IPL 2022: KKR ತಂಡಕ್ಕೆ ಬಿಗ್ ಶಾಕ್, ಪ್ರಮುಖ ಸ್ಟಾರ್ ಆಟಗಾರರು ಅಲಭ್ಯ

ಐಪಿಎಲ್ ಪ್ರಾರಂಭಕ್ಕೂ ಮುಂಚಿತವಾಗಿ ಕೊಲ್ಕತ್ತಾ (KKR) ತಂಡಕ್ಕೆ ಶಾಕ್ ಒಂದು ಎದುರಾಗಿದೆ. ಹೌದು, ತಂಡದ ಪ್ರಮುಖ ಇಬ್ಬರು ಆಟಗಾರರು ಪ್ರಾರಂಭದ 5 ಪಂದ್ಯಗಳಿಗೆ ಅಲಭ್ಯರಾಗಿರುತ್ತಾರೆ ಎಂದು ಕೊಲ್ಕತ್ತಾ ತಂಡದ ಮೆಂಟರ್ ಡೇವಿಡ್ ಹಸ್ಸಿ ಬುಧವಾರ ನಡೆದ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಇದನ್ನು ಖಚಿತಪಡಿಸಿದ್ದಾರೆ. 

ಕೋಲ್ಕತ್ತಾ ತಂಡ

ಕೋಲ್ಕತ್ತಾ ತಂಡ

  • Share this:
ಐಪಿಎಲ್​ 2022ರ (IPL 2022) 15ನೇ ಆವೃತ್ತಿಯ ಆರಂಭಕ್ಕೆ ಇನ್ನೇನು 2 ದಿನಗಳು ಮಾತ್ರ ಬಾಕಿ ಉಳಿದಿದೆ. ಈ ಬಾರಿಯ ಐಪಿಎಲ್​ನ ಉದ್ಘಾಟನಾ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (KKR vs CSK) ತಂಡಗಳು ಸೆಣಸಾಡಲಿದೆ. ಆದರೆ ಐಪಿಎಲ್ ಪ್ರಾರಂಭಕ್ಕೂ ಮುಂಚಿತವಾಗಿ ಕೊಲ್ಕತ್ತಾ (KKR) ತಂಡಕ್ಕೆ ಶಾಕ್ ಒಂದು ಎದುರಾಗಿದೆ. ಹೌದು, ತಂಡದ ಪ್ರಮುಖ ಇಬ್ಬರು ಆಟಗಾರರು ಪ್ರಾರಂಭದ 5 ಪಂದ್ಯಗಳಿಗೆ ಅಲಭ್ಯರಾಗಿರುತ್ತಾರೆ ಎಂದು ಕೊಲ್ಕತ್ತಾ ತಂಡದ ಮೆಂಟರ್ ಡೇವಿಡ್ ಹಸ್ಸಿ ಬುಧವಾರ ನಡೆದ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಇದನ್ನು ಖಚಿತಪಡಿಸಿದ್ದಾರೆ. ತಂಡದ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಮತ್ತು ಬ್ಯಾಟ್ಸ್‌ಮನ್ ಆರೋನ್ ಫಿಂಚ್ (Aaron Finch) ಅಲಭ್ಯರಾಗಿರುವುದಾಗಿ ಹೇಳಿದ್ದಾರೆ.

ಸ್ಟಾರ್ ಪ್ಲೇಯರ್ ಅಲಭ್ಯತೆ:

ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​ ಕಮ್ಮಿನ್ಸ್ ಅವರನ್ನು 7.25 ಕೋಟಿ ರೂಪಾಯಿಗೆ ಖರೀದಿಸಿತು. ಹಾಗೆಯೇ ಕೆಕೆಆರ್​ ತಂಡದಿಂದ ಹೊರನಡೆದಿರುವ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಅಲೆಕ್ಸ್ ಹೇಲ್ಸ್ ಬದಲಿಗೆ ಫಿಂಚ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ . ಫಿಂಚ್ ಅವರನ್ನು ಕೆಕೆಆರ್ 1.50 ಕೋಟಿ ರೂ.ಗೆ ಆಯ್ಕೆ ಮಾಡಿಕೊಂಡಿದೆ. ಆದರೆ ಇದೀಗ ಈ ಇಬ್ಬರೂ ಆಟಗಾರರು ಮೊದಲ 5 ಪಂದ್ಯಗಳಿಗೆ ಲಭ್ಯವಿರುವುದಿಲ್ಲ. ಇದು ಕೆಕೆಆರ್‌ ತಂಡದ ಪಾಲಿಗೆ ಹಿನ್ನಡೆಯಾಗಲಿದೆ.

ಪಾಕ್ ಪ್ರವಾಸದಲ್ಲಿ ಆಸೀಸ್:

ಆಸ್ಟ್ರೇಲಿಯಾ ತಂಡ ಪಾಕ್ ಪ್ರವಾಸದಲ್ಲಿದ್ದು, ಪಾಕಿಸ್ತಾನದ ವಿರುದ್ಧದ ಸರಣಿ ಏಪ್ರಿಲ್ 5ಕ್ಕೆ ಮುಗಿಯಲಿದೆ. ಹೀಗಾಗಿ ಆಸೀಸ್ ಏಕದಿನ ತಂಡದಲ್ಲಿ ಪ್ಯಾಟ್ ಕಮಿನ್ಸ್ ಮತ್ತು ಆರೋನ್ ಫಿಂಚ್ ಆಡುತ್ತಿದ್ದಾರೆ. ನಂತರದಲ್ಲಿ ಐಪಿಎಲ್​ನ ನಿಯದಂತೆ ಕ್ವಾರಂಟೈನ್ ಗಳನ್ನು ಮುಗಿಸಿ, ಏಪ್ರಿಲ್ 10ರ ನಂತರ ಈ ಇಬ್ಬರು ಆಟಗಾರರು ತಂಡವನ್ನು ಸೇರಿಕೊಳ್ಳಲಿದ್ದಾರೆ. ಹೀಗಾಗಿ ಇವರಿಬ್ಬರ ಬದಲಾಗಿ ಸ್ಯಾಮ್ ಬಿಲ್ಲಿಂಗ್ಸ್ ಮತ್ತು ಮಹಮ್ಮದ್ ನಬಿ ತಂಡದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಏಪ್ರಿಲ್ 10 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಆರೋನ್ ಫಿಂಚ್ ಹಾಗೂ ಪ್ಯಾಟ್ ಕಮಿನ್ಸ್ ಆಡುವ ನಿರೀಕ್ಷೆಯಿದೆ.

ಇದನ್ನೂ ಓದಿ: IPL 2022: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನೂತನ ಜರ್ಸಿ ಅನಾವರಣ, ಹೊಸ ದಿರಿಸಿನಲ್ಲಿ ಮಿಂಚಿದ ಶ್ರೇಯಸ್ ಐಯ್ಯರ್

ಮೊದಲ ಪಂದ್ಯದಲ್ಲೇ ಧೋನಿಗೆ ಹೆಚ್ಚಾಯ್ತು ಟೆನ್ಶನ್​!:

ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಕಾಶಿ ವಿಶ್ವನಾಥನ್ ಅವರು ಫಿಟ್ನೆಸ್ ಅನ್ನು ಬಿಸಿಸಿಐ ಅನುಮೋದಿಸುವವರೆಗೆ ದೀಪಕ್ ಚಹಾರ್ ಎನ್‌ಸಿಎಂನಲ್ಲಿ ಉಳಿಯುತ್ತಾರೆ ಎಂದು ಹೇಳಲಾಗಿದೆ. ಮೊಯಿನ್​ಗೆ ಇನ್ನೂ ವೀಸಾ ಸಿಗದಿರುವುದು ಚೆನ್ನೈನ ಚಿಂತೆಗೆ ಕಾರಣವಾಗಿದೆ.

ಕೆಕೆಆರ್ ತಂಡದ ನಾಯಕನಾಗಿ ಶ್ರೇಯಸ್ ಐಯ್ಯರ್:

ಇತ್ತೀಚೆಗೆ ನಡೆದ 2022ರ ಐಪಿಎಲ್ ಮೆಗಾ ಹರಾಜಿನಲ್ಲಿ ಶ್ರೇಯಸ್ ಐಯ್ಯರ್ ಅವರನ್ನು ₹12.25 ಕೋಟಿಯ ಭಾರೀ ಮೊತ್ತಕ್ಕೆ ಕೋಲ್ಕತ್ತ ತಂಡ ಖರೀದಿಸಿತ್ತು. ಇದರ ಬೆನ್ನಲ್ಲೇ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ನಾಯಕನನ್ನಾಗಿ ಅವರನ್ನು ಕೆಕೆಆರ್ ನೇಮಕ ಮಾಡಿದೆ.

ಇದನ್ನೂ ಓದಿ: IPL 2022: ಒಂದಕ್ಕಿಂತ ಒಂದು ಸೂಪರ್​! ನೋಡಿ ಹೇಗಿದೆ ಎಲ್ಲಾ ತಂಡಗಳ ಹೊಸ ಜರ್ಸಿ..

2022ರ ಐಪಿಎಲ್​ ಗೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಹೀಗಿದೆ:

ಆಂಡ್ರೆ ರಸೆಲ್, ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ವರುಣ್ ಚಕ್ರವರ್ತಿ, ನಿತೀಶ್ ರಾಣಾ, ಪ್ಯಾಟ್ ಕಮ್ಮಿನ್ಸ್, ಶ್ರೇಯಸ್ ಅಯ್ಯರ್ (ನಾಯಕ), ಶಿವಂ ಮಾವಿ, ಶೆಲ್ಡನ್ ಜಾಕ್ಸನ್, ಅಜಿಂಕ್ಯ ರಹಾನೆ, ರಿಂಕು ಸಿಂಗ್, ಅನುಕುಲ್ ರಾಯ್, ರಾಸಿಕ್ ದಾರ್, ಬಾಬಾ ಇಂದ್ರಜಿತ್, ಚಮಿಕಾ ಕರುಣರತ್ನೆ, ಅಭಿಜೀತ್ ತೋಮರ್, ಪ್ರಥಮ್ ಸಿಂಗ್, ಅಶೋಕ್ ಶರ್ಮಾ, ಸ್ಯಾಮ್ ಬಿಲ್ಲಿಂಗ್ಸ್, ಅಲೆಕ್ಸ್ ಹೇಲ್ಸ್, ಟಿಮ್ ಸೌಥಿ, ರಮೇಶ್ ಕುಮಾರ್, ಮೊಹಮ್ಮದ್ ನಬಿ, ಉಮೇಶ್ ಯಾದವ್, ಅಮನ್ ಖಾನ್ ಅವರನ್ನ ಹರಾಜು ಪ್ರಕ್ರಿಯೆಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ರೀತಿ ಮಾಡಿದೆ.
Published by:shrikrishna bhat
First published: