IPL 2022 Champion: ರೋಚಕ ಹಣಾಹಣಿಯಲ್ಲಿ ಗೆದ್ದು ಬೀಗಿದ ಗುಜರಾತ್, ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡ ಹಾರ್ದಿಕ್ ಪಡೆ

ಗುಜರಾತ್ ತಂಡ 18.1 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 133 ರನ್ ಗಳಿಸುವ ಮೂಲಕ ಐಪಿಎಲ್ 2022ದ ಚಾಂಪಿಯನ್ ಆಗಿ ಹೊರಹೊಮ್ಮಿತು.

ಐಪಿಎಲ್ 2022 ಚಾಂಪಿಯನ್ ಆದ ಗುಜರಾತ್

ಐಪಿಎಲ್ 2022 ಚಾಂಪಿಯನ್ ಆದ ಗುಜರಾತ್

  • Share this:
ಐಪಿಎಲ್ 2022 (IPL 2022) 15ನೇ ಆವೃತ್ತಿಯ ಪೈನಲ್ ಪಂದ್ಯದಲ್ಲಿ ಈ ಬಾರಿ ಗುಜರಾತ್ ಟೈಟನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ (GT vs RR) ತಂಡಗಳು ಸೆಣಸಾಡಲಿವೆ. ಇಂದಿನ ಪಂದ್ಯವು ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ (Narendra Modi Stadium) ನಡೆಯಿತು. ಈ ಪಂದ್ಯದಲ್ಲಿ ರಾಜಸ್ಥಾನ್ ತಂಡದ ವಿರುದ್ಧ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ತಂಡವು ಗೆಲ್ಲುವ ಮೂಲಕ ಮೊದಲ ಸೀಸನ್​ ನಲ್ಲಿಯೇ ಚಾಂಫಿಯನ್ ಆಗಿ ಹೊರಹೊಮ್ಮಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ್ ತಂಡವು ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 130 ರನ್ ಗಳ ಸಾಧಾರಣ ಮೊತ್ತ ಕಲೆಹಾಕಿತು. ಈ ಟಾರ್ಗೇಟ್ ಬೆನ್ನಟ್ಟಿದ ಗುಜರಾತ್ ತಂಡ 18.1 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 133 ರನ್ ಗಳಿಸುವ ಮೂಲಕ ಐಪಿಎಲ್ 2022ದ ಚಾಂಪಿಯನ್ ಆಗಿ ಹೊರಹೊಮ್ಮಿತು.

ಅಲ್ಪ ಮೊತ್ತಕ್ಕೆ ಕುಸಿದ ರಾಜಸ್ಥಾನ್:

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ್ ತಂಡವು ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 130 ರನ್ ಗಳ ಸಾಧಾರಣ ಮೊತ್ತ ಕಲೆಹಾಕಿತು. ರಾಜಸ್ಥಾನ್ ಪರ ಅಬ್ಬರಿಸುತ್ತಿದ್ದ ಜೋಸ್ ಬಟ್ಲರ್ ಮಹತ್ವದ ಪಂದ್ಯದಲ್ಲಿ ಎಡವಿದರು. ಅವರು 35 ಬೌಲ್​ ಗಳಲ್ಲಿ 39 ರನ್ ಗಳಸಿದರು. ಉಳಿದಂತೆ ಜೈಸ್ವಾಲ್ 22 ರನ್, ನಾಯಕ ಸಂಜು ಸ್ಯಾಮ್ಸನ್ 145 ರನ್, ದೇವದತ್ ಪಡ್ಡಿಕಲ್ 2 ರನ್, ಹಿಟ್​ಮಾಯರ್ 11 ರನ್, ರವಿಚಂದ್ರನ್ ಅಶ್ವೀನ್ 6 ರನ್, ರಿಯಾನ್ ಪರಾಗ್ 15 ರನ್, ಟ್ರೆಂಟ್ ಬೋಲ್ಟ್ 11 ರನ್ ಮತ್ತು ಒಬೆಡ್ 8 ರನ್ ಗಳಿಸುವ ಮೂಲಕ ತಂಡ ಸಾಧಾರಣ ಮೊತ್ತ ಕಲೆಹಾಕುವಲ್ಲಿ ಸಹಾಯಕರಾದರು.

ಇದನ್ನೂ ಓದಿ: IPL 2022: ಐಪಿಎಲ್​ ನಲ್ಲಿ ಮೊಳಗಿದ ಕೆಜಿಎಫ್ ಹಾಡು, ದಾಖಲೆ ಬರೆದ ಟೀ ಶರ್ಟ್; ಇಲ್ಲಿದೆ ಐಪಿಎಲ್ ಸಮಾರೋಪ ಸಮಾರಂಭದ ಹೈಲೈಟ್ಸ್

ರಾಜಸ್ಥಾನ್ ಬ್ಯಾಟ್ಸ್​ಮನ್​ಗಳನ್ನು ಕಾಡಿದ ಹಾರ್ದಿಕ್:

ಇನ್ನು, ಟಾಸ್ ಸೋತು ಮೊದಲು ಬೌಲಿಂಗ್ ಮಾಡಿದ ಗುಜರಾತ್ ಟೈಟನ್ಸ್ ತಂಡದ ಪರ ನಾಯಕ ಹಾರ್ದಿಕ್ ಪಾಂಡ್ಯ ಉತ್ತಮ ಸ್ಪೆಲ್ ಮಾಡುವ ಮೂಲಕ ಆರ್​ಆರ್​ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಪಾಂಡ್ಯ 4 ಓವರ್ ಮಾಡಿ 17 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದರು. ಉಳಿದಂತೆ ರವಿ ಶ್ರೀನಿವಾಸ್ 2 ವಿಕೆಟ್ ಪಡೆದರು. ಮೊಹ್ಮದ್ ಶಮಿ, ಯಶ್ ದಯಾಲ್ ಮತ್ತು ರಶೀಧ್ ಕೃಷ್ಣ ತಲಾ 1 ವಿಕೆಟ್ ಪಡೆಯುವ ಮೂಲಕ ರಾಜಸ್ಥಾನ್ ತಂಡವನ್ನು ಕಟ್ಟಿಹಾಕಿದರು.

ಇದನ್ನೂ ಓದಿ: ಲೀಗ್​ನಲ್ಲಿ ಒಂದು ಲೆಕ್ಕವಾದರೆ ಫೈನಲ್​ನಲ್ಲಿ ಇನ್ನೊಂದು ಲೆಕ್ಕ; IPL Finals ನಲ್ಲಿ ಮಿಂಚಿದ ಬ್ಯಾಟ್ಸ್‌ಮನ್‌ಗಳು ಯಾರು?

ಐಪಿಎಲ್ 2022 ಚಾಂಪಿಯನ್ ಆದ ಗುಜರಾತ್:

ಇನ್ನು, ರಾಜಸ್ಥಾನ್ ರಾಯಲ್ಸ್ ನೀಡಿದ 130 ರನ್ ಗಳ ಸಾಧಾರಣ ಮೊತ್ತ ಬೆನ್ನಟ್ಟಿದ ಗುಜರಾತ್ ತಂಡದ ಪರ ಶುಭಂ ಗಿಲ್ 45 ರನ್, ನಾಯಕ ಹಾರ್ದಿಕ್ ಪಾಂಡ್ಯ 34 ರನ್, ವಾಶಿಂಗ್​ಟನ್ ಸುಂದರ್ 5 ರನ್ ಮತ್ತು ಡೇವಿಡ್ ಮಿಲ್ಲರ್ 32 ರನ್ ಗಳಿಸುವ ಮೂಲಕ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಕಾರಣಿಕರ್ತರಾದರು. ಅಂತಿಮಾವಾಗಿ ಗಿಲ್ ಸಿಕ್ಸ್ ಸಿಡಿಸುವ ಮೂಲಕ ಗುಜರಾತ್ ತಂಡ ಗೆಲುವಿನ ನಗೆ ಬೀರಿತು.

ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್:

ಇನ್ನು, ಈ ಬಾರಿ ಐಪಿಎಲ್ ನಲ್ಲಿ ನಿರೀಕ್ಷೆಯಂತೆ ಆರಂಜ್ ಕ್ಯಾಪ್​ ನ್ನು ರಾಜಸ್ಥಾನ್ ತಂಡದ ಜೋಸ್ ಬಟ್ಲರ್ ಪಾಲಾಗಿದೆ. ಬಟ್ಲರ್ 17 ಪಂದ್ಯಗಳಲ್ಲಿ 3 ಶತಕ ಸಹಿತ 863 ರನ್ ಗಳಿಸುವ ಮೂಲಕ ಆರೆಂಜ್ ಕ್ಯಾಪ್ ಹೋಲ್ಡರ್ ಆದರು. ಅದರಂತೆ ರಾಜಸ್ಥಾನ್ ತಂಡದ ಚಹಾಲ್ ಈ ಸೀಸನ್​ ನಲ್ಲಿ ಉತ್ತಮ ಬೌಲಿಂಗ್ ಮಾಡುವ ಮೂಲಕ 27 ವಿಕೆಟ್ ಕಬಳಿಸಿ ಪರ್ಪಲ್ ಕ್ಯಾಪ್ ವಿಜೇತರಾದರು. ಈ ಮೂಲಕ ಆರೆಂಜ್ ಮತ್ತು ಪರ್ಪಲ್ ಕ್ಯಾಪ್ 2 ಪ್ರಶಸ್ತಿಗಳು ಒಂದೇ ತಂಡಕ್ಕೆ ಲಭಿಸಿದೆ.
Published by:shrikrishna bhat
First published: