IPL 2022 KKR vs DC: ಕೊಲ್ಕತ್ತಾ ಮೇಲೆ ರೈಡ್ ಮಾಡ್ತಾರಾ ಡೆಲ್ಲಿ? ಹೇಗಿರಲಿದೆ ಉಭಯ ತಂಡಗಳ ಪ್ಲೇಯಿಂಗ್ XI

ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ (KKR vs DC) ತಂಡದ ವಿರುದ್ಧ ಸೆಣಸಾಡಲಿದೆ.

 KKR vs DC

KKR vs DC

  • Share this:
ಇಂಡಿಯನ್ ಪ್ರೀಮಿಯರ್ ಲೀಗ್ 2022ರಲ್ಲಿ ಇಂದು (IPL 2022) ಎರಡು ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ (KKR vs DC) ತಂಡದ ವಿರುದ್ಧ ಸೆಣಸಾಡಲಿದೆ. ಈ ಪಂದ್ಯವು ಮದ್ಯಾಹ್ನ 3:30ಕ್ಕೆ ಮುಂಬೈನ ಬ್ರಬೌರ್ನ್ ಕ್ರೀಡಾಂಗಣದಲ್ಲಿ ನಡೆಯಲಿದೆ. 2ನೇ ಪಂದ್ಯವು ಮುಂಬೈನ ವಾಂಖಡೆ ಮೈದಾನದಲ್ಲಿ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ಮತ್ತು ಕನ್ನಡಿಗ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೇಂಟ್ಸ್ (RR vs LSG) ಮು ಖಾಮುಖಿ ಆಗಲಿದೆ. ಮೊದಲ ಪಂದ್ಯ ಉಭಯ ತಂಡಗಳ ಹೆಡ್​ ಟು ಹೆಡ್ (Head to Head)​ ನೋಡುವುದಾದರೆ, ಈಗಾಗಲೇ ಎರಡೂ ತಂಡಗಳು ಅಂಕ ಪಟ್ಟಿಯಲ್ಲಿ ವಿಭಿನ್ನ ಸ್ಥಾನದಲ್ಲಿದ್ದು ಹೆಚ್ಚಿನ ಹಣಾಹಣಿ ನಿರೀಕ್ಷೆಯಲ್ಲಿದೆ.

ಪಂದ್ಯದ ವಿವರ:

ಇಂದಿನ ಮೊದಲ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಂಬೈನ ಬ್ರಬೌರ್ನ್ ಕ್ರೀಡಾಂಗಣದಲ್ಲಿ ಸೆಣಸಾಡಲಿವೆ. ಭಾರತೀಯ ಕಾಲಮಾನ 3 ಗಂಟೆಗೆ ಟಾಸ್ ಹಾಗೂ 3:30ಕ್ಕೆ ಪಂದ್ಯ ಆರಂಭವಾಗಲಿದೆ.

ಐಪಿಎಲ್ 2022 ರಲ್ಲಿ ಉಭಯ ತಂಡಗಳ ಪ್ರದರ್ಶನ:

IPL 2022 ರಲ್ಲಿ KKR ಅನ್ನು ಶ್ರೇಯಸ್ ಅಯ್ಯರ್ ಮುನ್ನಡೆಸುತ್ತಿದ್ದಾರೆ. 4 ಪಂದ್ಯಗಳಲ್ಲಿ 3 ಗೆಲುವು ಮತ್ತು 1 ಸೋಲಿನೊಂದಿಗೆ, KKR 6 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ ಇದುವರೆಗೆ 2 ಪಂದ್ಯಗಳನ್ನು ಕಳೆದುಕೊಂಡಿದೆ ಮತ್ತು 3 ರಲ್ಲಿ 1 ರಲ್ಲಿ ಮಾತ್ರ ಗೆದ್ದಿದೆ. ಅವರು 2 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ 7 ನೇ ಸ್ಥಾನದಲ್ಲಿದ್ದು ಕೋಲ್ಕತ್ತಾ ತಂಡ ಹೆಚ್ಚು ಬಲಿಷ್ಠವಾಗಿ ಕಾಣುತ್ತದೆ.

ಇದನ್ನೂ ಓದಿ: KKR vs MI: ರೊಚ್ಚಿಗೆದ್ದ ಪ್ಯಾಟ್​ ಕಮ್ಮಿನ್ಸ್​! ಮುಂಬೈಗೆ ಮಣ್ಣು ಮುಕ್ಕಿಸಿದ ಶ್ರೇಯಸ್​ ಅಯ್ಯರ್​ ಪಡೆ

KKR vs DC ಹೆಡ್-ಟು-ಹೆಡ್:

ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡ್ಗಳು ಈವರೆಗೆ ಐಪಿಎಲ್​ ನಲ್ಲಿ ಒಟ್ಟು 29 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ 16 ಬಾರಿ ಕೆಕೆಆರ್ ತಂಡ ಗೆದ್ದರೆ 13 ಬಾರಿ ಡೆಲ್ಲಿ ತಂಡ ಜಯ ಗಳಿಸಿದೆ. ಆದರೆ ಬ್ರರ್ಬೋನ್ ಮೈದಾನದಲ್ಲಿ ಇದೇ ಮೊದಲ ಬಾರಿಗೆ ಈ 2 ತಂಡಗಳು ಸೆಣಸಾಡುತ್ತಿವೆ. ಉಳಿದಂತೆ ಕೊನೆಯ 5 ಪಂದ್ಯಗಳ ಪಲಿತಾಂಶ ನೋಡುವುದಾದರೆ 3ರಲ್ಲಿ ಕೊಲ್ಕತ್ತಾ ಮತ್ತು 2ರಲ್ಲಿ ಡೆಲ್ಲಿ ಜಯ ದಾಖಲಿಸಿವೆ. ಕಳೆದ ಬಾರಿ ಐಪಿಎಲ್ 14ನೇ ಸೀಸನ್​ನಲ್ಲಿ 3 ಬಾರಿ ಎದುರಾದ ಈ ತಂಡಗಳಲ್ಲಿ 2 ಕೆಕೆಆರ್ ಹಾಗೂ 1 ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ಗೆದ್ದುಕೊಂಡಿದೆ.

ಅಂಕಿಅಂಶಗಳ ಮೇಲೆ ನೋಡುವುದಾದರೆ ಈ ಬಾರಿಯೂ ಕೊಲ್ಕತ್ತಾ ತಂಡ ಹೆಚ್ಚು ಬಲಿಷ್ಠವಾಗಿ ಕಾಣುತ್ತಿದೆ. ಅಲ್ಲದೇ ಈ ಬಾರಿಯ ಐಪಿಎಲ್​ ನಲ್ಲಿ ಅಗ್ರಸ್ಥಾನದಲ್ಲಿರುವ ಕೆಕೆಆರ್ ತಂಡ ಇಂದು ಗೆಲ್ಲುವ ಮೆಚ್ಚಿನ ತಂಡವಾಗಿ ಗೋಚರಿಸುತ್ತಿದೆ.

ಉಳಿದಂತೆ ಮೊದಲ ಬ್ಯಾಟಿಂಗ್ ಮಾಡಿದಾಗ ಕೆಕೆಆರ್ ಈವರರೆಗೆ ಡಿಸಿ ವಿರುದ್ಧ 7 ಬಾರಿ ಗೆಲುವಿನ ನಗೆ ಬೀರಿದರೆ, ಡಿಸಿ 5 ಬಾರಿ ಜಯ ದಾಖಲಿಸಿದೆ. ಅದರಂತೆ 2ನೇ ಬಾರಿ ಅಂದರೆ ಚೇಸಿಂಗ್ ಮಾಡಿದಾಗ ಕೊಲ್ಕತ್ತಾ 9 ಹಾಗೂ ಡೆಲ್ಲಿ 8 ಬಾರಿ ಗೆದ್ದು ಬೀಗೆದೆ. ಇದರಲ್ಲಿ ಚೇಸಿಂಗ್ ಮಾಡುವವರು ಹೆಚ್ಚು ಬಲಿಷ್ಠರಾಗಿರುವುದು ಕಂಡುಬರುತ್ತಿದೆ.

ಇದನ್ನೂ ಓದಿ: IPL 2022 LSG vs DC Highlights: ಡೆಲ್ಲಿ ವಿರುದ್ಧ ಲಖ್ನೋಗೆ ಕೊನೆ ಓವರ್​ನಲ್ಲಿ ರೋಚಕ ಗೆಲುವು!

ಉಭಯ ತಂಡಗಳ ಸಂಬಾವ್ಯ ತಂಡ:

ಕೊಲ್ಕತ್ತಾ ನೈಟ್ ರೈಡರ್ಸ್: ಅಜಿಂಕ್ಯ ರಹಾನೆ, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್(ನಾಯಕ), ಸ್ಯಾಮ್ ಬಿಲ್ಲಿಂಗ್ಸ್, ನಿತೀಶ್ ರಾಣ, ಆ್ಯಂಡ್ರೆ ರಸೆಲ್, ಸುನಿಲ್ ನರೈನ್, ಪ್ಯಾಟ್ ಕಮಿನ್ಸ್, ಉಮೇಶ್ ಯಾದವ್, ರಸಿಖ್ ಸಲಾಮ್, ವರುಣ್ ಚಕ್ರವರ್ತಿ

ಡೆಲ್ಲಿ ಕ್ಯಾಪಿಟಲ್ಸ್: ರಿಷಬ್ ಪಂತ್ (ನಾಯಕ), ಪೃಥ್ವಿ ಶಾ, ಟಿಮ್ ಸೀಫರ್ಟ್, ಸರ್ಫರಾಜ್ ಖಾನ್, ಲಲಿತ್ ಯಾದವ್, ರೋವ್ಮನ್ ಪೊವೆಲ್, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಖಲೀಲ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್.
Published by:shrikrishna bhat
First published: