IPL 2022 KKR vs DC: ಕುಲದೀಪ್ ಬೌಲಿಂಗ್​ಗೆ ಬೆದರಿದ ಕೊಲ್ಕತ್ತಾ, ಗೆದ್ದು ಬೀಗಿದ ಡೆಲ್ಲಿ ಕ್ಯಾಪಿಟಲ್ಸ್

ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡವು ನಿಗದಿತ 20 ಓವರ್​ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 215 ರನ್​ ಗಳ ಗುರಿಯನ್ನು ನೀಡಿತು. ಈ ಮೊತ್ತ ಬೆನಮ್ನತ್ತಿದ ಕೊಲ್ಕತ್ತಾ ತಂಡವು ನಿಗದಿತ 19.4 ಓವರ್​ ಗಳಲ್ಲಿ  ತನ್ನೆಲ್ಲಾ ವಿಕೆಟ್ ಕಳೆದುಕೊಂಡು 171 ರನ್​ ಗಳಿಸವ ಮೂಲಕ 44 ರನ್​ ಗಳಿಂದ ಸೋಲನ್ನಪ್ಪಿತು. ಈ ಮೂಲಕ ಡೆಲ್ಲಿ ಗೆಲುವಿನ ನಗೆ ಬೀರಿತು.

ಕೊಲ್ಕತ್ತಾ ವಿರುದ್ಧ ಗೆದ್ದು ಬೀಗಿದ ಡೆಲ್ಲಿ

ಕೊಲ್ಕತ್ತಾ ವಿರುದ್ಧ ಗೆದ್ದು ಬೀಗಿದ ಡೆಲ್ಲಿ

  • Share this:
ಇಂಡಿಯನ್ ಪ್ರೀಮಿಯರ್ ಲೀಗ್ 2022ರಲ್ಲಿ ಇಂದು (IPL 2022) ಎರಡು ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ (KKR vs DC) ತಂಡದ ವಿರುದ್ಧ ಮುಂಬೈನ ಬ್ರಬೌರ್ನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಶ್ರೇಯಸ್ ಐಯ್ಯರ್ (Shreyas Iyer) ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡವು ನಿಗದಿತ 20 ಓವರ್​ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 215 ರನ್​ ಗಳ ಗುರಿಯನ್ನು ನೀಡಿತು. ಈ ಮೊತ್ತ ಬೆನಮ್ನತ್ತಿದ ಕೊಲ್ಕತ್ತಾ ತಂಡವು ನಿಗದಿತ 19.4 ಓವರ್​ ಗಳಲ್ಲಿ  ತನ್ನೆಲ್ಲಾ ವಿಕೆಟ್ ಕಳೆದುಕೊಂಡು 171 ರನ್​ ಗಳಿಸವ ಮೂಲಕ 44 ರನ್​ ಗಳಿಂದ ಸೋಲನ್ನಪ್ಪಿತು. ಈ ಮೂಲಕ ಡೆಲ್ಲಿ ಗೆಲುವಿನ ನಗೆ ಬೀರಿತು.

ಮೊದಲು ಬ್ಯಾಟ್ ಮಾಡಿದ ಡೆಲ್ಲಿ:

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಿಗದಿತ 20 ಓವರ್​ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 215 ರನ್​ ಗಳ ಬೃಹತ್​ ಮೊತ್ತ ಕಲೆಹಾಕಿತು. ಡೆಲ್ಲಿ ಪರ ಪ್ರಥ್ವಿ ಶಾ 29 ಬೌಲ್​ ಗಳಲ್ಲಿ 7 ಬೌಂಡರಿ ಜೊತೆ 2 ಸಿಕ್ಸ್​ರ್ ಗಳ ನೆರವಿನಿಂದ 51 ರನ್ ಸಿಡಿಸಿದರೆ, ಮೊದಲ ಪಂದ್ಯದಲ್ಲಿಯೇ ಡೇವಿಡ್ ವಾರ್ನರ್ 45 ಬೌಲ್​ ಗಳಲ್ಲಿ 2 ಸಿಕ್ಸ್ ಮತ್ತು 6 ಫೋರ್​ ಹೊಡೆಯುವ ಮೂಲಕ ಆಕರ್ಷಕ 61 ರನ್​ ಕಲೆಹಾಕಿದರು. ಈ ಮೂಲಕ ಡೆಲ್ಲಿ ಬೃಹತ್ ಮೊತ್ತ ಪೇರೆಪಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.

ಉಳಿದಂತೆ ನಾಯಕ ರಿಷಭ್ ಪಂಥ್ 27 ರನ್, ಅಕ್ಷರ್ ಪಟೇಲ್ 22 ರನ್ ಹಾಗೂ ಅಂತಿಮವಾಗಿ ಶಾರ್ದೂಲ್ ಠಾಕೂರ್ 29 ರನ್​ ಸಿಸಿಡದರು.

ಇದನ್ನೂ ಓದಿ: IPL 2022: ಅನುಜ್ ರಾವತ್ ಮೊದಲ ಫಿಫ್ಟಿ, RCB ಗೆ ಹ್ಯಾಟ್ರಿಕ್ ಗೆಲುವು

ಕೊಲ್ಕತ್ತಾ ಬೌಲಿಂಗ್:

ಕೊಲ್ಕತ್ತಾ ನೈಟ್ ರೈಡರ್ಸ್ ಪರ ಸುನೀಲ್ ನರೇನ್ 4 ಓವರ್​ಗೆ 21 ರನ್ ನೀಡಿ 2 ವಿಕೆಟ್ ಪಡೆದರೆ, ಉಮೇಶ್ ಯಾದವ್, ವರುಣ್ ಚರ್ಕವರ್ತಿ ಮತ್ತು ರಸಲ್ ತಲಾ 1 ವಿಕೆಟ್ ಪಡೆದು ಮಿಂಚಿದರು.

ನಾಯಕ ಶ್ರೇಯಸ್ ಅ್ಯಯರ್​ ಆಟ ವ್ಯರ್ಥ:

ಡೆಲ್ಲಿ ನೀಡಿದ ಬೃಹತ್ ಮೊತ್ತ ಬೆನ್ನಟ್ಟಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಆರಂಭದಿಂದಲೇ ಪಟ ಪಟನೇ ವಿಕೆಟ್​ ಗಳು ಉರಳಲಾರಂಭಿಸಿದವು. ಅಜಿಂಕ್ಯಾ ರಹಾನೆ ಕೇವಲ 8 ರನ್ ಮತ್ತು ವೆಂಕಟೇಶ್ ಐಯ್ಯರ್ 18 ರನ್​ ಗಳಸಿದರು. ಆದರೆ ನಾಯಕನ ಆಟವಾಡಿದ ಶ್ರೇಯಸ್​ ಅಯ್ಯರ್ 33 ಎಸೆತಗಳಲ್ಲಿ 5 ಬೌಂಡರಿ ಜೊತೆ 2 ಸಿಕ್ಸ್ ನೆರವಿನಿಂದ 54 ರನ್​ ಗಳಸಿದರು. ಇವರೊಂದಿಗೆ ನಿತೀಶ್ ರಾಣಾ 30 ರನ್ ಗಳಸಿದನ್ನು ಬಿಟ್ಟರೆ ಬೇರಾವ ಬ್ಯಾಟರ್​ ಸಹ ಕೊಲ್ಕತ್ತಾ ದಾಖಿಗೆ ಪ್ರತಿರೋಧ ಒಡ್ಡಲಿಲ್ಲ.

ಇದನ್ನೂ ಓದಿ: GT vs PBKS: ​ಪಂಜಾಬ್​ ಕಿಂಗ್ಸ್​ಗೆ ಗುಮ್ಮಿದ ಗುಜರಾತ್​ ಟೈಟನ್ಸ್​! ಮತ್ತೆ ಹೀರೋ ಆದ ತೇವಾಟಿಯಾ

ಉಳಿದಂತೆ ಕೊಲ್ಕತ್ತಾ ಪರ ರಸಲ್ 20 ರನ್, ಬಿಲ್ಲಿಂಗ್​ಸನ್ 15 ರನ್, ನರೇನ್ ಮತ್ತು ಪ್ಯಾಟ್ ಕಮೀನ್ಸ್ 4 ರನ್​ ಗಳಸಿದರು.

ಸಂಘಟಿತ ಬೌಲಿಂಗ್ ಪ್ರದರ್ಶಿಸಿದ ಡಿಸಿ:

ಉತ್ತಮ ಬೌಲಿಂಗ್ ಮಾಡುವ ಮೂಲಕ ಕೊಲ್ಕತ್ತಾ ತಂಡಕ್ಕೆ ಡೆಲ್ಲಿ ಬೌಲರ್ಸ್ ಮುಳುವಾದರು. ಡೆಲ್ಲಿ ಪರ ಅಕಾಲೇಲ್ ಅಹ್ಮದ್ 4 ಓವರ್ ಮಾಡಿ 25 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರೆ, ಕುಲದೀಪ್ ಯಾಧವ್ 4 ಓವರ್​ಗೆ 35 ರನ್ ನೀಡಿ 4 ವಿಕೆಟ್ ಕಬಳಿಸುವ ಮೂಲಕ ಕೊಲ್ಕತ್ತಾ ತಂಡಕ್ಕೆ ಮುಳುವಾದರು. ಉಳಿದಂತೆ ಶಾರ್ದೂಲ್ ಠಾಕೂರ್ 2 ಮತ್ತು ಲಲಿತ್ ಯಾಧವ್  1 ವಿಕೆ1ಟ್ ಪಡೆದರು.
Published by:shrikrishna bhat
First published: