• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • IPL 2022 Final GT vs RR: ಗುಜರಾತ್ ತಂಡಕ್ಕೆ ರಾಜಸ್ಥಾನ್ ಸವಾಲ್, ಯಾರಾಗಲಿದ್ದಾರೆ ಐಪಿಎಲ್ ಚಾಂಪಿಯನ್?

IPL 2022 Final GT vs RR: ಗುಜರಾತ್ ತಂಡಕ್ಕೆ ರಾಜಸ್ಥಾನ್ ಸವಾಲ್, ಯಾರಾಗಲಿದ್ದಾರೆ ಐಪಿಎಲ್ ಚಾಂಪಿಯನ್?

GT vs RR

GT vs RR

ಐಪಿಎಲ್ 2022 (IPL 2022) 15ನೇ ಆವೃತ್ತಿಯ ಪೈನಲ್ ಪಂದ್ಯದಲ್ಲಿ ಈ ಬಾರಿ ಗುಜರಾತ್ ಟೈಟನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ (GT vs RR) ತಂಡಗಳು ಸೆಣಸಾಡಲಿವೆ. ಇಂದಿನ ಪಂದ್ಯವು ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ (Narendra Modi Stadium) ನಡೆಯಲಿದೆ.

  • Share this:

ಐಪಿಎಲ್ 2022 (IPL 2022) 15ನೇ ಆವೃತ್ತಿಯ ಪೈನಲ್ ಪಂದ್ಯದಲ್ಲಿ ಈ ಬಾರಿ ಗುಜರಾತ್ ಟೈಟನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ (GT vs RR) ತಂಡಗಳು ಸೆಣಸಾಡಲಿವೆ. ಇಂದಿನ ಪಂದ್ಯವು ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ (Narendra Modi Stadium) ನಡೆಯಲಿದೆ. ಈಗಾಗಲೇ ಒಂದು ಬಾರಿ ಟ್ರೋಫಿ ಗೆದ್ದಿರುವ ರಾಜಸ್ಥಾನ್ ತಂಡ ಈ ಬಾರಿ ಜಯ ದಾಖಲಿಸುವ ಮೂಲಕ ತಂಡದ ಮಾಜಿ ನಾಯಕ ಶೇನ್ ವಾರ್ನೆ (Shane Warne) ಅವರಿಗೆ ಅರ್ಪಿಸಲು ಸಿದ್ಧವಾಗಿದ್ದರೆ, ಇತ್ತ ಹೊಸ ತಂಡವಾದ ಗುಜರಾತ್ ತನ್ನ ಪ್ರಥಮ ಋತುವಿನಲ್ಲಿಯೇ ಐಪಿಎಲ್ ಕೀರಿಟ್ ಮುಡಿಗೇರಿಸಿಕೊಳ್ಳುವ ತವಕದಲ್ಲಿದೆ. ಹೀಗಾಗಿ ಇಂದಿನ ಪಂದ್ಯ ಭರ್ಜರಿ ಫೈಟ್​ನಿಂದ ಕೂಡಿರರುವ ನಿರೀಕ್ಷೆಯಿದ್ದು, ಉಭಯ ತಂಡಗಲ ಬಲಾಬಲ ಹೇಗಿರಲಿದೆ ಎಂದು ತಿಳಿದುಕೊಳ್ಳೋಣ.


ಪಂದ್ಯದ ವಿವರ:


IPL 2022 15ನೇ ಆವೃತ್ತಿಯ ಪೈನಲ್ ಪಂದ್ಯದಲ್ಲಿ ಈ ಬಾರಿ ಗುಜರಾತ್ ಟೈಟನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಸೆಣಸಾಡಲಿವೆ. ಇಂದಿನ ಪಂದ್ಯವು ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ 7:30ಕ್ಕೆ ಟಾಸ್ ಮತ್ತು 8 ಗಂಟೆಗೆ ಪಂದ್ಯ ಆರಂಬವಾಗಲಿದೆ. ಇದಕ್ಕೂ ಮುನ್ನ 2 ವರ್ಷಗಳ ನಂತರ ಐಪಿಎಲ್ ಸಮಾರೋಪ ಸಮಾರಮಬ ಇರಲಿದೆ.


ಪಿಚ್ ವರದಿ:


ಇನ್ನು, ಗುಜರಾತ್​ ನರೇಂದ್ರ ಮೋದಿ ಸ್ಟೇಡಿಯಂ ಹೆಚ್ಚು ಬ್ಯಾಟರ್​ ಗಳಿಗೆ ಸೂಕ್ತವಾಗಿದೆ. ಆದರೂ ವೇಗದ ಬೌಲರ್ ಗಳಿಗೂ ಪಿಚ್ ಉತ್ತಮ ಸಾಥ್ ನೀಡುತ್ತದೆ. ಕಳೆದ ಪಂದ್ಯದಲ್ಲಿ ಎರಡೂ ತಂಡಗಳಿಂದ 11 ವಿಕೆಟ್ ಉರುಳಿದ್ದು, ಇದರಲ್ಲಿ 7 ವಿಕೆಟ್ ವೇಗಿಗಳ ಪಾಲಾಗಿದೆ. ಅಲ್ಲದೇ ಈ ಪುಚ್​ ನಲ್ಲಿ ಚೇಸಿಂಗ್ ಸಮಯದಲ್ಲಿ ಬ್ಯಾಟ್ಸ್​ಮನ್ ಗಳಿಗೆ ಸಾಥ್ ನೀಡುವುದರಿಂದ ಟಾಸ್ ಗೆದ್ದ ನಾಯಕ ಮೊದಲು ಬೌಲಿಂಗ್ ತೆಗದುಕೊಳ್ಳುವ ಸಾಧ್ಯತೆ ಇದೆ. ಅಲ್ಲದೇ ಇಂದು ಯಾವುದೇ ರೀತಿಯ ಮಳೆ ಬರುವ ಮುನ್ಸೂಚನೆ ಇಲ್ಲವೆಂದು ಹವಾಮಾನ ವರದಿ ತಿಳಿಸಿದೆ.


ಇದನ್ನೂ ಓದಿ: IPL 2022: ಐಪಿಎಲ್ ಸಮಾರೋಪ ಸಮಾರಂಭದಲ್ಲಿ ಬಾಲಿವುಡ್​ ತಾರೆಯರ ರಂಗು, ಇಲ್ಲಿದೆ ಫುಲ್ ಡೀಟೇಲ್ಸ್​


GT vs RR ಹೆಡ್ ಟು ಹೆಡ್:


ಐಪಿಎಲ್​ 2022ರಲ್ಲಿ ಗುಜರಾತ್ ಮತ್ತು ರಾಜಸ್ಥಾನ್ ತಂಡಗಳು ಈವರೆಗ ಒಟ್ಟು 2 ಬಾರಿ ಮುಖಾಮುಖಿಯಾಗಿವೆ. ಲೀಗ್ ಹಂತದಲ್ಲಿ ಮೊದಲ ಬಾರಿ ಸೆಣಸಾಡಿದಾಗ ಗುಜರಾತ್ ತಂಡ ಗೆದ್ದಿತ್ತು. ಅದರಂತೆ ಮೊದಲ ಕ್ವಾಲಿಫೈಯರ್ ಸುತ್ತಿನಲ್ಲಿಯೂ ರಾಜಸ್ಥಾನ್ ಎದುರು ಗುಜರಾತ್ ಗೆದ್ದು ಮೊದಲು ಫೈನಲ್ ಪ್ರವೇಶಿಸಿತು. ಹೀಗಾಗಿ ಇಂದಿನ ಪಂದ್ಯದಲ್ಲಿ ಇದೇ ಗೆಲುವಿನ ಲಯ ಮುಂದುವರೆಸಿಕೊಂಡು ಹೋಗಲು ಜಿಟಿ ಸಿದ್ಧವಾಗಿದೆ. ಆದರೆ ಹಿಂದಿನ ಸೋಲಿನ ಸೇಡನ್ನು ತೀರಿಸಿಕೊಂಡು ಗೆಲುವು ಸಾಧಿಸಲು ರಾಜಸ್ಥಾನ್ ಹವಣಿಸುತ್ತಿದೆ.


ಪಂದ್ಯಕ್ಕೆ ಮಳೆ ಅಡ್ಡಿಯಾದರೆ ಯಾರು ಚಾಂಪಿಯನ್:


ಇನ್ನು, ಹವಾಮಾನ ವರದಿಯಲ್ಲಿ ಯಾವುದೇ ರೀತಿಯಲ್ಲಿಯೂ ಮಳೆ ಸಂಭವಿಸುವ ಸಾಧ್ಯತೆ ಇಲ್ಲ ಎಂದು ತಿಳಿಸಿದೆ. ಆದರು ಮಳೆ ಬಂದಲ್ಲಿ ಅಂತಿಮವಾಗಿ ಉಭಯ ತಂಡಗಳಿಗೆ ಸೂಪರ್ ಓವರ್ ಅಥವಾ 2 ತಂಡಗಳಿಗೆ ತಲಾ 5 ಓವರ್ ಗಲ ಪಂದ್ಯ ನಡೆಸಲಾಗುತ್ತದೆ. ಆದರೂ ಸಂಪೂರ್ಣ ಮಳೆಯಿಂದ ಪಂದ್ಯ ನಡೆಯದಿದ್ದಲ್ಲಿ ಈ ಬಾರಿ ಬಿಸಿಸಿಐ ಪಂದ್ಯದ ಫಲಿತಾಂಶಕ್ಕಾಗಿ ಮೇ 30 ಅಂದರೆ ಪಂದ್ಯವನ್ನು ನಾಳೆ ನಡೆಸುವುದಾಗಿ ನಿಯಮದಲ್ಲಿ ತಿಳಿಸಿದೆ.


ಇದನ್ನೂ ಓದಿ: IPL Final 2022: ನಾಳಿನ IPL ಫೈನಲ್ ಪಂದ್ಯವನ್ನು ಹೀಗೆ ಉಚಿತವಾಗಿ ವೀಕ್ಷಿಸಿ


GT vs RR ಸಂಭಾವ್ಯ ತಂಡ:


ಗುಜರಾತ್ ಟೈಟಾನ್ಸ್: ವೃದ್ಧಿಮಾನ್ ಸಹಾ (WK), ಶುಭಮನ್ ಗಿಲ್, ಮ್ಯಾಥ್ಯೂ ವೇಡ್, ಹಾರ್ದಿಕ್ ಪಾಂಡ್ಯ (C), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಯಶ್ ದಯಾಲ್, ಅಲ್ಜಾರಿ ಜೋಸೆಫ್, ಮೊಹಮ್ಮದ್ ಶಮಿ.


ರಾಜಸ್ಥಾನ್ ರಾಯಲ್ಸ್: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (c & wk), ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಓಬೇದ್ ಮೆಕಾಯ್, ಯುಜ್ವೇಂದ್ರ ಚಹಾಲ್.

top videos
    First published: