IPL 2022 GT vs DC: ಮೊದಲ ಹಣಾಹಣಿಯಲ್ಲಿ ಯಾರು ಗೆಲ್ತಾರೆ?, ಹೇಗಿದೆ ಡೆಲ್ಲಿ-ಗುಜರಾತ್ ಬಲಾಬಲ

ಐಪಿಎಲ್ 2022 (IPL 2022) ರಲ್ಲಿ ಇಂದುಡಬಲ್ ಹೆಡ್ಡರ್ ಪಂಡ್ಯ ನಡೆಯಲಿದೆ. 2ನೇ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಟೈಟಾನ್ಸ್ (GT vs DC) ಮುಖಾಮುಖಿಯಾಗಲಿದೆ.

ಗುಜರಾತ್ vs ಡೆಲ್ಲಿ

ಗುಜರಾತ್ vs ಡೆಲ್ಲಿ

  • Share this:
ಐಪಿಎಲ್ 2022 (IPL 2022) ರಲ್ಲಿ ಇಂದುಡಬಲ್ ಹೆಡ್ಡರ್ ಪಂಡ್ಯ ನಡೆಯಲಿದೆ. 2ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಟೈಟಾನ್ಸ್ (GT vs DC) ಮುಖಾಮುಖಿಯಾಗಲಿದೆ. ಈಗಾಗಲೇ ಟೂರ್ನಿಯಲ್ಲಿ ತಮ್ಮ ಮೊದಲ ಪಂದ್ಯಗಳನ್ನು ಗೆದ್ದಿರುವ ಉಭಯ ತಂಡಗಳು ಇಂದಿನ ಪಂದ್ಯವನ್ನು ಗೆಲ್ಲುವ ಮೂಲಕ ಗೆಲುವಿನ ಓಟವನ್ನು ಮುಂದುವರೆಸುವ ವಿಶ್ವಾಸದಲ್ಲಿ ಇವೆ. ಈಗಾಗಲೇ ಎರಡೂ ತಂಡಗಳು ಗೆಲುವಿನೊಂದಿಗೆ ಉತ್ತಮವಾಗಿ ಟೂರ್ನಿಯನ್ನು ಆರಂಭಿಸಿದ್ದರೂ, ಈ ಪಂದ್ಯದ ಮೂಲಕ ಹೊಸ ತಿರುವು ಪಡೆದುಕೊಳ್ಳಲಿದೆ. ಹಾಗಿದ್ದರೆ ಈ ಎರಡೂ ತಂಡಗಳ ಬಲಾಬಲ ಹೇಗಿದೆ? ಮತ್ತು ಪಂದ್ಯಕ್ಕೆ ಉಭಯ ತಂಡಗಳ ಸಂಭಾವ್ಯ ತಂಡ (Playing XI ) ಯಾವ ರೀತಿ ಇರಲಿದೆ ಎಂಬುದರ ಕುರಿತು ಬೆಳಕು ಚೆಲ್ಲೋಣ ಬನ್ನಿ.

ಪಂದ್ಯದ ವಿವರ:

ಐಪಿಎಲ್​ 2022ರ ಟೂರ್ನಿಯ 10ನೇ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಟೈಟಾನ್ಸ್ ಪುಣೆಯ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಟಾಸ್ ಮತ್ತು 7:30ಕ್ಕೆ ಪಂದ್ಯ ಆರಂಭವಾಗಲಿದೆ.

ತಂಡಗಳ ಬಲಾಬಲ ಹೇಗಿದೆ?:

ಟಾಟಾ ಐಪಿಎಲ್‌ನ ಈ ಋತುವಿನ 10ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮೊದಲ ಬಾರಿಗೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಲಿದೆ. ಈ ಎರಡು ತಂಡಗಳು ಐಪಿಎಲ್ ಇತಿಹಾಸದಲ್ಲಿ ತಮ್ಮ ಮೊದಲ ಮುಖಾಮುಖಿ ಪಂದ್ಯವನ್ನು ಆಡುತ್ತಿರುವುದರಿಂದ ಎರಡೂ ತಂಡಗಳು ಗೆಲುವಿನೊಂದಿಗೆ ಪ್ರಾರಂಭಿಸಲು ಕಾತುರವಾಗಿದೆ. ಇನ್ನು, ಐಪಿಎಲ್‌ನ ಈ ಋತುವಿನ ಪಾಯಿಂಟ್‌ ಪಟ್ಟಿಯಲ್ಲಿ ಗುಜರಾತ್ ಟೈಟಾನ್ಸ್ ಪ್ರಸ್ತುತ 4ನೇ ಸ್ಥಾನ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ 2ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: IPL 2022: ಡೆಲ್ಲಿ ವಿರುದ್ಧ ಮುಂಬೈ ಇಂಡಿಯನ್ಸ್​ಗೆ ಸೋಲು, ಇಶಾನ್ ಕಿಶನ್ ಅರ್ಧ ಶತಕ ವ್ಯರ್ಥ

ಈ ಬಾರಿಯ ಹೊಸ ತಂಡವಾದ ಗುಜರಾತ್ ಟೈಟಾನ್ಸ್ ತನ್ನ ಕೊನೆಯ ಪಂದ್ಯವನ್ನು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆಡಿತು. ಈ ಪಂದ್ಯದಲ್ಲಿ ಗುಜರಾತ್ ತಂಡ 5 ವಿಕೆಟ್‌ಗಳಿಂದ ಗೆದ್ದಿದೆ. ಆ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಪರ ಹಾರ್ದಿಕ್ ಪಾಂಡ್ಯ ಮತ್ತು ರಾಹುಲ್ ತೆವಾಟಿಯಾ ಕ್ರಮವಾಗಿ 33 ಮತ್ತು 40 ರನ್ ಸಿಡಿಸಿ ಮಿಂಚಿದರು.

ಮತ್ತೊಂದೆಡೆ, ಡೆಲ್ಲಿ ಕ್ಯಾಪಿಟಲ್ಸ್ ತನ್ನ ಕೊನೆಯ ಪಂದ್ಯವನ್ನು ಮುಂಬೈ ಇಂಡಿಯನ್ಸ್ ವಿರುದ್ಧ  4 ವಿಕೆಟ್‌ಗಳಿಂದ ಗೆದ್ದು ಬೀಗಿದೆ. ಆ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಲಲಿತ್ ಯಾದವ್ ಮತ್ತು ಅಕ್ಷರ್ ಪಟೇಲ್ ಕ್ರಮವಾಗಿ 48 ರನ್ ಮತ್ತು 38 ರನ್ ಗಳಿಸುವ ಮೂಲಕ ಡೆಲ್ಲಿ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.

ಹೇಗಿದೆ ಪಿಚ್ ವರದಿ:

MCA ಕ್ರಿಕೆಟ್ ಸ್ಟೇಡಿಯಂನಲ್ಲಿನ ಆರಂಭದಲ್ಲಿ ಬ್ಯಾಟರ್‌ಗಳಿಗೆ ಸಹಾಯ ಮಾಡುತ್ತದೆ ಆದರೆ ಆಟವು ಮುಂದುವರೆದಂತೆ ಸ್ಪಿನ್ನರ್‌ಗಳಿಗೆ ಸಹಾಯ ಮಾಡುತ್ತದೆ. ಪುಣೆಯ MCA ಸ್ಟೇಡಿಯಂನಲ್ಲಿ ಚೇಸಿಂಗ್ ತಂಡಕ್ಕೆ ವಿಕೆಟ್ ಮೇಲೆ ಅನುಕೂಲವಿದೆ. ಅಲ್ಲದೇ ತೇವಾಂಶವಿಲ್ಲದ ಕಾರಣ ಪಿಚ್​ ಸ್ಥಿರವಾಗಿರುವ ಸಾಧ್ಯತೆಯೂ ಇದೆ.

ಮೊದಲ ಇನ್ನಿಂಗ್ಸ್ ಆರಂಭಿಸುವ ತಂಡವು ಸರಾಸರಿ 159 ರನ್ ಕಲೆಹಾಕಲಿದ್ದು, ಚೇಸಿಂಗ್ ಟೀಂ ಇಲ್ಲಿ ಶೇ.80ರಷ್ಟು ಪಂದ್ಯವನ್ನು ಗೆದ್ದಿರುವ ದಾಖಲೆ ಹೊಂದಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಟಾಸ್ ಪ್ರಮುಖ ಪಾತ್ರ ನಿರ್ವಹಿಸಲಿದೆ.

ಇದನ್ನೂ ಓದಿ: GT vs LSG: ಗುಜರಾತ್​ ಟೈಟನ್ಸ್​ ಘರ್ಜನೆಗೆ ಬೆಚ್ಚಿದ ಲಕ್ನೋ ಸೂಪರ್​ ಜೈಂಟ್ಸ್ ​! ಮತ್ತೆ ಹೀರೋ ಆದ ತೇವಾಟಿಯ

ಉಭಯ ತಂಡಗಳ ಸಂಭಾವ್ಯ ತಂಡ:

ಡೆಲ್ಲಿ ಕ್ಯಾಪಿಟಲ್ಸ್: ರಿಷಬ್ ಪಂತ್, ಪೃಥ್ವಿ ಶಾ, ಟಿಮ್ ಸೀಫರ್ಟ್, ಸರ್ಫರಾಜ್ ಖಾನ್, ಲಲಿತ್ ಯಾದವ್, ರೋವ್ಮನ್ ಪೊವೆಲ್, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಖಲೀಲ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್.

ಗುಜರಾತ್ ಟೈಟಾನ್ಸ್: ಹಾರ್ದಿಕ್ ಪಾಂಡ್ಯ, ಶುಭಮನ್ ಗಿಲ್, ಮ್ಯಾಥ್ಯೂ ವೇಡ್, ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ಅಭಿನವ್ ಮನೋಹರ್, ರಶೀದ್ ಖಾನ್, ಲಾಕಿ ಫರ್ಗುಸನ್, ಮೊಹಮ್ಮದ್ ಶಮಿ ಮತ್ತು ವರುಣ್ ಆರೋನ್.
Published by:shrikrishna bhat
First published: