡ ಗೆಲುವು ಸಾಧಿಸಿದೆ. ಕಳೆದ ಬಾರಿ ಐಪಿಎಲ್ 2022ರಲ್ಲಿ ನಡೆದ 1 ಪಂದ್ಯದಲ್ಲಿಯೂ ಕೋಲ್ಕತ್ತಾ ತಂಡ ಹೈದರಾಬಾದ್ ವಿರುದ್ಧ ಜಯ ಗಳಿಸಿದೆ. ಅಂಕಿಅಂಶಗಳಲ್ಲಿ ಕೋಲ್ಕತ್ತಾ ಹೆಚ್ಚು ಬಲಿಷ್ಠವಾಗಿ ಕಾಣುತ್ತದೆ.

ಉಭಯ ತಂಡಗಳ ಐಪಿಎಲ್ 2022ರ ಪ್ರದರ್ಶನ:

IPL 2022 ರಲ್ಲಿ KKR ಇದುವರೆಗೆ 12 ಪಂದ್ಯಗಳನ್ನು ಆಡಿದೆ. ಅವರು 5 ಪಂದ್ಯಗಳನ್ನು ಗೆದ್ದಿದ್ದಾರೆ ಮತ್ತು 7 ರಲ್ಲಿ ಸೋತಿದ್ದಾರೆ. KKR 10 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದೆ. ಅದರಂತೆ SRH ಟೂರ್ನಿಯಲ್ಲಿ ಇದುವರೆಗೆ 11 ಪಂದ್ಯಗಳನ್ನು ಆಡಿದೆ. ಅವರು 5 ಪಂದ್ಯಗಳನ್ನು ಗೆದ್ದು 6 ಸೋತಿದ್ದಾರೆ. ಅವರು 10 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: Hardik Pandya: IPL​ ನಲ್ಲಿ ಅಬ್ಬರಿಸುತ್ತಿರುವ ಹಾರ್ದಿಕ್ ಪಾಂಡ್ಯ, ಟೀಂ ಇಂಡಿಯಾಗೆ ಕಮ್​ಬ್ಯಾಕ್ ಮಾಡ್ತಾರಾ?

KKR vs SRH ಸಂಭಾವ್ಯ ತಂಡ:

ಕೋಲ್ಕತ್ತಾ ನೈಟ್ ರೈಡರ್ಸ್: ಅಜಿಂಕ್ಯ ರಹಾನೆ, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (c), ನಿತೀಶ್ ರಾಣಾ, ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೈನ್, ಶೆಲ್ಡನ್ ಜಾಕ್ಸನ್ (WK), ಉಮೇಶ್ ಯಾದವ್, ಟಿಮ್ ಸೌಥಿ, ವರುಣ್ ಚಕ್ರವರ್ತಿ.

ಸನ್ ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್ (c), ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಾಮ್, ನಿಕೋಲಸ್ ಪೂರನ್ (WK), ಶಶಾಂಕ್ ಸಿಂಗ್, ಜಗದೀಶ ಸುಚಿತ್, ಕಾರ್ತಿಕ್ ತ್ಯಾಗಿ, ಭುವನೇಶ್ವರ್ ಕುಮಾರ್, ಫಜಲ್ಹಕ್ ಫಾರೂಕಿ / ಮಾರ್ಕೊ ಜಾನ್ಸೆನ್, ಉಮ್ರಾನ್ ಮಲಿಕ್.
Published by:shrikrishna bhat
First published: